ಉದ್ಯೋಗ ಪರ್ವ: ಯಾನಸಂಧಿ ಪರ್ವ
೬೯
ಧೃತರಾಷ್ಟ್ರನು ಮಹಾವಿಷ್ಣುವನ್ನು ಪ್ರಾರ್ಥಿಸಿದುದು (೧-೭).
05069001 ಧೃತರಾಷ್ಟ್ರ ಉವಾಚ|
05069001a ಚಕ್ಷುಷ್ಮತಾಂ ವೈ ಸ್ಪೃಹಯಾಮಿ ಸಂಜಯ
ದ್ರಕ್ಷ್ಯಂತಿ ಯೇ ವಾಸುದೇವಂ ಸಮೀಪೇ|
05069001c ವಿಭ್ರಾಜಮಾನಂ ವಪುಷಾ ಪರೇಣ
ಪ್ರಕಾಶಯಂತಂ ಪ್ರದಿಶೋ ದಿಶಶ್ಚ||
ಧೃತರಾಷ್ಟ್ರನು ಹೇಳಿದನು: “ಸಂಜಯ! ದಿಕ್ಕುಗಳನ್ನು ದಿಕ್ಸೂಚಿಯಂತೆ ಪ್ರಕಾಶಗೊಳಿಸುವ ಪರಮ ಶರೀರದಿಂದ ಬೆಳಗುವ ವಾಸುದೇವನನ್ನು ಹತ್ತಿರದಿಂದ ನೋಡಬಲ್ಲ ಕಣ್ಣುಳ್ಳವರ ಮೇಲೆ ಅಸೂಯೆಪಡುತ್ತೇನೆ.
05069002a ಈರಯಂತಂ ಭಾರತೀಂ ಭಾರತಾನಾಂ
ಅಭ್ಯರ್ಚನೀಯಾಂ ಶಂಕರೀಂ ಸೃಂಜಯಾನಾಂ|
05069002c ಬುಭೂಷದ್ಭಿರ್ಗ್ರಹಣೀಯಾಮನಿಂದ್ಯಾಂ
ಪರಾಸೂನಾಮಗ್ರಹಣೀಯರೂಪಾಂ||
ಅವನು ಭಾರತರು ಗೌರವದಿಂದ ಕೇಳುವಹಾಗೆ, ಸೃಂಜಯರಿಗೆ ಮಂಗಳವನ್ನು ಮಾಡುವ, ಅಭಿವೃದ್ಧಿಯನ್ನು ಬಯಸುವವರು ಕೇಳಬೇಕಾದ, ಯಾವರೀತಿಯಲ್ಲಿಯೂ ನಿಂದನೀಯವಲ್ಲದ, ಸಾಯಲು ಬಯಸುವವರು ಕೇಳದ ಮಾತುಗಳನ್ನು ಆಡುತ್ತಾನೆ.
05069003a ಸಮುದ್ಯಂತಂ ಸಾತ್ವತಮೇಕವೀರಂ
ಪ್ರಣೇತಾರಮೃಷಭಂ ಯಾದವಾನಾಂ|
05069003c ನಿಹಂತಾರಂ ಕ್ಷೋಭಣಂ ಶಾತ್ರವಾಣಾಂ
ಮುಷ್ಣಂತಂ ಚ ದ್ವಿಷತಾಂ ವೈ ಯಶಾಂಸಿ||
ಸಾತ್ವತರ ಏಕವೀರನು ನಮ್ಮಲ್ಲಿಗೆ ಬರುತ್ತಾನೆ. ಯಾದವರ ಪ್ರಣೇತಾರ ಆ ವೃಷಭ, ಶತ್ರುಗಳ ಕ್ಷೋಭಣ ಮತ್ತು ಹಂತಾರ, ಮತ್ತು ದ್ವೇಷಿಸುವವರ ಯಶಸ್ಸನ್ನು ಎಳೆದುಕೊಳ್ಳುವವನು.
05069004a ದ್ರಷ್ಟಾರೋ ಹಿ ಕುರವಸ್ತಂ ಸಮೇತಾ
ಮಹಾತ್ಮಾನಂ ಶತ್ರುಹಣಂ ವರೇಣ್ಯಂ|
05069004c ಬ್ರುವಂತಂ ವಾಚಮನೃಶಂಸರೂಪಾಂ
ವೃಷ್ಣಿಶ್ರೇಷ್ಠಂ ಮೋಹಯಂತಂ ಮದೀಯಾನ್||
ಕುರುಗಳು ಒಟ್ಟಿಗೇ ಆ ಮಹಾತ್ಮ, ಶತ್ರುಹರಣ, ವರೇಣ್ಯ, ಅಹಿಂಸೆಯ ಕುರಿತಾಗಿ ಮಾತನಾಡಿ ನಮ್ಮವರನ್ನು ಮೋಹಿಸುವಂತಹ ಆ ವೃಷ್ಣಿಶ್ರೇಷ್ಠನನ್ನು ನೋಡುತ್ತಾರೆ.
05069005a ಋಷಿಂ ಸನಾತನತಮಂ ವಿಪಶ್ಚಿತಂ
ವಾಚಃ ಸಮುದ್ರಂ ಕಲಶಂ ಯತೀನಾಂ|
05069005c ಅರಿಷ್ಟನೇಮಿಂ ಗರುಡಂ ಸುಪರ್ಣಂ
ಪತಿಂ ಪ್ರಜಾನಾಂ ಭುವನಸ್ಯ ಧಾಮ||
05069006a ಸಹಸ್ರಶೀರ್ಷಂ ಪುರುಷಂ ಪುರಾಣಂ
ಅನಾದಿಮಧ್ಯಾಂತಮನಂತಕೀರ್ತಿಂ|
05069006c ಶುಕ್ರಸ್ಯ ಧಾತಾರಮಜಂ ಜನಿತ್ರಂ
ಪರಂ ಪರೇಭ್ಯಃ ಶರಣಂ ಪ್ರಪದ್ಯೇ||
ಆ ಋಷಿ, ಅತ್ಯಂತ ಸನಾತನ, ಮಾತುಗಳ ಸಮುದ್ರ, ಯತಿಗಳ ಕಲಶ, ಅರಿಷ್ಟನೇಮಿ, ಗರುಡ, ಸುಪರ್ಣ, ಪ್ರಜೆಗಳ ಪತಿ, ಭುವನದ ಧಾಮ, ಸಹಸ್ರಶೀರ್ಷ, ಪುರುಷ, ಪುರಾಣ, ಆದಿ-ಮಧ್ಯ-ಅಂತ್ಯಗಳಿಲ್ಲದಿರುವ, ಅನಂತ ಕೀರ್ತಿ, ಶುಕ್ರದ ಧಾತಾರ, ಹುಟ್ಟಿರದ ಜನಿತ್ರ, ಪರಮ ಪರೇಭ್ಯನಿಗೆ ಶರಣು ಹೋಗುತ್ತೇನೆ.
05069007a ತ್ರೈಲೋಕ್ಯನಿರ್ಮಾಣಕರಂ ಜನಿತ್ರಂ
ದೇವಾಸುರಾಣಾಮಥ ನಾಗರಕ್ಷಸಾಂ|
05069007c ನರಾಧಿಪಾನಾಂ ವಿದುಷಾಂ ಪ್ರಧಾನಂ
ಇಂದ್ರಾನುಜಂ ತಂ ಶರಣಂ ಪ್ರಪದ್ಯೇ||
ಮೂರೂಲೋಕಗಳನ್ನು ನಿರ್ಮಿಸಿದ, ದೇವಾಸುರರನ್ನೂ ನಾಗ-ರಾಕ್ಷಸರನ್ನೂ, ಪ್ರಧಾನ ನರಾಧಿಪರನ್ನೂ, ವಿದುಷರನ್ನೂ ಹುಟ್ಟಿಸಿದ, ಇಂದ್ರನ ಅನುಜನಿಗೆ ಶರಣು ಹೋಗುತ್ತೇನೆ.””
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕೋನಸಪ್ತತಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಅರವತ್ತೊಂಭತ್ತನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೬೦/೧೦೦, ಅಧ್ಯಾಯಗಳು-೭೩೨, ಶ್ಲೋಕಗಳು-೨೩೯೮೫