Udyoga Parva: Chapter 96

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೯೬

ಮಾರ್ಗದಲ್ಲಿ ಮಾತಲಿಯು ವರುಣನನ್ನು ಕಾಣಲು ಹೋಗುತ್ತಿದ್ದ ನಾರದನನ್ನು ಭೇಟಿಯಾಗಿ, ಇಬ್ಬರೂ ಒಟ್ಟಿಗೇ ವರುಣನನ್ನು ಕಂಡಿದುದು; ನಾರದನಿಂದ ವರುಣ ಸಭೆಯ ವರ್ಣನೆ (೧-೨೫).

05096001 ಕಣ್ವ ಉವಾಚ|

05096001a ಮಾತಲಿಸ್ತು ವ್ರಜನ್ಮಾರ್ಗೇ ನಾರದೇನ ಮಹರ್ಷಿಣಾ|

05096001c ವರುಣಂ ಗಚ್ಚತಾ ದ್ರಷ್ಟುಂ ಸಮಾಗಚ್ಚದ್ಯದೃಚ್ಚಯಾ||

ಕಣ್ವನು ಹೇಳಿದನು: “ಮಾರ್ಗದಲ್ಲಿ ಮುಂದುವರೆಯುತ್ತಿರುವಾಗ ಮಾತಲಿಯು ವರುಣನನ್ನು ಕಾಣಲು ಬಯಸಿ ಹೋಗುತ್ತಿರುವ ಮಹರ್ಷಿ ನಾರದನನ್ನು ಭೇಟಿ ಮಾಡಿದನು.

05096002a ನಾರದೋಽಥಾಬ್ರವೀದೇನಂ ಕ್ವ ಭವಾನ್ಗಂತುಮುದ್ಯತಃ|

05096002c ಸ್ವೇನ ವಾ ಸೂತ ಕಾರ್ಯೇಣ ಶಾಸನಾದ್ವಾ ಶತಕ್ರತೋಃ||

ಆಗ ನಾರದನು ಅವನನ್ನು ಕೇಳಿದನು: “ಸೂತ! ನೀನು ಎಲ್ಲಿಗೆ ಹೋಗುತ್ತಿರುವೆ? ನಿನ್ನದೇ ಕಾರಣಕ್ಕೆ ಅಥವಾ ಶತಕ್ರತುವಿನ ಶಾಸನದಂತೆ ಹೋಗುತ್ತಿದ್ದೀಯೋ?”

05096003a ಮಾತಲಿರ್ನಾರದೇನೈವಂ ಸಂಪೃಷ್ಟಃ ಪಥಿ ಗಚ್ಚತಾ|

05096003c ಯಥಾವತ್ಸರ್ವಮಾಚಷ್ಟ ಸ್ವಕಾರ್ಯಂ ವರುಣಂ ಪ್ರತಿ||

ದಾರಿಯಲ್ಲಿ ಹೋಗುತ್ತಿರುವಾಗ ನಾರದನಿಂದ ಹೀಗೆ ಪ್ರಶ್ನಿಸಲ್ಪಟ್ಟ ಮಾತಲಿಯು ಅವನಿಗೆ ವರುಣನಲ್ಲಿ ತನಗಿರುವ ಕೆಲಸದ ಕುರಿತು ಎಲ್ಲವನ್ನೂ ಹೇಳಿದನು.

05096004a ತಮುವಾಚಾಥ ಸ ಮುನಿರ್ಗಚ್ಚಾವಃ ಸಹಿತಾವಿತಿ|

05096004c ಸಲಿಲೇಶದಿದೃಕ್ಷಾರ್ಥಮಹಮಪ್ಯುದ್ಯತೋ ದಿವಃ||

ಆಗ ಆ ಮನಿಯು ಅವನಿಗೆ “ಇಬ್ಬರೂ ಒಟ್ಟಿಗೇ ಹೋಗೋಣ! ನಾನೂ ಕೂಡ ಸಲಿಲೇಶನನ್ನು ಕಾಣಲು ದಿವದಿಂದ ಇಳಿದು ಬಂದಿದ್ದೇನೆ.

05096005a ಅಹಂ ತೇ ಸರ್ವಮಾಖ್ಯಾಸ್ಯೇ ದರ್ಶಯನ್ವಸುಧಾತಲಂ|

05096005c ದೃಷ್ಟ್ವಾ ತತ್ರ ವರಂ ಕಂ ಚಿದ್ರೋಚಯಿಷ್ಯಾವ ಮಾತಲೇ||

ವಸುಧಾತಲವನ್ನು ನೋಡುತ್ತಾ ನಾನು ನಿನಗೆ ಎಲ್ಲವನ್ನೂ ಹೇಳುತ್ತೇನೆ. ಮಾತಲಿ! ಅಲ್ಲಿ ನೋಡಿ ಯಾರಾದರೂ ವರನನ್ನು ಆರಿಸೋಣ!”

05096006a ಅವಗಾಹ್ಯ ತತೋ ಭೂಮಿಮುಭೌ ಮಾತಲಿನಾರದೌ|

05096006c ದದೃಶಾತೇ ಮಹಾತ್ಮಾನೌ ಲೋಕಪಾಲಮಪಾಂ ಪತಿಂ||

ಆಗ ಮಾತಲಿ-ನಾರದರಿಬ್ಬರೂ ಭೂಮಿಯನ್ನು ಹೊಕ್ಕು ಲೋಕಪಾಲಕ ಅಪಾಂಪತಿಯನ್ನು ಕಂಡರು.

05096007a ತತ್ರ ದೇವರ್ಷಿಸದೃಶೀಂ ಪೂಜಾಂ ಪ್ರಾಪ ಸ ನಾರದಃ|

05096007c ಮಹೇಂದ್ರಸದೃಶೀಂ ಚೈವ ಮಾತಲಿಃ ಪ್ರತ್ಯಪದ್ಯತ||

ಅಲ್ಲಿ ನಾರದನು ದೇವರ್ಷಿಗೆ ತಕ್ಕುದಾದ ಪೂಜೆಯನ್ನೂ, ಮಾತಲಿಯು ಮಹೇಂದ್ರನಿಗೆ ತಕ್ಕುದಾದ ಪೂಜೆಯನ್ನೂ ಪಡೆದರು.

05096008a ತಾವುಭೌ ಪ್ರೀತಮನಸೌ ಕಾರ್ಯವತ್ತಾಂ ನಿವೇದ್ಯ ಹ|

05096008c ವರುಣೇನಾಭ್ಯನುಜ್ಞಾತೌ ನಾಗಲೋಕಂ ವಿಚೇರತುಃ||

ಅವರಿಬ್ಬರೂ ಸಂತೋಷಗೊಂಡು ತಮ್ಮ ಕಾರ್ಯದ ಕುರಿತು ನಿವೇದಿಸಿದರು. ನಂತರ ವರುಣನ ಅಪ್ಪಣೆಯನ್ನು ಪಡೆದು ನಾಗಲೋಕದಲ್ಲಿ ಸಂಚರಿಸಿದರು.

05096009a ನಾರದಃ ಸರ್ವಭೂತಾನಾಮಂತರ್ಭೂಮಿನಿವಾಸಿನಾಂ|

05096009c ಜಾನಂಶ್ಚಕಾರ ವ್ಯಾಖ್ಯಾನಂ ಯಂತುಃ ಸರ್ವಮಶೇಷತಃ||

ಭೂಮಿಯ ಒಳಗೆ ನಿವಾಸಿಸುತ್ತಿರುವ ಎಲ್ಲರನ್ನೂ ತಿಳಿದಿದ್ದ ನಾರದನು ಎಲ್ಲರ ಕುರಿತೂ ವಿವರಿಸುತ್ತಾ ಹೋದನು.

05096010 ನಾರದ ಉವಾಚ|

05096010a ದೃಷ್ಟಸ್ತೇ ವರುಣಸ್ತಾತ ಪುತ್ರಪೌತ್ರಸಮಾವೃತಃ|

05096010c ಪಶ್ಯೋದಕಪತೇಃ ಸ್ಥಾನಂ ಸರ್ವತೋಭದ್ರಮೃದ್ಧಿಮತ್||

ನಾರದನು ಹೇಳಿದನು: “ಅಯ್ಯಾ! ನೀನು ಪುತ್ರಪೌತ್ರರಿಂದ ಆವೃತನಾಗಿರುವ ವರುಣನನ್ನು ನೋಡಿದೆ. ಸರ್ವತೋಭದ್ರವಾಗಿರುವ ಸಮೃದ್ಧವಾಗಿರುವ ಉದಕಪತಿಯ ಸ್ಥಾನವನ್ನು ನೋಡು!

05096011a ಏಷ ಪುತ್ರೋ ಮಹಾಪ್ರಾಜ್ಞೋ ವರುಣಸ್ಯೇಹ ಗೋಪತೇಃ|

05096011c ಏಷ ತಂ ಶೀಲವೃತ್ತೇನ ಶೌಚೇನ ಚ ವಿಶಿಷ್ಯತೇ||

ಇವನು ಗೋಪತಿ ವರುಣನ ಮಹಾಪ್ರಾಜ್ಞ ಮಗ. ಅವನು ಶೀಲದಲ್ಲಿ, ಶೌಚದಲ್ಲಿ ವಿಶಿಷ್ಟನಾಗಿದ್ದಾನೆ.

05096012a ಏಷೋಽಸ್ಯ ಪುತ್ರೋಽಭಿಮತಃ ಪುಷ್ಕರಃ ಪುಷ್ಕರೇಕ್ಷಣಃ|

05096012c ರೂಪವಾನ್ದರ್ಶನೀಯಶ್ಚ ಸೋಮಪುತ್ರ್ಯಾ ವೃತಃ ಪತಿಃ||

ಪುಷ್ಕರೇಕ್ಷಣ ಈ ಪುಷ್ಕರನು ಅವನ ಪ್ರೀತಿಪಾತ್ರ ಮಗ - ರೂಪವಂತ, ಸುಂದರ. ಇವನನ್ನು ಸೋಮನ ಪುತ್ರಿಯು ಪತಿಯನ್ನಾಗಿ ವರಿಸಿದ್ದಾಳೆ.

05096013a ಜ್ಯೋತ್ಸ್ನಾಕಾಲೀತಿ ಯಾಮಾಹುರ್ದ್ವಿತೀಯಾಂ ರೂಪತಃ ಶ್ರಿಯಂ|

05096013c ಆದಿತ್ಯಸ್ಯೈವ ಗೋಃ ಪುತ್ರೋ ಜ್ಯೇಷ್ಠಃ ಪುತ್ರಃ ಕೃತಃ ಸ್ಮೃತಃ||

ರೂಪದಲ್ಲಿ ಲಕ್ಷ್ಮಿಗೆ ಎರಡನೆಯವಳಾಗಿರುವ ಅವಳನ್ನು ಜ್ಯೋತ್ಸ್ನಾಕಾಲೀ ಎಂದು ಕರೆಯುತ್ತಾರೆ. ಹಿಂದೆ ಅವಳು ಅದಿತಿಯ ಶೇಷ್ಠ ಪುತ್ರನನ್ನು ಪತಿಯನ್ನಾಗಿ ವರಿಸಿದ್ದಳೆಂದು ಕೇಳಿದ್ದೇವೆ.

05096014a ಭವನಂ ಪಶ್ಯ ವಾರುಣ್ಯಾ ಯದೇತತ್ಸರ್ವಕಾಂಚನಂ|

05096014c ಯಾಂ ಪ್ರಾಪ್ಯ ಸುರತಾಂ ಪ್ರಾಪ್ತಾಃ ಸುರಾಃ ಸುರಪತೇಃ ಸಖೇ||

ಎಲ್ಲೆಡೆಯೂ ಕಾಂಚನದಿಂದ ಕೂಡಿದ ವರುಣನ ಭವನವನ್ನು ನೋಡು! ಸುರಪತಿಯ ಸಖನಲ್ಲಿರುವ ಸುರೆಯನ್ನು ಕುಡಿದು ಸುರರು ಸುರತ್ವವನ್ನು ಪಡೆದರು.

05096015a ಏತಾನಿ ಹೃತರಾಜ್ಯಾನಾಂ ದೈತೇಯಾನಾಂ ಸ್ಮ ಮಾತಲೇ|

05096015c ದೀಪ್ಯಮಾನಾನಿ ದೃಶ್ಯಂತೇ ಸರ್ವಪ್ರಹರಣಾನ್ಯುತ||

ಮಾತಲಿ! ನೀನು ನೋಡುತ್ತಿರುವ ಈ ದೀಪ್ಯಮಾನ ಆಯುಧಗಳೆಲ್ಲವೂ ರಾಜ್ಯವನ್ನು ಕಳೆದುಕೊಂಡ ದೈತ್ಯರಿಗೆ ಸೇರಿದವು.

05096016a ಅಕ್ಷಯಾಣಿ ಕಿಲೈತಾನಿ ವಿವರ್ತಂತೇ ಸ್ಮ ಮಾತಲೇ|

05096016c ಅನುಭಾವಪ್ರಯುಕ್ತಾನಿ ಸುರೈರವಜಿತಾನಿ ಹ||

ಮಾತಲಿ! ಈ ಆಯುಧಗಳು ಅಕ್ಷಯವಾದವುಗಳು: ಶತ್ರುಗಳ ಮೇಲೆ ಪ್ರಯೋಗಿಸುವವನ ಕೈಗೇ ಹಿಂದಿರುಗಿ ಬಂದು ಸೇರುತ್ತವೆ. ಸುರರು ಗೆದ್ದಿರುವ ಈ ಆಯುಧವನ್ನು ಪ್ರಯೋಗಿಸಲು ಅನುಭವವಿರಬೇಕಾಗುತ್ತದೆ.

05096017a ಅತ್ರ ರಾಕ್ಷಸಜಾತ್ಯಶ್ಚ ಭೂತಜಾತ್ಯಶ್ಚ ಮಾತಲೇ|

05096017c ದಿವ್ಯಪ್ರಹರಣಾಶ್ಚಾಸನ್ಪೂರ್ವದೈವತನಿರ್ಮಿತಾಃ||

ಮಾತಲಿ! ಹಿಂದೆ ಇಲ್ಲಿ ದಿವ್ಯಪ್ರಹರಣ ಮಾಡುವ ಹಲವಾರು ರಾಕ್ಷಸ ಜಾತಿಯ ಮತ್ತು ಭೂತಜಾತಿಯವರು ವಾಸಿಸುತ್ತಿದ್ದರು. ಅವರು ದೇವತೆಗಳಿಂದ ಜಯಿಸಲ್ಪಟ್ಟರು.

05096018a ಅಗ್ನಿರೇಷ ಮಹಾರ್ಚಿಷ್ಮಾಂ ಜಾಗರ್ತಿ ವರುಣಹ್ರದೇ|

05096018c ವೈಷ್ಣವಂ ಚಕ್ರಮಾವಿದ್ಧಂ ವಿಧೂಮೇನ ಹವಿಷ್ಮತಾ||

ಅಲ್ಲಿ ವರುಣ ಸರೋವರದಲ್ಲಿ ಚೆನ್ನಾಗಿ ಉರಿಯುತ್ತಿರುವ ಅಗ್ನಿಯಿದೆ. ಹೊಗೆಯಿಲ್ಲದ ಬೆಂಕಿಯಿಂದ ಆವೃತವಾಗಿರುವ ಇದು ವಿಷ್ಣುವಿನ ಚಕ್ರ.

05096019a ಏಷ ಗಾಂಡೀಮಯಶ್ಚಾಪೋ ಲೋಕಸಂಹಾರಸಂಭೃತಃ|

05096019c ರಕ್ಷ್ಯತೇ ದೈವತೈರ್ನಿತ್ಯಂ ಯತಸ್ತದ್ಗಾಂಡಿವಂ ಧನುಃ||

ಈ ಚಾಪವು ಲೋಕಸಂಹಾರಸಂಭೃತ ಗಾಂಡೀವವು. ಈ ಗಾಂಡೀವ ಧನುಸ್ಸನ್ನು ದೇವತೆಗಳು ನಿತ್ಯವೂ ರಕ್ಷಿಸುತ್ತಾರೆ.

05096020a ಏಷ ಕೃತ್ಯೇ ಸಮುತ್ಪನ್ನೇ ತತ್ತದ್ಧಾರಯತೇ ಬಲಂ|

05096020c ಸಹಸ್ರಶತಸಂಖ್ಯೇನ ಪ್ರಾಣೇನ ಸತತಂ ಧ್ರುವಂ||

ಕಾಲವು ಬಂದಾಗ ಇದು ಸಹಸ್ರಶತ ಸಂಖ್ಯೆಗಳಲ್ಲಿ ಪ್ರಾಣಗಳನ್ನು ಹುಟ್ಟಿಸುತ್ತದೆ ಮತ್ತು ಧರಿಸುತ್ತದೆ.

05096021a ಅಶಾಸ್ಯಾನಪಿ ಶಾಸ್ತ್ಯೇಷ ರಕ್ಷೋಬಂಧುಷು ರಾಜಸು|

05096021c ಸೃಷ್ಟಃ ಪ್ರಥಮಜೋ ದಂಡೋ ಬ್ರಹ್ಮಣಾ ಬ್ರಹ್ಮವಾದಿನಾ||

ಇದು ರಾಕ್ಷಸರ ಪಕ್ಷವನ್ನು ಸೇರಿದ ಅಶಾಸನೀಯ ರಾಜರನ್ನು ನಿಯಂತ್ರಿಸಲು ಇರುವ, ಬ್ರಹ್ಮವಾದಿನಿ ಬ್ರಹ್ಮನು ಸೃಷ್ಟಿಸಿದ ಪ್ರಥಮ ದಂಡ.

05096022a ಏತಚ್ಚತ್ರಂ ನರೇಂದ್ರಾಣಾಂ ಮಹಚ್ಚಕ್ರೇಣ ಭಾಷಿತಂ|

05096022c ಪುತ್ರಾಃ ಸಲಿಲರಾಜಸ್ಯ ಧಾರಯಂತಿ ಮಹೋದಯಂ||

ಇದು ಶಕ್ರನಿಂದ ಭಾಷಿತವಾದ, ನರೇಂದ್ರರ ಮಹಾ ಶಸ್ತ್ರ. ಇದು ಮಹೋದಯ ಸಲಿಲರಾಜನ ಪುತ್ರರನ್ನು ಧರಿಸುತ್ತದೆ.

05096023a ಏತತ್ಸಲಿಲರಾಜಸ್ಯ ಛತ್ರಂ ಛತ್ರಗೃಹೇ ಸ್ಥಿತಂ|

05096023c ಸರ್ವತಃ ಸಲಿಲಂ ಶೀತಂ ಜೀಮೂತ ಇವ ವರ್ಷತಿ||

ಸಲಿಲರಾಜನ ಛತ್ರಗೃಹದಲ್ಲಿರುವ ಈ ಛತ್ರವು ಮೋಡದಂತೆ ಎಲ್ಲ ಕಡೆಯಿಂದಲೂ ಶೀತಲ ಮಳೆಯನ್ನು ಸುರಿಸುತ್ತದೆ.

05096024a ಏತಚ್ಚತ್ರಾತ್ಪರಿಭ್ರಷ್ಟಂ ಸಲಿಲಂ ಸೋಮನಿರ್ಮಲಂ|

05096024c ತಮಸಾ ಮೂರ್ಚಿತಂ ಯಾತಿ ಯೇನ ನಾರ್ಚತಿ ದರ್ಶನಂ||

ಈ ಛತ್ರದಿಂದ ಬೀಳುವ ನೀರು ಚಂದ್ರನಂತೆ ನಿರ್ಮಲವಾಗಿರುತ್ತದೆ. ಆದರೆ ಕತ್ತಲೆಯಿಂದ ತುಂಬಿದ ಇದು ಯಾರಿಗೂ ಕಾಣಿಸುವುದಿಲ್ಲ.

05096025a ಬಹೂನ್ಯದ್ಭುತರೂಪಾಣಿ ದ್ರಷ್ಟವ್ಯಾನೀಹ ಮಾತಲೇ|

05096025c ತವ ಕಾರ್ಯೋಪರೋಧಸ್ತು ತಸ್ಮಾದ್ಗಚ್ಚಾವ ಮಾಚಿರಂ||

ಮಾತಲಿ! ಇಲ್ಲಿ ಇನ್ನೂ ಇತರ ಅದ್ಭುತ ರೂಪಗಳನ್ನು ನೋಡಬಹುದು. ಆದರೆ ಅದು ನಿನ್ನ ಕಾರ್ಯದಲ್ಲಿ ಅಡ್ಡಿಯನ್ನು ತರುತ್ತವೆ. ಆದುದರಿಂದ ಬೇಗನೇ ಮುಂದುವರೆಯೋಣ!”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಷಣ್ಣಾನವತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತಾರನೆಯ ಅಧ್ಯಾಯವು.

Related image

Comments are closed.