ಉದ್ಯೋಗ ಪರ್ವ: ಯಾನಸಂಧಿ ಪರ್ವ
೬೫
ನರೇಶ್ವರರು ಸಭೆಯನ್ನು ಬಿಟ್ಟು ಹೊರಟು ಹೋಗಲು ಏಕಾಂತದಲ್ಲಿ ಧೃತರಾಷ್ಟ್ರನು ಸಂಜಯನನ್ನು “ಇಬ್ಬರಲ್ಲಿ ಯಾರು ಯುದ್ಧದಲ್ಲಿ ನಾಶಹೊಂದುತ್ತಾರೆ?” ಎಂದು ಪ್ರಶ್ನಿಸಿದುದು (೧-೫). ಆಗ “ಏಕಾಂತದಲ್ಲಿ ನಾನು ನಿನಗೆ ಏನನ್ನೂ ಹೇಳುವುದಿಲ್ಲ. ನಿನ್ನ ತಂದೆಯನ್ನೂ, ಗಾಂಧಾರಿಯನ್ನೂ ಕರೆಯಿಸು” ಎಂದು ಸಂಜಯನು ಕೇಳಿಕೊಳ್ಳಲು ವ್ಯಾಸನು ಅಲ್ಲಿ ಕಾಣಿಸಿಕೊಂಡು ಸಂಜಯನಿಗೆ ತಿಳಿದುದನ್ನು ಹೇಳಲು ಅನುಮತಿಯನ್ನಿತ್ತುದುದು (೬-೯).
05065001 ವೈಶಂಪಾಯನ ಉವಾಚ|
05065001a ದುರ್ಯೋಧನೇ ಧಾರ್ತರಾಷ್ಟ್ರೇ ತದ್ವಚೋಽಪ್ರತಿನಂದತಿ|
05065001c ತೂಷ್ಣೀಂಭೂತೇಷು ಸರ್ವೇಷು ಸಮುತ್ತಸ್ಥುರ್ನರೇಶ್ವರಾಃ||
ವೈಶಂಪಾಯನನು ಹೇಳಿದನು: “ಧಾರ್ತರಾಷ್ಟ್ರ ದುರ್ಯೋಧನನು ಆ ಮಾತನ್ನು ಸ್ವೀಕರಿಸದೇ ಇರಲು ಎಲ್ಲರೂ ಸುಮ್ಮನಾದರು. ನರೇಶ್ವರರು ಎದ್ದರು.
05065002a ಉತ್ಥಿತೇಷು ಮಹಾರಾಜ ಪೃಥಿವ್ಯಾಂ ಸರ್ವರಾಜಸು|
05065002c ರಹಿತೇ ಸಂಜಯಂ ರಾಜಾ ಪರಿಪ್ರಷ್ಟುಂ ಪ್ರಚಕ್ರಮೇ||
05065003a ಆಶಂಸಮಾನೋ ವಿಜಯಂ ತೇಷಾಂ ಪುತ್ರವಶಾನುಗಃ|
05065003c ಆತ್ಮನಶ್ಚ ಪರೇಷಾಂ ಚ ಪಾಂಡವಾನಾಂ ಚ ನಿಶ್ಚಯಂ||
ಮಹಾರಾಜ! ಭೂಮಿಯ ಸರ್ವ ರಾಜರೂ ಏಳಲು ರಾಜನು, ತಾನು ಯಾರ ವಶದಲ್ಲಿದ್ದನೋ ಆ ತನ್ನ ಮಕ್ಕಳ ವಿಜಯವನ್ನು ಬಯಸಿ, ತನ್ನ, ಇತರರ ಮತ್ತು ಪಾಂಡವರ ಕುರಿತು ನಿಶ್ಚಯಮಾಡಲು, ಏಕಾಂತದಲ್ಲಿ ಸಂಜಯನನ್ನು ಕೇಳತೊಡಗಿದನು.
05065004 ಧೃತರಾಷ್ಟ್ರ ಉವಾಚ|
05065004a ಗಾವಲ್ಗಣೇ ಬ್ರೂಹಿ ನಃ ಸಾರಫಲ್ಗು
ಸ್ವಸೇನಾಯಾಂ ಯಾವದಿಹಾಸ್ತಿ ಕಿಂ ಚಿತ್|
05065004c ತ್ವಂ ಪಾಂಡವಾನಾಂ ನಿಪುಣಂ ವೇತ್ಥ ಸರ್ವಂ
ಕಿಮೇಷಾಂ ಜ್ಯಾಯಃ ಕಿಮು ತೇಷಾಂ ಕನೀಯಃ||
ಧೃತರಾಷ್ಟ್ರನು ಹೇಳಿದನು: “ಗಾವಲ್ಗಣೇ! ನಮ್ಮ ಸೇನೆಯಲ್ಲಿರುವಂಥಹ ಬಲ-ನಿರ್ಬಲಗಳ ಕುರಿತು ಹೇಳು. ನೀನು ಪಾಂಡವರ ನಿಪುಣತೆಯೆಲ್ಲವನ್ನೂ ತಿಳಿದಿದ್ದೀಯೆ. ಅವರು ಯಾವುದರಲ್ಲಿ ಮುಂದಿದ್ದಾರೆ? ಯಾವುದರಲ್ಲಿ ಹಿಂದಿದ್ದಾರೆ?
05065005a ತ್ವಮೇತಯೋಃ ಸಾರವಿತ್ಸರ್ವದರ್ಶೀ
ಧರ್ಮಾರ್ಥಯೋರ್ನಿಪುಣೋ ನಿಶ್ಚಯಜ್ಞಾಃ|
05065005c ಸ ಮೇ ಪೃಷ್ಟಃ ಸಂಜಯ ಬ್ರೂಹಿ ಸರ್ವಂ
ಯುಧ್ಯಮಾನಾಃ ಕತರೇಽಸ್ಮಿನ್ನ ಸಂತಿ||
ನೀನು ಇಬ್ಬರ ಸಾರಗಳನ್ನೂ ಅರಿತಿದ್ದೀಯೆ. ಧರ್ಮಾರ್ಥಗಳ ನಿಪುಣ ನಿಶ್ಚಯವನ್ನೂ ತಿಳಿದಿದ್ದೀಯೆ. ನಿನ್ನನ್ನು ನಾನು ಕೇಳುತ್ತಿದ್ದೇನೆ ಸಂಜಯ! ಎಲ್ಲವನ್ನೂ ಹೇಳು. ಇಬ್ಬರಲ್ಲಿ ಯಾರು ಯುದ್ಧದಲ್ಲಿ ನಾಶಹೊಂದುತ್ತಾರೆ?”
05065006 ಸಂಜಯ ಉವಾಚ|
05065006a ನ ತ್ವಾಂ ಬ್ರೂಯಾಂ ರಹಿತೇ ಜಾತು ಕಿಂ ಚಿದ್
ಅಸೂಯಾ ಹಿ ತ್ವಾಂ ಪ್ರಸಹೇತ ರಾಜನ್|
05065006c ಆನಯಸ್ವ ಪಿತರಂ ಸಂಶಿತವ್ರತಂ
ಗಾಂಧಾರೀಂ ಚ ಮಹಿಷೀಮಾಜಮೀಢ||
ಸಂಜಯನು ಹೇಳಿದನು: “ಅಜಮೀಢ! ಏಕಾಂತದಲ್ಲಿ ನಾನು ನಿನಗೆ ಏನನ್ನೂ ಹೇಳುವುದಿಲ್ಲ. ರಾಜನ್! ಅಸೂಯೆಯಿಂದ ನೀನು ನನ್ನನ್ನು ಸಹಿಸುವುದಿಲ್ಲ. ಸಂಶಿತವ್ರತನಾದ ನಿನ್ನ ತಂದೆಯನ್ನೂ, ಗಾಂಧಾರಿಯನ್ನೂ ಕರೆಯಿಸು.
05065007a ತೌ ತೇಽಸೂಯಾಂ ವಿನಯೇತಾಂ ನರೇಂದ್ರ
ಧರ್ಮಜ್ಞೌ ತೌ ನಿಪುಣೌ ನಿಶ್ಚಯಜ್ಞೌ|
05065007c ತಯೋಸ್ತು ತ್ವಾಂ ಸನ್ನಿಧೌ ತದ್ವದೇಯಂ
ಕೃತ್ಸ್ನಂ ಮತಂ ವಾಸುದೇವಾರ್ಜುನಾಭ್ಯಾಂ||
ನರೇಂದ್ರ! ಅವರಿಬ್ಬರೂ ಅಸೂಯೆಯಿಲ್ಲದವರು, ವಿನಯರು. ಧರ್ಮಜ್ಞರು. ನಿಶ್ಚಯಿಸುವುದರಲ್ಲಿ ನಿಪುಣರು. ಅವರಿಬ್ಬರ ಸನ್ನಿಧಿಯಲ್ಲಿ ನಾನು ನಿನಗೆ ವಾಸುದೇವ-ಅರ್ಜುನರ ಮತವೆಲ್ಲವನ್ನೂ ಹೇಳುತ್ತೇನೆ.””
05065008 ವೈಶಂಪಾಯನ ಉವಾಚ|
05065008a ತತಸ್ತನ್ಮತಮಾಜ್ಞಾಯ ಸಂಜಯಸ್ಯಾತ್ಮಜಸ್ಯ ಚ|
05065008c ಅಭ್ಯುಪೇತ್ಯ ಮಹಾಪ್ರಾಜ್ಞಾಃ ಕೃಷ್ಣದ್ವೈಪಾಯನೋಽಬ್ರವೀತ್||
ವೈಶಂಪಾಯನನು ಹೇಳಿದನು: “ಆಗ ಸಂಜಯ ಮತ್ತು ತನ್ನ ಮಗನ ಇಂಗಿತವನ್ನು ತಿಳಿದ ಮಹಾಪ್ರಾಜ್ಞ ಕೃಷ್ಣ ದ್ವೈಪಾಯನನು ಅಲ್ಲಿ ಕಾಣಿಸಿಕೊಂಡು ಹೇಳಿದನು:
05065009a ಸಂಪೃಚ್ಚತೇ ಧೃತರಾಷ್ಟ್ರಾಯ ಸಂಜಯ
ಆಚಕ್ಷ್ವ ಸರ್ವಂ ಯಾವದೇಷೋಽನುಯುಂಕ್ತೇ|
05065009c ಸರ್ವಂ ಯಾವದ್ವೇತ್ಥ ತಸ್ಮಿನ್ಯಥಾವದ್
ಯಾಥಾತಥ್ಯಂ ವಾಸುದೇವೇಽರ್ಜುನೇ ಚ||
“ಸಂಜಯ! ಧೃತರಾಷ್ಟ್ರನು ಕೇಳಿದ ಎಲ್ಲವನ್ನೂ ಹೇಳು. ವಾಸುದೇವ-ಅರ್ಜುನರ ಕುರಿತು ನಿನಗೆ ತಿಳಿದುದೆಲ್ಲವನ್ನೂ ಯಥಾವತ್ತಾಗಿ, ಯಥಾತಥ್ಯವಾಗಿ ಹೇಳು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ವ್ಯಾಸಗಾಂಧಾರ್ಯಾಗಮನೇ ಪಂಚಷಷ್ಟಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ವ್ಯಾಸಗಾಂಧಾರ್ಯಾಗಮನದಲ್ಲಿ ಅರವತ್ತೈದನೆಯ ಅಧ್ಯಾಯವು.