Udyoga Parva: Chapter 106

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೬

ಗರುಡನು ಗಾಲವನಿಗೆ ಪೂರ್ವ ದಿಕ್ಕನ್ನು ವರ್ಣಿಸಿದುದು (೧-೧೮).

05106001 ಸುಪರ್ಣ ಉವಾಚ|

05106001a ಅನುಶಿಷ್ಟೋಽಸ್ಮಿ ದೇವೇನ ಗಾಲವಾಜ್ಞಾತಯೋನಿನಾ|

05106001c ಬ್ರೂಹಿ ಕಾಮನುಸಂಯಾಮಿ ದ್ರಷ್ಟುಂ ಪ್ರಥಮತೋ ದಿಶಂ||

ಸುಪರ್ಣನು ಹೇಳಿದನು: “ಗಾಲವ! ಅಜ್ಞಾತ ಯೋನಿ ದೇವನ ಅಪ್ಪಣೆಯಾಗಿದೆ. ಮೊದಲು ಯಾವದಿಕ್ಕನ್ನು ನೋಡಲು ಬಯಸುತ್ತೀಯೆ ಹೇಳು. ಅಲ್ಲಿಗೆ ಕರೆದೊಯ್ಯುತ್ತೇನೆ.

05106002a ಪೂರ್ವಾಂ ವಾ ದಕ್ಷಿಣಾಂ ವಾಹಮಥ ವಾ ಪಶ್ಚಿಮಾಂ ದಿಶಂ|

05106002c ಉತ್ತರಾಂ ವಾ ದ್ವಿಜಶ್ರೇಷ್ಠ ಕುತೋ ಗಚ್ಚಾಮಿ ಗಾಲವ||

ಗಾಲವ! ಪೂರ್ವ ಅಥವಾ ದಕ್ಷಿಣಕ್ಕೆ ಕೊಂಡೊಯ್ಯಲೋ ಅಥವಾ ಪಶ್ಚಿಮ ಅಥವಾ ಉತ್ತರ ದಿಕ್ಕಿಗೋ? ಯಾವ ದಿಕ್ಕಿನಲ್ಲಿ ಹೋಗಲಿ ಎಂದು ಹೇಳು ದ್ವಿಜಶ್ರೇಷ್ಠ!

05106003a ಯಸ್ಯಾಮುದಯತೇ ಪೂರ್ವಂ ಸರ್ವಲೋಕಪ್ರಭಾವನಃ|

05106003c ಸವಿತಾ ಯತ್ರ ಸಂಧ್ಯಾಯಾಂ ಸಾಧ್ಯಾನಾಂ ವರ್ತತೇ ತಪಃ||

05106004a ಯಸ್ಯಾಂ ಪೂರ್ವಂ ಮತಿರ್ಜಾತಾ ಯಯಾ ವ್ಯಾಪ್ತಮಿದಂ ಜಗತ್|

05106004c ಚಕ್ಷುಷೀ ಯತ್ರ ಧರ್ಮಸ್ಯ ಯತ್ರ ಚೈಷ ಪ್ರತಿಷ್ಠಿತಃ||

05106005a ಹುತಂ ಯತೋಮುಖೈರ್ಹವ್ಯಂ ಸರ್ಪತೇ ಸರ್ವತೋದಿಶಂ|

05106005c ಏತದ್ದ್ವಾರಂ ದ್ವಿಜಶ್ರೇಷ್ಠ ದಿವಸಸ್ಯ ತಥಾಧ್ವನಃ||

ದ್ವಿಜಶ್ರೇಷ್ಠ! ಎಲ್ಲಿ ಸರ್ವಲೋಕಪ್ರಭಾವನ ಸೂರ್ಯನು ಮೊದಲು ಉದಯಿಸುತ್ತಾನೋ, ಎಲ್ಲಿ ಸಂಧ್ಯಾಸಮಯದಲ್ಲಿ ಸಾಧ್ಯರು ತಪಸ್ಸಿನಲ್ಲಿ ತೊಡಗುತ್ತಾರೋ, ಎಲ್ಲಿ ಈ ಜಗತ್ತನ್ನೇ ವ್ಯಾಪಿಸಿದ ಬುದ್ಧಿಯು ಮೊದಲು ಹುಟ್ಟಿತೋ, ಎಲ್ಲಿ ಸ್ವಯಂ ಧರ್ಮ ಮತ್ತು ಅವನ ಎರಡು ಕಣ್ಣುಗಳು ಸ್ಥಾಪಿತವಾಗಿವೆಯೋ, ಎಲ್ಲಿ ಯಾಗಮುಖದಲ್ಲಿ ಸುರಿದ ತುಪ್ಪದ ಆಹುತಿಯು ಎಲ್ಲ ದಿಕ್ಕುಗಳಲ್ಲಿ ಹರಿದುಹೋಯಿತೋ ಇದೇ ದಿವಸದ ಮತ್ತು ಕಾಲದ ದ್ವಾರ.

05106006a ಯತ್ರ ಪೂರ್ವಂ ಪ್ರಸೂತಾ ವೈ ದಾಕ್ಷಾಯಣ್ಯಃ ಪ್ರಜಾಃ ಸ್ತ್ರಿಯಃ|

05106006c ಯಸ್ಯಾಂ ದಿಶಿ ಪ್ರವೃದ್ಧಾಶ್ಚ ಕಶ್ಯಪಸ್ಯಾತ್ಮಸಂಭವಾಃ||

ಅಲ್ಲಿ ದಕ್ಷನ ಹೆಣ್ಣುಮಕ್ಕಳು ಹಿಂದೆ ಮಕ್ಕಳನ್ನು ಹಡೆದರು. ಆ ದಿಕ್ಕಿನಲ್ಲಿಯೇ ಕಶ್ಯಪನ ಆತ್ಮಸಂಭವರು ಪ್ರವೃದ್ಧರಾದರು.

05106007a ಯತೋಮೂಲಾ ಸುರಾಣಾಂ ಶ್ರೀರ್ಯತ್ರ ಶಕ್ರೋಽಭ್ಯಷಿಚ್ಯತ|

05106007c ಸುರರಾಜ್ಯೇನ ವಿಪ್ರರ್ಷೇ ದೇವೈಶ್ಚಾತ್ರ ತಪಶ್ಚಿತಂ||

ವಿಪ್ರರ್ಷೇ! ಇದು ಸುರರ ಸಂಪತ್ತಿನ ಮೂಲ. ಏಕೆಂದರೆ ಇಲ್ಲಿಯೇ ಶಕ್ರನು ಸುರರಾಜ್ಯದಿಂದ ಅಭಿಷಿಕ್ತನಾಗಿದ್ದನು. ದೇವತೆಗಳು ಇಲ್ಲಿಯೇ ತಪಸ್ಸನ್ನಾಚರಿಸಿದರು.

05106008a ಏತಸ್ಮಾತ್ಕಾರಣಾದ್ಬ್ರಹ್ಮನ್ಪೂರ್ವೇತ್ಯೇಷಾ ದಿಗುಚ್ಯತೇ|

05106008c ಯಸ್ಮಾತ್ಪೂರ್ವತರೇ ಕಾಲೇ ಪೂರ್ವಮೇಷಾವೃತಾ ಸುರೈಃ||

ಬ್ರಹ್ಮನ್! ಈ ಕಾರಣದಿಂದಲೇ ಇದಕ್ಕೆ ಪೂರ್ವದಿಕ್ಕೆಂದು ಕರೆಯುತ್ತಾರೆ. ಮೊದಲ ಕಾಲಗಳಲ್ಲಿ ಪೂರ್ವವು ಸುರರಿಂದ ತುಂಬಿಹೋಗಿತ್ತು.

05106009a ಅತ ಏವ ಚ ಪೂರ್ವೇಷಾಂ ಪೂರ್ವಾಮಾಶಾಮವೇಕ್ಷತಾಂ|

05106009c ಪೂರ್ವಕಾರ್ಯಾಣಿ ಕಾರ್ಯಾಣಿ ದೈವಾನಿ ಸುಖಮೀಪ್ಸತಾ||

ಮೊದಲ ಪೂರ್ವಜರು ಇಲ್ಲಿಯೇ ಆಶಯದಿಂದ ನೋಡಿದರು. ಸುಖವನ್ನು ಬಯಸಿದ ದೇವತೆಗಳೂ ಕೂಡ ಇಲ್ಲಿಯೇ ಮೊದಲ ಕರ್ಮಗಳನ್ನು ನೆರವೇರಿಸಿದರು.

05106010a ಅತ್ರ ವೇದಾಂ ಜಗೌ ಪೂರ್ವಂ ಭಗವಾಽಲ್ಲೋಕಭಾವನಃ|

05106010c ಅತ್ರೈವೋಕ್ತಾ ಸವಿತ್ರಾಸೀತ್ಸಾವಿತ್ರೀ ಬ್ರಹ್ಮವಾದಿಷು||

ಅಲ್ಲಿ ಹಿಂದೆ ಭಗವಾನ್ ಲೋಕಭಾವನನು ವೇದಗಳನ್ನು ಹಾಡಿದನು. ಅಲ್ಲಿಯೇ ಸೂರ್ಯನು ಸಾವಿತ್ರಿಗೆ ಆ ಬ್ರಹ್ಮವಾದಿ ಗಾಯತ್ರಿಯನ್ನು ಹೇಳಿಕೊಟ್ಟನು.

05106011a ಅತ್ರ ದತ್ತಾನಿ ಸೂರ್ಯೇಣ ಯಜೂಂಷಿ ದ್ವಿಜಸತ್ತಮ|

05106011c ಅತ್ರ ಲಬ್ಧವರೈಃ ಸೋಮಃ ಸುರೈಃ ಕ್ರತುಷು ಪೀಯತೇ||

ದ್ವಿಜಸತ್ತಮ! ಅಲ್ಲಿಯೇ ಸೂರ್ಯನು ಯಜುರ್ವೇದವನ್ನು (ಯಾಜ್ಞವಲ್ಕ್ಯನಿಗೆ) ನೀಡಿದನು. ಅಲ್ಲಿಯೇ ಸುರರು ವರಗಳನ್ನು ಪಡೆದು ಕ್ರತುಗಳಲ್ಲಿ ಸೋಮವನ್ನು ಕುಡಿದರು.

05106012a ಅತ್ರ ತೃಪ್ತಾ ಹುತವಹಾಃ ಸ್ವಾಂ ಯೋನಿಮುಪಭುಂಜತೇ|

05106012c ಅತ್ರ ಪಾತಾಲಮಾಶ್ರಿತ್ಯ ವರುಣಃ ಶ್ರಿಯಮಾಪ ಚ||

ಅಲ್ಲಿ ಆಹುತಿಗಳಿಂದ ತೃಪ್ತವಾಗಿ ಯಜ್ಞಗಳು ಸ್ವ-ಯೋನಿಯಲ್ಲಿ ಹುಟ್ಟಿದವುಗಳನ್ನು ಭುಂಜಿಸಿದವು. ಅಲ್ಲಿ ಮೊದಲು ವರುಣನು ಪಾತಾಲವನ್ನು ಸೇರಿ ಸಂಪತ್ತನ್ನು ಪಡೆದನು.

05106013a ಅತ್ರ ಪೂರ್ವಂ ವಸಿಷ್ಠಸ್ಯ ಪೌರಾಣಸ್ಯ ದ್ವಿಜರ್ಷಭ|

05106013c ಸೂತಿಶ್ಚೈವ ಪ್ರತಿಷ್ಠಾ ಚ ನಿಧನಂ ಚ ಪ್ರಕಾಶತೇ||

ದ್ವಿಜರ್ಷಭ! ಇಲ್ಲಿಯೇ ಪೌರಾಣಿಕ ವಸಿಷ್ಠನ ಮೊದಲ ಜನನ, ಪ್ರತಿಷ್ಠೆ ಮತ್ತು ನಿಧನಗಳು ಕಾಣಿಸಿಕೊಂಡವು.

05106014a ಓಂಕಾರಸ್ಯಾತ್ರ ಜಾಯಂತೇ ಸೂತಯೋ ದಶತೀರ್ದಶ|

05106014c ಪಿಬಂತಿ ಮುನಯೋ ಯತ್ರ ಹವಿರ್ಧಾನೇ ಸ್ಮ ಸೋಮಪಾಃ||

ಇಲ್ಲಿಯೇ ಓಂಕಾರದ ನೂರಾರು ಶಾಕೆಗಳು ಹುಟ್ಟಿಕೊಂಡವು. ಇಲ್ಲಿಯೇ ಮುನಿಗಳು ಧೂಮಗಳಾಗಿ ಹವಿಸ್ಸು ಮತ್ತು ಸೋಮಗಳನ್ನು ಕುಡಿಯುತ್ತಾರೆ.

05106015a ಪ್ರೋಕ್ಷಿತಾ ಯತ್ರ ಬಹವೋ ವರಾಹಾದ್ಯಾ ಮೃಗಾ ವನೇ|

05106015c ಶಕ್ರೇಣ ಯತ್ರ ಭಾಗಾರ್ಥೇ ದೈವತೇಷು ಪ್ರಕಲ್ಪಿತಾಃ||

ಇಲ್ಲಿಯೇ ಶಕ್ರನು ವರಾಹಾದಿ ವನ್ಯ ಮೃಗಗಳನ್ನು ಬೇಟೆಯಾಡಿ ದೇವತೆಗಳಿಗೆ ಹಂಚಿದನು.

05106016a ಅತ್ರಾಹಿತಾಃ ಕೃತಘ್ನಾಶ್ಚ ಮಾನುಷಾಶ್ಚಾಸುರಾಶ್ಚ ಯೇ|

05106016c ಉದಯಂಸ್ತಾನ್ ಹಿ ಸರ್ವಾನ್ವೈ ಕ್ರೋಧಾದ್ಧಂತಿ ವಿಭಾವಸುಃ||

ಇಲ್ಲಿಯೇ ವಿಭಾವಸು ಉದಯನು ಕೆಟ್ಟ ಮತ್ತು ಕೃತಘ್ನ ಮನುಷ್ಯ-ಅಸುರರೆಲ್ಲರನ್ನೂ ಕ್ರೋಧದಿಂದ ಸುಡುತ್ತಾನೆ.

05106017a ಏತದ್ದ್ವಾರಂ ತ್ರಿಲೋಕಸ್ಯ ಸ್ವರ್ಗಸ್ಯ ಚ ಸುಖಸ್ಯ ಚ|

05106017c ಏಷ ಪೂರ್ವೋ ದಿಶಾಭಾಗೋ ವಿಶಾವೈನಂ ಯದೀಚ್ಚಸಿ||

ಇದು ತ್ರಿಲೋಕದ, ಸ್ವರ್ಗದ ಮತ್ತು ಸುಖದ ದ್ವಾರ. ನಿನಗಿಷ್ಟವಾದರೆ ಈ ಪೂರ್ವದಿಕ್ಕಿನ ಭಾಗಕ್ಕೆ ಹೋಗೋಣ.

05106018a ಪ್ರಿಯಂ ಕಾರ್ಯಂ ಹಿ ಮೇ ತಸ್ಯ ಯಸ್ಯಾಸ್ಮಿ ವಚನೇ ಸ್ಥಿತಃ|

05106018c ಬ್ರೂಹಿ ಗಾಲವ ಯಾಸ್ಯಾಮಿ ಶೃಣು ಚಾಪ್ಯಪರಾಂ ದಿಶಂ||

ಗಾಲವ! ನಾನು ನನಗೆ ಪ್ರಿಯರಾದವರ ಕಾರ್ಯವನ್ನು ಮಾಡಲು ಸರ್ವದಾ ಸಿದ್ಧನಿದ್ದೇನೆ. ನಿನಗೆ ಬೇರೆಯೆಲ್ಲಿಯಾದರೂ ಹೋಗಬೇಕೆಂದಿದ್ದರೆ ಅದನ್ನೂ ಹೇಳು. ನಾನು ಈಗ ಅನ್ಯ ದಿಕ್ಕುಗಳ ಕುರಿತು ಹೇಳುತ್ತೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಷಡಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಆರನೆಯ ಅಧ್ಯಾಯವು.

Related image

Comments are closed.