Sabha Parva: Chapter 26

ಸಭಾ ಪರ್ವ: ದಿಗ್ವಿಜಯ ಪರ್ವ

೨೬

ಭೀಮಸೇನನ ಪೂರ್ವ ದಿಗ್ವಿಜಯ

ಭೀಮಸೇನನು ಪೂರ್ವದಿಕ್ಕಿನ ರಾಜರನ್ನು ಗೆದ್ದುದು (೧-೧೦). ಶಿಶುಪಾಲನಿಂದ ಸತ್ಕೃತನಾದುದು (೧೧-೧೬).

02026001 ವೈಶಂಪಾಯನ ಉವಾಚ|

02026001a ಏತಸ್ಮಿನ್ನೇವ ಕಾಲೇ ತು ಭೀಮಸೇನೋಽಪಿ ವೀರ್ಯವಾನ್|

02026001c ಧರ್ಮರಾಜಮನುಜ್ಞಾಪ್ಯ ಯಯೌ ಪ್ರಾಚೀಂ ದಿಶಂ ಪ್ರತಿ||

ವೈಶಂಪಾಯನನು ಹೇಳಿದನು: “ಇದೇ ಸಮಯದಲ್ಲಿ ವೀರ್ಯವಾನ್ ಭೀಮಸೇನನು ಧರ್ಮರಾಜನ ಅನುಮತಿಯನ್ನು ಪಡೆದು ಪೂರ್ವದಿಕ್ಕಿನ ಕಡೆ ಹೊರಟನು.

02026002a ಮಹತಾ ಬಲಚಕ್ರೇಣ ಪರರಾಷ್ಟ್ರಾವಮರ್ದಿನಾ|

02026002c ವೃತೋ ಭರತಶಾರ್ದೂಲೋ ದ್ವಿಷಚ್ಛೋಕವಿವರ್ಧನಃ||

ಪರರಾಷ್ಟ್ರಗಳನ್ನು ಸದೆಬಡಿಯುವ ಮಹಾ ಬಲಚಕ್ರದಿಂದೊಡಗೂಡಿ ಶತ್ರುಗಳ ಶೋಕವನ್ನು ವೃದ್ಧಿಸುತ್ತಾ ಆ ಭರತಶಾರ್ದೂಲನು ಮುಂದುವರೆದನು.

02026003a ಸ ಗತ್ವಾ ರಾಜಶಾರ್ದೂಲಃ ಪಾಂಚಾಲಾನಾಂ ಪುರಂ ಮಹತ್|

02026003c ಪಾಂಚಾಲಾನ್ವಿವಿಧೋಪಾಯೈಃ ಸಾಂತ್ವಯಾಮಾಸ ಪಾಂಡವಃ||

ಆ ರಾಜಶಾರ್ದೂಲ ಪಾಂಡವನು ಮೊದಲಿಗೆ ಪಾಂಚಾಲರ ಪುರಕ್ಕೆ ಹೋಗಿ ವಿವಿಧ ಉಪಾಯಗಳಿಂದ ಪಾಂಚಾಲರನ್ನು ಒಲಿಸಿದನು.

02026004a ತತಃ ಸ ಗಂಡಕೀಂ ಶೂರೋ ವಿದೇಹಾಂಶ್ಚ ನರರ್ಷಭಃ|

02026004c ವಿಜಿತ್ಯಾಲ್ಪೇನ ಕಾಲೇನ ದಶಾರ್ಣಾನಗಮತ್ಪ್ರಭುಃ||

ನರರ್ಷಭ ಶೂರ ಪ್ರಭುವು ಕಂಡಕೀ ಮತ್ತು ವಿದೇಹರನ್ನು ಜಯಿಸಿ ಸ್ವಲ್ಪವೇ ಸಮಯದಲ್ಲಿ ದಶಾರ್ಣರ ಮೇಲೆ ಎರಗಿದನು.

02026005a ತತ್ರ ದಾಶಾರ್ಣಕೋ ರಾಜಾ ಸುಧರ್ಮಾ ಲೋಮಹರ್ಷಣ|

02026005c ಕೃತವಾನ್ಕರ್ಮ ಭೀಮೇನ ಮಹದ್ಯುದ್ಧಂ ನಿರಾಯುಧಂ||

ಅಲ್ಲಿ ದಾಶಾರ್ಣಕ ರಾಜಾ ಸುಧರ್ಮನು ಭೀಮನೊಂದಿಗೆ ನಿರಾಯುಧ, ನವಿರೇಳಿಸುವ ಮಹಾಯುದ್ಧವನ್ನು ನಡೆಯಿಸಿದನು.

02026006a ಭೀಮಸೇನಸ್ತು ತದ್ದೃಷ್ಟ್ವಾ ತಸ್ಯ ಕರ್ಮ ಪರಂತಪಃ|

02026006c ಅಧಿಸೇನಾಪತಿಂ ಚಕ್ರೇ ಸುಧರ್ಮಾಣಂ ಮಹಾಬಲಂ||

ಅವನ ಈ ಕಾರ್ಯವನ್ನು ನೋಡಿದ ಪರಂತಪ ಭೀಮಸೇನನು ಮಹಾಬಲ ಸುಧರ್ಮನನ್ನು ತನ್ನ ಸೇನಾಪತಿಯನ್ನಾಗಿ ನಿಯುಕ್ತಿಸಿದನು.

02026007a ತತಃ ಪ್ರಾಚೀಂ ದಿಶಂ ಭೀಮೋ ಯಯೌ ಭೀಮಪರಾಕ್ರಮಃ|

02026007c ಸೈನ್ಯೇನ ಮಹತಾ ರಾಜನ್ಕಂಪಯನ್ನಿವ ಮೇದಿನೀಂ||

ರಾಜನ್! ಅನಂತರ ಭೀಮಪರಾಕ್ರಮಿ ಭೀಮನು ತನ್ನ ಮಹಾಸೈನ್ಯದಿಂದ ಮೇದಿನಿಯನ್ನು ನಡುಗಿಸುತ್ತಾ ಪೂರ್ವದಿಕ್ಕಿನಲ್ಲಿ ಹೊರಟನು.

02026008a ಸೋಽಶ್ವಮೇಧೇಶ್ವರಂ ರಾಜನ್ರೋಚಮಾನಂ ಸಹಾನುಜಂ|

02026008c ಜಿಗಾಯ ಸಮರೇ ವೀರೋ ಬಲೇನ ಬಲಿನಾಂ ವರಃ||

ರಾಜನ್! ಆ ಬಲಿಗಳಲ್ಲಿ ಶ್ರೇಷ್ಠ ವೀರನು ಅಶ್ವಮೇಧೇಶ್ವರ ರೋಚಮಾನನನ್ನು ಅವನ ಅನುಜನೊಂದಿಗೆ ಸಮರದಲ್ಲಿ ಬಲದೊಂದಿಗೆ ಗೆದ್ದನು.

02026009a ಸ ತಂ ನಿರ್ಜಿತ್ಯ ಕೌಂತೇಯೋ ನಾತಿತೀವ್ರೇಣ ಕರ್ಮಣಾ|

02026009c ಪೂರ್ವದೇಶಂ ಮಹಾವೀರ್ಯೋ ವಿಜಿಗ್ಯೇ ಕುರುನಂದನಃ||

ಅಷ್ಟೊಂದು ತೀವ್ರವಾಗಿಲ್ಲದ ಯುದ್ಧದಲ್ಲಿಯೇ ಅವನನ್ನು ಸೋಲಿಸಿ ಮಹಾವೀರ ಕುರುನಂದನ ಕೌಂತೇಯನು ಪೂರ್ವದೇಶವನ್ನು ಗೆದ್ದನು.

02026010a ತತೋ ದಕ್ಷಿಣಮಾಗಮ್ಯ ಪುಲಿಂದನಗರಂ ಮಹತ್|

02026010c ಸುಕುಮಾರಂ ವಶೇ ಚಕ್ರೇ ಸುಮಿತ್ರಂ ಚ ನರಾಧಿಪಂ||

ಅನಂತರ ದಕ್ಷಿಣದಲ್ಲಿ ಮಹಾ ಪುನಿಂದ ನಗರಕ್ಕೆ ಸೇರಿ ಸುಕುಮಾರ ಮತ್ತು ನರಾಧಿಪ ಸುಮಿತ್ರನನ್ನು ಗೆದ್ದನು.

02026011a ತತಸ್ತು ಧರ್ಮರಾಜಸ್ಯ ಶಾಸನಾದ್ಭರತರ್ಷಭಃ|

02026011c ಶಿಶುಪಾಲಂ ಮಹಾವೀರ್ಯಮಭ್ಯಯಾಜ್ಜನಮೇಜಯ||

ಜನಮೇಜಯ! ನಂತರ ಧರ್ಮರಾಜನ ಶಾಸನದಂತೆ ಭರತರ್ಷಭನು ಮಹಾವೀರ ಶಿಶುಪಾಲನಲ್ಲಿಗೆ ಹೋದನು.

02026012a ಚೇದಿರಾಜೋಽಪಿ ತಚ್ಛೃತ್ವಾ ಪಾಂಡವಸ್ಯ ಚಿಕೀರ್ಷಿತಂ|

02026012c ಉಪನಿಷ್ಕ್ರಮ್ಯ ನಗರಾತ್ಪ್ರತ್ಯಗೃಹ್ಣಾತ್ಪರಂತಪಃ||

ಪಾಂಡವನ ಇಚ್ಛೆಯನ್ನು ಕೇಳಿದ ಚೇದಿರಾಜನು ನಗರದಿಂದ ಹೊರಬಂದು ಆ ಪರಂತಪನನ್ನು ಬರಮಾಡಿಕೊಂಡನು.

02026013a ತೌ ಸಮೇತ್ಯ ಮಹಾರಾಜ ಕುರುಚೇದಿವೃಷೌ ತದಾ|

02026013c ಉಭಯೋರಾತ್ಮಕುಲಯೋಃ ಕೌಶಲ್ಯಂ ಪರ್ಯಪೃಚ್ಛತಾಂ||

ಮಹಾರಾಜ! ಕುರು ಮತ್ತು ಚೇದಿ ವೃಷಭರೀರ್ವರು ಭೇಟಿಯಾದಾಗ ತಮ್ಮ ಎರಡೂ ಕುಲಗಳ ಕುಶಲವನ್ನು ಪರಸ್ಪರರರಲ್ಲಿ ಕೇಳಿದರು.

02026014a ತತೋ ನಿವೇದ್ಯ ತದ್ರಾಷ್ಟ್ರಂ ಚೇದಿರಾಜೋ ವಿಶಾಂ ಪತೇ|

02026014c ಉವಾಚ ಭೀಮಂ ಪ್ರಹಸನ್ಕಿಮಿದಂ ಕುರುಷೇಽನಘ||

ವಿಶಾಂಪತೇ! ಚೇದಿರಾಜನು ತನ್ನ ರಾಜ್ಯವನ್ನು ಅವನಿಗೆ ಸಮರ್ಪಿಸಿ ನಗುತ್ತಾ ಭೀಮನಿಗೆ ಕೇಳಿದನು: “ಅನಘ! ಇದೇನು ನೀನು ಮಾಡುತ್ತಿರುವೆ?”

02026015a ತಸ್ಯ ಭೀಮಸ್ತದಾಚಖ್ಯೌ ಧರ್ಮರಾಜಚಿಕೀರ್ಷಿತಂ|

02026015c ಸ ಚ ತತ್ಪ್ರತಿಗೃಹ್ಯೈವ ತಥಾ ಚಕ್ರೇ ನರಾಧಿಪಃ||

ಆಗ ಭೀಮನು ಅವನಿಗೆ ಧರ್ಮರಾಜನ ಬಯಕೆಯ ಕುರಿತು ಹೇಳಿದನು. ಅದನ್ನು ಒಪ್ಪಿಕೊಂಡ ನರಾಧಿಪನು ಅದಕ್ಕೆ ತಕ್ಕುದಾಗಿ ನಡೆದುಕೊಂಡನು.

02026016a ತತೋ ಭೀಮಸ್ತತ್ರ ರಾಜನ್ನುಷಿತ್ವಾ ತ್ರಿದಶಾಃ ಕ್ಷಪಾಃ|

02026016c ಸತ್ಕೃತಃ ಶಿಶುಪಾಲೇನ ಯಯೌ ಸಬಲವಾಹನಃ||

ರಾಜನ್! ಭೀಮನು ಅಲ್ಲಿ ಶಿಶುಪಾಲನಿಂದ ಸತ್ಕೃತನಾಗಿ ಸೇನೆ ವಾಹನಗಳೊಂದಿಗೆ ಮೂವತ್ತು ರಾತ್ರಿಗಳನ್ನು ಕಳೆದನು[1].”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಭೀಮದಿಗ್ವಿಜಯೇ ಷಡ್‌ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಭೀಮದಿಗ್ವಿಜಯ ಎನ್ನುವ ಇಪ್ಪತ್ತಾರನೆಯ ಅಧ್ಯಾಯವು.

Image result for indian birds drawing

[1]ಜರಾಸಂಧನ ಅಳಿಯ ಮತ್ತು ಮಿತ್ರ ಚೇದಿರಾಜ ಶಿಶುಪಾಲನು ಜರಾಸಂಧನನ್ನು ವಧಿಸಿದ ಭೀಮಸೇನನೊಂದಿಗೆ ಇಷ್ಟೊಂದು ಪ್ರೀತಿಪೂರ್ವಕವಾಗಿ ನಡೆದುಕೊಂಡಿದ್ದುದು ಆಶ್ಚರ್ಯವೇ ಸರಿ!

Comments are closed.