ಉದ್ಯೋಗ ಪರ್ವ: ಸೈನ್ಯನಿರ್ಯಾಣ ಪರ್ವ
೧೫೨
ದುರ್ಯೋಧನನ ಸೈನ್ಯವಿಭಾಗ
ದುರ್ಯೋಧನನು ತನ್ನ ಸೇನೆಗಳ ವಿಭಾಗಗಳನ್ನು ರಚಿಸಿದ್ದುದು (೧-೩೧).
05152001 ವೈಶಂಪಾಯನ ಉವಾಚ|
05152001a ವ್ಯುಷಿತಾಯಾಂ ರಜನ್ಯಾಂ ತು ರಾಜಾ ದುರ್ಯೋಧನಸ್ತತಃ|
05152001c ವ್ಯಭಜತ್ತಾನ್ಯನೀಕಾನಿ ದಶ ಚೈಕಂ ಚ ಭಾರತ||
ವೈಶಂಪಾಯನನು ಹೇಳಿದನು: “ಭಾರತ! ರಾತ್ರಿಯು ಕಳೆಯಲು ರಾಜಾ ದುರ್ಯೋಧನನು ತನ್ನ ಹನ್ನೊಂದು ಸೇನೆಗಳನ್ನು ವಿಂಗಡಿಸಿದನು.
05152002a ನರಹಸ್ತಿರಥಾಶ್ವಾನಾಂ ಸಾರಂ ಮಧ್ಯಂ ಚ ಫಲ್ಗು ಚ|
05152002c ಸರ್ವೇಷ್ವೇತೇಷ್ವನೀಕೇಷು ಸಂದಿದೇಶ ಮಹೀಪತಿಃ||
ಆ ಮಹೀಪತಿಯು ತನ್ನ ಪುರುಷರನ್ನು, ಆನೆಗಳನ್ನು, ಕುದುರೆಗಳನ್ನು ಅವರವರ ಗುಣಗಳ ಆಧಾರದ ಮೇಲೆ ಸಾರವುಳ್ಳವರು, ಮಧ್ಯಮರು ಮತ್ತು ಕೀಳಾದವರೆಂದು ಬೇರೆ ಬೇರೆ ಸೇನೆಗಳಲ್ಲಿ ವಿಭಜಿಸಿದನು.
05152003a ಸಾನುಕರ್ಷಾಃ ಸತೂಣೀರಾಃ ಸವರೂಥಾಃ ಸತೋಮರಾಃ|
05152003c ಸೋಪಾಸಂಗಾಃ ಸಶಕ್ತೀಕಾಃ ಸನಿಷಂಗಾಃ ಸಪೋಥಿಕಾಃ||
05152004a ಸಧ್ವಜಾಃ ಸಪತಾಕಾಶ್ಚ ಸಶರಾಸನತೋಮರಾಃ|
05152004c ರಜ್ಜುಭಿಶ್ಚ ವಿಚಿತ್ರಾಭಿಃ ಸಪಾಶಾಃ ಸಪರಿಸ್ತರಾಃ||
05152005a ಸಕಚಗ್ರಹವಿಕ್ಷೇಪಾಃ ಸತೈಲಗುಡವಾಲುಕಾಃ|
05152005c ಸಾಶೀವಿಷಘಟಾಃ ಸರ್ವೇ ಸಸರ್ಜರಸಪಾಂಸವಃ||
05152006a ಸಘಂಟಾಫಲಕಾಃ ಸರ್ವೇ ವಾಸೀವೃಕ್ಷಾದನಾನ್ವಿತಾಃ|
05152006c ವ್ಯಾಘ್ರಚರ್ಮಪರೀವಾರಾ ವೃತಾಶ್ಚ ದ್ವೀಪಿಚರ್ಮಭಿಃ||
05152007a ಸವಸ್ತಯಃ ಸಶೃಂಗಾಶ್ಚ ಸಪ್ರಾಸವಿವಿಧಾಯುಧಾಃ|
05152007c ಸಕುಠಾರಾಃ ಸಕುದ್ದಾಲಾಃ ಸತೈಲಕ್ಷೌಮಸರ್ಪಿಷಃ||
05152008a ಚಿತ್ರಾನೀಕಾಃ ಸುವಪುಷೋ ಜ್ವಲಿತಾ ಇವ ಪಾವಕಾಃ|
ಮರದ ಕಾಂಡಗಳು, ತೂಣೀರಗಳು, ಕಲ್ಲುಬಂಡೆಗಳು, ತೋಮರಗಳು, ಈಟಿಗಳು, ಕಲ್ಲುಗಳು, ಧ್ವಜಗಳು, ಪತಾಕೆಗಳು, ಶರಾಸನ ತೋಮರಗಳು, ವಿಚಿತ್ರರೀತಿಯ ಹಗ್ಗಗಳು, ನೇಣುಗಳು, ಕಂಬಳಿಗಳು, ಕೂದಲನ್ನು ಎಳೆಯುವ ಆಯುಧಗಳು, ಎಣ್ಣೆ, ಬೆಲ್ಲ, ಮರಳುಗಳು, ವಿಷಸರ್ಪಗಳು ತುಂಬಿದ ಮಡಿಕೆಗಳು, ಮರದ ಮೇಣಗಳು, ಧೂಳುಗಳು, ಗಂಟೆಗಳುಳ್ಳ ಫಲಕಗಳು, ಕೊಡಲಿ ಖಡ್ಗಗಳು, ವ್ಯಾಘ್ರ ಚರ್ಮ, ಚಿರತೆಯ ಚರ್ಮ, ವಸ್ತಿಗಳು, ಶೃಂಗಗಳು, ಪ್ರಾಸವೇ ಮೊದಲಾದ ವಿವಿಧ ಆಯುಧಗಳು, ಕುಠಾರ, ಕುದ್ದಾಲ, ಮತ್ತು ಎಳ್ಳೆಣ್ಣೆ-ಹರಳೆಣ್ಣೆಗಳಿಂದ ಸುಸಜ್ಜಿತರಾಗಿ, ಬಣ್ಣಬಣ್ಣದ ಉಡುಪುಗಳನ್ನು ಧರಿಸಿದ ಆ ಸೇನೆಯು ಪಾವಕನಂತೆ ಪ್ರಜ್ವಲಿಸುತ್ತಿತ್ತು.
05152008c ತಥಾ ಕವಚಿನಃ ಶೂರಾಃ ಶಸ್ತ್ರೇಷು ಕೃತನಿಶ್ರಮಾಃ||
05152009a ಕುಲೀನಾ ಹಯಯೋನಿಜ್ಞಾಃ ಸಾರಥ್ಯೇ ವಿನಿವೇಶಿತಾಃ|
ಕವಚಿಗಳು, ಶೂರರು, ಶಸ್ತ್ರಗಳಲ್ಲಿ ಕೃತನಿಶ್ರಮರು, ಕುಲೀನರು, ಹಯವಿಜ್ಞಾನವನ್ನು ತಿಳಿದವರು ಸಾರಥಿಗಳಾಗಿ ನಿವೇಶಿತರಾದರು.
05152009c ಬದ್ಧಾರಿಷ್ಟಾ ಬದ್ಧಕಕ್ಷ್ಯಾ ಬದ್ಧಧ್ವಜಪತಾಕಿನಃ||
05152010a ಚತುರ್ಯುಜೋ ರಥಾಃ ಸರ್ವೇ ಸರ್ವೇ ಶಸ್ತ್ರಸಮಾಯುತಾಃ|
05152010c ಸಂಹೃಷ್ಟವಾಹನಾಃ ಸರ್ವೇ ಸರ್ವೇ ಶತಶರಾಸನಾಃ||
ಅರಿಷ್ಟಗಳನ್ನು ಕಟ್ಟಿದ, ಕಕ್ಷ್ಯಗಳನ್ನು ಕಟ್ಟಿದ, ಧ್ವಜ-ಪತಾಕೆಗಳನ್ನು ಕಟ್ಟಿದ, ನಾಲ್ಕು ಕುದುರೆಗಳನ್ನು ಕಟ್ಟಿದ್ದ ರಥಗಳೆಲ್ಲವೂ ಎಲ್ಲ ಶಸ್ತ್ರಗಳಿಂದ ತುಂಬಿದ್ದವು. ಎಲ್ಲವೂ ಸಂಹೃಷ್ಟ ವಾಹನಗಳಾಗಿದ್ದವು. ಎಲ್ಲವುಗಳಲ್ಲಿ ನೂರಾರು ಶರಾಸನಗಳಿದ್ದವು.
05152011a ಧುರ್ಯಯೋರ್ಹಯಯೋರೇಕಸ್ತಥಾನ್ಯೌ ಪಾರ್ಷ್ಣಿಸಾರಥೀ|
05152011c ತೌ ಚಾಪಿ ರಥಿನಾಂ ಶ್ರೇಷ್ಠೌ ರಥೀ ಚ ಹಯವಿತ್ತಥಾ||
ಎರಡು ಕುದುರೆಗಳಿಗೆ ಒಬ್ಬ ಉಸ್ತುವಾರಿಯಿದ್ದನು. ಪಕ್ಕದಲ್ಲಿ ಇನ್ನೊಬ್ಬ ಸಾರಥಿಯಿದ್ದನು. ಇಬ್ಬರೂ ರಥಿಗಳಲ್ಲಿ ಶ್ರೇಷ್ಠರಾಗಿದ್ದರು. ಇಬ್ಬರು ರಥಿಕರೂ ಹಯವಿತ್ತರಾಗಿದ್ದರು.
05152012a ನಗರಾಣೀವ ಗುಪ್ತಾನಿ ದುರಾದೇಯಾನಿ ಶತ್ರುಭಿಃ|
05152012c ಆಸನ್ರಥಸಹಸ್ರಾಣಿ ಹೇಮಮಾಲೀನಿ ಸರ್ವಶಃ||
ಅಲ್ಲಿ ಎಲ್ಲೆಲ್ಲೂ ಗುಪ್ತ ನಗರಗಳಂತೆ ಶತ್ರುಗಳಿಗೆ ಜಯಿಸಲಸಾಧ್ಯವಾದ ಹಲವು ಸಾವಿರ ಹೇಮಮಾಲಿ ರಥಗಳಿದ್ದವು.
05152013a ಯಥಾ ರಥಾಸ್ತಥಾ ನಾಗಾ ಬದ್ಧಕಕ್ಷ್ಯಾಃ ಸ್ವಲಂಕೃತಾಃ|
05152013c ಬಭೂವುಃ ಸಪ್ತ ಪುರುಷಾ ರತ್ನವಂತ ಇವಾದ್ರಯಃ||
ರಥಗಳಂತೆ ಆನೆಗಳಿಗೆ ಕೂಡ ಕಕ್ಷ್ಯಗಳನ್ನು ಕಟ್ಟಿದ್ದರು. ಅಲಂಕಾರಗೊಂಡು ರತ್ನವಂತ ಗಿರಿಗಳಂತೆ ಕಾಣುತ್ತಿದ್ದವು. ಪ್ರತಿಯೊಂದಕ್ಕೂ ಏಳು ಜನರಿದ್ದರು.
05152014a ದ್ವಾವಂಕುಶಧರೌ ತೇಷು ದ್ವಾವುತ್ತಮಧನುರ್ಧರೌ|
05152014c ದ್ವೌ ವರಾಸಿಧರೌ ರಾಜನ್ನೇಕಃ ಶಕ್ತಿಪತಾಕಧೃಕ್||
ರಾಜನ್! ಅವರಲ್ಲಿ ಇಬ್ಬರು ಅಂಕುಶಧರರಾಗಿದ್ದರು. ಇಬ್ಬರು ಉತ್ತಮ ಧನುರ್ಧರರಾಗಿದ್ದರು. ಇಬ್ಬರು ಶ್ರೇಷ್ಠ ಖಡ್ಗಧರರಾಗಿದ್ದರು ಮತ್ತು ಒಬ್ಬನು ಶಕ್ತಿ ಮತ್ತು ಪತಾಕೆಗಳನ್ನು ಹಿಡಿದವನಾಗಿದ್ದನು.
05152015a ಗಜೈರ್ಮತ್ತೈಃ ಸಮಾಕೀರ್ಣಂ ಸವರ್ಮಾಯುಧಕೋಶಕೈಃ|
05152015c ತದ್ಬಭೂವ ಬಲಂ ರಾಜನ್ಕೌರವ್ಯಸ್ಯ ಸಹಸ್ರಶಃ||
ರಾಜನ್! ಕೌರವನ ಬಲದಲ್ಲಿ ಸರ್ವಾಯುಧಕೋಷಕಗಳಿಂದ ತುಂಬಿದ ಸಹಸ್ರಾರು ಮತ್ತ ಗಜಗಳು ಇದ್ದವು.
05152016a ವಿಚಿತ್ರಕವಚಾಮುಕ್ತೈಃ ಸಪತಾಕೈಃ ಸ್ವಲಂಕೃತೈಃ|
05152016c ಸಾದಿಭಿಶ್ಚೋಪಸಂಪನ್ನಾ ಆಸನ್ನಯುತಶೋ ಹಯಾಃ||
05152017a ಸುಸಂಗ್ರಾಹಾಃ ಸುಸಂತೋಷಾ ಹೇಮಭಾಂಡಪರಿಚ್ಚದಾಃ|
05152017c ಅನೇಕಶತಸಾಹಸ್ರಾಸ್ತೇ ಚ ಸಾದಿವಶೇ ಸ್ಥಿತಾಃ||
ಅಲ್ಲಿ ಸವಾರಿಯಲ್ಲಿರುವ ಹತ್ತು ಸಾವಿರ ವಿಚಿತ್ರಕವಚಗಳನ್ನು ಧರಿಸಿದ, ಪತಾಕೆಗಳನ್ನುಳ್ಳ, ಅಲಂಕೃತಗೊಂಡಿರುವ ಕುದುರೆಗಳಿದ್ದವು. ಪ್ರತಿಯೊಂದನ್ನು ಚೆನ್ನಾಗಿ ಹಿಡಿದಿದ್ದರು. ಸಂತೋಷದಲ್ಲಿಟ್ಟಿದ್ದರು. ಬಂಗಾರದ ಪಟ್ಟಿಗಳನ್ನು ಹೊದೆಸಿದ್ದರು. ಅನೇಕ ನೂರು ಸಾವಿರ ಕುದುರೆಗಳಿದ್ದರೂ ಎಲ್ಲವನ್ನೂ ನಿಯಂತ್ರಣದಲ್ಲಿರಿಸಲಾಗಿತ್ತು.
05152018a ನಾನಾರೂಪವಿಕಾರಾಶ್ಚ ನಾನಾಕವಚಶಸ್ತ್ರಿಣಃ|
05152018c ಪದಾತಿನೋ ನರಾಸ್ತತ್ರ ಬಭೂವುರ್ಹೇಮಮಾಲಿನಃ||
ಅಲ್ಲಿ ಹೇಮಮಾಲಿಗಳಾದ, ನಾನಾರೂಪವಿಕಾರಗಳ, ನಾನಾ ಕವಚ ಶಸ್ತ್ರಗಳನ್ನು ಧರಿಸಿದ ಪದಾತಿ ನರರಿದ್ದರು.
05152019a ರಥಸ್ಯಾಸನ್ದಶ ಗಜಾ ಗಜಸ್ಯ ದಶ ವಾಜಿನಃ|
05152019c ನರಾ ದಶ ಹಯಸ್ಯಾಸನ್ಪಾದರಕ್ಷಾಃ ಸಮಂತತಃ||
ಒಂದು ರಥಕ್ಕೆ ಹತ್ತು ಆನೆಗಳಿದ್ದವು, ಒಂದು ಆನೆಗೆ ಹತ್ತು ಕದುರೆಸವಾರಿಗಳಿದ್ದವು. ಒಂದು ಕುದುರೆಗೆ ನಾಲ್ಕೂ ಕಾಲುಗಳಲ್ಲಿ ಹತ್ತು ಪಾದರಕ್ಷಕರಿದ್ದರು.
05152020a ರಥಸ್ಯ ನಾಗಾಃ ಪಂಚಾಶನ್ನಾಗಸ್ಯಾಸಂ ಶತಂ ಹಯಾಃ|
05152020c ಹಯಸ್ಯ ಪುರುಷಾಃ ಸಪ್ತ ಭಿನ್ನಸಂಧಾನಕಾರಿಣಃ||
ಒಡಕನ್ನು ಮುಚ್ಚಲು ಒಂದು ರಥಕ್ಕೆ ಐವತ್ತು ಆನೆಗಳನ್ನೂ, ನೂರು ಕುದುರೆಗಳನ್ನೂ, ಪ್ರತಿ ಕುದುರೆಗೆ ಏಳು ಪುರುಷರನ್ನೂ ಇಡಲಾಗಿತ್ತು.
05152021a ಸೇನಾ ಪಂಚಶತಂ ನಾಗಾ ರಥಾಸ್ತಾವಂತ ಏವ ಚ|
05152021c ದಶಸೇನಾ ಚ ಪೃತನಾ ಪೃತನಾ ದಶವಾಹಿನೀ||
ಒಂದು ಸೇನೆಯಲ್ಲಿ ಐನೂರು ಆನೆಗಳೂ ಮತ್ತು ಅಷ್ಟೇ ಸಂಖ್ಯೆಯ ರಥಗಳೂ ಇರುತ್ತವೆ. ಅಂತಹ ಹತ್ತು ಸೇನೆಗಳು ಒಂದು ಪೃತನವೆನಿಸಿಕೊಳ್ಳುತ್ತದೆ. ಹತ್ತು ಪೃತನಗಳು ಒಂದು ವಾಹಿನಿ.
05152022a ವಾಹಿನೀ ಪೃತನಾ ಸೇನಾ ಧ್ವಜಿನೀ ಸಾದಿನೀ ಚಮೂಃ|
05152022c ಅಕ್ಷೌಹಿಣೀತಿ ಪರ್ಯಾಯೈರ್ನಿರುಕ್ತಾಥ ವರೂಥಿನೀ|
05152022e ಏವಂ ವ್ಯೂಢಾನ್ಯನೀಕಾನಿ ಕೌರವೇಯೇಣ ಧೀಮತಾ||
ಆದರೆ ವಾಹಿನೀ, ಪೃತನಾ, ಸೇನಾ, ಧ್ವಜಿನಿ, ಸಾದಿನೀ, ಅಕ್ಷೌಹಿಣೀ, ವರೂಥಿನೀ ಎಂದು ಪರ್ಯಾಯಶಬ್ಧಗಳನ್ನೂ ಬಳಸುತ್ತಾರೆ. ಹೀಗೆ ಧೀಮತ ಕೌರವನ ಸೇನೆಯು ರಚಿಸಲ್ಪಟ್ಟಿತ್ತು.
05152023a ಅಕ್ಷೌಹಿಣ್ಯೋ ದಶೈಕಾ ಚ ಸಂಖ್ಯಾತಾಃ ಸಪ್ತ ಚೈವ ಹ|
05152023c ಅಕ್ಷೌಹಿಣ್ಯಸ್ತು ಸಪ್ತೈವ ಪಾಂಡವಾನಾಮಭೂದ್ಬಲಂ||
05152023e ಅಕ್ಷೌಹಿಣ್ಯೋ ದಶೈಕಾ ಚ ಕೌರವಾಣಾಮಭೂದ್ ಬಲಂ||
ಹನ್ನೊಂದು ಮತ್ತು ಏಳು ಸೇರಿ ಒಟ್ಟು ಹದಿನೆಂಟು ಅಕ್ಷೌಹಿಣಿಗಳಿದ್ದವು: ಪಾಂಡವರ ಬಲದಲ್ಲಿ ಏಳೇ ಅಕ್ಷೌಹಿಣಿಗಳಿದ್ದವು. ಕೌರವರ ಬಲವು ಹನ್ನೊಂದು ಅಕ್ಷೌಹಿಣಿಯದಾಗಿತ್ತು.
05152024a ನರಾಣಾಂ ಪಂಚಪಂಚಾಶದೇಷಾ ಪತ್ತಿರ್ವಿಧೀಯತೇ|
05152024c ಸೇನಾಮುಖಂ ಚ ತಿಸ್ರಸ್ತಾ ಗುಲ್ಮ ಇತ್ಯಭಿಸಂಜ್ಞೈತಃ||
ಐದು ಇಪ್ಪತ್ತೈದು ಸೈನಿಕರನ್ನು ಒಂದು ಪತ್ತಿ ಎನ್ನುತ್ತಾರೆ. ಅಂಥಹ ಮೂರು ಸೇನಾಮುಖ ಅಥವಾ ಗುಲ್ಮವೆನಿಸಿಕೊಳ್ಳುತ್ತವೆ.
05152025a ದಶ ಗುಲ್ಮಾ ಗಣಸ್ತ್ವಾಸೀದ್ಗಣಾಸ್ತ್ವಯುತಶೋಽಭವನ್|
05152025c ದುರ್ಯೋಧನಸ್ಯ ಸೇನಾಸು ಯೋತ್ಸ್ಯಮಾನಾಃ ಪ್ರಹಾರಿಣಃ||
ಹತ್ತು ಗುಲ್ಮಗಳು ಒಂದು ಗಣವಾಗುತ್ತದೆ. ದುರ್ಯೋಧನನ ಸೇನೆಯಲ್ಲಿ ಅಂಥಹ ಯುದ್ಧೋತ್ಸುಕರಾದ, ಪ್ರಹಾರಿಗಳಾದ ಹತ್ತು ಸಾವಿರ ಗಣಗಳಿದ್ದವು.
05152026a ತತ್ರ ದುರ್ಯೋಧನೋ ರಾಜಾ ಶೂರಾನ್ಬುದ್ಧಿಮತೋ ನರಾನ್|
05152026c ಪ್ರಸಮೀಕ್ಷ್ಯ ಮಹಾಬಾಹುಶ್ಚಕ್ರೇ ಸೇನಾಪತೀಂಸ್ತದಾ||
ಅಲ್ಲಿ ಮಹಾಬಾಹು ರಾಜಾ ದುರ್ಯೋಧನನು ಶೂರರೂ ಬುದ್ಧಿವಂತರೂ ಆದವರನ್ನು ನೋಡಿ ಸೇನಾಪತಿಗಳನ್ನಾಗಿ ನಿಯೋಜಿಸಿದನು.
05152027a ಪೃಥಗಕ್ಷೌಹಿಣೀನಾಂ ಚ ಪ್ರಣೇತನ್ನರಸತ್ತಮಾನ್|
05152027c ವಿಧಿಪೂರ್ವಂ ಸಮಾನೀಯ ಪಾರ್ಥಿವಾನಭ್ಯಷೇಚಯತ್||
05152028a ಕೃಪಂ ದ್ರೋಣಂ ಚ ಶಲ್ಯಂ ಚ ಸೈಂಧವಂ ಚ ಮಹಾರಥಂ|
05152028c ಸುದಕ್ಷಿಣಂ ಚ ಕಾಂಬೋಜಂ ಕೃತವರ್ಮಾಣಮೇವ ಚ||
05152029a ದ್ರೋಣಪುತ್ರಂ ಚ ಕರ್ಣಂ ಚ ಭೂರಿಶ್ರವಸಮೇವ ಚ|
05152029c ಶಕುನಿಂ ಸೌಬಲಂ ಚೈವ ಬಾಹ್ಲೀಕಂ ಚ ಮಹಾರಥಂ||
ಪ್ರತ್ಯೇಕವಾಗಿ ಅಕ್ಷೌಹಿಣಿಗಳಿಗೆ ಪ್ರಣೇತ ನರಸತ್ತಮ ಪಾರ್ಥಿವರನ್ನು ಕರೆಯಿಸಿ ವಿಧಿಪೂರ್ವಕವಾಗಿ ಅಭಿಷೇಕಿಸಿದನು: ಕೃಪ, ದ್ರೋಣ, ಶಲ್ಯ, ಮಹಾರಥಿ ಸೈಂಧವ, ಕಾಂಬೋಜ ಸುದಕ್ಷಿಣ, ಕೃತವರ್ಮ, ದ್ರೋಣ ಪುತ್ರ, ಕರ್ಣ, ಭೂರಿಶ್ರವ, ಸೌಬಲ ಶಕುನಿ ಮತ್ತು ಮಹಾರಥಿ ಬಾಹ್ಲೀಕ.
05152030a ದಿವಸೇ ದಿವಸೇ ತೇಷಾಂ ಪ್ರತಿವೇಲಂ ಚ ಭಾರತ|
05152030c ಚಕ್ರೇ ಸ ವಿವಿಧಾಃ ಸಂಜ್ಞಾಃ ಪ್ರತ್ಯಕ್ಷಂ ಚ ಪುನಃ ಪುನಃ||
ಭಾರತ! ದಿವಸ ದಿವಸವೂ, ಪ್ರತಿವೇಳೆಯೂ ಅವರಿಗೆ ಪ್ರತ್ಯಕ್ಷವಾಗಿ ವಿವಿಧ ಸೂಚನೆಗಳನ್ನು ಪುನಃ ಪುನಃ ಕೊಡುತ್ತಿದ್ದನು.
05152031a ತಥಾ ವಿನಿಯತಾಃ ಸರ್ವೇ ಯೇ ಚ ತೇಷಾಂ ಪದಾನುಗಾಃ|
05152031c ಬಭೂವುಃ ಸೈನಿಕಾ ರಾಜನ್ರಾಜ್ಞಾಃ ಪ್ರಿಯಚಿಕೀರ್ಷವಃ||
ರಾಜನ್! ಹೀಗೆ ವಿನಯಿತರಾದ ಅವರೆಲ್ಲರೂ ಅವನ ಆಜ್ಞೆಯನ್ನು ಅನುಸರಿಸುವ ಸೈನಿಕರಾಗಿ ರಾಜನಿಗೆ ಪ್ರಿಯವಾದುದನ್ನು ಮಾಡಲು ಉತ್ಸುಕರಾಗಿದ್ದರು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೈನ್ಯನಿರ್ಯಾಣ ಪರ್ವಣಿ ದುರ್ಯೋಧನಸೈನ್ಯವಿಭಾಗೇ ದ್ವಿಪಂಚಾಶದಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೈನ್ಯನಿರ್ಯಾಣ ಪರ್ವದಲ್ಲಿ ದುರ್ಯೋಧನಸೈನ್ಯವಿಭಾಗದದಲ್ಲಿ ನೂರಾಐವತ್ತೆರಡನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೈನ್ಯನಿರ್ಯಾಣ ಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೈನ್ಯನಿರ್ಯಾಣ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೬/೧೦೦, ಅಧ್ಯಾಯಗಳು-೮೧೫/೧೯೯೫, ಶ್ಲೋಕಗಳು-೨೬೬೮೭/೨೬೫೬೫