ಶಾಂತಿ ಪರ್ವ: ರಾಜಧರ್ಮ ಪರ್ವ
೧೨೩
ಕಾಮಂದಾಂಗಾರಿಷ್ಟ ಸಂವಾದ
12123001 ಯುಧಿಷ್ಠಿರ ಉವಾಚ|
12123001a ತಾತ ಧರ್ಮಾರ್ಥಕಾಮಾನಾಂ ಶ್ರೋತುಮಿಚ್ಚಾಮಿ ನಿಶ್ಚಯಮ್|
12123001c ಲೋಕಯಾತ್ರಾ ಹಿ ಕಾರ್ತ್ಸ್ನ್ಯೇನ ತ್ರಿಷ್ವೇತೇಷು ಪ್ರತಿಷ್ಠಿತಾ||
ಯುಧಿಷ್ಠಿರನು ಹೇಳಿದನು: “ತಾತ! ಧರ್ಮಾರ್ತಕಾಮಗಳ ಕುರಿತು ನಿಶ್ಚಯವನ್ನು ಕೇಳಬಯಸುತ್ತೇನೆ. ಏಕೆಂದರೆ ಲೋಕಯಾತ್ರೆಯು ಸಂಪೂರ್ಣವಾಗಿ ಈ ಮೂರರಲ್ಲಿ ಪ್ರತಿಷ್ಠಿತವಾಗಿದೆ.
12123002a ಧರ್ಮಾರ್ಥಕಾಮಾಃ ಕಿಂಮೂಲಾಸ್ತ್ರಯಾಣಾಂ ಪ್ರಭವಶ್ಚ ಕಃ|
12123002c ಅನ್ಯೋನ್ಯಂ ಚಾನುಷಜ್ಜಂತೇ ವರ್ತಂತೇ ಚ ಪೃಥಕ್ಪೃಥಕ್||
ಧರ್ಮಾರ್ಥಕಾಮಗಳ ಮೂಲವು ಯಾವುದು? ಅವುಗಳ ಉತ್ಪತ್ತಿಗೆ ಕಾರಣರ್ಯಾರು? ಅವು ಏಕೆ ಕೆಲವೊಮ್ಮೆ ಒಂದಾಗಿಯೇ ಇರುತ್ತವೆ ಮತ್ತು ಇನ್ನೊಮ್ಮೆ ಬೇರೆ ಬೇರೆಯಾಗಿರುತ್ತವೆ?”
12123003 ಭೀಷ್ಮ ಉವಾಚ|
12123003a ಯದಾ ತೇ ಸ್ಯುಃ ಸುಮನಸೋ ಲೋಕಸಂಸ್ಥಾರ್ಥನಿಶ್ಚಯೇ[1]|
12123003c ಕಾಲಪ್ರಭವಸಂಸ್ಥಾಸು ಸಜ್ಜಂತೇ ಚ ತ್ರಯಸ್ತದಾ||
ಭೀಷ್ಮನು ಹೇಳಿದನು: “ಯಾವಾಗ ಜನರು ಸುಮನಸರಾಗಿದ್ದು ಅರ್ಥನಿಶ್ಚಯವನ್ನು ಮಾಡಿ ಕಾಲ-ಕಾರಣ-ಅನುಷ್ಠಾನಗಳು ಒದಗಿರುವಾಗ ಆ ಮೂರೂ ಒಂದಾಗಿರುತ್ತವೆ.
12123004a ಧರ್ಮಮೂಲಸ್ತು ದೇಹೋಽರ್ಥಃ[2] ಕಾಮೋಽರ್ಥಫಲಮುಚ್ಯತೇ|
12123004c ಸಂಕಲ್ಪಮೂಲಾಸ್ತೇ ಸರ್ವೇ ಸಂಕಲ್ಪೋ ವಿಷಯಾತ್ಮಕಃ||
ಅರ್ಥಕ್ಕೆ ಧರ್ಮವೇ ಮೂಲ. ಕಾಮವು ಅರ್ಥದ ಫಲವೆಂದು ಹೇಳಲ್ಪಟ್ಟಿದೆ. ಆದರೆ ಇವಕ್ಕೆ ಸಂಕಲ್ಪವೇ ಮೂಲಕಾರಣವು. ಮತ್ತು ಸಂಕಲ್ಪವು ವಿಷಯಾತ್ಮವು.
12123005a ವಿಷಯಾಶ್ಚೈವ ಕಾರ್ತ್ಸ್ನ್ಯೇನ ಸರ್ವ ಆಹಾರಸಿದ್ಧಯೇ|
12123005c ಮೂಲಮೇತತ್ತ್ರಿವರ್ಗಸ್ಯ ನಿವೃತ್ತಿರ್ಮೋಕ್ಷ ಉಚ್ಯತೇ||
ಎಲ್ಲ ವಿಷಯಗಳೂ ಸಂಪೂರ್ಣವಾಗಿ ಇಂದ್ರಿಯಗಳ ಉಪಭೋಗಕ್ಕಾಗಿಯೇ ಇವೆ. ಇವೇ ತ್ರಿವರ್ಗದ ಮೂಲವಾಗಿವೆ. ಇವುಗಳಿಂದ ನಿವೃತ್ತಿಯೇ ಮೋಕ್ಷವೆನಿಸಿಕೊಳ್ಳುತ್ತದೆ.
12123006a ಧರ್ಮಃ ಶರೀರಸಂಗುಪ್ತಿರ್ಧರ್ಮಾರ್ಥಂ ಚಾರ್ಥ ಇಷ್ಯತೇ|
12123006c ಕಾಮೋ ರತಿಫಲಶ್ಚಾತ್ರ ಸರ್ವೇ ಚೈತೇ ರಜಸ್ವಲಾಃ||
ಧರ್ಮದಿಂದ ಶರೀರದ ರಕ್ಷಣೆಯಾಗುತ್ತದೆ. ಧರ್ಮದ ಉಪಾರ್ಜನೆಗಾಗಿಯೇ ಅರ್ಥವನ್ನು ಬಯಸುತ್ತೇವೆ. ರತಿಫಲವನ್ನು ಕೊಡುವುದು ಕಾಮ. ಇವೆಲ್ಲವೂ ರಜೋಗುಣಸ್ವರೂಪವಾಗಿರುತ್ತವೆ.
12123007a ಸಂನಿಕೃಷ್ಟಾಂಶ್ಚರೇದೇನಾನ್ನ ಚೈನಾನ್ಮನಸಾ ತ್ಯಜೇತ್|
12123007c ವಿಮುಕ್ತಸ್ತಮಸಾ ಸರ್ವಾನ್ ಧರ್ಮಾದೀನ್ಕಾಮನೈಷ್ಠಿಕಾನ್||
ಸನ್ನಿಹಿತವಾಗಿರುವ ಧರ್ಮಾರ್ಥಕಾಮಗಳನ್ನು ತನಗೆ ಹಿತವಾಗುವ ರೀತಿಯಲ್ಲಿ ಸೇವಿಸಬೇಕು. ಮನಸ್ಸಿನಿಂದ ಧರ್ಮಾರ್ಥಕಾಮಗಳನ್ನು ತ್ಯಜಿಸಬಾರದು. ತಪಸ್ಸಿನಿಂದಲೂ ವಿಚಾರಪರತೆಯಿಂದಲೂ ಇವುಗಳಿಂದ ಮುಕ್ತರಾಗಬೇಕು[3].
12123008a ಶ್ರೇಷ್ಠಬುದ್ಧಿಸ್ತ್ರಿವರ್ಗಸ್ಯ ಯದಯಂ ಪ್ರಾಪ್ನುಯಾತ್ ಕ್ಷಣಾತ್|
12123008c ಬುದ್ಧ್ಯಾ ಬುಧ್ಯೇದಿಹಾರ್ಥೇ ನ ತದಹ್ನಾ ತು ನಿಕೃಷ್ಟಯಾ[4]||
ಧರ್ಮಾರ್ಥಕಾಮಗಳಲ್ಲಿರುವ ಶ್ರೇಷ್ಠಬುದ್ಧಿಯು ಮೋಕ್ಷದಲ್ಲಿಯೇ ಇದ್ದಿದ್ದರೆ ಅದನ್ನು ಕ್ಷಣದಲ್ಲಿಯೇ ಪಡೆದುಕೊಳ್ಳಬಹುದಾಗಿತ್ತು. ಆದರೆ ನಿಕೃಷ್ಟಬುದ್ಧಿಯಿರುವವನು ತನ್ನ ಬುದ್ಧಿಯಿಂದ ಇದನ್ನು ತಿಳಿದುಕೊಂಡಿರುವುದಿಲ್ಲ.
12123009a ಅಪಧ್ಯಾನಮಲೋ ಧರ್ಮೋ ಮಲೋಽರ್ಥಸ್ಯ ನಿಗೂಹನಮ್|
[5]12123009c ಸಂಪ್ರಮೋದಮಲಃ ಕಾಮೋ ಭೂಯಃ ಸ್ವಗುಣವರ್ತಿತಃ||
ಫಲಾಪೇಕ್ಷೆಯೇ ಧರ್ಮದ ಮಲ. ಕೂಡಿಡುವುದೇ ಅರ್ಥದ ಮಲ. ಸಂಪ್ರಮೋದವೇ ಕಾಮದ ಮಲ. ಆದರೆ ಇವುಗಳ ಸ್ವಗುಣಗಳೇ ಫಲಾಪೇಕ್ಷೆ, ಕೂಡಿದುವುದು ಮತ್ತು ಸಂಪ್ರಮತ್ತನಾಗಿರುವುದು.
12123010a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12123010c ಕಾಮಂದಸ್ಯ ಚ ಸಂವಾದಮಂಗಾರಿಷ್ಠಸ್ಯ ಚೋಭಯೋಃ||
ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಕಾಮಂದ ಮತ್ತು ಅಂಗಾರಿಷ್ಠರ ನಡುವಿನ ಸಂವದವನ್ನು ಉದಾಹರಿಸುತ್ತಾರೆ.
12123011a ಕಾಮಂದಮೃಷಿಮಾಸೀನಮಭಿವಾದ್ಯ ನರಾಧಿಪಃ|
12123011c ಅಂಗಾರಿಷ್ಠೋಽಥ ಪಪ್ರಚ್ಚ ಕೃತ್ವಾ ಸಮಯಪರ್ಯಯಮ್||
ನರಾಧಿಪ ಅಂಗಾರಿಷ್ಠನು ಕುಳಿತಿದ್ದ ಕಾಮಂದಋಷಿಯನ್ನು ನಮಸ್ಕರಿಸಿ ಸಮಯವು ಬಂದೊದಗಿದೆಯೆಂದು ಭಾವಿಸಿ, ಕೇಳಿದನು.
12123012a ಯಃ ಪಾಪಂ ಕುರುತೇ ರಾಜಾ ಕಾಮಮೋಹಬಲಾತ್ಕೃತಃ|
12123012c ಪ್ರತ್ಯಾಸನ್ನಸ್ಯ ತಸ್ಯರ್ಷೇ ಕಿಂ ಸ್ಯಾತ್ಪಾಪಪ್ರಣಾಶನಮ್||
“ಋಷೇ! ಕಾಮಮೋಹಗಳ ಬಲದಿಂದ ಸೆಳೆಯಲ್ಪಟ್ಟು ರಾಜನು ಪಾಪಗಳನ್ನು ಮಾಡುತ್ತಾನೆ. ಅವನು ಯಾವ ಪ್ರಾಯಶ್ಚಿತ್ತವನ್ನು ಮಾಡಿಕೊಂಡು ತನ್ನ ಪಾಪವನ್ನು ಹೋಗಲಾಡಿಸಿಕೊಳ್ಳಬಹುದು?
12123013a ಅಧರ್ಮೋ ಧರ್ಮ ಇತಿ ಹ ಯೋಽಜ್ಞಾನಾದಾಚರೇದಿಹ|
12123013c ತಂ ಚಾಪಿ ಪ್ರಥಿತಂ ಲೋಕೇ ಕಥಂ ರಾಜಾ ನಿವರ್ತಯೇತ್||
ಅಜ್ಞಾನದಿಂದ ಅಧರ್ಮವನ್ನು ಧರ್ಮವೆಂದೇ ತಿಳಿದು ಆಚರಿಸುತ್ತಿರುವ ಲೋಕ ವಿಖ್ಯಾತನಾದವನನ್ನು ರಾಜನು ಹೇಗೆ ಅಧರ್ಮದಿಂದ ತಡೆಯಬೇಕು?”
12123014 ಕಾಮಂದ ಉವಾಚ|
12123014a ಯೋ ಧರ್ಮಾರ್ಥೌ ಸಮುತ್ಸೃಜ್ಯ ಕಾಮಮೇವಾನುವರ್ತತೇ|
12123014c ಸ ಧರ್ಮಾರ್ಥಪರಿತ್ಯಾಗಾತ್ ಪ್ರಜ್ಞಾನಾಶಮಿಹಾರ್ಚತಿ||
ಕಾಮಂದನು ಹೇಳಿದನು: “ಧರ್ಮಾರ್ಥಗಳನ್ನು ಬಿಟ್ಟು ಕಾಮವನ್ನೇ ಅನುಸರಿಸುವವನು ಧರ್ಮಾರ್ಥಪರಿತ್ಯಾಗದಿಂದಾಗಿ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಾನೆ.
12123015a ಪ್ರಜ್ಞಾಪ್ರಣಾಶಕೋ ಮೋಹಸ್ತಥಾ ಧರ್ಮಾರ್ಥನಾಶಕಃ|
12123015c ತಸ್ಮಾನ್ನಾಸ್ತಿಕತಾ ಚೈವ ದುರಾಚಾರಶ್ಚ ಜಾಯತೇ||
ಪ್ರಜ್ಞಾನಾಶವೇ ಮೋಹ. ಅದು ಧರ್ಮಾರ್ಥಗಳೆರಡನ್ನೂ ನಾಶಮಾಡುತ್ತದೆ. ಅದರಿಂದ ನಾಸ್ತಿಕತೆಯೂ ದುರಾಚಾರಗಳೂ ಹುಟ್ಟುತ್ತವೆ.
12123016a ದುರಾಚಾರಾನ್ಯದಾ ರಾಜಾ ಪ್ರದುಷ್ಟಾನ್ನ ನಿಯಚ್ಚತಿ|
12123016c ತಸ್ಮಾದುದ್ವಿಜತೇ ಲೋಕಃ ಸರ್ಪಾದ್ವೇಶ್ಮಗತಾದಿವ||
ದುರಾಚಾರಿಗಳನ್ನು ಮತ್ತು ದುಷ್ಟರನ್ನು ರಾಜನು ನಿಯಂತ್ರಿಸದೇ ಇದ್ದರೆ ಮನೆಯೊಳಗೆ ಹಾವು ಹೊಕ್ಕಿಕೊಂಡರೆ ಹೇಗೋ ಹಾಗೆ ಜನರು ಉದ್ವಿಗ್ನರಾಗುತ್ತಾರೆ.
12123017a ತಂ ಪ್ರಜಾ ನಾನುವರ್ತಂತೇ ಬ್ರಾಹ್ಮಣಾ ನ ಚ ಸಾಧವಃ|
12123017c ತತಃ ಸಂಕ್ಷಯಮಾಪ್ನೋತಿ[6] ತಥಾ ವಧ್ಯತ್ವಮೇತಿ ಚ||
ಅಂಥಹ ರಾಜನನ್ನು ಬ್ರಾಹ್ಮಣರೂ ಸಾಧುಗಳೂ ಅನುಸರಿಸುವುದಿಲ್ಲ. ಅವನು ವಧ್ಯನೆಂದು ನಿರ್ಣಯಿಸಿ ಅವರೇ ಅವನನ್ನು ನಾಶಗೊಳಿಸುತ್ತಾರೆ.
12123018a ಅಪಧ್ವಸ್ತಸ್ತ್ವವಮತೋ ದುಃಖಂ ಜೀವತಿ ಜೀವಿತಮ್|
12123018c ಜೀವೇಚ್ಚ ಯದಪಧ್ವಸ್ತಸ್ತಚ್ಚುದ್ಧಂ ಮರಣಂ ಭವೇತ್||
ಒಂದು ವೇಳೆ ವಧಿಸಲ್ಪಡದಿದ್ದರೂ ಅವನು ರಾಜಪದವಿಯಿಂದ ಭ್ರಷ್ಟನಾಗಿ ದುಃಖದ ಜೀವನವನ್ನು ಜೀವಿಸುತ್ತಾನೆ. ಭ್ರಷ್ಟನಾದನಂತರವೂ ಅವನು ಜೀವಿಸಿದ್ದರೆ ಆ ಜೀವನವು ಅವನಿಗೆ ಸ್ಪಷ್ಟ ಮರಣವಾಗಿಯೇ ಪರಿಣಮಿಸುತ್ತದೆ.
12123019a ಅತ್ರೈತದಾಹುರಾಚಾರ್ಯಾಃ ಪಾಪಸ್ಯ ಚ ನಿಬರ್ಹಣಮ್|
12123019c ಸೇವಿತವ್ಯಾ ತ್ರಯೀ ವಿದ್ಯಾ ಸತ್ಕಾರೋ ಬ್ರಾಹ್ಮಣೇಷು ಚ||
ಅಂತಹ ಸಂದರ್ಭದಲ್ಲಿ ರಾಜನು ಪಾಪಕ್ಕೆ ಪಶ್ಚಾತ್ತಾಪ ಪಡಬೇಕು. ವೇದಗಳ ಅಧ್ಯಯನ ಮಾಡಬೇಕು ಮತ್ತು ಬ್ರಾಹ್ಮಣರನ್ನು ಸತ್ಕರಿಸಬೇಕು ಎಂದು ಆಚಾರ್ಯರು ಹೇಳುತ್ತಾರೆ.
12123020a ಮಹಾಮನಾ ಭವೇದ್ಧರ್ಮೇ ವಿವಹೇಚ್ಚ ಮಹಾಕುಲೇ|
12123020c ಬ್ರಾಹ್ಮಣಾಂಶ್ಚಾಪಿ ಸೇವೇತ ಕ್ಷಮಾಯುಕ್ತಾನ್ಮನಸ್ವಿನಃ||
ಧರ್ಮದಲ್ಲಿಯೇ ಮಹಾಮನಸ್ಸನ್ನಿಡಬೇಕು. ಮಹಾಕುಲದ ಕನ್ಯೆಯೊಂದಿಗೆ ವಿವಾಹವಾಗಬೇಕು. ಮನಸ್ವಿಗಳೂ ಕ್ಷಯಾಯುಕ್ತರೂ ಆದ ಬ್ರಾಹ್ಮಣರನ್ನು ಸೇವಿಸಬೇಕು.
12123021a ಜಪೇದುದಕಶೀಲಃ ಸ್ಯಾತ್ಸುಮುಖೋ ನಾನ್ಯದಾಸ್ಥಿತಃ|
12123021c ಧರ್ಮಾನ್ವಿತಾನ್ಸಂಪ್ರವಿಶೇದ್ಬಹಿಃ ಕೃತ್ವೈವ ದುಷ್ಕೃತೀನ್||
ನೀರಿನಲ್ಲಿ ನಿಂತು ಜಪಿಸಬೇಕು. ಪ್ರಸನ್ನವದನನಾಗಿರಬೇಕು. ಧರ್ಮಾರ್ವಿತರ ಸಹವಾಸವನ್ನು ಮಾಡಬೇಕು. ಪಾಪಿಷ್ಠರನ್ನು ದೇಶದ ಹೊರಹಾಕಬೇಕು.
12123022a ಪ್ರಸಾದಯೇನ್ಮಧುರಯ ವಾಚಾಪ್ಯಥ ಚ ಕರ್ಮಣಾ|
12123022c ಇತ್ಯಸ್ಮೀತಿ ವದೇನ್ನಿತ್ಯಂ ಪರೇಷಾಂ ಕೀರ್ತಯನ್ಗುಣಾನ್||
ಸುಮಧುರ ಮಾತುಗಳಿಂದ ಮತ್ತು ಉತ್ತಮ ಕರ್ಮಗಳಿಂದ ಎಲ್ಲರನ್ನೂ ಪ್ರಸನ್ನಗೊಳಿಸಬೇಕು. ಇತರರ ಗುಣಗಳನ್ನು ಕೊಂಡಾಡುತ್ತಾ ಎಲ್ಲರೊಡನೆಯೂ ನಾನು ನಿಮ್ಮವನಾಗಿದ್ದೇನೆ ಎಂದು ಹೇಳಿಕೊಳ್ಳಬೇಕು.
12123023a ಅಪಾಪೋ ಹ್ಯೇವಮಾಚಾರಃ ಕ್ಷಿಪ್ರಂ ಬಹುಮತೋ ಭವೇತ್|
12123023c ಪಾಪಾನ್ಯಪಿ ಚ ಕೃಚ್ಚ್ರಾಣಿ ಶಮಯೇನ್ನಾತ್ರ ಸಂಶಯಃ||
ಹೀಗೆ ಆಚರಿಸುವವನು ಕ್ಷಿಪ್ರವಾಗಿ ಅಪಾಪಿಯಾಗುತ್ತಾನೆ ಮ್ತ್ತು ಬಹುಜನರ ಸನ್ಮಾನಕ್ಕೆ ಪಾತ್ರನಾಗುತ್ತಾನೆ. ಇದರಿಂದ ಕಠೋರ ಪಾಪಗಳನ್ನು ಮಾಡಿದ್ದರೂ ಅದನ್ನು ಉಪಶಮನಗೊಳಿಸಬಹುದು. ಅದರಲ್ಲಿ ಸಂಶಯವಿಲ್ಲ.
12123024a ಗುರವೋಽಪಿ ಪರಂ ಧರ್ಮಂ ಯದ್ಬ್ರೂಯುಸ್ತತ್ತಥಾ ಕುರು|
12123024c ಗುರೂಣಾಂ ಹಿ ಪ್ರಸಾದಾದ್ಧಿ ಶ್ರೇಯಃ ಪರಮವಾಪ್ಸ್ಯಸಿ||
ಗುರುವೇ ಪರಮ ಧರ್ಮವು. ಅವನು ಹೇಳಿದ ಹಾಗೆ ಮಾಡು. ಗುರುಜನರ ಕೃಪೆಯಿಂದಲೇ ನೀನು ಪರಮ ಶ್ರೇಯಸ್ಸನ್ನು ಪಡೆದುಕೊಳ್ಳುತ್ತೀಯೆ.””
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕಾಮಾಂದಕಾಂಗರಿಷ್ಟಸಂವಾದೇ ತ್ರಯೋವಿಂಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಕಾಮಾಂದಕಾಂಗರಿಷ್ಟಸಂವಾದ ಎನ್ನುವ ನೂರಾಇಪ್ಪತ್ಮೂರನೇ ಅಧ್ಯಾಯವು.
[1] ಲೋಕೇ ಧರ್ಮಾರ್ಥನಿಶ್ಚಯೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಧರ್ಮಮೂಲಃ ಸದೈವಾರ್ಥಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಧರ್ಮಾರ್ಥಕಾಮಗಳನ್ನು ಆಸಕ್ತಿರಹಿತನಾಗಿ ಫಲತ್ಯಾಗದ ಮೂಲಕ ಸೇವಿಸಬೇಕು (ಭಾರತ ದರ್ಶನ).
[4] ಬುದ್ಧ್ಯಾ ಬುದ್ಧಿರಿಹಾರ್ಥೇನ ತದಜ್ಞಾನನಿಕೃಷ್ಟಯಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಅರ್ಥಾರ್ಥಮನ್ಯದ್ಭವತಿ ವಿಪರೀತಮಥಾಪರಮ್| ಅನರ್ಥಾರ್ಥಮವಪ್ಯಾರ್ಥಮನ್ಯತ್ರಾದ್ಯೋಪಕಾರಕಮ್||
[6] ಸಂಶಯಮಾಪ್ನೋತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).