Sabha Parva: Chapter 41

ಸಭಾ ಪರ್ವ: ಶಿಶುಪಾಲವಧ ಪರ್ವ

೪೧

ಭೀಷ್ಮನ ಮಾತು

ಶಿಶುಪಾಲನು ಪುನಃ ಭೀಷ್ಮನನ್ನು ಹೀಯಾಳಿಸುವುದು (೧-೨೩). ಕೃಷ್ಣನು ಶಿಶುಪಾಲನನ್ನು ಅಂತ್ಯಗೊಳಿಸಲಿ ಎಂದು ಭೀಷ್ಮನು ಕೇಳಿಕೊಳ್ಳುವುದು (೨೪-೩೩).

02041001 ಭೀಷ್ಮ ಉವಾಚ|

02041001a ನೈಷಾ ಚೇದಿಪತೇರ್ಬುದ್ಧಿರ್ಯಯಾ ತ್ವಾಹ್ವಯತೇಽಚ್ಯುತಂ|

02041001c ನೂನಮೇಷ ಜಗದ್ಭರ್ತುಃ ಕೃಷ್ಣಸ್ಯೈವ ವಿನಿಶ್ಚಯಃ||

ಭೀಷ್ಮನು ಹೇಳಿದನು: “ಅಚ್ಯುತನನ್ನು ಕೆರಳಿಸುವ ಇದು ಚೇದಿಪತಿಯ ಅವನ ಬುದ್ಧಿಯಿಂದಲ್ಲ. ನಿಶ್ಚಿತವಾಗಿಯೂ ಇದು ಜಗದ್ಭರ್ತು ಕೃಷ್ಣನ ನಿರ್ಧಾರವೇ ಆಗಿರಬೇಕು.

02041002a ಕೋ ಹಿ ಮಾಂ ಭೀಮಸೇನಾದ್ಯ ಕ್ಷಿತಾವರ್ಹತಿ ಪಾರ್ಥಿವಃ|

02041002c ಕ್ಷೇಪ್ತುಂ ದೈವಪರೀತಾತ್ಮಾ ಯಥೈಷ ಕುಲಪಾಂಸನಃ||

ಭೀಮಸೇನ! ಈ ಕುಲಪಾಂಸನನನ್ನು ಬಿಟ್ಟು ದೈವಪರಿತಾತ್ಮನಲ್ಲದ ಭೂಮಿಯ ಮೇಲಿರುವ ಬೇರೆ ಯಾವ ಪಾರ್ಥಿವನು ಈ ರೀತಿ ನನ್ನನ್ನು ಹೀಯಾಳಿಸಲು ಸಾಧ್ಯ?

02041003a ಏಷ ಹ್ಯಸ್ಯ ಮಹಾಬಾಹೋ ತೇಜೋಂಶಶ್ಚ ಹರೇರ್ಧ್ರುವಂ|

02041003c ತಮೇವ ಪುನರಾದಾತುಮಿಚ್ಛತ್ಪೃಥುಯಶಾ ಹರಿಃ||

ಇವನು ಮಹಾಬಾಹು ಹರಿಯ ತೇಜಸ್ಸಿನ ಒಂದು ಅಂಶ ಮತ್ತು ಪೃಥುಯಶ ಹರಿಯು ಅದನ್ನು ಪುನಃ ಹಿಂದೆಗೆದುಕೊಳ್ಳಲು ಬಯಸುತ್ತಾನಿರಬಹುದು.

02041004a ಯೇನೈಷ ಕುರುಶಾರ್ದೂಲ ಶಾರ್ದೂಲ ಇವ ಚೇದಿರಾಟ್|

02041004c ಗರ್ಜತ್ಯತೀವ ದುರ್ಬುದ್ಧಿಃ ಸರ್ವಾನಸ್ಮಾನಚಿಂತಯನ್||

ಕುರುಶಾರ್ದೂಲ! ಆದುದರಿಂದಲೇ ಈ ದುರ್ಬುದ್ಧಿ ಚೇದಿರಾಜನು ನಮ್ಮೆಲ್ಲರ ಕುರಿತು ಯೋಚಿಸದೇ ಶಾರ್ದೂಲದಂತೆ ಗರ್ಜಿಸುತ್ತಿದ್ದಾನೆ.””

02041005 ವೈಶಂಪಾಯನ ಉವಾಚ|

02041005a ತತೋ ನ ಮಮೃಷೇ ಚೈದ್ಯಸ್ತದ್ಭೀಷ್ಮವಚನಂ ತದಾ|

02041005c ಉವಾಚ ಚೈನಂ ಸಂಕ್ರುದ್ಧಃ ಪುನರ್ಭೀಷ್ಮಮಥೋತ್ತರಂ||

ವೈಶಂಪಾಯನನು ಹೇಳಿದನು: “ಆಗ ಚೈದ್ಯನು ಭೀಷ್ಮನ ಮಾತುಗಳಿಂದ ತತ್ತರಿಸದೇ ಸಂಕೃದ್ಧನಾಗಿ ಬೀಷ್ಮನಿಗೆ ಪುನಃ ಉತ್ತರಿಸಿದನು:

02041006 ಶಿಶುಪಾಲ ಉವಾಚ|

02041006a ದ್ವಿಷತಾಂ ನೋಽಸ್ತು ಭೀಷ್ಮೈಷ ಪ್ರಭಾವಃ ಕೇಶವಸ್ಯ ಯಃ|

02041006c ಯಸ್ಯ ಸಂಸ್ತವವಕ್ತಾ ತ್ವಂ ಬಂಡಿವತ್ಸತತೋತ್ಥಿತಃ||

ಶಿಶುಪಾಲನು ಹೇಳಿದನು: “ಭೀಷ್ಮ! ನೀನು ಸ್ತುತಿಸಿದ ಕೇಶವನ ಪ್ರಭಾವವು ನಮ್ಮ ದ್ವೇಷಿಗಳದ್ದಿರಲಿ. ನೀನು ಸತತ ಅವನ ಹೊಗಳುಭಟ್ಟನಾಗಿದ್ದೀಯೆ.

02041007a ಸಂಸ್ತವಾಯ ಮನೋ ಭೀಷ್ಮ ಪರೇಷಾಂ ರಮತೇ ಸದಾ|

02041007c ಯದಿ ಸಂಸ್ತೌಷಿ ರಾಜ್ಞಸ್ತ್ವಮಿಮಂ ಹಿತ್ವಾ ಜನಾರ್ದನಂ||

ಒಂದುವೇಳೆ ನಿನಗೆ ಸದಾ ಇನ್ನೊಬ್ಬರನ್ನು ಹೊಗಳುವುದರಲ್ಲಿಯೇ ಸಂತೋಷ ದೊರೆಯುತ್ತದೆಯಾದರೆ ಜನಾರ್ದನನನ್ನು ಬಿಟ್ಟು ಬೇರೆ ಯಾರಾದರೂ ನಿಜ ರಾಜರನ್ನು ಹೊಗಳು.

02041008a ದರದಂ ಸ್ತುಹಿ ಬಾಹ್ಲೀಕಮಿಮಂ ಪಾರ್ಥಿವಸತ್ತಮಂ|

02041008c ಜಾಯಮಾನೇನ ಯೇನೇಯಮಭವದ್ದಾರಿತಾ ಮಹೀ||

ಹುಟ್ಟುತ್ತಲೇ ಮಹಿಯನ್ನು ತನ್ನದಾಗಿಸಿಕೊಂಡ ಈ ಪಾರ್ಥಿವಸತ್ತಮ ದರದ ಬಾಹ್ಲೀಕನನ್ನು ಸ್ತುತಿಸು.

02041009a ವಂಗಾಂಗವಿಷಯಾಧ್ಯಕ್ಷಂ ಸಹಸ್ರಾಕ್ಷಸಮಂ ಬಲೇ|

02041009c ಸ್ತುಹಿ ಕರ್ಣಮಿಮಂ ಭೀಷ್ಮ ಮಹಾಚಾಪವಿಕರ್ಷಣಂ||

ಭೀಷ್ಮ! ವಂಗಾಂಗದೇಶಗಳ ಅಧ್ಯಕ್ಷ, ಬಲದಲ್ಲಿ ಸಹಸ್ರಾಕ್ಷನ ಸಮ, ಮಹಾಚಾಪವಿಕರ್ಷಣ ಈ ಕರ್ಣನನ್ನು ಸ್ತುತಿಸು.

02041010a ದ್ರೋಣಂ ದ್ರೌಣಿಂ ಚ ಸಾಧು ತ್ವಂ ಪಿತಾಪುತ್ರೌ ಮಹಾರಥೌ|

02041010c ಸ್ತುಹಿ ಸ್ತುತ್ಯಾವಿಮೌ ಭೀಷ್ಮ ಸತತಂ ದ್ವಿಜಸತ್ತಮೌ||

ಭೀಷ್ಮ! ಮಹಾರಥಿ, ಸತತವೂ ದ್ವಿಜಸತ್ತಮ ಸ್ತುತಿಗಳಿಗರ್ಹ ಪಿತ-ಪುತ್ರ ದ್ರೋಣ-ದ್ರೌಣಿಯರನ್ನು ಸ್ತುತಿಸು.

02041011a ಯಯೋರನ್ಯತರೋ ಭೀಷ್ಮ ಸಂಕ್ರುದ್ಧಃ ಸಚರಾಚರಾಂ|

02041011c ಇಮಾಂ ವಸುಮತೀಂ ಕುರ್ಯಾದಶೇಷಾಮಿತಿ ಮೇ ಮತಿಃ||

ಭೀಷ್ಮ! ಅವರಲ್ಲಿ ಯಾರೊಬ್ಬರೂ ಸಂಕೃದ್ಧರಾದರೆ ಈ ವಸುಮತಿಯನ್ನು ಸಚರಾಚರಗಳ ಅಶೇಷಮತಿಯನ್ನಾಗಿ ಮಾಡುತ್ತಾರೆ ಎಂದು ನನ್ನ ಅಭಿಪ್ರಾಯ.

02041012a ದ್ರೋಣಸ್ಯ ಹಿ ಸಮಂ ಯುದ್ಧೇ ನ ಪಶ್ಯಾಮಿ ನರಾಧಿಪಂ|

02041012c ಅಶ್ವತ್ಥಾಂನಸ್ತಥಾ ಭೀಷ್ಮ ನ ಚೈತೌ ಸ್ತೋತುಮಿಚ್ಛಸಿ||

ಭೀಷ್ಮ! ಯುದ್ಧದಲ್ಲಿ ದ್ರೋಣನ ಅಥವಾ ಅಶ್ವತ್ಥಾಮನ ಸರಿಸಮ ನರಾಧಿಪನನ್ನು ಕಾಣಲಾರೆ. ಆದರೂ ನೀನು ಇವರಿಬ್ಬರನ್ನು ಹೊಗಳಲು ಬಯಸುತ್ತಿಲ್ಲವಲ್ಲ!

02041013a ಶಲ್ಯಾದೀನಪಿ ಕಸ್ಮಾತ್ತ್ವಂ ನ ಸ್ತೌಷಿ ವಸುಧಾಧಿಪಾನ್|

02041013c ಸ್ತವಾಯ ಯದಿ ತೇ ಬುದ್ಧಿರ್ವರ್ತತೇ ಭೀಷ್ಮ ಸರ್ವದಾ||

ಭೀಷ್ಮ! ನಿನ್ನ ಬುದ್ಧಿಯು ಎಲ್ಲರ ಹೊಗಳಿಕೆಯಲ್ಲಿ ನಿರತವಾಗಿದ್ದರೆ ನೀನು ಶಲ್ಯ ಮೊದಲಾದ ವಸುಧಾಧಿಪರನ್ನು ಏಕೆ ಹೊಗಳುತ್ತಿಲ್ಲ?

02041014a ಕಿಂ ಹಿ ಶಕ್ಯಂ ಮಯಾ ಕರ್ತುಂ ಯದ್ವೃದ್ಧಾನಾಂ ತ್ವಯಾ ನೃಪ|

02041014c ಪುರಾ ಕಥಯತಾಂ ನೂನಂ ನ ಶ್ರುತಂ ಧರ್ಮವಾದಿನಾಂ||

ನೃಪ! ನೀನು ಹಿಂದೆ ಧರ್ಮವಾದಿಗಳು ಹೇಳಿಕೊಟ್ಟವುಗಳನ್ನು ಕೇಳದಿದ್ದರೆ ನಾನು ತಾನೆ ಏನು ಮಾಡಬಲ್ಲೆ?

02041015a ಆತ್ಮನಿಂದಾತ್ಮಪೂಜಾ ಚ ಪರನಿಂದಾ ಪರಸ್ತವಃ|

02041015c ಅನಾಚರಿತಮಾರ್ಯಾಣಾಂ ವೃತ್ತಮೇತಚ್ಚತುರ್ವಿಧಂ||

ಆರ್ಯನೆನಿಸಿಕೊಂಡವನು ಆತ್ಮನಿಂದೆ, ಆತ್ಮಪೂಜೆ, ಪರನಿಂದನೆ, ಪರಸ್ತುತಿ ಈ ನಾಲ್ಕನ್ನೂ ಮಾಡುವುದಿಲ್ಲ.

02041016a ಯದಸ್ತವ್ಯಮಿಮಂ ಶಶ್ವನ್ಮೋಹಾತ್ಸಂಸ್ತೌಷಿ ಭಕ್ತಿತಃ|

02041016c ಕೇಶವಂ ತಚ್ಚ ತೇ ಭೀಷ್ಮ ನ ಕಶ್ಚಿದನುಮನ್ಯತೇ||

ಭೀಷ್ಮ! ನಿನ್ನ ಮೋಹದಿಂದಲೋ ಭಕ್ತಿಯಿಂದಲೋ ಈ ಕೇಶವನನ್ನು ಸ್ತುತಿಸುತ್ತೀಯಾದರೆ ಸ್ತುತಿಸು. ಆದರೆ ಬೇರೆ ಯಾರೂ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ.

02041017a ಕಥಂ ಭೋಜಸ್ಯ ಪುರುಷೇ ವರ್ಗಪಾಲೇ ದುರಾತ್ಮನಿ|

02041017c ಸಮಾವೇಶಯಸೇ ಸರ್ವಂ ಜಗತ್ಕೇವಲಕಾಮ್ಯಯಾ||

ನಿನ್ನ ವೈಯಕ್ತಿಕ ಬಯಕೆಯಿಂದಾಗಿ ಭೋಜನ ಬಾಗಿಲು ಕಾವಲುಗಾರನಾದ ಈ ದುರಾತ್ಮನಿಗಾಗಿ ನೀನು ಹೇಗೆ ತಾನೆ ಸರ್ವ ಜಗತ್ತನ್ನೂ ಕೇವಲಗೊಳಿಸಬಲ್ಲೆ?

02041018a ಅಥ ವೈಷಾ ನ ತೇ ಭಕ್ತಿಃ ಪಕೃತಿಂ ಯಾತಿ ಭಾರತ|

02041018c ಮಯೈವ ಕಥಿತಂ ಪೂರ್ವಂ ಭೂಲಿಂಗಶಕುನಿರ್ಯಥಾ||

ಭಾರತ! ಅಥವಾ ಈ ಭಕ್ತಿಯು ನಿನ್ನ ಪ್ರಕೃತಿಯಾಗಿರದಿದ್ದರೆ - ನೀನು ಭೂಲಿಂಗ ಪಕ್ಷಿಯನ್ನು ಹೋಲುತ್ತೀಯೆ ಎಂದು ಮೊದಲೇ ನಿನಗೆ ನಾನು ಹೇಳಿರಲಿಲ್ಲವೇ?

02041019a ಭೂಲಿಂಗಶಕುನಿರ್ನಾಮ ಪಾರ್ಶ್ವೇ ಹಿಮವತಃ ಪರೇ|

02041019c ಭೀಷ್ಮ ತಸ್ಯಾಃ ಸದಾ ವಾಚಃ ಶ್ರೂಯಂತೇಽರ್ಥವಿಗರ್ಹಿತಾಃ||

ಭೀಷ್ಮ! ಭೂಲಿಂಗ ಎಂಬ ಹೆಸರಿನ ಪಕ್ಷಿಯು ಹಿಮಾಲಯದ ಹತ್ತಿರದಲ್ಲಿರುತ್ತದೆ. ಅದರ ಮಾತುಗಳು ಸದಾ ಅರ್ಥಹೀನವಾಗಿರುತ್ತವೆ ಎಂದು ಕೇಳಿದ್ದೇವೆ.

02041020a ಮಾ ಸಾಹಸಮಿತೀದಂ ಸಾ ಸತತಂ ವಾಶತೇ ಕಿಲ|

02041020c ಸಾಹಸಂ ಚಾತ್ಮನಾತೀವ ಚರಂತೀ ನಾವಬುಧ್ಯತೇ||

ಅದು ದುಡುಕಬೇಡ ಎಂದು ಸದಾ ಉಪದೇಶನೀಡುತ್ತಿರುತ್ತದೆ. ಆದರೆ ದಡ್ಡತನದಿಂದ ತಾನೇ ದುಡುಕುತ್ತಾ ಜೀವಿಸುತ್ತದೆ.

02041021a ಸಾ ಹಿ ಮಾಂಸಾರ್ಗಲಂ ಭೀಷ್ಮ ಮುಖಾತ್ಸಿಂಹಸ್ಯ ಖಾದತಃ|

02041021c ದಂತಾಂತರವಿಲಗ್ನಂ ಯತ್ತದಾದತ್ತೇಽಲ್ಪಚೇತನಾ||

ಭೀಷ್ಮ! ಯಾಕೆಂದರೆ ಈ ಅಲ್ಪಚೇತನ ಪಕ್ಷಿಯು ತಿನ್ನುತ್ತಿರುವ ಸಿಂಹದ ಮುಖದಮೇಲೆ ತಗಲಿರುವ ಮತ್ತು ಹಲ್ಲುಗಳ ನಡುವೆ ಸಿಲುಕಿಕೊಂಡಿರುವ ಮಾಂಸದ ತುಂಡುಗಳನ್ನು ತಿನ್ನುತ್ತದೆ.

02041022a ಇಚ್ಛತಃ ಸಾ ಹಿ ಸಿಂಹಸ್ಯ ಭೀಷ್ಮ ಜೀವತ್ಯಸಂಶಯಂ|

02041022c ತದ್ವತ್ತ್ವಮಪ್ಯಧರ್ಮಜ್ಞ ಸದಾ ವಾಚಃ ಪ್ರಭಾಷಸೇ||

ಭೀಷ್ಮ! ಅದು ಸಿಂಹದ ಇಚ್ಛೆಯಂತೆ ಜೀವಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅದರಂತೆ ನೀನೂ ಕೂಡ ಸದಾ ಅಧರ್ಮಜ್ಞನ ಮಾತುಗಳನ್ನಾಡುತ್ತಿದ್ದೀಯೆ.

02041023a ಇಚ್ಛತಾಂ ಪಾರ್ಥಿವೇಂದ್ರಾಣಾಂ ಭೀಷ್ಮ ಜೀವಸ್ಯಸಂಶಯಂ|

02041023c ಲೋಕವಿದ್ವಿಷ್ಟಕರ್ಮಾ ಹಿ ನಾನ್ಯೋಽಸ್ತಿ ಭವತಾ ಸಮಃ||

ಭೀಷ್ಮ! ಈ ಪಾರ್ಥಿವೇಂದ್ರರ ಇಚ್ಛೆಯಂತೆ ನೀನು ಜೀವಿಸುತ್ತಿದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಜನರಿಗೆ ಇಷ್ಟವಾಗದೇ ಇರುವ ನಿನ್ನಂಥ ಬೇರೆ ಯಾರೂ ಇಲ್ಲ.””

02041024 ವೈಶಂಪಾಯನ ಉವಾಚ|

02041024a ತತಶ್ಚೇದಿಪತೇಃ ಶ್ರುತ್ವಾ ಭೀಷ್ಮಃ ಸ ಕಟುಕಂ ವಚಃ|

02041024c ಉವಾಚೇದಂ ವಚೋ ರಾಜಂಶ್ಚೇದಿರಾಜಸ್ಯ ಶೃಣ್ವತಃ||

ವೈಶಂಪಾಯನನು ಹೇಳಿದನು: “ರಾಜನ್! ಚೇದಿಪತಿಯ ಈ ಕಟುಕ ಮಾತುಗಳನ್ನು ಕೇಳಿದ ಭೀಷ್ಮನು ಚೇದಿರಾಜನಿಗೆ ಕೇಳುವಹಾಗೆ ಈ ಮಾತುಗಳನ್ನಾಡಿದನು:

02041025a ಇಚ್ಛತಾಂ ಕಿಲ ನಾಮಾಹಂ ಜೀವಾಂಯೇಷಾಂ ಮಹೀಕ್ಷಿತಾಂ|

02041025c ಯೋಽಹಂ ನ ಗಣಯಾಂಯೇತಾಂಸ್ತೃಣಾನೀವ ನರಾಧಿಪಾನ್||

“ಹೌದು! ಈ ನರಾಧಿಪ ಗಣವನ್ನು ತೃಣಸಮಾನವಾಗಿ ಕಾಣುತ್ತಿರುವ ನಾನು ಈ ಮಹೀಕ್ಷಿತರ ಹೆಸರಿನಲ್ಲಿ ಜೀವಿಸುತ್ತಿದ್ದೇನೆ!”

02041026a ಏವಮುಕ್ತೇ ತು ಭೀಷ್ಮೇಣ ತತಃ ಸಂಚುಕ್ರುಧುರ್ನೃಪಾಃ|

02041026c ಕೇ ಚಿಜ್ಜಹೃಷಿರೇ ತತ್ರ ಕೇ ಚಿದ್ಭೀಷ್ಮಂ ಜಗರ್ಹಿರೇ||

ಭೀಷ್ಮನ ಈ ಮಾತಿಗೆ ನೃಪರಲ್ಲಿ ಕೆಲವರು ಸಂಕೃದ್ಧರಾದರು. ಕೆಲವರು ತತ್ತರಿಸಿದರು ಮತ್ತು ಇನ್ನು ಕೆಲವರು ಭೀಷ್ಮನನ್ನು ನಿಂದಿಸಿದರು.

02041027a ಕೇ ಚಿದೂಚುರ್ಮಹೇಷ್ವಾಸಾಃ ಶ್ರುತ್ವಾ ಭೀಷ್ಮಸ್ಯ ತದ್ವಚಃ|

02041027c ಪಾಪೋಽವಲಿಪ್ತೋ ವೃದ್ಧಶ್ಚ ನಾಯಂ ಭೀಷ್ಮೋಽರ್ಹತಿ ಕ್ಷ್ಮಾಂ||

ಭೀಷ್ಮನ ಈ ಮಾತುಗಳನ್ನು ಕೇಳಿದ ಇತರ ಮಹೇಷ್ವಾಸರು “ಪಾಪಿ, ಅವಲಿಪ್ತ, ವೃದ್ಧ ಭೀಷ್ಮನು ನಮ್ಮ ಕ್ಷಮೆಗೆ ಅರ್ಹನಲ್ಲ!” ಎಂದು ಕೂಗಿದರು.

02041028a ಹನ್ಯತಾಂ ದುರ್ಮತಿರ್ಭೀಷ್ಮಃ ಪಶುವತ್ಸಾಧ್ವಯಂ ನೃಪೈಃ|

02041028c ಸರ್ವೈಃ ಸಮೇತ್ಯ ಸಂರಬ್ಧೈರ್ದಹ್ಯತಾಂ ವಾ ಕಟಾಗ್ನಿನಾ||

ನೃಪರೆಲ್ಲರೂ ಸೇರಿ “ಈ ದುರ್ಮತಿ ಭೀಷ್ಮನನ್ನು ಬಲಿಪಶುವಂತೆ ಕೊಂದುಹಾಕೋಣ ಅಥವಾ ಕಟಾಗ್ನಿಯಲ್ಲಿ ಸುಟ್ಟುಹಾಕೋಣ!” ಎಂದು ಹೇಳಿದರು.

02041029a ಇತಿ ತೇಷಾಂ ವಚಃ ಶ್ರುತ್ವಾ ತತಃ ಕುರುಪಿತಾಮಹಃ|

02041029c ಉವಾಚ ಮತಿಮಾನ್ಭೀಷ್ಮಸ್ತಾನೇವ ವಸುಧಾಧಿಪಾನ್||

ಅವರ ಈ ಕೂಗನ್ನು ಕೇಳಿದ ಕುರುಪಿತಾಮಹ ಮತಿವಂತ ಭೀಷ್ಮನು ಅಲ್ಲಿ ನೆರದಿದ್ದ ವಸುಧಾಧಿಪರಲ್ಲಿ ಹೇಳಿದನು:

02041030a ಉಕ್ತಸ್ಯೋಕ್ತಸ್ಯ ನೇಹಾಂತಮಹಂ ಸಮುಪಲಕ್ಷಯೇ|

02041030c ಯತ್ತು ವಕ್ಷ್ಯಾಮಿ ತತ್ಸರ್ವಂ ಶೃಣುಧ್ವಂ ವಸುಧಾಧಿಪಾಃ||

“ಇಲ್ಲಿ ಈ ರೀತಿ ಮಾತನಾಡುವುದರಿಂದ ಯಾವ ಅಂತ್ಯವನ್ನೂ ನಾನು ಕಾಣಲಾರೆ. ವಸುಧಾಧಿಪರೇ! ನಾನು ಏನು ಹೇಳಲಿದ್ದೇನೋ ಅದನ್ನು ಕೇಳಿ!

02041031a ಪಶುವದ್ಘಾತನಂ ವಾ ಮೇ ದಹನಂ ವಾ ಕಟಾಗ್ನಿನಾ|

02041031c ಕ್ರಿಯತಾಂ ಮೂರ್ಧ್ನಿ ವೋ ನ್ಯಸ್ತಂ ಮಯೇದಂ ಸಕಲಂ ಪದಂ||

ಪಶುವಂತೆ ನನ್ನನ್ನು ಕೊಲ್ಲಿ ಅಥವಾ ಕಟಾಗ್ನಿಯಲ್ಲಿ ಸುಡಿ! ಆದರೆ ನಾನು ನಿಮ್ಮೆಲ್ಲರನ್ನೂ ತುಳಿಯುತ್ತೇನೆ.

02041032a ಏಷ ತಿಷ್ಠತಿ ಗೋವಿಂದಃ ಪೂಜಿತೋಽಸ್ಮಾಭಿರಚ್ಯುತಃ|

02041032c ಯಸ್ಯ ವಸ್ತ್ವರತೇ ಬುದ್ಧಿರ್ಮರಣಾಯ ಸ ಮಾಧವಂ||

02041033a ಕೃಷ್ಣಮಾಹ್ವಯತಾಮದ್ಯ ಯುದ್ಧೇ ಶಾಂಙ್ರಗದಾಧರಂ|

02041033c ಯಾವದಸ್ಯೈವ ದೇವಸ್ಯ ದೇಹಂ ವಿಶತು ಪಾತಿತಃ||

ಇಲ್ಲಿ ನಿಂತಿದ್ದಾನೆ ನಾವು ಪೂಜಿಸಿದ ಅಚ್ಯುತ ಗೋವಿಂದ! ಯಾರ ಬುದ್ಧಿಯು ಮರಣಕ್ಕೆ ಕಾತರಿಸುತ್ತಿದೆಯೋ ಅವನು ಯುದ್ಧದಲ್ಲಿ ಈ ಶಾಂಙ್ರಗದಾಧರ ದೇವ ಯಾದವ ಮಾಧವ ಕೃಷ್ಣನಿಂದ ಪತನವಾಗಿ ಅವನ ದೇಹವನ್ನು ಪ್ರವೇಶಿಸಲಿ!””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಶಿಶುಪಾಲವಧಪರ್ವಣಿ ಭೀಷ್ಮವಾಕ್ಯೇ ಏಕಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಶಿಶುಪಾಲವಧಪರ್ವದಲ್ಲಿ ಭೀಷ್ಮವಾಕ್ಯ ಎನ್ನುವ ನಲವತ್ತೊಂದನೆಯ ಅಧ್ಯಾಯವು.

Related image

Comments are closed.