Udyoga Parva: Chapter 130

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೩೦

ಕೃಷ್ಣನ ಮೂಲಕ ಕುಂತಿಯು ಪಾಂಡವರಿಗೆ ಕಳುಹಿಸಿದ ಸಂದೇಶ

ಕುರುಸಂಸದಿಯಲ್ಲಿ ನಡೆದುದನ್ನು ಸಂಕ್ಷಿಪ್ತವಾಗಿ ವರದಿಮಾಡಿ, ಪಾಂಡವರಿಗೆ ಅವಳ ಸಂದೇಶವೇನೆಂದು ಕೃಷ್ಣನು ಕುಂತಿಯನ್ನು ಕೇಳಲು ಅವಳು ಯುಧಿಷ್ಠಿರನಿಗೆ ಕ್ಷತ್ರಿಯ ಧರ್ಮವನ್ನು ಪಾಲಿಸಬೇಕೆಂದು ಹೇಳುವುದು (೧-೫೨).

05130001 ವೈಶಂಪಾಯನ ಉವಾಚ|

05130001a ಪ್ರವಿಶ್ಯಾಥ ಗೃಹಂ ತಸ್ಯಾಶ್ಚರಣಾವಭಿವಾದ್ಯ ಚ|

05130001c ಆಚಖ್ಯೌ ತತ್ಸಮಾಸೇನ ಯದ್ವೃತ್ತಂ ಕುರುಸಂಸದಿ||

ವೈಶಂಪಾಯನನು ಹೇಳಿದನು: “ಅವಳ ಮನೆಯನ್ನು ಪ್ರವೇಶಿಸಿ ಚರಣಗಳಿಗೆ ವಂದಿಸಿ ಕುರುಸಂಸದಿಯಲ್ಲಿ ನಡೆದುದನ್ನು ಸಂಕ್ಷಿಪ್ತವಾಗಿ ವರದಿಮಾಡಿದನು.

05130002 ವಾಸುದೇವ ಉವಾಚ|

05130002a ಉಕ್ತಂ ಬಹುವಿಧಂ ವಾಕ್ಯಂ ಗ್ರಹಣೀಯಂ ಸಹೇತುಕಂ|

05130002c ಋಷಿಭಿಶ್ಚ ಮಯಾ ಚೈವ ನ ಚಾಸೌ ತದ್ಗೃಹೀತವಾನ್||

ವಾಸುದೇವನು ಹೇಳಿದನು: “ಋಷಿಗಳು ಮತ್ತು ನಾನು ಸ್ವೀಕರಿಸಬೇಕಾಗಿದ್ದಂತಹ ಬಹುವಿಧದ ಮಾತುಗಳನ್ನು ಕಾರಣಗಳನ್ನು ಕೊಟ್ಟು ಹೇಳಿದೆವು. ಆದರೆ ಅವುಗಳನ್ನು ಸ್ವೀಕರಿಸಲಿಲ್ಲ.

05130003a ಕಾಲಪಕ್ವಮಿದಂ ಸರ್ವಂ ದುರ್ಯೋಧನವಶಾನುಗಂ|

05130003c ಆಪೃಚ್ಚೇ ಭವತೀಂ ಶೀಘ್ರಂ ಪ್ರಯಾಸ್ಯೇ ಪಾಂಡವಾನ್ಪ್ರತಿ||

ದುರ್ಯೋಧನನ ವಶಕ್ಕೆ ಬಂದಿರುವ ಮತ್ತು ಅವನನ್ನು ಅನುಸರಿಸುವ ಎಲ್ಲರ ಕಾಲವು ಪಕ್ವವಾಗಿದೆ. ನನಗೆ ಪಾಂಡವರ ಕಡೆ ಶೀಘ್ರವಾಗಿ ಹೋಗಬೇಕಾಗಿದೆ. ಆದುದರಿಂದ ನಿನ್ನಲ್ಲಿ ಕೇಳುತ್ತಿದ್ದೇನೆ.

05130004a ಕಿಂ ವಾಚ್ಯಾಃ ಪಾಂಡವೇಯಾಸ್ತೇ ಭವತ್ಯಾ ವಚನಾನ್ಮಯಾ|

05130004c ತದ್ಬ್ರೂಹಿ ತ್ವಂ ಮಹಾಪ್ರಾಜ್ಞೇ ಶುಶ್ರೂಷೇ ವಚನಂ ತವ||

ಪಾಂಡವರಿಗೆ ಹೇಳಲು ನಿನ್ನ ಸಂದೇಶವೇನೆಂದು ನನಗೆ ಹೇಳು. ಮಹಾಪ್ರಾಜ್ಞೇ! ಅದನ್ನು ಹೇಳು. ನಿನ್ನ ಮಾತನ್ನು ಕೇಳುತ್ತೇನೆ.”

05130005 ಕುಂತ್ಯುವಾಚ|

05130005a ಬ್ರೂಯಾಃ ಕೇಶವ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಂ|

05130005c ಭೂಯಾಂಸ್ತೇ ಹೀಯತೇ ಧರ್ಮೋ ಮಾ ಪುತ್ರಕ ವೃಥಾ ಕೃಥಾಃ||

ಕುಂತಿಯು ಹೇಳಿದಳು: “ಕೇಶವ! ಧರ್ಮಾತ್ಮ ರಾಜಾ ಯುಧಿಷ್ಠಿರನಿಗೆ ಹೇಳು – “ನಿನ್ನ ಧರ್ಮವು ಕ್ಷೀಣಿಸುತ್ತಿದೆ. ಮಗನೇ! ವೃಥಾ ಕೆಲಸಮಾಡಬೇಡ!

05130006a ಶ್ರೋತ್ರಿಯಸ್ಯೇವ ತೇ ರಾಜನ್ಮಂದಕಸ್ಯಾವಿಪಶ್ಚಿತಃ|

05130006c ಅನುವಾಕಹತಾ ಬುದ್ಧಿರ್ಧರ್ಮಮೇವೈಕಮೀಕ್ಷತೇ||

ರಾಜನ್! ಕೇವಲ ಕೇಳಿ ಕಲಿತವರಂತೆ ನಿನ್ನ ತಿಳುವಳಿಕೆಯು ಕಡಿಮೆ. ಬರಿಯ ಮಾತುಗಳನ್ನು ಅನುಸರಿಸುವ ಬುದ್ಧಿಯು ಒಂದೇ ಧರ್ಮವನ್ನು ನೋಡುತ್ತಿದೆ.

05130007a ಅಂಗಾವೇಕ್ಷಸ್ವ ಧರ್ಮಂ ತ್ವಂ ಯಥಾ ಸೃಷ್ಟಃ ಸ್ವಯಂಭುವಾ|

05130007c ಉರಸ್ತಃ ಕ್ಷತ್ರಿಯಃ ಸೃಷ್ಟೋ ಬಾಹುವೀರ್ಯೋಪಜೀವಿತಾ|

05130007e ಕ್ರೂರಾಯ ಕರ್ಮಣೇ ನಿತ್ಯಂ ಪ್ರಜಾನಾಂ ಪರಿಪಾಲನೇ||

ಸ್ವಯಂಭುವು ಸೃಷ್ಟಿಸಿದ ನಿನ್ನದೇ ಜಾತಿಯ ಧರ್ಮವನ್ನು ನೋಡು. ಅವನ ಬಾಹುಗಳಿಂದ ಹೊರಬಂದ ಕ್ಷತ್ರಿಯನು ಬಾಹವೀರ್ಯದಿಂದ ಜೀವಿಸಬೇಕು. ನಿತ್ಯವೂ ಕ್ರೂರಕರ್ಮಗಳಿಂದ ಪ್ರಜೆಗಳನ್ನು ಪರಿಪಾಲಿಸಬೇಕು.

05130008a ಶೃಣು ಚಾತ್ರೋಪಮಾಮೇಕಾಂ ಯಾ ವೃದ್ಧೇಭ್ಯಃ ಶ್ರುತಾ ಮಯಾ|

05130008c ಮುಚುಕುಂದಸ್ಯ ರಾಜರ್ಷೇರದದಾತ್ಪೃಥಿವೀಮಿಮಾಂ|

05130008e ಪುರಾ ವೈಶ್ರವಣಃ ಪ್ರೀತೋ ನ ಚಾಸೌ ತಾಂ ಗೃಹೀತವಾನ್||

ಇದರ ಕುರಿತು ನಾನು ವೃದ್ಧರಿಂದ ಕೇಳಿದ್ದ ಉಪಮೆಯೊಂದು ಇದೆ. ಕೇಳು. ಹಿಂದೆ ರಾಜರ್ಷಿ ಮುಚುಕುಂದನಿಗೆ ಈ ಭೂಮಿಯನ್ನು ವೈಶ್ರವಣನು ಅವನ ಮೇಲಿನ ಪ್ರೀತಿಯಿಂದ ಕೊಟ್ಟಿದ್ದನು. ಆದರೆ ಅವನು ಹೀಗೆ ಹೇಳಿ ಅದನ್ನು ಸ್ವೀಕರಿಸಲಿಲ್ಲ.

05130009a ಬಾಹುವೀರ್ಯಾರ್ಜಿತಂ ರಾಜ್ಯಮಶ್ನೀಯಾಮಿತಿ ಕಾಮಯೇ|

05130009c ತತೋ ವೈಶ್ರವಣಃ ಪ್ರೀತೋ ವಿಸ್ಮಿತಃ ಸಮಪದ್ಯತ||

“ಬಾಹುವೀರ್ಯದಿಂದ ಗಳಿಸಿದ ರಾಜ್ಯವನ್ನು ಆಳಲು ಬಯಸುತ್ತೇನೆ!” ಆಗ ವೈಶ್ರವಣನು ವಿಸ್ಮಿತನಾಗಿ ಪ್ರೀತನಾದನು.

05130010a ಮುಚುಕುಂದಸ್ತತೋ ರಾಜಾ ಸೋಽನ್ವಶಾಸದ್ವಸುಂಧರಾಂ|

05130010c ಬಾಹುವೀರ್ಯಾರ್ಜಿತಾಂ ಸಮ್ಯಕ್ಕ್ಷತ್ರಧರ್ಮಮನುವ್ರತಃ||

ಆಗ ರಾಜ ಮುಚುಕುಂದನು ಕ್ಷತ್ರಿಯಧರ್ಮವನ್ನು ಅನುಸರಿಸಿ ಬಾಹುವೀರ್ಯದಿಂದ ಇಡೀ ಭೂಮಿಯನ್ನು ಗೆದ್ದು ಚೆನ್ನಾಗಿ ಆಳಿದನು.

05130011a ಯಂ ಹಿ ಧರ್ಮಂ ಚರಂತೀಹ ಪ್ರಜಾ ರಾಜ್ಞಾ ಸುರಕ್ಷಿತಾಃ|

05130011c ಚತುರ್ಥಂ ತಸ್ಯ ಧರ್ಮಸ್ಯ ರಾಜಾ ಭಾರತ ವಿಂದತಿ||

ಭಾರತ! ಧರ್ಮದಿಂದ ನಡೆದುಕೊಳ್ಳುವ ಪ್ರಜೆಗಳನ್ನು ರಾಜನು ಸುರಕ್ಷಿಸಿದರೆ ಅವರ ಧರ್ಮದ ನಾಲ್ಕನೆಯ ಒಂದು ಭಾಗವು ರಾಜನಿಗೆ ತಗಲುತ್ತದೆ.

05130012a ರಾಜಾ ಚರತಿ ಚೇದ್ಧರ್ಮಂ ದೇವತ್ವಾಯೈವ ಕಲ್ಪತೇ|

05130012c ಸ ಚೇದಧರ್ಮಂ ಚರತಿ ನರಕಾಯೈವ ಗಚ್ಚತಿ||

ರಾಜನೇ ಆಚರಿಸುವ ಧರ್ಮವು ಅವನಿಗೆ ದೇವತ್ವವನ್ನು ಕಲ್ಪಿಸುತ್ತದೆ. ಅವನು ಅಧರ್ಮವನ್ನು ಆಚರಿಸಿದರೆ ನರಕಕ್ಕೇ ಹೋಗುತ್ತಾನೆ.

05130013a ದಂಡನೀತಿಃ ಸ್ವಧರ್ಮೇಣ ಚಾತುರ್ವರ್ಣ್ಯಂ ನಿಯಚ್ಚತಿ|

05130013c ಪ್ರಯುಕ್ತಾ ಸ್ವಾಮಿನಾ ಸಮ್ಯಗಧರ್ಮೇಭ್ಯಶ್ಚ ಯಚ್ಚತಿ||

ದಂಡನೀತಿಯು ಚಾತುರ್ವಣ್ಯಗಳು ಸ್ವಧರ್ಮಗಳಲ್ಲಿರುವಂತೆ ನಿಯಂತ್ರಿಸುತ್ತದೆ. ರಾಜನು ಅದನ್ನು ಸರಿಯಾಗಿ ಬಳಸುವುದರಿಂದ ಉತ್ತಮ ಧರ್ಮವನ್ನು ಪಡೆಯುತ್ತಾನೆ.

05130014a ದಂಡನೀತ್ಯಾಂ ಯದಾ ರಾಜಾ ಸಮ್ಯಕ್ಕಾರ್ತ್ಸ್ನ್ಯೆನ ವರ್ತತೇ|

05130014c ತದಾ ಕೃತಯುಗಂ ನಾಮ ಕಾಲಃ ಶ್ರೇಷ್ಠಃ ಪ್ರವರ್ತತೇ||

ಯಾವಾಗ ರಾಜನು ದಂಡನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತಾನೋ ಆಗ ಕೃತಯುಗವೆಂಬ ಹೆಸರಿನ ಶ್ರೇಷ್ಠಕಾಲವು ಬರುತ್ತದೆ.

05130015a ಕಾಲೋ ವಾ ಕಾರಣಂ ರಾಜ್ಞೋ ರಾಜಾ ವಾ ಕಾಲಕಾರಣಂ|

05130015c ಇತಿ ತೇ ಸಂಶಯೋ ಮಾ ಭೂದ್ರಾಜಾ ಕಾಲಸ್ಯ ಕಾರಣಂ||

ಕಾಲವು ರಾಜನ ಕಾರಣವೋ ರಾಜನು ಕಾಲದ ಕಾರಣವೋ ಎನ್ನುವ ಸಂಶಯ ಬೇಡ. ರಾಜನೇ ಕಾಲದ ಕಾರಣನಾಗುತ್ತಾನೆ.

05130016a ರಾಜಾ ಕೃತಯುಗಸ್ರಷ್ಟಾ ತ್ರೇತಾಯಾ ದ್ವಾಪರಸ್ಯ ಚ|

05130016c ಯುಗಸ್ಯ ಚ ಚತುರ್ಥಸ್ಯ ರಾಜಾ ಭವತಿ ಕಾರಣಂ||

ರಾಜನೇ ಕೃತ, ತ್ರೇತ, ದ್ವಾಪರ ಯುಗಗಳನ್ನು ಸೃಷ್ಟಿಸುತ್ತಾನೆ. ನಾಲ್ಕನೆಯ ಯುಗಕ್ಕೂ ರಾಜನೇ ಕಾರಣನಾಗುತ್ತಾನೆ.

05130017a ಕೃತಸ್ಯ ಕಾರಣಾದ್ರಾಜಾ ಸ್ವರ್ಗಮತ್ಯಂತಮಶ್ನುತೇ|

05130017c ತ್ರೇತಾಯಾಃ ಕಾರಣಾದ್ರಾಜಾ ಸ್ವರ್ಗಂ ನಾತ್ಯಂತಮಶ್ನುತೇ|

05130017e ಪ್ರವರ್ತನಾದ್ದ್ವಾಪರಸ್ಯ ಯಥಾಭಾಗಮುಪಾಶ್ನುತೇ||

ಕೃತದ ಕಾರಣದಿಂದ ರಾಜನು ಅತ್ಯಂತ ಸ್ವರ್ಗವನ್ನು ಅನುಭವಿಸುತ್ತಾನೆ. ತ್ರೇತದ ಕಾರಣದಿಂದ ರಾಜನು ಅತ್ಯಂತ ಸ್ವರ್ಗವನ್ನು ಅನುಭವಿಸುವುದಿಲ್ಲ. ದ್ವಾಪರ ಯುಗವನ್ನು ತಂದರೆ ರಾಜನು ಅವನಿಗೆ ಸಿಗಬೇಕಾಗಿದ್ದ ಭಾಗವನ್ನು ಮಾತ್ರ ಅನುಭವಿಸುತ್ತಾನೆ.

05130018a ತತೋ ವಸತಿ ದುಷ್ಕರ್ಮಾ ನರಕೇ ಶಾಶ್ವತೀಃ ಸಮಾಃ|

05130018c ರಾಜದೋಷೇಣ ಹಿ ಜಗತಃ ಸ್ಪೃಶ್ಯತೇ ಜಗತಃ ಸ ಚ||

ದುಷ್ಕರ್ಮಗಳನ್ನು ಮಾಡಿದ ರಾಜನು ಶಾಶ್ವತ ವರ್ಷಗಳ ವರೆಗೆ ನರಕದಲ್ಲಿ ವಾಸಿಸುತ್ತಾನೆ. ಏಕೆಂದರೆ ರಾಜನ ದೋಷಗಳು ಜಗತ್ತಿಗೆ ಮತ್ತು ಜಗತ್ತಿನ ದೋಷಗಳು ಅವನಿಗೆ ತಗಲುತ್ತವೆ.

05130019a ರಾಜಧರ್ಮಾನವೇಕ್ಷಸ್ವ ಪಿತೃಪೈತಾಮಹೋಚಿತಾನ್|

05130019c ನೈತದ್ರಾಜರ್ಷಿವೃತ್ತಂ ಹಿ ಯತ್ರ ತ್ವಂ ಸ್ಥಾತುಮಿಚ್ಚಸಿ||

ನಿನ್ನ ಪಿತೃಪಿತಾಮಹರಿಗೆ ಉಚಿತವಾದ ರಾಜಧರ್ಮವನ್ನು ಅನುಸರಿಸು. ನೀನು ಯಾವ ರಾಜರ್ಷಿ ಪದವಿಯನ್ನು ಬಯಸುತ್ತೀಯೋ ಅದು ಇದಲ್ಲ.

05130020a ನ ಹಿ ವೈಕ್ಲವ್ಯಸಂಸೃಷ್ಟ ಆನೃಶಂಸ್ಯೇ ವ್ಯವಸ್ಥಿತಃ|

05130020c ಪ್ರಜಾಪಾಲನಸಂಭೂತಂ ಕಿಂ ಚಿತ್ಪ್ರಾಪ ಫಲಂ ನೃಪಃ||

ಏಕೆಂದರೆ ದುರ್ಬಲ ಹೃದಯಿಯಾಗಿ, ಕರುಣಾಜನಕನಾಗಿ ಪ್ರಜಾಪಾಲನೆಯನ್ನು ಮಾಡುವ ನೃಪನಿಗೆ ಯಾವ ಫಲವೂ ದೊರಕುವುದಿಲ್ಲ.

05130021a ನ ಹ್ಯೇತಾಮಾಶಿಷಂ ಪಾಂಡುರ್ನ ಚಾಹಂ ನ ಪಿತಾಮಹಃ|

05130021c ಪ್ರಯುಕ್ತವಂತಃ ಪೂರ್ವಂ ತೇ ಯಯಾ ಚರಸಿ ಮೇಧಯಾ||

ಯಾವ ವಿಚಾರದಿಂದ ನೀನು ನಡೆದುಕೊಳ್ಳುತ್ತಿರುವೆಯೋ ಅದನ್ನು ಹಿಂದೆ ನಾವು ಯಾರೂ - ಪಾಂಡು, ನಾನು, ನಿನ್ನ ಪಿತಾಮಹರು ಆಶಿಸಿರಲಿಲ್ಲ.

05130022a ಯಜ್ಞೋ ದಾನಂ ತಪಃ ಶೌರ್ಯಂ ಪ್ರಜಾಸಂತಾನಮೇವ ಚ|

05130022c ಮಾಹಾತ್ಮ್ಯಂ ಬಲಂ ಓಜಶ್ಚ ನಿತ್ಯಮಾಶಂಸಿತಂ ಮಯಾ||

ನಾನು ಯಾವಾಗಲೂ ಯಜ್ಞ, ದಾನ, ತಪಸ್ಸು, ಶೌರ್ಯ, ಪ್ರಜಾಸಂತಾನ, ಮಹಾತ್ಮೆ, ಬಲ ಮತ್ತು ಓಜಸ್ಸುಗಳನ್ನು ಆಶಿಸಿದ್ದೆ.

05130023a ನಿತ್ಯಂ ಸ್ವಾಹಾ ಸ್ವಧಾ ನಿತ್ಯಂ ದದುರ್ಮಾನುಷದೇವತಾಃ|

05130023c ದೀರ್ಘಮಾಯುರ್ಧನಂ ಪುತ್ರಾನ್ಸಮ್ಯಗಾರಾಧಿತಾಃ ಶುಭಾಃ||

ಸರಿಯಾಗಿ ಆರಾಧಿಸಲ್ಪಟ್ಟ ಶುಭ ಮಾನುಷ ದೇವತೆಗಳಾದ ಬ್ರಾಹ್ಮಣರು ನಿತ್ಯ ಸ್ವಾಹಾ ಮತ್ತು ನಿತ್ಯ ಸ್ವಧಾಗಳಿಂದ ದೀರ್ಘ ಆಯುಸ್ಸನ್ನೂ, ಧನವನ್ನೂ ಪುತ್ರರನ್ನೂ ನೀಡುವರು.

05130024a ಪುತ್ರೇಷ್ವಾಶಾಸತೇ ನಿತ್ಯಂ ಪಿತರೋ ದೈವತಾನಿ ಚ|

05130024c ದಾನಮಧ್ಯಯನಂ ಯಜ್ಞಾಂ ಪ್ರಜಾನಾಂ ಪರಿಪಾಲನಂ||

ಪಿತೃಗಳು ಮತ್ತು ದೇವತೆಗಳು ಪುತ್ರರಿಂದ ನಿತ್ಯವೂ ದಾನ, ಅಧ್ಯಯನ, ಯಜ್ಞ ಮತ್ತು ಪ್ರಜೆಗಳ ಪರಿಪಾಲನೆಯನ್ನು ಆಶಿಸುತ್ತಾರೆ.

05130025a ಏತದ್ಧರ್ಮಮಧರ್ಮಂ ವಾ ಜನ್ಮನೈವಾಭ್ಯಜಾಯಥಾಃ|

05130025c ತೇ ಸ್ಥ ವೈದ್ಯಾಃ ಕುಲೇ ಜಾತಾ ಅವೃತ್ತ್ಯಾ ತಾತ ಪೀಡಿತಾಃ||

05130026a ಯತ್ತು ದಾನಪತಿಂ ಶೂರಂ ಕ್ಷುಧಿತಾಃ ಪೃಥಿವೀಚರಾಃ|

05130026c ಪ್ರಾಪ್ಯ ತೃಪ್ತಾಃ ಪ್ರತಿಷ್ಠಂತೇ ಧರ್ಮಃ ಕೋಽಭ್ಯಧಿಕಸ್ತತಃ||

ಇದು ಧರ್ಮ ಅಥವಾ ಇದು ಅಧರ್ಮ ಎನ್ನುವುದು ಜನ್ಮದಿಂದಲೇ ಹುಟ್ಟಿಕೊಳ್ಳುತ್ತದೆ. ಮಗೂ! ಒಳ್ಳೆಯ ಕುಲದಲ್ಲಿ ಹುಟ್ಟಿ ವಿದ್ಯಾವಂತನಾಗಿ ವೃತ್ತಿಯಿಲ್ಲದೇ ಪೀಡಿತರಾಗಿ ಭೂಮಿಯನ್ನು ತಿರುಗಿ ಬಳಲಿದವರು ದಾನಪತಿ ಶೂರನನ್ನು ಸೇರಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡರೆ ಅದಕ್ಕಿಂತ ಶ್ರೇಷ್ಠವಾದ ಧರ್ಮವು ಯಾವುದಿದೆ?

05130027a ದಾನೇನಾನ್ಯಂ ಬಲೇನಾನ್ಯಂ ತಥಾ ಸೂನೃತಯಾಪರಂ|

05130027c ಸರ್ವತಃ ಪ್ರತಿಗೃಹ್ಣೀಯಾದ್ರಾಜ್ಯಂ ಪ್ರಾಪ್ಯೇಹ ಧಾರ್ಮಿಕಃ||

ಧಾರ್ಮಿಕನಾದವನು ದಾನದಿಂದಾಗಲೀ, ಬಲದಿಂದಾಗಲೀ ಹಾಗೆಯೇ ಸಾಮ್ಯದಿಂದಾಗಲೀ ಎಲ್ಲಕಡೆಗಳಿಂದ ರಾಜ್ಯಗಳನ್ನು ಪಡೆಯುತ್ತಾನೆ.

05130028a ಬ್ರಾಹ್ಮಣಃ ಪ್ರಚರೇದ್ಭೈಕ್ಷಂ ಕ್ಷತ್ರಿಯಃ ಪರಿಪಾಲಯೇತ್|

05130028c ವೈಶ್ಯೋ ಧನಾರ್ಜನಂ ಕುರ್ಯಾಚ್ಚೂದ್ರಃ ಪರಿಚರೇಚ್ಚ ತಾನ್||

ಬ್ರಾಹ್ಮಣನು ಸಂಚರಿಸಿ ಭಿಕ್ಷಬೇಡಬೇಕು. ಕ್ಷತ್ರಿಯನು ಪ್ರಜಾಪಾಲನೆ ಮಾಡಬೇಕು. ವೈಶ್ಯನು ಧನಾರ್ಜನೆ ಮಾಡಬೇಕು. ಮತ್ತು ಶೂದ್ರನು ಅವರೆಲ್ಲರ ಪರಿಚಾರಕನಾಗಿರಬೇಕು.

05130029a ಭೈಕ್ಷಂ ವಿಪ್ರತಿಷಿದ್ಧಂ ತೇ ಕೃಷಿರ್ನೈವೋಪಪದ್ಯತೇ|

05130029c ಕ್ಷತ್ರಿಯೋಽಸಿ ಕ್ಷತಾತ್ತ್ರಾತಾ ಬಾಹುವೀರ್ಯೋಪಜೀವಿತಾ||

ನಿನಗೆ ಭಿಕ್ಷಾಟನೆಯು ನಿಷಿದ್ಧ. ನೀನು ಕೃಷಿ-ವಾಣಿಜ್ಯಗಳಿಂದಲೂ ಜೀವಿಸುವಂತಿಲ್ಲ. ಕ್ಷತ್ರಿಯನಾಗಿರುವೆ. ಬಾಹುವೀರ್ಯುದಿಂದ ಪೀಡಿತರಾದವರನ್ನು ಕಾಪಾಡಿ ಉಪಜೀವಿಸು.

05130030a ಪಿತ್ರ್ಯಮಂಶಂ ಮಹಾಬಾಹೋ ನಿಮಗ್ನಂ ಪುನರುದ್ಧರ|

05130030c ಸಾಮ್ನಾ ದಾನೇನ ಭೇದೇನ ದಂಡೇನಾಥ ನಯೇನ ಚ||

ಮಹಾಬಾಹೋ! ವಶಪಡಿಸಿಕೊಂಡಿರುವ ಪಿತ್ರಾರ್ಜಿತವನ್ನು ಪುನಃ ಸಾಮ, ದಾನ, ಭೇದ, ದಂಡ ಅಥವಾ ನಯದಿಂದ ಪಡೆದುಕೋ.

05130031a ಇತೋ ದುಃಖತರಂ ಕಿಂ ನು ಯದಹಂ ಹೀನಬಾಂಧವಾ|

05130031c ಪರಪಿಂಡಮುದೀಕ್ಷಾಮಿ ತ್ವಾಂ ಸೂತ್ವಾಮಿತ್ರನಂದನ||

ಅಮಿತ್ರನಂದನ! ನಾನು ಬಾಂಧವರಿಲ್ಲದವಳಾಗಿದ್ದೇನೆ ಎನ್ನುವುದಕ್ಕಿಂತ ದುಃಖತರವಾದುದು ಇನ್ನೇನಿದೆ? ನಿನ್ನನ್ನು ಹೆತ್ತು ನಾನು ಪರರ ಕೂಳಿನ ನಿರೀಕ್ಷೆಯಲ್ಲಿದ್ದೇನೆ.

05130032a ಯುಧ್ಯಸ್ವ ರಾಜಧರ್ಮೇಣ ಮಾ ನಿಮಜ್ಜೀಃ ಪಿತಾಮಹಾನ್|

05130032c ಮಾ ಗಮಃ ಕ್ಷೀಣಪುಣ್ಯಸ್ತ್ವಂ ಸಾನುಜಃ ಪಾಪಿಕಾಂ ಗತಿಂ||

ರಾಜಧರ್ಮದಿಂದ ಯುದ್ಧಮಾಡು! ಪಿತಾಮಹರನ್ನು ಮುಳುಗಿಸಬೇಡ! ಅನುಜರೊಂದಿಗೆ ಪಾಪಿಗಳ ದಾರಿಯಲ್ಲಿ ಹೋಗಬೇಡ. ಪುಣ್ಯವನ್ನು ಕಳೆದುಕೊಳ್ಳಬೇಡ!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಕುಂತೀವಾಕ್ಯೇ ತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಕುಂತೀವಾಕ್ಯದಲ್ಲಿ ನೂರಾಮೂವತ್ತನೆಯ ಅಧ್ಯಾಯವು.

Image result for indian motifs

Comments are closed.