ಸಭಾಪರ್ವ: ಸಭಾಕ್ರಿಯಾ ಪರ್ವ
೨
ಇಂದ್ರಪ್ರಸ್ಥದಿಂದ ದ್ವಾರಕೆಗೆ ಕೃಷ್ಣನು ಪ್ರಯಾಣಿಸಿದುದು (೧-೨೩).
02002001 ವೈಶಂಪಾಯನ ಉವಾಚ|
02002001a ಉಷಿತ್ವಾ ಖಾಂಡವಪ್ರಸ್ಥೇ ಸುಖವಾಸಂ ಜನಾರ್ದನಃ|
02002001c ಪಾರ್ಥೈಃ ಪ್ರೀತಿಸಮಾಯುಕ್ತೈಃ ಪೂಜನಾರ್ಹೋಽಭಿಪೂಜಿತಃ||
02002002a ಗಮನಾಯ ಮತಿಂ ಚಕ್ರೇ ಪಿತುರ್ದರ್ಶನಲಾಲಸಃ|
02002002c ಧರ್ಮರಾಜಮಥಾಮಂತ್ರ್ಯ ಪೃಥಾಂ ಚ ಪೃಥುಲೋಚನಃ||
02002003a ವವಂದೇ ಚರಣೌ ಮೂರ್ಧ್ನಾ ಜಗದ್ವಂದ್ಯಃ ಪಿತೃಷ್ವಸುಃ|
02002003c ಸ ತಯಾ ಮೂರ್ಧ್ನ್ಯುಪಾಘ್ರಾತಃ ಪರಿಷ್ವಕ್ತಶ್ಚ ಕೇಶವಃ||
ವೈಶಂಪಾಯನನು ಹೇಳಿದನು: “ಖಾಂಡವಪ್ರಸ್ಥದಲ್ಲಿ ಸುಖವಾಗಿ ವಾಸವಾಗಿದ್ದು, ಪ್ರೀತಿಪರ ಪಾರ್ಥರಿಂದ ಪೂಜನಾರ್ಹನಾಗಿ ಪೂಜಿಸಿಕೊಂಡ ಜನಾರ್ದನನು ತಂದೆಯನ್ನು ಕಾಣುವ ಮನಸ್ಸುಳ್ಳವನಾಗಿ, ಹೊರಡಲು ಇಚ್ಛಿಸಿದನು. ವಿಶಾಲನೇತ್ರ ಜಗದ್ವಂದ್ಯನು ಧರ್ಮರಾಜ ಮತ್ತು ಪೃಥೆಗೆ ಬೀಳ್ಕೊಡುತ್ತಾ ತಂದೆಯ ಸೋದರಿಯ ಪಾದಗಳಲ್ಲಿ ತಲೆಯನ್ನಿಟ್ಟು ವಂದಿಸಿದನು. ಅವಳು ಕೇಶವನ ಶಿರವನ್ನು ಆಘ್ರಾಣಿಸಿ, ತೊಟ್ಟಿ ಹಿಡಿದಳು.
02002004a ದದರ್ಶಾನಂತರಂ ಕೃಷ್ಣೋ ಭಗಿನೀಂ ಸ್ವಾಂ ಮಹಾಯಶಾಃ|
02002004c ತಾಮುಪೇತ್ಯ ಹೃಷೀಕೇಶಃ ಪ್ರೀತ್ಯಾ ಬಾಷ್ಪಸಮನ್ವಿತಃ||
ನಂತರ ಮಹಾಯಶ ಕೃಷ್ಣನು ತನ್ನ ತಂಗಿಯ ಬಳಿ ಹೋದನು. ಅವಳನ್ನು ನೋಡಿದ ಹೃಷೀಕೇಶನು ಪ್ರೀತಿಯಿಂದ ಕಣ್ಣೀರು ತುಂಬಿದವನಾದನು.
02002005a ಅರ್ಥ್ಯಂ ತಥ್ಯಂ ಹಿತಂ ವಾಕ್ಯಂ ಲಘು ಯುಕ್ತಮನುತ್ತಮಂ|
02002005c ಉವಾಚ ಭಗವಾನ್ಭದ್ರಾಂ ಸುಭದ್ರಾಂ ಭದ್ರಭಾಷಿಣೀಂ||
02002006a ತಯಾ ಸ್ವಜನಗಾಮೀನಿ ಶ್ರಾವಿತೋ ವಚನಾನಿ ಸಃ|
02002006c ಸಂಪೂಜಿತಶ್ಚಾಪ್ಯಸಕೃಚ್ಶಿರಸಾ ಚಾಭಿವಾದಿತಃ||
ಭಗವಂತನು ಭದ್ರೆ ಭದ್ರಭಾಷಿಣಿ ಸುಭದ್ರೆಗೆ ಅರ್ಥಪೂರ್ಣ, ತತ್ವಪೂರ್ಣ, ಸಂಕ್ಷಿಪ್ತ ಹಿತ ಮಾತುಗಳನ್ನಾಡಲು ಅವಳು ಸ್ವ-ಜನರಿಗೆ ಸಂದೇಶಗಳನ್ನು ಕಳುಹಿಸಿಸುತ್ತಾ ಅವನಿಗೆ ಪುನಃ ಪುನಃ ಶಿರಸಾ ವಂದಿಸಿದಳು.
02002007a ತಾಮನುಜ್ಞಾಪ್ಯ ವಾರ್ಷ್ಣೇಯಃ ಪ್ರತಿನಂದ್ಯ ಚ ಭಾಮಿನೀಂ|
02002007c ದದರ್ಶಾನಂತರಂ ಕೃಷ್ಣಾಂ ಧೌಮ್ಯಂ ಚಾಪಿ ಜನಾರ್ದನಃ||
ಭಾಮಿನಿ ಸುಭದ್ರೆಯನ್ನು ಬೀಳ್ಕೊಂಡ ನಂತರ ಜನಾರ್ದನನು ಕೃಷ್ಣೆ ಮತ್ತು ಧೌಮ್ಯರನ್ನು ನೋಡಲು ಹೋದನು.
02002008a ವವಂದೇ ಚ ಯಥಾನ್ಯಾಯಂ ಧೌಮ್ಯಂ ಪುರುಷಸತ್ತಮಃ|
02002008c ದ್ರೌಪದೀಂ ಸಾಂತ್ವಯಿತ್ವಾ ಚ ಆಮಂತ್ರ್ಯ ಚ ಜನಾರ್ದನಃ||
ಪುರುಷಸತ್ತಮ ಜನಾರ್ದನನು ಧೌಮ್ಯನಿಗೆ ಯಥಾವತ್ತಾಗಿ ವಂದಿಸಿದನು. ಮತ್ತು ದ್ರೌಪದಿಗೆ ಸಾಂತ್ವನವನ್ನು ನೀಡಿ, ಅವಳಿಂದ ಬೀಳ್ಕೊಂಡನು.
02002009a ಭ್ರಾತೄನಭ್ಯಗಮದ್ಧೀಮಾನ್ಪಾರ್ಥೇನ ಸಹಿತೋ ಬಲೀ|
02002009c ಭ್ರಾತೃಭಿಃ ಪಂಚಭಿಃ ಕೃಷ್ಣೋ ವೃತಃ ಶಕ್ರ ಇವಾಮರೈಃ||
ನಂತರ ಆ ಧೀಮಂತ ಬಲಶಾಲಿಯು, ಪಾರ್ಥನ ಸಹಿತ ಸಹೋದರರ ಬಳಿ ಬಂದನು; ಐವರು ಸಹೋದರರಿಂದ ಸುತ್ತುವರಿಯಲ್ಪಟ್ಟ ಕೃಷ್ಣನು ಅಮರರಿಂದ ಸುತ್ತುವರಿಯಲ್ಪಟ್ಟ ಶಕ್ರನಂತೆ ಕಂಡನು[1].
02002010a ಅರ್ಚಯಾಮಾಸ ದೇವಾಂಶ್ಚ ದ್ವಿಜಾಂಶ್ಚ ಯದುಪುಂಗವಃ|
02002010c ಮಾಲ್ಯಜಪ್ಯನಮಸ್ಕಾರೈರ್ಗಂಧೈರುಚ್ಚಾವಚೈರಪಿ|
ಯದುಪುಂಗವನು ಮಾಲೆ, ಜಪ, ನಮಸ್ಕಾರ, ಮತ್ತು ವಿವಿಧ ಗಂಧಗಳಿಂದ ದೇವ-ದ್ವಿಜರನ್ನು ಪೂಜಿಸಿದನು.
02002010e ಸ ಕೃತ್ವಾ ಸರ್ವಕಾರ್ಯಾಣಿ ಪ್ರತಸ್ಥೇ ತಸ್ಥುಷಾಂ ವರಃ[2]||
02002011a ಸ್ವಸ್ತಿ ವಾಚ್ಯಾರ್ಹತೋ ವಿಪ್ರಾನ್ದಧಿಪಾತ್ರಫಲಾಕ್ಷತೈಃ|
02002011c ವಸು ಪ್ರದಾಯ ಚ ತತಃ ಪ್ರದಕ್ಷಿಣಮವರ್ತತ||
ಈ ಎಲ್ಲ ಕಾರ್ಯಗಳನ್ನೂ ಮುಗಿಸಿದ ನಂತರ ಶ್ರೇಷ್ಠನು ಹೊರಟು, ಸ್ವಸ್ತಿ ವಾಚನ ಮಾಡುತ್ತಿದ್ದ ವಿಪ್ರರೆಲ್ಲರಿಗೂ ಮೊಸರಿನ ಪಾತ್ರೆ, ಫಲಾಕ್ಷತೆ, ಮತ್ತು ಅರಳನ್ನು ನೀಡಿ, ಪ್ರದಕ್ಷಿಣೆ ಮಾಡಿದನು.
02002012a ಕಾಂಚನಂ ರಥಮಾಸ್ಥಾಯ ತಾರ್ಕ್ಷ್ಯಕೇತನಮಾಶುಗಂ|
02002012c ಗದಾಚಕ್ರಾಸಿಶಾಂರ್ಗ್ರಾದ್ಯೈರಾಯುಧೈಶ್ಚ ಸಮನ್ವಿತಂ||
ಗರುಡನ ಚಿಹ್ನೆಯನ್ನೊಳಗೊಂಡ ಧ್ವಜವನ್ನು ಹೊತ್ತ ಕಾಂಚನ ರಥವನ್ನು ಏರಿ, ಗದಾ, ಚಕ್ರ, ಖಡ್ಗ ಮತ್ತು ಇತರ ಆಯುಧಗಳನ್ನು ಧರಿಸಿದನು.
02002013a ತಿಥಾವಥ ಚ ನಕ್ಷತ್ರೇ ಮುಹೂರ್ತೇ ಚ ಗುಣಾನ್ವಿತೇ|
02002013c ಪ್ರಯಯೌ ಪುಂಡರೀಕಾಕ್ಷಃ ಸೈನ್ಯಸುಗ್ರೀವವಾಹನಃ||
ಉತ್ತಮ ತಿಥಿ, ನಕ್ಷತ್ರ ಮತ್ತು ಮುಹೂರ್ತದಲ್ಲಿ ಪುಂಡರೀಕಾಕ್ಷನು ಸೈನ್ಯ-ಸುಗ್ರೀವ[3] ವಾಹನನಾಗಿ ಹೊರಟನು.
02002014a ಅನ್ವಾರುರೋಹ ಚಾಪ್ಯೇನಂ ಪ್ರೇಮ್ಣಾ ರಾಜಾ ಯುಧಿಷ್ಠಿರಃ|
02002014c ಅಪಾಸ್ಯ ಚಾಸ್ಯ ಯಂತಾರಂ ದಾರುಕಂ ಯಂತೃಸತ್ತಮಂ|
02002014e ಅಭೀಷೂನ್ಸಂಪ್ರಜಗ್ರಾಹ ಸ್ವಯಂ ಕುರುಪತಿಸ್ತದಾ||
ಪ್ರೇಮಭಾವದಿಂದ ರಾಜ ಯುಧಿಷ್ಠಿರನು ಅವನನ್ನು ಅನುಸರಿಸಿ ರಥವನ್ನೇರಿ, ಉತ್ತಮ ಸಾರಥಿ ದಾರುಕನನ್ನು ಸರಿಸಿ, ಸ್ವಯಂ ಕುರುಪತಿಯೇ ಕಡಿವಾಣವನ್ನು ಹಿಡಿದನು.
02002015a ಉಪಾರುಹ್ಯಾರ್ಜುನಶ್ಚಾಪಿ ಚಾಮರವ್ಯಜನಂ ಸಿತಂ|
02002015c ರುಕ್ಮದಂಡಂ ಬೃಹನ್ಮೂರ್ಧ್ನಿ ದುಧಾವಾಭಿಪ್ರದಕ್ಷಿಣಂ||
ಅರ್ಜುನನೂ ಸಹ ರಥವನ್ನೇರಿ, ಚಿನ್ನದ ದಂಡದ ಚಾಮರವನ್ನು ಅವನ ಶಿರದ ಸುತ್ತ ಸೂರ್ಯ ಪ್ರದಕ್ಷಿಣೆಯಂತೆ ಬೀಸಿದನು.
02002016a ತಥೈವ ಭೀಮಸೇನೋಽಪಿ ಯಮಾಭ್ಯಾಂ ಸಹಿತೋ ವಶೀ|
02002016c ಪೃಷ್ಠತೋಽನುಯಯೌ ಕೃಷ್ಣಂ ಋತ್ವಿಕ್ಪೌರಜನೈರ್ವೃತಃ[4]||
ವಿಜಯೀ ಭೀಮಸೇನನೂ ಕೂಡ ಅವಳಿಗಳ ಸಹಿತ ಋತ್ವಿಕರು ಮತ್ತು ಪೌರಜನರಿಂದ ಸುತ್ತುವರಿಯಲ್ಪಟ್ಟ ಕೃಷ್ಣನನ್ನು ಅನುಸರಿಸಿದನು.
02002017a ಸ ತಥಾ ಭ್ರಾತೃಭಿಃ ಸಾರ್ಧಂ ಕೇಶವಃ ಪರವೀರಹಾ|
02002017c ಅನುಗಮ್ಯಮಾನಃ ಶುಶುಭೇ ಶಿಷ್ಯೈರಿವ ಗುರುಃ ಪ್ರಿಯೈಃ||
ಸಹೋದರರಿಂದ ಅನುಸರಿಸಲ್ಪಟ್ಟ ಪರವೀರವಿನಾಶಿ ಕೇಶವನು ಪ್ರಿಯ ಶಿಷ್ಯರ ಮಧ್ಯದಲ್ಲಿರುವ ಗುರುವಿನಂತೆ ಶುಶೋಭಿಸಿದನು.
02002018a ಪಾರ್ಥಮಾಮಂತ್ರ್ಯ ಗೋವಿಂದಃ ಪರಿಷ್ವಜ್ಯ ಚ ಪೀಡಿತಂ|
02002018c ಯುಧಿಷ್ಠಿರಂ ಪೂಜಯಿತ್ವಾ ಭೀಮಸೇನಂ ಯಮೌ ತಥಾ||
ಗೋವಿಂದನು ಪಾರ್ಥನನ್ನು ಬಿಗಿದಪ್ಪಿ, ಅತಿ ದುಃಖದಿಂದ ಬೀಳ್ಕೊಟ್ಟನು ಮತ್ತು ಯುಧಿಷ್ಠಿರ-ಭೀಮಸೇನರಿಗೆ ವಂದಿಸಿದನು[5].
02002019a ಪರಿಷ್ವಕ್ತೋ ಭೃಶಂ ತಾಭ್ಯಾಂ ಯಮಾಭ್ಯಾಮಭಿವಾದಿತಃ|
02002019c ತತಸ್ತೈಃ ಸಂವಿದಂ ಕೃತ್ವಾ ಯಥಾವನ್ಮಧುಸೂದನಃ||
02002020a ನಿವರ್ತಯಿತ್ವಾ ಚ ತದಾ ಪಾಂಡವಾನ್ಸಪದಾನುಗಾನ್|
02002020c ಸ್ವಾಂ ಪುರೀಂ ಪ್ರಯಯೌ ಕೃಷ್ಣಃ ಪುರಂದರ ಇವಾಪರಃ||
ಯಮಳರು ಅವನನ್ನು ಬಾಹುಗಳಿಂದ ಬಿಗಿದಪ್ಪಿ ಬೀಳ್ಕೊಟ್ಟರು. ಹೀಗೆ ಪಾಂಡವರನ್ನು ಬೀಳ್ಕೊಟ್ಟು, ಹಿಂಬಾಲಿಸಿ ಬಂದಿದ್ದವರೆಲ್ಲರಲ್ಲೂ ಮರಳಿ ಕಳುಹಿಸಿ, ಕೃಷ್ಣನು ಇನ್ನೊಬ್ಬ ಪುರಂದರನಂತೆ ತನ್ನ ನಗರಕ್ಕೆ ಪ್ರಯಾಣಿಸಿದನು[6].
02002021a ಲೋಚನೈರನುಜಗ್ಮುಸ್ತೇ ತಮಾ ದೃಷ್ಟಿಪಥಾತ್ತದಾ|
02002021c ಮನೋಭಿರನುಜಗ್ಮುಸ್ತೇ ಕೃಷ್ಣಂ ಪ್ರೀತಿಸಮನ್ವಯಾತ್||
ಕಣ್ಮರೆಯಾಗುವವರೆಗೂ ಕೃಷ್ಣನನ್ನು ಕಣ್ಣಿನಲ್ಲಿಯೇ ಹಿಂಬಾಲಿಸಿ, ನಂತರ ಆ ಪ್ರೀತಿಸಮನ್ವಿತನನ್ನು ತಮ್ಮ ತಮ್ಮ ಮನಸ್ಸಿನಲ್ಲಿಯೇ ಹಿಂಬಾಲಿಸಿದರು.
02002022a ಅತೃಪ್ತಮನಸಾಮೇವ ತೇಷಾಂ ಕೇಶವದರ್ಶನೇ|
02002022c ಕ್ಷಿಪ್ರಮಂತರ್ದಧೇ ಶೌರಿಶ್ಚಕ್ಷುಷಾಂ ಪ್ರಿಯದರ್ಶನಃ||
ಅವರೆಲ್ಲರು ಕೇಶವದರ್ಶನಕ್ಕಾಗಿ ಅತೃಪ್ತ ಮನಸ್ಸಿನವರಾಗಿದ್ದಂತೆ, ಪ್ರಿಯದರ್ಶನ ಶೌರಿಯು ಶೀಘ್ರದಲ್ಲಿಯೇ ಅವರ ಕಣ್ಣಿಂದ ಅಂತರ್ಧಾನನಾದನು.
02002023a ಅಕಾಮಾ ಇವ ಪಾರ್ಥಾಸ್ತೇ ಗೋವಿಂದಗತಮಾನಸಾಃ|
02002023c ನಿವೃತ್ಯೋಪಯಹ್ಯುಃ ಸರ್ವೇ ಸ್ವಪುರಂ ಪುರುಷರ್ಷಭಾಃ|
02002023e ಸ್ಯಂದನೇನಾಥ ಕೃಷ್ಣೋಽಪಿ ಸಮಯೇ ದ್ವಾರಕಾಮಗಾತ್||
ಗೋವಿಂದನ ಜೊತೆ ತಮ್ಮ ಮನಸ್ಸುಗಳನ್ನೂ ಕಳುಹಿಸಿಕೊಟ್ಟ ಪುರುಷರ್ಷಭ ಪಾರ್ಥರೆಲ್ಲರೂ ತಮ್ಮ ನಗರಕ್ಕೆ ಮರಳಿದರು ಮತ್ತು ಸಮಯದಲ್ಲಿ ಕೃಷ್ಣನು ತನ್ನ ರಥದಲ್ಲಿ ದ್ವಾರಕೆಯನ್ನು ತಲುಪಿದನು[7].”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಸಭಾಕ್ರಿಯಾಪರ್ವಣಿ ಭಗವದ್ಯಾನೇ ದ್ವಿತೀಯೋಽಧ್ಯಾಯಃ||
ಇದು ಶ್ರೀ ಮಹಾಭಾರತದ ಸಭಾಪರ್ವದಲ್ಲಿ ಸಭಾಕ್ರಿಯಾಪರ್ವದಲ್ಲಿ ಭಗವಂತನ ಪ್ರಯಾಣ ಎನ್ನುವ ಎರಡನೆಯ ಅಧ್ಯಾಯವು.
[1]ಗೋರಖಪುರ ಸಂಪುಟದಲ್ಲಿ ಇದರ ನಂತರದ ಶ್ಲೋಕ ಈ ರೀತಿಯಿದೆ: ಯಾತ್ರಾಕಾಲಸ್ಯ ಯೋಗ್ಯಾನಿ ಕರ್ಮಾಣಿ ಗರುಡಧ್ವಜಃ| ಕರ್ತುಕಾಮಃ ಶುಚಿರ್ಭೂತ್ವಾ ಸ್ನಾತವಾನ್ ಸಮಲಂಕೃತಃ|| ಅರ್ಥಾತ್ - ಗರುಡಧ್ವಜನು ಯಾತ್ರಾಕಾಲಕ್ಕೆ ಯೋಗ್ಯವಾದ ಕರ್ಮಗಳನ್ನು ಮಾಡಿ ಶುಚಿಯಾಗಿ,ಸ್ನಾನಮಾಡಿ, ಅಲಂಕೃತಗೊಂಡನು.
[2]ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ಉತ್ತರಾರ್ಧವು ಈ ರೀತಿಯಿದೆ: ಉಪೇತ್ಯ ಸ ಯದುಶ್ರೇಷ್ಠೋ ಬಾಹ್ಯಕಕ್ಷಾದ್ ವಿನಿರ್ಗತಃ|| ಅಂದರೆ ಆ ಯದುಶ್ರೇಷ್ಠನು ಒಳಗಿನಿಂದ ಹೊರಟು ಹೊರಕೋಣೆಗೆ ಬಂದನು.
[3]ಇವೆರಡೂ ಶ್ರೀಕೃಷ್ಣನ ಕುದುರೆಯ ಹೆಸರುಗಳು. ಗೋರಖಪುರ ಸಂಪುಟದಲ್ಲಿ ಶೈಬ್ಯಸುಗ್ರೀವವಾಹನಃ ಎಂದಿದೆ.
[4]ದಕ್ಷಿಣಾತ್ಯ ಕುಂಭಕೋಣ ಸಂಪುಟದಲ್ಲಿ ಈ ಎರಡು ಶ್ಲೋಕಗಳು ಅಧಿಕವಾಗಿವೆ: ಛತ್ರಂ ಶತಶಲಾಕಂ ಚ ದಿವ್ಯಮಾಲೋಪಶೋಭಿತಂ| ವೈಡೂರ್ಯಮಣಿದಂಡಂ ಚ ಚಾಮೀಕರವಿಭೂಷಿತಂ|| ದಧಾರ ತರಸಾ ಭೀಮಶ್ಛತ್ರಂ ತತ್ ಶಾಂಗೃಧನ್ವನೇ| ಉಪಾರುಹ್ಯ ರಥಂ ಶೀಘ್ರಂ ಚಾಮರವ್ಯಜನೇ ಸಿತೇ|| ನಕುಲಃ ಸಹದೇವಶ್ಚ ಧೂಯಮಾನೌ ಜನಾರ್ದನಂ||
[5]ಯುಧಿಷ್ಠಿರ-ಭೀಮಸೇನರು ಶ್ರೀಕೃಷ್ಣನಿಗೆ ಹಿರಿಯರು.
[6]ಗೋರಖಪುರ ಸಂಪುಟದಲ್ಲಿ ಇದರ ನಂತರ ಮೂರು ಶ್ಲೋಕಗಳಿವೆ: ಯೋಜನಾರ್ಧಮಥೋ ಗತ್ವಾ ಕೃಷ್ಣಃ ಪರಪುರಂಜಯಃ|| ಯುಧಿಷ್ಠಿರಂ ಸಮಾಮಂತ್ರ್ಯ ನಿವರ್ತಸ್ವೇತಿ ಭಾರತ|| ತತೋಽಭಿವಾದ್ಯ ಗೋವಿಂದಃ ಪಾದೌ ಜಗ್ರಾಹ ಧರ್ಮವಿತ್| ಉತ್ಥಾಪ್ಯ ಧರ್ಮರಾಜಸ್ತು ಮೂರ್ಧ್ನ್ಸ್ಯುಪಾಘ್ರಾಯ ಕೇಶವಂ|| ಪಾಂಡವೋ ಯಾದವಶ್ರೇಷ್ಠಂ ಕೃಷ್ಣಂ ಕಮಲಲೋಚನಂ| ಗಮ್ಯತಾಮಿತ್ಯನುಜ್ಞಾಪ್ಯ ಧರ್ಮರಾಜೋ ಯುಧಿಷ್ಠಿರಃ||
[7]ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ನಂತರ ೮ ಶ್ಲೋಕಗಳಿವೆ: ಸಾತ್ವತೇನ ಚ ವೀರೇಣ ಪೃಷ್ಠತೋ ಯಾಯಿನಾ ತದಾ| ದಾರುಕೇಣ ಚ ಸೂತೇನ ಸಹಿತೋ ದೇವಕೀಸುತಃ|| ಸ ಗತೋ ದ್ವಾರಕಾಂ ವಿಷ್ಣುರ್ಗರೂತ್ಮಾನಿವ ವೇಗವಾನ್| ನಿವೃತ್ಯ ಧರ್ಮರಾಜಸ್ತು ಸಹ ಭ್ರಾತೃಭಿರಚ್ಯುತಃ| ಸುಹೃತ್ಪರಿವೃತೋ ರಾಜಾ ಪ್ರವಿವೇಶ ಪುರೋತ್ತಮಂ|| ವಿಸೃಜ್ಯ ಸುಹೃದಃ ಸರ್ವಾನ್ ಭ್ರಾತೄನ್ ಪುತ್ರಾಂಶ್ಚ ಧರ್ಮರಾಟ್| ಮುಮೋದ ಪುರುಷವ್ಯಾಘ್ರೋ ದ್ರೌಪದ್ಯಾ ಸಹಿತೋ ನೃಪ|| ಕೇಶವೋಽಪಿ ಮುದಾ ಯುಕ್ತಃ ಪ್ರವಿವೇಶ ಪುರೋತ್ತಮಂ| ಪೂಜ್ಯಮಾನೋ ಯದುಶ್ರೇಷ್ಠೈರುಗ್ರಸೇನಮುಖೈಸ್ತಥಾ|| ಆಹುಕಂ ಪಿತರಂ ವೃದ್ಧಂ ಮಾತರಂ ಚ ಯಶಸ್ವಿನೀಂ| ಅಭಿವಾದ್ಯ ಬಲಂ ಚೈವ ಸ್ಥಿತಃ ಕಮಲಲೋಚನಃ|| ಪ್ರದ್ಯುಮ್ನಸಾಂಬನಿಶಠಾಂಶ್ಚಾರುದೇಷ್ಣಂ ಗದಂ ತಥಾ| ಅನಿರುದ್ಧಂ ಚ ಭಾನುಂ ಚ ಪರಿಷ್ವಜ್ಯ ಜನಾರ್ದನಃ|| ಸ ವೃದ್ಧೈರಭ್ಯನುಜ್ಞಾತೋ ರುಕ್ಮಿಣ್ಯಾ ಭವನಂ ಯಯೌ| ಮಯೋಽಪಿ ಸ ಮಹಾಭಾಗಃ ಸರ್ವರತ್ನವಿಭೂಷಿತಾಂ| ವಿಧಿವತ್ ಕಲ್ಪಯಾಮಾಸ ಸಭಾಂ ಧರ್ಮಸುತಾಯ ವೈ||