Sabha Parva: Chapter 27

ಸಭಾ ಪರ್ವ: ದಿಗ್ವಿಜಯ ಪರ್ವ

೨೭

ಭೀಮಸೇನನು ಪೂರ್ವದಿಕ್ಕಿನ ರಾಜರನ್ನು ಗೆದ್ದು ಮರಳಿದುದು (೧-೨೮).

02027001 ವೈಶಂಪಾಯನ ಉವಾಚ|

02027001a ತತಃ ಕುಮಾರವಿಷಯೇ ಶ್ರೇಣಿಮಂತಮಥಾಜಯತ್|

02027001c ಕೋಸಲಾಧಿಪತಿಂ ಚೈವ ಬೃಹದ್ಬಲಮರಿಂದಮಃ||

ವೈಶಂಪಾಯನನು ಹೇಳಿದನು: “ಅನಂತರ ಆ ಅರಿಂದಮನು ಕುಮಾರ ದೇಶದ ಶ್ರೇಣಿಮಂತ ಮತ್ತು ಕೋಸಲಾಧಿಪತಿ ಬೃಹದ್ಬಲನನ್ನು ಗೆದ್ದನು.

02027002a ಅಯೋಧ್ಯಾಯಾಂ ತು ಧರ್ಮಜ್ಞಂ ದೀರ್ಘಪ್ರಜ್ಞಂ ಮಹಾಬಲಂ|

02027002c ಅಜಯತ್ಪಾಂಡವಶ್ರೇಷ್ಠೋ ನಾತಿತೀವ್ರೇಣ ಕರ್ಮಣಾ||

ಪಾಂಡವಶ್ರೇಷ್ಠನು ಅಷ್ಟೇನೂ ಕಷ್ಟವಿಲ್ಲದೇ ಅಯೋಧ್ಯೆಯ ಧರ್ಮಜ್ಞ ಮಹಾಬಲಿ ದೀರ್ಘಪ್ರಜ್ಞನನ್ನು ಗೆದ್ದನು.

02027003a ತತೋ ಗೋಪಾಲಕಚ್ಛಂ ಚ ಸೋತ್ತಮಾನಪಿ ಚೋತ್ತರಾನ್|

02027003c ಮಲ್ಲಾನಾಮಧಿಪಂ ಚೈವ ಪಾರ್ಥಿವಂ ವ್ಯಜಯತ್ಪ್ರಭುಃ||

ಅನಂತರ ಪ್ರಭುವು ಗೋಪಾಲಕಚ್ಛ, ಉತ್ತರ ಸೋತ್ತಮರನ್ನು ಮತ್ತು ಮಲ್ಲರ ಅಧಿಪತಿ ಪಾರ್ಥಿವನನ್ನು ಜಯಿಸಿದನು.

02027004a ತತೋ ಹಿಮವತಃ ಪಾರ್ಶ್ವೇ ಸಮಭ್ಯೇತ್ಯ ಜರದ್ಗವಂ|

02027004c ಸರ್ವಮಲ್ಪೇನ ಕಾಲೇನ ದೇಶಂ ಚಕ್ರೇ ವಶೇ ಬಲೀ||

ಹಿಮಾಲಯದ ತಪ್ಪಲಿನಲ್ಲಿ ಜರದ್ಗವನನ್ನು ಎದುರಿಸಿ ಸ್ವಲ್ಪವೇ ಸಮಯದಲ್ಲಿ ಇಡೀ ದೇಶವನ್ನು ಬಲವಂತವಾಗಿ ತನ್ನ ವಶಪಡಿಸಿಕೊಂಡನು.

02027005a ಏವಂ ಬಹುವಿಧಾನ್ದೇಶಾನ್ವಿಜಿತ್ಯ ಪುರುಷರ್ಷಭಃ|

02027005c ಉನ್ನಾಟಮಭಿತೋ ಜಿಗ್ಯೇ ಕುಕ್ಷಿಮಂತಂ ಚ ಪರ್ವತಂ||

02027005e ಪಾಂಡವಃ ಸುಮಹಾವೀರ್ಯೋ ಬಲೇನ ಬಲಿನಾಂ ವರಃ||

ಈ ರೀತಿ ಹಲವಾರು ದೇಶಗಳನ್ನು ಗೆದ್ದು ಆ ಪುರುಷರ್ಷಭ, ಬಲಶಾಲಿಗಳಲ್ಲಿ ಶ್ರೇಷ್ಠ ಪಾಂಡವನು ಉನ್ನಾಟವನ್ನು ಗೆದ್ದು ಪರ್ವತ ಕುಕ್ಷಿಮಂತವನ್ನು ಬಲವಂತವಾಗಿ ತನ್ನ ವಶದಲ್ಲಿ ತೆಗೆದುಕೊಂಡನು.

02027006a ಸ ಕಾಶಿರಾಜಂ ಸಮರೇ ಸುಬಂಧುಮನಿವರ್ತಿನಂ|

02027006c ವಶೇ ಚಕ್ರೇ ಮಹಾಬಾಹುರ್ಭೀಮೋ ಭೀಮಪರಾಕ್ರಮಃ||

ಆ ಮಹಾಬಾಹು ಭೀಮಪರಾಕ್ರಮಿ ಭೀಮನು ಸಮರದಲ್ಲಿ ಕಾಶಿರಾಜನನ್ನು ಮತ್ತು ಹಿಂದೇಟನ್ನು ಹಾಕದೇ ಇದ್ದ ಸುಬಂಧುವನ್ನು ವಶಪಡಿಸಿಕೊಂಡನು.

02027007a ತತಃ ಸುಪಾರ್ಶ್ವಮಭಿತಸ್ತಥಾ ರಾಜಪತಿಂ ಕ್ರಥಂ|

02027007c ಯುಧ್ಯಮಾನಂ ಬಲಾತ್ಸಂಖ್ಯೇ ವಿಜಿಗ್ಯೇ ಪಾಂಡವರ್ಷಭಃ||

ಅನಂತರ ಪಾಂಡವರ್ಷಭನು ಬಲದಿಂದ ಯುದ್ಧ ಮಾಡಿ ಕ್ರಥದಲ್ಲಿದ್ದ ರಾಜಪತಿ ಸುಪಾರ್ಶ್ವನನ್ನು ಸೋಲಿಸಿದನು.

02027008a ತತೋ ಮತ್ಸ್ಯಾನ್ಮಹಾತೇಜಾ ಮಲಯಾಂಶ್ಚ ಮಹಾಬಲಾನ್|

02027008c ಅನವದ್ಯಾನ್ಗಯಾಂಶ್ಚೈವ ಪಶುಭೂಮಿಂ ಚ ಸರ್ವಶಃ||

ಅನಂತರ ಮಹಾತೇಜಸ್ವಿ ಮತ್ಸ್ಯರನ್ನು, ಮಹಾಬಲಶಾಲಿ ಮಲಯರನ್ನು, ವಧಿಸಲಸಾದ್ಯ ಗಯರನ್ನು ಮತ್ತು ಪಶುಭೂಮಿ ಸರ್ವವನ್ನೂ ಸೋಲಿಸಿದನು.

02027009a ನಿವೃತ್ಯ ಚ ಮಹಾಬಾಹುರ್ಮದರ್ವೀಕಂ ಮಹೀಧರಂ|

02027009c ಸೋಪದೇಶಂ ವಿನಿರ್ಜಿತ್ಯ ಪ್ರಯಯಾವುತ್ತರಾಮುಖಃ||

02027009e ವತ್ಸಭೂಮಿಂ ಚ ಕೌಂತೇಯೋ ವಿಜಿಗ್ಯೇ ಬಲವಾನ್ಬಲಾತ್||

02027010a ಭರ್ಗಾಣಾಮಧಿಪಂ ಚೈವ ನಿಷಾದಾಧಿಪತಿಂ ತಥಾ|

02027010c ವಿಜಿಗ್ಯೇ ಭೂಮಿಪಾಲಾಂಶ್ಚ ಮಣಿಮತ್ಪ್ರಮುಖಾನ್ಬಹೂನ್||

ಮಹಾಬಾಹುವು ಹಿಂದಿರುಗಿ ಉತ್ತರಾಭಿಮುಖವಾಗಿ ಹೊರಟು ಮದರ್ವೀಕ ಪರ್ವತ ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಗೆದ್ದನು. ಬಲಶಾಲಿ ಕೌಂತೇಯನು ಬಲವನ್ನು ಪ್ರಯೋಗಿಸಿ ವತ್ಸಭೂಮಿಯನ್ನು ಸೋಲಿಸಿ, ಭರ್ಗರ ಅಧಿಪ, ನಿಷಾದಧಿಪತಿ ಮತ್ತು ಮಣಿಮತನೇ ಮೊದಲಾದ ಹಲವಾರು ಭೂಮಿಪಾಲರನ್ನು ಗೆದ್ದನು.

02027011a ತತೋ ದಕ್ಷಿಣಮಲ್ಲಾಂಶ್ಚ ಭೋಗವಂತಂ ಚ ಪಾಂಡವಃ|

02027011c ತರಸೈವಾಜಯದ್ಭೀಮೋ ನಾತಿತೀವ್ರೇಣ ಕರ್ಮಣಾ||

ಅನಂತರ ಪಾಂಡವ ಭೀಮನು ದಕ್ಷಿಣ ಮಲ್ಲರನ್ನೂ ಭೋಗವಂತನನ್ನೂ ಏನೂ ಕಷ್ಟವಿಲ್ಲದೇ ಗೆದ್ದನು.

02027012a ಶರ್ಮಕಾನ್ವರ್ಮಕಾಂಶ್ಚೈವ ಸಾಂತ್ವೇನೈವಾಜಯತ್ಪ್ರಭುಃ|

02027012c ವೈದೇಹಕಂ ಚ ರಾಜಾನಂ ಜನಕಂ ಜಗತೀಪತಿಂ||

02027012e ವಿಜಿಗ್ಯೇ ಪುರುಷವ್ಯಾಘ್ರೋ ನಾತಿತೀವ್ರೇಣ ಕರ್ಮಣಾ||

ಪುರುಷವ್ಯಾಘ್ರ ಪ್ರಭುವು ಶರ್ಮಕರನ್ನು ಮತ್ತು ವರ್ಮಕರನ್ನು ಸಾಂತ್ವನದಿಂದ ಗೆದ್ದು ವೈದೇಹಕ ರಾಜ ಜಗತೀಪತಿ ಜನಕ[1]ನನ್ನು ಸುಲಭವಾಗಿ ಗೆದ್ದನು.

02027013a ವೈದೇಹಸ್ಥಸ್ತು ಕೌಂತೇಯ ಇಂದ್ರಪರ್ವತಮಂತಿಕಾತ್|

02027013c ಕಿರಾತಾನಾಮಧಿಪತೀನ್ವ್ಯಜಯತ್ಸಪ್ತ ಪಾಂಡವಃ||

ವಿದೇಹದಲ್ಲಿಯೇ ಇದ್ದುಕೊಂಡು ಕೌಂತೇಯ ಪಾಂಡವನು ಇಂದ್ರಪರ್ವತದ ಕೊನೆಯಲ್ಲಿದ್ದ ಕಿರಾತರ ಏಳು ಅಧಿಪತಿಗಳನ್ನು ಗೆದ್ದನು.

02027014a ತತಃ ಸುಹ್ಮಾನ್ಪ್ರಾಚ್ಯಸುಹ್ಮಾನ್ಸಮಕ್ಷಾಂಶ್ಚೈವ ವೀರ್ಯವಾನ್|

02027014c ವಿಜಿತ್ಯ ಯುಧಿ ಕೌಂತೇಯೋ ಮಾಗಧಾನುಪಯಾದ್ಬಲೀ||

ಅನಂತರ ವೀರ್ಯವಾನ್ ಬಲಿ ಕೌಂತೇಯನು ಅವರು ನೋಡುತ್ತಿದ್ದಂತೆಯೇ ಸುಂಹರನ್ನು, ಪೂರ್ವ ಸುಂಹರನ್ನು ಯದ್ಧದಲ್ಲಿ ಸೋಲಿಸಿ, ಮಾಗಧ ದೇಶವನ್ನು ಆಕ್ರಮಣ ಮಾಡಿದನು.

02027015a ದಂಡಂ ಚ ದಂಡಧಾರಂ ಚ ವಿಜಿತ್ಯ ಪೃಥಿವೀಪತೀನ್|

02027015c ತೈರೇವ ಸಹಿತಃ ಸರ್ವೈರ್ಗಿರಿವ್ರಜಮುಪಾದ್ರವತ್||

ಪೃಥಿವೀಪತಿ ದಂಡ ಮತ್ತು ದಂಡಧಾರರನ್ನು ಗೆದ್ದು ಅವರೆಲ್ಲರೊಡನೆ ಗಿರಿವ್ರಜವದ ಮೇಲೆ ಧಾಳಿಯಿಟ್ಟನು.

02027016a ಜಾರಾಸಂಧಿಂ ಸಾಂತ್ವಯಿತ್ವಾ ಕರೇ ಚ ವಿನಿವೇಶ್ಯ ಹ|

02027016c ತೈರೇವ ಸಹಿತೋ ರಾಜನ್ಕರ್ಣಮಭ್ಯದ್ರವದ್ಬಲೀ||

ರಾಜನ್! ಜಾರಾಸಂಧಿಯನ್ನು ಸಂತವಿಸಿ ಅವನನ್ನು ಕರಕೊಡುವವನ್ನಾಗಿ ಮಾಡಿ, ಅವರೆಲ್ಲರನ್ನೂ ಸೇರಿ ವೇಗದಿಂದ ಬಲಿ ಕರ್ಣನ ಮೇಲೆ ಆಕ್ರಮಣ ಮಾಡಿದನು.

02027017a ಸ ಕಂಪಯನ್ನಿವ ಮಹೀಂ ಬಲೇನ ಚತುರಂಗಿಣಾ|

02027017c ಯುಯುಧೇ ಪಾಂಡವಶ್ರೇಷ್ಠಃ ಕರ್ಣೇನಾಮಿತ್ರಘಾತಿನಾ||

ಚತುರಂಗ ಬಲದಿಂದ ಮಹಿಯನ್ನು ಕಂಪಿಸುತ್ತಾ ಪಾಂಡವಶ್ರೇಷ್ಠನು ಅಮಿತ್ರಘಾತಿ ಕರ್ಣನೊಡನೆ ಯುದ್ಧ ಮಾಡಿದನು.

02027018a ಸ ಕರ್ಣಂ ಯುಧಿ ನಿರ್ಜಿತ್ಯ ವಶೇ ಕೃತ್ವಾ ಚ ಭಾರತ|

02027018c ತತೋ ವಿಜಿಗ್ಯೇ ಬಲವಾನ್ರಾಜ್ಞಃ ಪರ್ವತವಾಸಿನಃ||

ಭಾರತ! ಯುದ್ಧದಲ್ಲಿ ಕರ್ಣನನ್ನು ಸೋಲಿಸಿ ವಶಪಡಿಸಿಕೊಡು ಅವನು ಪರ್ವತವಾಸಿಗಳಾದ ಬಲವಾನ್ ರಾಜರನ್ನು ಗೆದ್ದನು.

02027019a ಅಥ ಮೋದಾಗಿರಿಂ ಚೈವ ರಾಜಾನಂ ಬಲವತ್ತರಂ|

02027019c ಪಾಂಡವೋ ಬಾಹುವೀರ್ಯೇಣ ನಿಜಘಾನ ಮಹಾಮೃಧೇ||

ಅನಂತರ ಪಾಂಡವನು ಮಹಾ ಮುಷ್ಠಿಯುದ್ಧದಲ್ಲಿ ಬಲವತ್ತರ ಮೋದಗಿರಿಯನ್ನು ಬಾಹುವೀರ್ಯದಿಂದ ಸೋಲಿಸಿದನು.

02027020a ತತಃ ಪೌಂಡ್ರಾಧಿಪಂ ವೀರಂ ವಾಸುದೇವಂ ಮಹಾಬಲಂ|

02027020c ಕೌಶಿಕೀಕಚ್ಛನಿಲಯಂ ರಾಜಾನಂ ಚ ಮಹೌಜಸಂ||

02027021a ಉಭೌ ಬಲವೃತೌ ವೀರಾವುಭೌ ತೀವ್ರಪರಾಕ್ರಮೌ|

02027021c ನಿರ್ಜಿತ್ಯಾಜೌ ಮಹಾರಾಜ ವಂಗರಾಜಮುಪಾದ್ರವತ್||

ಮಹಾರಾಜ! ಬಲವೃತರೂ ವೀರರೂ ತೀವ್ರಪರಾಕ್ರಮಿಗಳು ಆದ ಪೌಂಡ್ರಾಧಿಪ ವೀರ ಮಹಾಬಲಿ ವಾಸುದೇವ ಮತ್ತು ಕೌಶಿಕೀ ತೀರದಲ್ಲಿ ವಾಸಿಸುತ್ತಿದ್ದ ಮಹೌಜಸ ರಾಜರನ್ನು ಸೋಲಿಸಿ ವಂಗರಾಜದ ಮೇಲೆ ಧಾಳಿಯಿಟ್ಟನು.

02027022a ಸಮುದ್ರಸೇನಂ ನಿರ್ಜಿತ್ಯ ಚಂದ್ರಸೇನಂ ಚ ಪಾರ್ಥಿವಂ|

02027022c ತಾಮ್ರಲಿಪ್ತಂ ಚ ರಾಜಾನಂ ಕಾಚಂ ವಂಗಾಧಿಪಂ ತಥಾ||

02027023a  ಸುಹ್ಮಾನಾಮಧಿಪಂ ಚೈವ ಯೇ ಚ ಸಾಗರವಾಸಿನಃ|

02027023c ಸರ್ವಾನ್ಮ್ಲೇಚ್ಛಗಣಾಂಶ್ಚೈವ ವಿಜಿಗ್ಯೇ ಭರತರ್ಷಭಃ||

ಪಾರ್ಥಿವ ಸಮುದ್ರಸೇನ ಮತ್ತು ಚಂದ್ರಸೇನರನ್ನು ಸೋಲಿಸಿ ತಾಮ್ರಲಿಪ್ತದ ರಾಜ, ಕಾಚ ಮತ್ತು ವಂಗಾಧಿಪರು, ಸುಹ್ಮಾನರ ಅಧಿಪ ಮತ್ತು ಸಾಗರವಾಸಿ ಸರ್ವ ಮ್ಲೇಚ್ಛಗಣಗಳನ್ನು ಆ ಭರತರ್ಷಭನು ಗೆದ್ದನು.

02027024a ಏವಂ ಬಹುವಿಧಾನ್ದೇಶಾನ್ವಿಜಿತ್ಯ ಪವನಾತ್ಮಜಃ|

02027024c ವಸು ತೇಭ್ಯ ಉಪಾದಾಯ ಲೌಹಿತ್ಯಮಗಮದ್ಬಲೀ||

ಈ ರೀತಿ ಬಹುವಿಧದ ದೇಶಗಳನ್ನು ಗೆದ್ದು ಅವರಿಂದ ಸಂಪತ್ತನ್ನು ಪಡೆದು ಬಲಿ ಪವನಾತ್ಮಜನು ಲೌಹಿತ್ಯಕ್ಕೆ ಬಂದನು.

02027025a ಸ ಸರ್ವಾನ್ಮ್ಲೇಚ್ಛನೃಪತೀನ್ಸಾಗರದ್ವೀಪವಾಸಿನಃ|

02027025c ಕರಮಾಹಾರಯಾಮಾಸ ರತ್ನಾನಿ ವಿವಿಧಾನಿ ಚ||

02027026a ಚಂದನಾಗುರುವಸ್ತ್ರಾಣಿ ಮಣಿಮುಕ್ತಮನುತ್ತಮಂ|

02027026c ಕಾಂಚನಂ ರಜತಂ ವಜ್ರಂ ವಿದ್ರುಮಂ ಚ ಮಹಾಧನಂ||

ಸಾಗರದ್ವೀಪವಾಸಿಗಳಾದ ಸರ್ವ ಮ್ಲೇಚ್ಛ ನೃಪತಿಗಳಿಂದ ವಿವಿಧ ರತ್ನಗಳನ್ನೂ, ಚಂದನ, ಅಗುರು, ವಸ್ತ್ರ, ಮಣಿ, ಅನುತ್ತಮ ಮುಕ್ತ, ಕಾಂಚನ, ರಜತ, ವಜ್ರ, ವಿದ್ರುಮ ಮತ್ತು ಮಹಾಧನವನ್ನು ಕಪ್ಪ ಕಾಣಿಕೆಗಳನ್ನಾಗಿ ಪಡೆದನು.

02027027a ಸ ಕೋಟಿಶತಸಂಖ್ಯೇನ ಧನೇನ ಮಹತಾ ತದಾ|

02027027c ಅಭ್ಯವರ್ಷದಮೇಯಾತ್ಮಾ ಧನವರ್ಷೇಣ ಪಾಂಡವಂ||

ಕೋಟಿ ಶತ ಸಂಖ್ಯೆಗಳಲ್ಲಿ ಮಹಾ ಘನ ಧನವನ್ನು ಅಮೇಯಾತ್ಮ ಪಾಂಡವನ ಮೇಲೆ ಮಳೆಯಂತೆ ಸುರಿಸಿದನು.

02027028a ಇಂದ್ರಪ್ರಸ್ಥಮಥಾಗಮ್ಯ ಭೀಮೋ ಭೀಮಪರಾಕ್ರಮಃ|

02027028c ನಿವೇದಯಾಮಾಸ ತದಾ ಧರ್ಮರಾಜಾಯ ತದ್ಧನಂ||

ಇಂದ್ರಪ್ರಸ್ಥಕ್ಕೆ ಹಿಂದಿರಗಿದ ಭೀಮಪರಾಕ್ರಮಿ ಭೀಮನು ಆ ಧನವನ್ನು ಧರ್ಮರಾಜನಿಗೆ ನಿವೇದಿಸಿದನು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಭೀಮಪ್ರಾಚೀದಿಗ್ವಿಜಯೇ ಸಪ್ತವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಭೀಮಪ್ರಾಚೀದಿಗ್ವಿಜಯ ಎನ್ನುವ ಇಪ್ಪತ್ತೇಳನೆಯ ಅಧ್ಯಾಯವು.

Related image

[1]ವಿದೇಹದ ರಾಜ ಜನಕನೆಂದರೆ ಸೀತಾದೇವಿಯ ತಂದೆಯೇ? ಅಥವಾ ಆ ಜನಕನ ವಂಶದವರೇ?

Comments are closed.