Udyoga Parva: Chapter 63

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೩

ಕೃಷ್ಣಾರ್ಜುನರೊಂದಿಗೆ ಯುದ್ಧಕ್ಕೆ ಹಠ ಬೇಡವೆಂದು ಪುನಃ ಧೃತರಾಷ್ಟ್ರನು ಮಗನಿಗೆ ಹೇಳಿದುದು (೧-೧೬).

 05063001 ಧೃತರಾಷ್ಟ್ರ ಉವಾಚ|

05063001a ದುರ್ಯೋಧನ ವಿಜಾನೀಹಿ ಯತ್ತ್ವಾಂ ವಕ್ಷ್ಯಾಮಿ ಪುತ್ರಕ|

05063001c ಉತ್ಪಥಂ ಮನ್ಯಸೇ ಮಾರ್ಗಮನಭಿಜ್ಞಾ ಇವಾಧ್ವಗಃ||

ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ಪುತ್ರಕ! ನಾನು ಹೇಳುವುದನ್ನು ಅರ್ಥಮಾಡಿಕೋ! ದಾರಿಯನ್ನು ತಿಳಿಯದವನಂತೆ ನೀನು ತಪ್ಪು ದಾರಿಯನ್ನು ಸರಿಯಾದ ದಾರಿಯೆಂದು ಮನ್ನಿಸುತ್ತಿದ್ದೀಯೆ.

05063002a ಪಂಚಾನಾಂ ಪಾಂಡುಪುತ್ರಾಣಾಂ ಯತ್ತೇಜಃ ಪ್ರಮಿಮೀಷಸಿ|

05063002c ಪಂಚಾನಾಮಿವ ಭೂತಾನಾಂ ಮಹತಾಂ ಸುಮಹಾತ್ಮನಾಂ||

ಪಂಚ ಭೂತಗಳಂತೆ ಮಹತ್ತರರಾದ ಸುಮಹಾತ್ಮ ಪಂಚ ಪಾಂಡುಪುತ್ರರ ತೇಜಸ್ಸನ್ನು ಕುಂದಿಸಲು ಬಯಸುತ್ತಿರುವೆ.

05063003a ಯುಧಿಷ್ಠಿರಂ ಹಿ ಕೌಂತೇಯಂ ಪರಂ ಧರ್ಮಮಿಹಾಸ್ಥಿತಂ|

05063003c ಪರಾಂ ಗತಿಮಸಂಪ್ರೇಕ್ಷ್ಯ ನ ತ್ವಂ ವೇತ್ತುಮಿಹಾರ್ಹಸಿ||

ನಿನ್ನ ಜೀವನದಲ್ಲಿ ಸ್ವಲ್ಪವನ್ನು ತ್ಯಜಿಸದೇ ಧಾರ್ಮಿಕರಲ್ಲಿ ಶ್ರೇಷ್ಠ ಕೌಂತೇಯ ಯುಧಿಷ್ಠಿರನನ್ನು ಗೆಲ್ಲಲಾರೆ.

05063004a ಭೀಮಸೇನಂ ಚ ಕೌಂತೇಯಂ ಯಸ್ಯ ನಾಸ್ತಿ ಸಮೋ ಬಲೇ|

05063004c ರಣಾಂತಕಂ ತರ್ಕಯಸೇ ಮಹಾವಾತಮಿವ ದ್ರುಮಃ||

ಮಹಾ ಭಿರುಗಾಳಿಯನ್ನು ಎದುರಿಸುವ ಮರದಂತೆ ಬಲದಲ್ಲಿ ಸರಿಸಾಟಿಯಿಲ್ಲದ, ರಣಾಂತಕನಾದ ಕೌಂತೇಯ ಭೀಮಸೇನನನ್ನು ಎದುರಿಸಲು ತರ್ಕಿಸುತ್ತಿರುವೆ.

05063005a ಸರ್ವಶಸ್ತ್ರಭೃತಾಂ ಶ್ರೇಷ್ಠಂ ಮೇರುಂ ಶಿಖರಿಣಾಮಿವ|

05063005c ಯುಧಿ ಗಾಂಡೀವಧನ್ವಾನಂ ಕೋ ನು ಯುಧ್ಯೇತ ಬುದ್ಧಿಮಾನ್||

ಶಿಖರಗಳಲ್ಲಿ ಮೇರುವಿನಂತಿರುವ, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾಗಿರುವ ಗಾಂಡೀವಧನ್ವಿಯನ್ನು ಯುದ್ಧದಲ್ಲಿ ಯಾವ ಬುದ್ಧಿವಂತನು ತಾನೇ ಹೋರಾಡಿಯಾನು?

05063006a ಧೃಷ್ಟದ್ಯುಮ್ನಶ್ಚ ಪಾಂಚಾಲ್ಯಃ ಕಮಿವಾದ್ಯ ನ ಶಾತಯೇತ್|

05063006c ಶತ್ರುಮಧ್ಯೇ ಶರಾನ್ಮುಂಚನ್ದೇವರಾಡಶನೀಮಿವ||

ವಜ್ರಾಯುಧವನ್ನು ಪ್ರಯೋಗಿಸುವ ದೇವರಾಜನಂತೆ ಶತ್ರುಗಳ ಮಧ್ಯೆ ಶರಗಳನ್ನು ಪ್ರಯೋಗಿಸುವ ಪಾಂಚಾಲ್ಯ ಧೃಷ್ಟದ್ಯುಮ್ನನು ಯಾರನ್ನು ನಾಶಗೊಳಿಸಲಾರ?

05063007a ಸಾತ್ಯಕಿಶ್ಚಾಪಿ ದುರ್ಧರ್ಷಃ ಸಮ್ಮತೋಽಂಧಕವೃಷ್ಣಿಷು|

05063007c ಧ್ವಂಸಯಿಷ್ಯತಿ ತೇ ಸೇನಾಂ ಪಾಂಡವೇಯಹಿತೇ ರತಃ||

ಪಾಂಡವೇಯರ ಹಿತದಲ್ಲಿಯೇ ನಿರತನಾಗಿರುವ, ಅಂಧಕ-ವೃಷ್ಣಿಯರಿಗೆ ಸಮ್ಮತನಾದ ದುರ್ಧರ್ಷ ಸಾತ್ಯಕಿಯೂ ಕೂಡ ನಿನ್ನ ಸೇನೆಯನ್ನು ಧ್ವಂಸಗೊಳಿಸುತ್ತಾನೆ.

05063008a ಯಃ ಪುನಃ ಪ್ರತಿಮಾನೇನ ತ್ರೀಽಲ್ಲೋಕಾನತಿರಿಚ್ಯತೇ|

05063008c ತಂ ಕೃಷ್ಣಂ ಪುಂಡರೀಕಾಕ್ಷಂ ಕೋ ನು ಯುಧ್ಯೇತ ಬುದ್ಧಿಮಾನ್||

ಅಳತೆಯಲ್ಲಿ ಮೂರು ಲೋಕಗಳನ್ನೂ ಮೀರುವ ಕೃಷ್ಣ ಪುಂಡರೀಕಾಕ್ಷನೊಡನೆ ಯಾವ ಬುದ್ಧಿವಂತನು ತಾನೇ ಯುದ್ಧಮಾಡಿಯಾನು?

05063009a ಏಕತೋ ಹ್ಯಸ್ಯ ದಾರಾಶ್ಚ ಜ್ಞಾತಯಶ್ಚ ಸಬಾಂಧವಾಃ|

05063009c ಆತ್ಮಾ ಚ ಪೃಥಿವೀ ಚೇಯಮೇಕತಶ್ಚ ಧನಂಜಯಃ||

ಒಂದು ಕಡೆ ಅವನ ಮಡದಿಯರು, ದಾಯಾದಿಗಳು, ಬಾಂಧವರು, ತಾನು ಮತ್ತು ಭೂಮಿಯೇ ಇದ್ದರೆ ಇನ್ನೊಂದು ಕಡೆ ಧನಂಜಯನಿದ್ದಾನೆ.

05063010a ವಾಸುದೇವೋಽಪಿ ದುರ್ಧರ್ಷೋ ಯತಾತ್ಮಾ ಯತ್ರ ಪಾಂಡವಃ|

05063010c ಅವಿಷಹ್ಯಂ ಪೃಥಿವ್ಯಾಪಿ ತದ್ಬಲಂ ಯತ್ರ ಕೇಶವಃ||

ಯಾರ ಮೇಲೆ ಪಾಂಡವನು ಅವಲಂಬಿಸಿರುವನೋ ಆ ವಾಸುದೇವನು ದುರ್ಧರ್ಷನು. ಕೇಶವನೆಲ್ಲಿರುವನೋ ಆ ಸೇನೆಯು ಭೂಮಿಯಲ್ಲಿಯೇ ಜಯಿಸಲಸಾಧ್ಯವಾಗಿರುತ್ತದೆ.

05063011a ತಿಷ್ಠ ತಾತ ಸತಾಂ ವಾಕ್ಯೇ ಸುಹೃದಾಮರ್ಥವಾದಿನಾಂ|

05063011c ವೃದ್ಧಂ ಶಾಂತನವಂ ಭೀಷ್ಮಂ ತಿತಿಕ್ಷಸ್ವ ಪಿತಾಮಹಂ||

ಆದುದರಿಂದ ಮಗೂ! ನಿನ್ನ ಒಳ್ಳೆಯದಕ್ಕಾಗಿಯೇ ಹೇಳುವ ಸುಹೃದಯರ, ಸತ್ಯವಂತರ ಮಾತಿನಂತೆ ನಡೆದುಕೋ. ವೃದ್ಧ ಪಿತಾಮಹ ಶಾಂತನವ ಭೀಷ್ಮನನ್ನು ಮಾರ್ಗದರ್ಶಕನನ್ನಾಗಿ ಸ್ವೀಕರಿಸು.

05063012a ಮಾಂ ಚ ಬ್ರುವಾಣಂ ಶುಶ್ರೂಷ ಕುರೂಣಾಮರ್ಥವಾದಿನಂ|

05063012c ದ್ರೋಣಂ ಕೃಪಂ ವಿಕರ್ಣಂ ಚ ಮಹಾರಾಜಂ ಚ ಬಾಹ್ಲಿಕಂ||

ನಾನು ಹೇಳುವುದನ್ನು ಕೇಳು. ಕುರುಗಳ ಒಳ್ಳೆಯದಕ್ಕಾಗಿಯೇ ಹೇಳುವ ದ್ರೋಣ, ಕೃಪ, ವಿಕರ್ಣ ಮತ್ತು ಮಹಾರಾಜ ಬಾಹ್ಲೀಕನನ್ನು ಕೇಳು.

05063013a ಏತೇ ಹ್ಯಪಿ ಯಥೈವಾಹಂ ಮಂತುಮರ್ಹಸಿ ತಾಂಸ್ತಥಾ|

05063013c ಸರ್ವೇ ಧರ್ಮವಿದೋ ಹ್ಯೇತೇ ತುಲ್ಯಸ್ನೇಹಾಶ್ಚ ಭಾರತ||

ಇವರೆಲ್ಲರೂ ನನ್ನಂತೆಯೇ. ನೀನು ನನ್ನನ್ನು ಹೇಗೋ ಹಾಗೆ ಇವರನ್ನೂ ಮನ್ನಿಸಬೇಕು. ಭಾರತ! ಇವರೆಲ್ಲರೂ ಧರ್ಮವನ್ನು ತಿಳಿದುಕೊಂಡಿರುವವರು ಮತ್ತು ನನ್ನಷ್ಟೇ ಸ್ನೇಹವುಳ್ಳವರು.

05063014a ಯತ್ತದ್ವಿರಾಟನಗರೇ ಸಹ ಭ್ರಾತೃಭಿರಗ್ರತಃ|

05063014c ಉತ್ಸೃಜ್ಯ ಗಾಃ ಸುಸಂತ್ರಸ್ತಂ ಬಲಂ ತೇ ಸಮಶೀರ್ಯತ||

ವಿರಾಟನಗರದಲ್ಲಿ ಸಹೋದರರೊಡನೆ ನಿನ್ನ ಸೇನೆಯು ಗೋವುಗಳನ್ನು ಬಿಟ್ಟು ತುಂಬಾ ಸಂತ್ರಸ್ತರಾಗಿ ಹಿಂದೆಸರಿಯಿತು.

05063015a ಯಚ್ಚೈವ ತಸ್ಮಿನ್ನಗರೇ ಶ್ರೂಯತೇ ಮಹದದ್ಭುತಂ|

05063015c ಏಕಸ್ಯ ಚ ಬಹೂನಾಂ ಚ ಪರ್ಯಾಪ್ತಂ ತನ್ನಿದರ್ಶನಂ||

ಆ ನಗರದಲ್ಲಿ ನಡೆದ ಯಾವ ಮಹದದ್ಭುತವನ್ನು ಒಬ್ಬನೇ ಬಹುಮಂದಿಗಳಿಗೆ ಪೂರೈಸಿದನು - ನಾವು ಕೇಳಿದ್ದೇವೋ ಅದೇ ನಿದರ್ಶನವೇ ಸಾಕು.

05063016a ಅರ್ಜುನಸ್ತತ್ತಥಾಕಾರ್ಷೀತ್ಕಿಂ ಪುನಃ ಸರ್ವ ಏವ ತೇ|

05063016c ಸಭ್ರಾತೄನಭಿಜಾನೀಹಿ ವೃತ್ತ್ಯಾ ಚ ಪ್ರತಿಪಾದಯ||

ಅರ್ಜುನನು ಒಬ್ಬನೇ ಅವೆಲ್ಲವನ್ನೂ ಸಾಧಿಸಿರುವಾಗ ಇನ್ನು ಅವರೆಲ್ಲರೂ ಒಂದಾದಾಗ ಏನಾದೀತು? ನಿನ್ನ ಸಹೋದರರ ಕೈಹಿಡಿದು ಅವರೊಂದಿಗೆ ಭೂಮಿಯನ್ನು ಹಂಚಿಕೊಂಡು ಸ್ನೇಹಭಾವದಿಂದಿರು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ತ್ರಿಷಷ್ಟಿತಮೋಽಧ್ಯಾಯಃ|

ಇದುಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಅರವತ್ಮೂರನೆಯ ಅಧ್ಯಾಯವು.

Related image

Comments are closed.