Udyoga Parva: Chapter 25

ಉದ್ಯೋಗ ಪರ್ವ: ಸಂಜಯಯಾನ ಪರ್ವ

೨೫

ಧೃತರಾಷ್ಟ್ರನ ಸಂದೇಶವನ್ನು ನೇರವಾಗಿ ಹೇಳೆಂದು ಯುಧಿಷ್ಠಿರನು ಕೇಳಲು ಸಂಜಯನು ಪಾಂಡವರು ಧರ್ಮಿಷ್ಠರು, ಅವರು ಜ್ಞಾತಿವಧೆಗೆ ಕಾರಣರಾಗಬಾರದು, ಆದುದರಿಂದ ಶಾಂತಿಯಿಂದ ಇರಬೇಕೆಂಬುದೇ ರಾಜ ಮತ್ತು ಭೀಷ್ಮರ ಮತವೆಂದು ವರದಿಮಾಡಿದುದು (೧-೧೫).

05025001 ಯುಧಿಷ್ಠಿರ ಉವಾಚ|

05025001a ಸಮಾಗತಾಃ ಪಾಂಡವಾಃ ಸೃಂಜಯಾಶ್ಚ

        ಜನಾರ್ದನೋ ಯುಯುಧಾನೋ ವಿರಾಟಃ|

05025001c ಯತ್ತೇ ವಾಕ್ಯಂ ಧೃತರಾಷ್ಟ್ರಾನುಶಿಷ್ಟಂ

        ಗಾವಲ್ಗಣೇ ಬ್ರೂಹಿ ತತ್ಸೂತಪುತ್ರ||

ಯುಧಿಷ್ಠಿರನು ಹೇಳಿದನು: “ಗಾವಲ್ಗಣೇ! ಸೂತಪುತ್ರ! ಪಾಂಡವರು, ಸೃಂಜಯರು, ಜನಾರ್ದನ, ಯುಯುಧಾನ, ವಿರಾಟರು ಇಲ್ಲಿ ಸೇರಿದ್ದಾರೆ. ಧೃತರಾಷ್ಟ್ರನು ನಿನಗೆ ಏನು ಹೇಳಿ ಕಳುಹಿಸಿದ್ದಾನೋ ಅದನ್ನು ಹೇಳು.”

05025002 ಸಂಜಯ ಉವಾಚ|

05025002a ಅಜಾತಶತ್ರುಂ ಚ ವೃಕೋದರಂ ಚ

                        ಧನಂಜಯಂ ಮಾದ್ರವತೀಸುತೌ ಚ|

05025002c ಆಮಂತ್ರಯೇ ವಾಸುದೇವಂ ಚ ಶೌರಿಂ

        ಯುಯುಧಾನಂ ಚೇಕಿತಾನಂ ವಿರಾಟಂ||

05025003a ಪಾಂಚಾಲಾನಾಮಧಿಪಂ ಚೈವ ವೃದ್ಧಂ

        ಧೃಷ್ಟದ್ಯುಮ್ನಂ ಪಾರ್ಷತಂ ಯಾಜ್ಞಾಸೇನಿಂ|

05025003c ಸರ್ವೇ ವಾಚಂ ಶೃಣುತೇಮಾಂ ಮದೀಯಾಂ

        ವಕ್ಷ್ಯಾಮಿ ಯಾಂ ಭೂತಿಮಿಚ್ಚನ್ಕುರೂಣಾಂ||

ಸಂಜಯನು ಹೇಳಿದನು: “ಅಜಾತಶತ್ರು, ವೃಕೋದರ, ಧನಂಜಯ, ಮಾದ್ರೀ ಸುತರು, ಶೌರಿ ವಾಸುದೇವ, ಯುಯುಧಾನ, ಚೇಕಿತಾನ, ವಿರಾಟ, ಪಾಂಚಾಲರ ವೃದ್ಧ ಅಧಿಪತಿ, ಪಾರ್ಷತ ಧೃಷ್ಟದ್ಯುಮ್ನ, ಮತ್ತು ಯಾಜ್ಞಸೇನಿ ಎಲ್ಲರಿಗೂ, ಕುರುಗಳ ಒಳ್ಳೆಯದನ್ನೇ ಬಯಸಿ ಹೇಳುವ, ನನ್ನ ಈ ಮಾತುಗಳನ್ನು ಕೇಳಲು ಆಮಂತ್ರಿಸುತ್ತೇನೆ.

05025004a ಶಮಂ ರಾಜಾ ಧೃತರಾಷ್ಟ್ರೋಽಭಿನಂದನ್ನ್

        ಅಯೋಜಯತ್ತ್ವರಮಾಣೋ ರಥಂ ಮೇ|

05025004c ಸಭ್ರಾತೃಪುತ್ರಸ್ವಜನಸ್ಯ ರಾಜ್ಞಾಸ್

        ತದ್ರೋಚತಾಂ ಪಾಂಡವಾನಾಂ ಶಮೋಽಸ್ತು||

ಶಾಂತಿಯನ್ನು ಸ್ವಾಗತಿಸುತ್ತಾ ರಾಜಾ ಧೃತರಾಷ್ಟ್ರನು ಅವಸರ ಮಾಡಿ ನನ್ನ ರಥವನ್ನು ಆಯೋಜಿಸಿದನು. ಭ್ರಾತೃಗಳೊಂದಿಗೆ, ಪುತ್ರರೊಂದಿಗೆ, ಮತ್ತು ಸ್ವಜನ ರಾಜರೊಂದಿಗೆ ಪಾಂಡವರಿಗೆ ಶಾಂತಿಯೇ ಬೇಕೆಂದೆನಿಸಲಿ.

05025005a ಸರ್ವೈರ್ಧರ್ಮೈಃ ಸಮುಪೇತಾಃ ಸ್ಥ ಪಾರ್ಥಾಃ

        ಪ್ರಸ್ಥಾನೇನ ಮಾರ್ದವೇನಾರ್ಜವೇನ|

05025005c ಜಾತಾಃ ಕುಲೇ ಅನೃಶಂಸಾ ವದಾನ್ಯಾ

        ಹ್ರೀನಿಷೇಧಾಃ ಕರ್ಮಣಾಂ ನಿಶ್ಚಯಜ್ಞಃ||

ಪಾರ್ಥರು ಸರ್ವಧರ್ಮಗಳಿಂದ ಸಮೋಪೇತರಾಗಿದ್ದಾರೆ. ನಡತೆಯಲ್ಲಿ ಮಾರ್ದವವಿದೆ. ಆರ್ಜವವಿದೆ. ಉತ್ತಮ ಕುಲದಲ್ಲಿ ಜನಿಸಿದ್ದಾರೆ. ಸುಳ್ಳನ್ನೇ ಆಡುವುದಿಲ್ಲ. ನಾಚಿಕೆಯನ್ನು ತರುವ ಕರ್ಮಗಳನ್ನು ನಿಶ್ಚಯವಾಗಿಯೂ ನಿಷೇಧಿಸುತ್ತಾರೆ.

05025006a ನ ಯುಜ್ಯತೇ ಕರ್ಮ ಯುಷ್ಮಾಸು ಹೀನಂ

        ಸತ್ತ್ವಂ ಹಿ ವಸ್ತಾದೃಶಂ ಭೀಮಸೇನಾಃ|

05025006c ಉದ್ಭಾಸತೇ ಹ್ಯಂಜನಬಿಂದುವತ್ತಃ

        ಶುಕ್ಲೇ ವಸ್ತ್ರೇ ಯದ್ಭವೇತ್ಕಿಲ್ಬಿಷಂ ವಃ||

ನೀವು ಹೀನ ಕರ್ಮಗಳಲ್ಲಿ ತೊಡಗುವುದಿಲ್ಲ. ಸತ್ವಯುತರಾದ ನಿಮಗೆ ಭಯಂಕರ ಸೇನೆಗಳ ಬೆಂಬಲವಿದೆ. ನೀವು ಏನಾದರೂ ಪಾಪಕೃತ್ಯವನ್ನೆಸಗಿದರೆ ಅದು ಬಿಳೀ ಬಟ್ಟೆಯ ಮೇಲೆ ಬಿದ್ದ ಕಾಡಿಗೆಯಂತೆ ನಿಮ್ಮ ಶುದ್ಧ ಹೆಸರಿಗೆ ಕಳಂಕವನ್ನು ತರುತ್ತದೆ.

05025007a ಸರ್ವಕ್ಷಯೋ ದೃಶ್ಯತೇ ಯತ್ರ ಕೃತ್ಸ್ನಃ

        ಪಾಪೋದಯೋ ನಿರಯೋಽಭಾವಸಂಸ್ಥಃ|

05025007c ಕಸ್ತತ್ಕುರ್ಯಾಜ್ಜಾತು ಕರ್ಮ ಪ್ರಜಾನನ್

        ಪರಾಜಯೋ ಯತ್ರ ಸಮೋ ಜಯಶ್ಚ||

ತಿಳಿದೂ ಯಾರುತಾನೇ ಸರ್ವವೂ ಕ್ಷಯವಾಗುವುದನ್ನು ನೋಡಲು ಪ್ರಜೆಗಳೆಲ್ಲರನ್ನೂ ನಾಶಪಡಿಸಬಲ್ಲ, ಪಾಪಕಾರ್ಯವನ್ನು ಮಾಡಲು ತೊಡಗುತ್ತಾನೇ?

05025008a ತೇ ವೈ ಧನ್ಯಾ ಯೈಃ ಕೃತಂ ಜ್ಞಾತಿಕಾರ್ಯಂ

        ಯೇ ವಃ ಪುತ್ರಾಃ ಸುಹೃದೋ ಬಾಂಧವಾಶ್ಚ|

05025008c ಉಪಕ್ರುಷ್ಟಂ ಜೀವಿತಂ ಸಂತ್ಯಜೇಯುಃ

        ತತಃ ಕುರೂಣಾಂ ನಿಯತೋ ವೈ ಭವಃ ಸ್ಯಾತ್||

ಜ್ಞಾತಿಕಾರ್ಯವನ್ನು ಮಾಡುವವರೇ ಧನ್ಯರು. ತಮ್ಮ ಉಪಕೃಷ್ಟ ಜೀವಿತವನ್ನು ತ್ಯಜಿಸಲು ಸಿದ್ಧರಾಗಿರುವ ಅವರೇ ಕುರುಗಳಿಗೆ ನಿಯತರಾದ ನಿಜವಾದ ಪುತ್ರರು, ಸುಹೃದಯರು ಮತ್ತು ಬಾಂಧವರು.

05025009a ತೇ ಚೇತ್ಕುರೂನನುಶಾಸ್ಯ ಸ್ಥ ಪಾರ್ಥಾ

        ನಿನೀಯ ಸರ್ವಾನ್ದ್ವಿಷತೋ ನಿಗೃಹ್ಯ|

05025009c ಸಮಂ ವಸ್ತಜ್ಜೀವಿತಂ ಮೃತ್ಯುನಾ ಸ್ಯಾದ್

        ಯಜ್ಜೀವಧ್ವಂ ಜ್ಞಾತಿವಧೇ ನ ಸಾಧು||

ಒಂದುವೇಳೆ ನೀವು ಪಾರ್ಥರು ನಿಮ್ಮ ದ್ವೇಷಿಗಳನ್ನು ಸೋಲಿಸಿ ಕೊಂದು ಕುರುಗಳನ್ನು ಆಳಿದರೆ ಅನಂತರದ ನಿಮ್ಮ ಜೀವನವು ಮೃತ್ಯುವಿನಂತೆಯೇ ಇರುವುದಿಲ್ಲವೇ? ಜ್ಞಾತಿವಧೆಯನ್ನು ಮಾಡಿ ನಂತರದ ಜೀವನವು ಸಾಧುವಾಗಿರುವುದಿಲ್ಲ.

05025010a ಕೋ ಹ್ಯೇವ ಯುಷ್ಮಾನ್ಸಹ ಕೇಶವೇನ

        ಸಚೇಕಿತಾನಾನ್ಪಾರ್ಷತಬಾಹುಗುಪ್ತಾನ್|

05025010c ಸಸಾತ್ಯಕೀನ್ವಿಷಹೇತ ಪ್ರಜೇತುಂ

        ಲಬ್ಧ್ವಾಪಿ ದೇವಾನ್ಸಚಿವಾನ್ಸಹೇಂದ್ರಾನ್||

ಯಾರುತಾನೇ - ಅವನು ದೇವತೆಗಳನ್ನೆಲ್ಲ ಸಚಿವರನ್ನಾಗಿಸಿಕೊಂಡು ಇಂದ್ರನೇ ಆಗಿದ್ದರೂ - ಕೇಶವ, ಚೇಕಿತಾನ, ಸಾತ್ಯಕಿ, ಪಾರ್ಷತರ ಬಾಹುಗಳಿಂದ ರಕ್ಷಿಸಲ್ಪಟ್ಟ ನಿಮ್ಮನ್ನು ಸೋಲಿಸಲು ಶಕ್ಯರು?

05025011a ಕೋ ವಾ ಕುರೂನ್ದ್ರೋಣಭೀಷ್ಮಾಭಿಗುಪ್ತಾನ್

        ಅಶ್ವತ್ಥಾಮ್ನಾ ಶಲ್ಯಕೃಪಾದಿಭಿಶ್ಚ|

05025011c ರಣೇ ಪ್ರಸೋಢುಂ ವಿಷಹೇತ ರಾಜನ್

        ರಾಧೇಯಗುಪ್ತಾನ್ಸಹ ಭೂಮಿಪಾಲೈಃ||

ರಾಜನ್! ಹಾಗೆಯೇ ದ್ರೋಣ, ಭೀಷ್ಮ, ಅಶ್ವತ್ಥಾಮ, ಶಲ್ಯ, ಕೃಪ, ಕರ್ಣ ಮತ್ತು ಇತರ ಭೂಮಿಪಾಲರಿಂದ ರಕ್ಷಿತರಾದ ಕುರುಗಳನ್ನು ಯಾರುತಾನೇ ಸೋಲಿಸಬಲ್ಲರು?

05025012a ಮಹದ್ಬಲಂ ಧಾರ್ತರಾಷ್ಟ್ರಸ್ಯ ರಾಜ್ಞಾಃ

        ಕೋ ವೈ ಶಕ್ತೋ ಹಂತುಮಕ್ಷೀಯಮಾಣಃ|

05025012c ಸೋಽಹಂ ಜಯೇ ಚೈವ ಪರಾಜಯೇ ಚ

        ನಿಃಶ್ರೇಯಸಂ ನಾಧಿಗಚ್ಚಾಮಿ ಕಿಂ ಚಿತ್||

ತನಗೆ ನಷ್ಟಮಾಡಿಕೊಳ್ಳದೇ ಯಾರುತಾನೇ ರಾಜಾ ಧಾರ್ತರಾಷ್ಟ್ರನ ಮಹಾ ಸೇನೆಯನ್ನು ಸಂಹರಿಸಲು ಶಕ್ತ? ಆದುದರಿಂದ ನಾನು ಜಯದಲ್ಲಿಯಾಗಲೀ ಪರಾಜಯದಲ್ಲಿಯಾಗಲೀ ಶ್ರೇಯಸ್ಸನ್ನು ಕಾಣುತ್ತಿಲ್ಲ.

05025013a ಕಥಂ ಹಿ ನೀಚಾ ಇವ ದೌಷ್ಕುಲೇಯಾ

        ನಿರ್ಧರ್ಮಾರ್ಥಂ ಕರ್ಮ ಕುರ್ಯುಶ್ಚ ಪಾರ್ಥಾಃ|

05025013c ಸೋಽಹಂ ಪ್ರಸಾದ್ಯ ಪ್ರಣತೋ ವಾಸುದೇವಂ

        ಪಾಂಚಾಲಾನಾಮಧಿಪಂ ಚೈವ ವೃದ್ಧಂ||

ದುಷ್ಕುಲದಲ್ಲಿ ಹುಟ್ಟಿದವರು ಮಾಡುವಂಥಹ ನೀಚ ಮತ್ತು ಅಧರ್ಮಯುಕ್ತ ಕೆಲಸವನ್ನು ಹೇಗೆ ತಾನೇ ಪಾರ್ಥರು ಮಾಡಬಲ್ಲರು? ಆದುದರಿಂದ ವಾಸುದೇವ ಮತ್ತು ಪಾಂಚಾಲರ ಅಧಿಪ ವೃದ್ಧರನ್ನು ಕರುಣೆಗಾಗಿ ನಮಸ್ಕರಿಸುತ್ತೇನೆ.

05025014a ಕೃತಾಂಜಲಿಃ ಶರಣಂ ವಃ ಪ್ರಪದ್ಯೇ

        ಕಥಂ ಸ್ವಸ್ತಿ ಸ್ಯಾತ್ಕುರುಸೃಂಜಯಾನಾಂ|

05025014c ನ ಹ್ಯೇವ ತೇ ವಚನಂ ವಾಸುದೇವೋ

        ಧನಂಜಯೋ ವಾ ಜಾತು ಕಿಂ ಚಿನ್ನ ಕುರ್ಯಾತ್||

ಕೈಮುಗಿದು ಶರಣು ಬಿದ್ದು ಕೇಳಿಕೊಳ್ಳುತ್ತಿದ್ದೇನೆ. ಕುರು ಮತ್ತು ಸೃಂಜಯರು ಹೇಗೆ ಚೆನ್ನಾಗಿರಬಹುದು? ನಿನ್ನ ಮಾತಿಗೆ ಅತಿರಿಕ್ತವಾಗಿ ವಾಸುದೇವನಾಗಲೀ ಧನಂಜಯನಾಗಲೀ ನಡೆದುಕೊಳ್ಳುವುದಿಲ್ಲ.

05025015a ಪ್ರಾಣಾನಾದೌ ಯಾಚ್ಯಮಾನಃ ಕುತೋಽನ್ಯದ್

        ಏತದ್ವಿದ್ವನ್ಸಾಧನಾರ್ಥಂ ಬ್ರವೀಮಿ|

05025015c ಏತದ್ರಾಜ್ಞೋ ಭೀಷ್ಮಪುರೋಗಮಸ್ಯ

        ಮತಂ ಯದ್ವಃ ಶಾಂತಿರಿಹೋತ್ತಮಾ ಸ್ಯಾತ್||

ಕೇಳಿದರೆ ಅವರಿಬ್ಬರೂ ಪ್ರಾಣಗಳನ್ನೂ ಕೊಡುತ್ತಾರೆ. ಅನ್ಯಥಾ ಮಾಡುವುದಿಲ್ಲ. ಇದನ್ನು ತಿಳಿದೇ ಸಾಧನೆಗೊಳ್ಳಲೆಂದು ಹೇಳುತ್ತಿದ್ದೇನೆ. ಇದು ರಾಜ ಮತ್ತು ಭೀಷ್ಮನೇ ಮೊದಲಾದವರ ಉತ್ತಮ ಶಾಂತಿಯನ್ನು ತರುವ ಮತ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಸಂಜಯವಾಕ್ಯೇ ಪಂಚವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಇಪ್ಪತ್ತೈದನೆಯ ಅಧ್ಯಾಯವು.

Related image

Comments are closed.