ಶಾಂತಿ ಪರ್ವ: ರಾಜಧರ್ಮ ಪರ್ವ

೬೫

12065001 ಇಂದ್ರ ಉವಾಚ

12065001a ಏವಂವೀರ್ಯಃ ಸರ್ವಧರ್ಮೋಪಪನ್ನಃ| ಕ್ಷಾತ್ರಃ ಶ್ರೇಷ್ಠಃ ಸರ್ವಧರ್ಮೇಷು ಧರ್ಮಃ|

12065001c ಪಾಲ್ಯೋ ಯುಷ್ಮಾಭಿರ್ಲೋಕಸಿಂಹೈರುದಾರೈರ್| ವಿಪರ್ಯಯೇ ಸ್ಯಾದಭಾವಃ ಪ್ರಜಾನಾಮ್||

ಇಂದ್ರನು ಹೇಳಿದನು: “ಹೀಗೆ ಕ್ಷತ್ರಧರ್ಮವು ವೀರ್ಯಯುಕ್ತವೂ, ಸರ್ವಧರ್ಮಸಂಪನ್ನವೂ, ಶ್ರೇಷ್ಠವೂ ಆಗಿದೆ. ಸರ್ವಧರ್ಮಗಳ ಧರ್ಮವಾಗಿದೆ. ಆ ಧರ್ಮವನ್ನು ನಿನ್ನಂತಹ ಲೋಕಸಿಂಹ ಉದಾರಿಗಳು ಪಾಲಿಸಬೇಕು. ವಿಪರ್ಯಾಸವಾದರೆ ಪ್ರಜೆಗಳ ನಾಶವಾಗುತ್ತದೆ.

12065002a ಭುವಃ ಸಂಸ್ಕಾರಂ[1] ರಾಜಸಂಸ್ಕಾರಯೋಗಮ್| ಅಭೈಕ್ಷಚರ್ಯಾಂ ಪಾಲನಂ ಚ ಪ್ರಜಾನಾಮ್|

12065002c ವಿದ್ಯಾದ್ರಾಜಾ ಸರ್ವಭೂತಾನುಕಂಪಾಂ| ದೇಹತ್ಯಾಗಂ ಚಾಹವೇ ಧರ್ಮಮಗ್ರ್ಯಮ್||

ಭುವ ಸಂಸ್ಕಾರ, ರಾಜಸಂಸ್ಕಾರಯೋಗ, ಭಿಕ್ಷಾಟನೆ ಮಾಡದಿರುವುದು, ಪ್ರಜೆಗಳ ಪರಿಪಾಲನೆ, ವಿಧ್ಯೆ, ಸರ್ವಭೂತಗಳ ಮೇಲೆ ಅನುಕಂಪ, ದೇಹತ್ಯಾಗ ಇವೇ ರಾಜನ ಮೊದಲ ಧರ್ಮಗಳು.

12065003a ತ್ಯಾಗಂ ಶ್ರೇಷ್ಠಂ ಮುನಯೋ ವೈ ವದಂತಿ| ಸರ್ವಶ್ರೇಷ್ಠೋ ಯಃ ಶರೀರಂ ತ್ಯಜೇತ|

12065003c ನಿತ್ಯಂ ತ್ಯಕ್ತಂ ರಾಜಧರ್ಮೇಷು ಸರ್ವಂ| ಪ್ರತ್ಯಕ್ಷಂ ತೇ ಭೂಮಿಪಾಲಾಃ ಸದೈತೇ[2]||

ತ್ಯಾಗವೇ ಶ್ರೇಷ್ಠವೆಂದು ಮುನಿಗಳು ಹೇಳುತ್ತಾರೆ. ಆದರೆ ಶರೀರವನ್ನು ತ್ಯಜಿಸವುದು ಎಲ್ಲಕ್ಕಿಂತಲೂ ಶ್ರೇಷ್ಠವಾದುದು. ರಾಜಧರ್ಮದಲ್ಲಿರುವ ಭೂಮಿಪಾಲರು ನಿತ್ಯವೂ ಸರ್ವವನ್ನೂ ತ್ಯಜಿಸುತ್ತಾರೆ ಎನ್ನುವುದನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ.

12065004a ಬಹುಶ್ರುತ್ಯಾ ಗುರುಶುಶ್ರೂಷಯಾ ವಾ| ಪರಸ್ಯ ವಾ ಸಂಹನನಾದ್ವದಂತಿ[3]|

12065004c ನಿತ್ಯಂ ಧರ್ಮಂ ಕ್ಷತ್ರಿಯೋ ಬ್ರಹ್ಮಚಾರೀ| ಚರೇದೇಕೋ ಹ್ಯಾಶ್ರಮಂ ಧರ್ಮಕಾಮಃ||

ಗುರುಶುಶ್ರೂಷೆ ಅಥವಾ ಅಧಿಕ ಅಧ್ಯಯನದಿಂದ ಅಥವಾ ಶತ್ರುಗಳ ಸಂಹಾರಗಳ ಮೂಲಕ ಕ್ಷತ್ರಿಯನು ಧರ್ಮಕಾಮನಾಗಿ ಬ್ರಹ್ಮಚರ್ಯಾಶ್ರಮವನ್ನು ಒಬ್ಬಂಟಿಗನಾಗಿ ಪಾಲಿಸಬೇಕು.

12065005a ಸಾಮಾನ್ಯಾರ್ಥೇ ವ್ಯವಹಾರೇ ಪ್ರವೃತ್ತೇ| ಪ್ರಿಯಾಪ್ರಿಯೇ ವರ್ಜಯನ್ನೇವ ಯತ್ನಾತ್|

12065005c ಚಾತುರ್ವರ್ಣ್ಯಸ್ಥಾಪನಾತ್ಪಾಲನಾಚ್ಚ| ತೈಸ್ತೈರ್ಯೋಗೈರ್ನಿಯಮೈರೌರಸೈಶ್ಚ||

ಜನಸಾಮಾನ್ಯರ ವ್ಯವಹಾರದಲ್ಲಿ ತೊಡಗಿದಾಗ ರಾಜನು ಪ್ರಿಯ-ಅಪ್ರಿಯರು ಎನ್ನುವುದನ್ನು ವರ್ಜಿಸಬೇಕು. ಉತ್ತಮ ನಿಯಮ-ಯೋಗಗಳ ಮೂಲಕ ಚಾತುರ್ವರ್ಣ್ಯದ ಸ್ಥಾಪನೆ-ಪಾಲನೆಗಳನ್ನು ಮಾಡುತ್ತಿರಬೇಕು.

12065006a ಸರ್ವೋದ್ಯೋಗೈರಾಶ್ರಮಂ ಧರ್ಮಮಾಹುಃ| ಕ್ಷಾತ್ರಂ ಜ್ಯೇಷ್ಠಂ ಸರ್ವಧರ್ಮೋಪಪನ್ನಮ್|

12065006c ಸ್ವಂ ಸ್ವಂ ಧರ್ಮಂ ಯೇ ನ ಚರಂತಿ ವರ್ಣಾಸ್| ತಾಂಸ್ತಾನ್ಧರ್ಮಾನಯಥಾವದ್ವದಂತಿ||

ಎಲ್ಲ ಆಶ್ರಮಗಳಿಗಿಂತ ಗೃಹಸ್ಥಾಶ್ರಮ ಧರ್ಮವು ಶ್ರೇಷ್ಟವೆಂದೂ, ಎಲ್ಲ ಧರ್ಮಗಳಿಗಿಂತ ಕ್ಷತ್ರಿಯ ಧರ್ಮವು ಶ್ರೇಷ್ಠವೆಂದೂ ಹೇಳುತ್ತಾರ. ವರ್ಣಗಳು ತಮ್ಮ ತಮ್ಮ ಧರ್ಮವನ್ನನುಸರಿಸಲು ಕ್ಷತ್ರಧರ್ಮವೇ ಪ್ರೇರೇಪಿಸುತ್ತದೆ ಎಂದು ಹೇಳುತ್ತಾರೆ.

12065007a ನಿರ್ಮರ್ಯಾದೇ ನಿತ್ಯಮರ್ಥೇ ವಿನಷ್ಟಾನ್| ಆಹುಸ್ತಾನ್ವೈ ಪಶುಭೂತಾನ್ಮನುಷ್ಯಾನ್|

12065007c ಯಥಾ ನೀತಿಂ ಗಮಯತ್ಯರ್ಥಲೋಭಾಚ್| ಚ್ರೇಯಾಂಸ್ತಸ್ಮಾದಾಶ್ರಮಃ ಕ್ಷತ್ರಧರ್ಮಃ||

ಮರ್ಯಾದೆಗಳಿಲ್ಲದೇ ನಿತ್ಯವೂ ಅರ್ಥಸಂಗ್ರಹದಲ್ಲಿಯೇ ತೊಡಗಿರುವ ಮನುಷ್ಯರನ್ನು ಪಶುಸದೃಶರು ಎಂದು ಹೇಳುತ್ತಾರೆ. ಆದರೆ ಲೋಭದಿಂದಲ್ಲದೇ ನೀತಿಯುಕ್ತವಾಗಿ ಸಂಪತ್ತನ್ನು ಪಡೆಯುವ ರೀತಿಯನ್ನು ಕ್ಷತ್ರದರ್ಮವು ಹೇಳಿಕೊಡುತ್ತದೆಯಾದುದರಿಂದ ಕ್ಷತ್ರಧರ್ಮವೇ ಎಲ್ಲ ಆಶ್ರಮಗಳಿಗಿಂತ ಶ್ರೇಷ್ಠವಾದುದು.

12065008a ತ್ರೈವಿದ್ಯಾನಾಂ ಯಾ ಗತಿರ್ಬ್ರಾಹ್ಮಣಾನಾಂ| ಯಶ್ಚೈವೋಕ್ತೋಽಥಾಶ್ರಮೋ ಬ್ರಾಹ್ಮಣಾನಾಮ್|

12065008c ಏತತ್ಕರ್ಮ ಬ್ರಾಹ್ಮಣಸ್ಯಾಹುರಗ್ರ್ಯಮ್| ಅನ್ಯತ್ಕುರ್ವನ್ಶೂದ್ರವಚ್ಚಸ್ತ್ರವಧ್ಯಃ||

ಮೂರುವೇದಗಳನ್ನು ಅಧ್ಯಯನ ಮಾಡುವ ಬ್ರಾಹ್ಮಣರಿಗೆ ಹೇಳಿರುವ ಕರ್ಮ ಮತ್ತು ಆಶ್ರಮಗಳು ಬ್ರಾಹ್ಮಣನಾದವನ ಸರ್ವಶ್ರೇಷ್ಠ ಧರ್ಮವೆಂದು ಹೇಳಲ್ಪಟ್ಟಿದೆ. ಅನ್ಯಥಾ ನಡೆದುಕೊಳ್ಳುವ ಬ್ರಾಹ್ಮಣನು ಶೂದ್ರನಂತೆ ಮತ್ತು ವಧಿಸಲು ಯೋಗ್ಯ.

12065009a ಚಾತುರಾಶ್ರಮ್ಯಧರ್ಮಾಶ್ಚ ವೇದಧರ್ಮಾಶ್ಚ ಪಾರ್ಥಿವ|

12065009c ಬ್ರಾಹ್ಮಣೇನಾನುಗಂತವ್ಯಾ ನಾನ್ಯೋ ವಿದ್ಯಾತ್ಕಥಂ ಚನ||

ಪಾರ್ಥಿವ! ನಾಲ್ಕು ಆಶ್ರಮಧರ್ಮಗಳೂ ವೇದಧರ್ಮಗಳೂ ಬ್ರಾಹ್ಮಣರಿಗೆ ಮಾತ್ರ ತಿಳಿದವುಗಳು. ಅನ್ಯರಿಗೆ ಇವು ಎಂದೂ ತಿಳಿಯುವುದಿಲ್ಲ.

12065010a ಅನ್ಯಥಾ ವರ್ತಮಾನಸ್ಯ ನ ಸಾ ವೃತ್ತಿಃ ಪ್ರಕಲ್ಪ್ಯತೇ|

12065010c ಕರ್ಮಣಾ ವ್ಯಜ್ಯತೇ ಧರ್ಮೋ ಯಥೈವ ಶ್ವಾ ತಥೈವ ಸಃ[4]||

ಅನ್ಯಥಾ ನಡೆದುಕೊಂಡರೆ ಅದು ಬ್ರಾಹ್ಮಣ ವೃತ್ತಿಯೆಂದೆನಿಸಿಕೊಳ್ಳುವುದಿಲ್ಲ.

12065011a ಯೋ ವಿಕರ್ಮಸ್ಥಿತೋ ವಿಪ್ರೋ ನ ಸ ಸನ್ಮಾನಮರ್ಹತಿ|

12065011c ಕರ್ಮಸ್ವನುಪಯುಂಜಾನಮವಿಶ್ವಾಸ್ಯಂ ಹಿ ತಂ ವಿದುಃ||

ತನ್ನ ಧರ್ಮದ ವಿರುದ್ಧ ಕರ್ಮಗಳಲ್ಲಿ ನಿರತನಾಗಿರುವ ವಿಪ್ರನು ಸನ್ಮಾನಕ್ಕೆ ಅರ್ಹನಲ್ಲ. ಸ್ವಧರ್ಮ-ಕರ್ಮಗಳನ್ನು ಅನುಸರಿಸದಿರುವವನು ವಿಶ್ವಾಸಾರ್ಹನಲ್ಲವೆಂದು ವಿದ್ವಾಂಸರು ಭಾವಿಸುತ್ತಾರೆ.

12065012a ಏತೇ ಧರ್ಮಾಃ ಸರ್ವವರ್ಣಾಶ್ಚ ವೀರೈರ್| ಉತ್ಕ್ರಷ್ಟವ್ಯಾಃ ಕ್ಷತ್ರಿಯೈರೇಷ ಧರ್ಮಃ|

12065012c ತಸ್ಮಾಜ್ಜ್ಯೇಷ್ಠಾ ರಾಜಧರ್ಮಾ ನ ಚಾನ್ಯೇ| ವೀರ್ಯಜ್ಯೇಷ್ಠಾ ವೀರಧರ್ಮಾ ಮತಾ ಮೇ||

ಸರ್ವವರ್ಣಗಳ ಧರ್ಮಗಳನ್ನು ವೀರ ಕ್ಷತ್ರಿಯರೇ ಮೇಲೆತ್ತುತ್ತಾರೆ. ಇದೇ ಕ್ಷತ್ರಿಯರ ಧರ್ಮ. ಆದುದರಿಂದ ರಾಜಧರ್ಮವು ಜ್ಯೇಷ್ಠವಾದುದು. ಬೇರೆ ಧರ್ಮಗಳಿಗೆ ಈ ಹಿರಿಮೆಯಿಲ್ಲ. ವೀರ್ಯವೇ ಹಿರಿದಾಗಿರುವ ಈ ಧರ್ಮವು ವೀರಧರ್ಮವೆಂದು ನನ್ನ ಮತ.”

12065013 ಮಾಂಧಾತೋವಾಚ

12065013a ಯವನಾಃ ಕಿರಾತಾ ಗಾಂಧಾರಾಶ್ಚೀನಾಃ ಶಬರಬರ್ಬರಾಃ|

12065013c ಶಕಾಸ್ತುಷಾರಾಃ ಕಹ್ವಾಶ್ಚ ಪಹ್ಲವಾಶ್ಚಾಂಧ್ರಮದ್ರಕಾಃ||

12065014a ಓಡ್ರಾಃ ಪುಲಿಂದಾ ರಮಠಾಃ ಕಾಚಾ ಮ್ಲೇಚ್ಚಾಶ್ಚ ಸರ್ವಶಃ|

12065014c ಬ್ರಹ್ಮಕ್ಷತ್ರಪ್ರಸೂತಾಶ್ಚ ವೈಶ್ಯಾಃ ಶೂದ್ರಾಶ್ಚ ಮಾನವಾಃ||

ಮಾಂಧಾತನು ಹೇಳಿದನು: “ನನ್ನ ರಾಜ್ಯದಲ್ಲಿ ಎಲ್ಲಕಡೆ ಯವನರು, ಕಿರಾತರು, ಗಾಂಧಾರರು, ಚೀನರು, ಶಬರರು, ಬರ್ಬರರು, ಶಕರು, ತುಷಾರರು, ಕಹ್ವರು, ಪಹ್ಲವರು, ಆಂಧ್ರರು, ಮದ್ರಕರು, ಓಡ್ರರು, ಪುಲಿಂದರು, ರಮಠರು, ಕಾಂಬೋಜರು ಮತ್ತು ಮ್ಲೇಚ್ಛರಿದ್ದಾರೆ. ಅವರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರಲ್ಲಿ ಜನಿಸಿದ ಮಾನವರು.

12065015a ಕಥಂ ಧರ್ಮಂ ಚರೇಯುಸ್ತೇ ಸರ್ವೇ ವಿಷಯವಾಸಿನಃ|

12065015c ಮದ್ವಿಧೈಶ್ಚ ಕಥಂ ಸ್ಥಾಪ್ಯಾಃ ಸರ್ವೇ ತೇ ದಸ್ಯುಜೀವಿನಃ||

ದಸ್ಸುಗಳ ಜೀವನವನ್ನು ನಡೆಸುತ್ತಿರುವ ಆ ಎಲ್ಲ ರಾಷ್ಟ್ರವಾಸಿಗಳನ್ನು ಹೇಗೆ ಧರ್ಮದಲ್ಲಿ ನಡೆಯುವಂತೆ ಮಾಡಬಹುದು? ನನ್ನಂಥವರು ಅವರೆಲ್ಲರನ್ನು ಹೇಗೆ ಧರ್ಮದಲ್ಲಿ ತೊಡಗಿಸಬಹುದು?

12065016a ಏತದಿಚ್ಚಾಮ್ಯಹಂ ಶ್ರೋತುಂ ಭಗವಂಸ್ತದ್ಬ್ರವೀಹಿ ಮೇ|

12065016c ತ್ವಂ ಬಂಧುಭೂತೋ ಹ್ಯಸ್ಮಾಕಂ ಕ್ಷತ್ರಿಯಾಣಾಂ ಸುರೇಶ್ವರ||

ಭಗವನ್! ಸುರೇಶ್ವರ! ಇದನ್ನು ಕೇಳಲು ಬಯಸುತ್ತೇನೆ. ನನಗೆ ಹೇಳು. ನೀನು ಕ್ಷತ್ರಿಯರಾದ ನಮ್ಮ ಬಂಧುವೇ ಆಗಿರುವೆ!”

12065017 ಇಂದ್ರ ಉವಾಚ

12065017a ಮಾತಾಪಿತ್ರೋರ್ಹಿ ಕರ್ತವ್ಯಾ ಶುಶ್ರೂಷಾ ಸರ್ವದಸ್ಯುಭಿಃ|

12065017c ಆಚಾರ್ಯಗುರುಶುಶ್ರೂಷಾ ತಥೈವಾಶ್ರಮವಾಸಿನಾಮ್||

ಇಂದ್ರನು ಹೇಳಿದನು: “ಎಲ್ಲ ದಸ್ಯುಗಳಿಗೂ ಮಾತಾ-ಪಿತೃಗಳ ಶುಶ್ರೂಷೆ, ಆಚಾರ್ಯ-ಗುರುಗಳ ಶುಶ್ರೂಷೆ ಮತ್ತು ಆಶ್ರಮವಾಸಿಗಳ ಶುಶ್ರೂಷೆಗಳು ಕರ್ತವ್ಯವಾಗಿರುತ್ತದೆ.

12065018a ಭೂಮಿಪಾಲಾನಾಂ ಚ ಶುಶ್ರೂಷಾ ಕರ್ತವ್ಯಾ ಸರ್ವದಸ್ಯುಭಿಃ|

12065018c ವೇದಧರ್ಮಕ್ರಿಯಾಶ್ಚೈವ ತೇಷಾಂ ಧರ್ಮೋ ವಿಧೀಯತೇ||

ಎಲ್ಲ ದಸ್ಯುಗಳಿಗೆ ಭೂಮಿಪಾಲರ ಶುಶ್ರೂಷೆಯೂ ಒಂದು ಕರ್ತವ್ಯವೇ. ವೇದಧರ್ಮಕ್ರಿಯೆಗಳೂ ಅವರ ಧರ್ಮವೆಂದು ತಿಳಿಸಿದ್ದಾರೆ.

12065019a ಪಿತೃಯಜ್ಞಾಸ್ತಥಾ ಕೂಪಾಃ ಪ್ರಪಾಶ್ಚ ಶಯನಾನಿ ಚ|

12065019c ದಾನಾನಿ ಚ ಯಥಾಕಾಲಂ ದ್ವಿಜೇಷು ದದ್ಯುರೇವ ತೇ||

ಪಿತೃಯಜ್ಞ, ಬಾವಿ-ಅರವಟ್ಟಿಗೆ-ಧರ್ಮಶಾಲೆಗಳ ನಿರ್ಮಾಣ, ಯಥಾಕಾಲದಲ್ಲಿ ದ್ವಿಜರಿಗೆ ದಾನ ಇವುಗಳೂ ದಸ್ಯುಗಳ ಕರ್ತ್ಯವ್ಯಗಳಾಗಿವೆ.

12065020a ಅಹಿಂಸಾ ಸತ್ಯಮಕ್ರೋಧೋ ವೃತ್ತಿದಾಯಾನುಪಾಲನಮ್|

12065020c ಭರಣಂ ಪುತ್ರದಾರಾಣಾಂ ಶೌಚಮದ್ರೋಹ ಏವ ಚ||

12065021a ದಕ್ಷಿಣಾ ಸರ್ವಯಜ್ಞಾನಾಂ ದಾತವ್ಯಾ ಭೂತಿಮಿಚ್ಚತಾ|

12065021c ಪಾಕಯಜ್ಞಾ ಮಹಾರ್ಹಾಶ್ಚ ಕರ್ತವ್ಯಾಃ ಸರ್ವದಸ್ಯುಭಿಃ||

ಅಹಿಂಸೆ, ಸತ್ಯ, ಅಕ್ರೋಧ, ದಾಯಾದ ವೃತ್ತಿಯನ್ನು ಪಾಲಿಸುವುದು, ಪತ್ನಿ-ಮಕ್ಕಳ ಪೋಷಣೆ, ಶೌಚ, ಅದ್ರೋಹ, ಶ್ರೇಯಸ್ಸನ್ನು ಬಯಸುವವನು ಸರ್ವಯಜ್ಞಗಳಲ್ಲಿ ದಕ್ಷಿಣೆಗಳನ್ನು ನೀಡುವುದು, ಭೂರಿದಕ್ಷಿಣಾಯುಕ್ತವಾದ ಪಾಕಯಜ್ಞ ಇವು ಸರ್ವದಸ್ಯುಗಳ ಕರ್ತವ್ಯಗಳಾಗಿವೆ. 

12065022a ಏತಾನ್ಯೇವಂಪ್ರಕಾರಾಣಿ ವಿಹಿತಾನಿ ಪುರಾನಘ|

12065022c ಸರ್ವಲೋಕಸ್ಯ ಕರ್ಮಾಣಿ ಕರ್ತವ್ಯಾನೀಹ ಪಾರ್ಥಿವ||

ಅನಘ! ಪಾರ್ಥಿವ! ಈ ಪ್ರಕಾರವಾಗಿ ಸರ್ವಲೋಕದ ಕರ್ಮ-ಕರ್ತವ್ಯಗಳು ಮೊದಲೇ ವಿಹಿತಗೊಂಡಿವೆ.”

12065023 ಮಾಂಧಾತೋವಾಚ

12065023a ದೃಶ್ಯಂತೇ ಮಾನವಾ ಲೋಕೇ ಸರ್ವವರ್ಣೇಷು ದಸ್ಯವಃ|

12065023c ಲಿಂಗಾಂತರೇ ವರ್ತಮಾನಾ ಆಶ್ರಮೇಷು ಚತುರ್ಷ್ವಪಿ||

ಮಾಂಧಾತನು ಹೇಳಿದನು: “ಮಾನವ ಲೋಕದಲ್ಲಿ ಸರ್ವವರ್ಣಗಳಲ್ಲಿಯೂ ದಸ್ಯುಗಳು ಕಂಡುಬರುತ್ತಾರೆ. ನಾಲ್ಕೂ ಆಶ್ರಮಗಳಲ್ಲಿಯೂ ಅವರು ಮರೆಮಾಚಿ ನಡೆದುಕೊಳ್ಳುತ್ತಾರೆ.”

12065024 ಇಂದ್ರ ಉವಾಚ

12065024a ವಿನಷ್ಟಾಯಾಂ ದಂಡನೀತೌ ರಾಜಧರ್ಮೇ ನಿರಾಕೃತೇ|

12065024c ಸಂಪ್ರಮುಹ್ಯಂತಿ ಭೂತಾನಿ ರಾಜದೌರಾತ್ಮ್ಯತೋ ನೃಪ||

ಇಂದ್ರನು ಹೇಳಿದನು: “ರಾಜನ ದೌರಾತ್ಮ್ಯದಿಂದ ದಂಡನೀತಿಯು ನಶಿಸುತ್ತದೆ. ರಾಜಧರ್ಮವು ನಡೆಯದೇ ಇದ್ದಾಗ ಜೀವಿಗಳು ಭ್ರಾಂತಿಗೊಳಗಾಗುತ್ತವೆ.

12065025a ಅಸಂಖ್ಯಾತಾ ಭವಿಷ್ಯಂತಿ ಭಿಕ್ಷವೋ ಲಿಂಗಿನಸ್ತಥಾ|

12065025c ಆಶ್ರಮಾಣಾಂ ವಿಕಲ್ಪಾಶ್ಚ ನಿವೃತ್ತೇಽಸ್ಮಿನ್ ಕೃತೇ ಯುಗೇ||

ಈ ಕೃತಯುಗವು ಕಳೆದ ನಂತರ ನಾನಾವೇಷ ಧಾರೀ ಅಸಂಖ್ಯಾತ ಸಂನ್ಯಾಸಿಗಳು ಹುಟ್ಟಿಕೊಳ್ಳುತ್ತಾರೆ. ಆಶ್ರಮಗಳೂ ವಿಕಲ್ಪಗೊಳ್ಳುತ್ತವೆ.

12065026a ಅಶೃಣ್ವಾನಾಃ ಪುರಾಣಾನಾಂ ಧರ್ಮಾಣಾಂ ಪ್ರವರಾ ಗತೀಃ|

12065026c ಉತ್ಪಥಂ ಪ್ರತಿಪತ್ಸ್ಯಂತೇ ಕಾಮಮನ್ಯುಸಮೀರಿತಾಃ||

ಶ್ರೇಯಸ್ಕರ ಮಾರ್ಗವಾದ ಪುರಾಣಧರ್ಮಗಳನ್ನು ಅವರು ಕೇಳದೇ ಕಾಮ-ಕ್ರೋಧಗಳಿಂದ ಪ್ರೇರಿತರಾಗಿ ಬೇರೆಯೇ ದಾರಿಯನ್ನು ಹಿಡಿಯುತ್ತಾರೆ.

12065027a ಯದಾ ನಿವರ್ತ್ಯತೇ ಪಾಪೋ ದಂಡನೀತ್ಯಾ ಮಹಾತ್ಮಭಿಃ|

12065027c ತದಾ ಧರ್ಮೋ ನ ಚಲತೇ ಸದ್ಭೂತಃ ಶಾಶ್ವತಃ ಪರಃ||

ಮಹಾತ್ಮರು ದಂಡನೀತಿಯಿಂದ ಪಾಪವನ್ನು ತಡೆಯುವವರೆಗೆ ಶಾಶ್ವತವಾದ ಪರಮ ಧರ್ಮವು ಒಳ್ಳೆಯದಾಗಿ ನಡೆಯುತ್ತಿರುತ್ತಿದೆ.

12065028a ಪರಲೋಕಗುರುಂ ಚೈವ ರಾಜಾನಂ ಯೋಽವಮನ್ಯತೇ|

12065028c ನ ತಸ್ಯ ದತ್ತಂ ನ ಹುತಂ ನ ಶ್ರಾದ್ಧಂ ಫಲತಿ ಕ್ವ ಚಿತ್||

ಪರಲೋಕಗುರುವಾದ ರಾಜನನ್ನು ಅಪಮಾನಿಸುವವನ ದಾನವಾಗಲೀ, ಯಜ್ಞವಾಗಲೀ ಮತ್ತು ಶ್ರಾದ್ಧವಾಗಲೀ ಫಲಗಳನ್ನೀಡುವುದಿಲ್ಲ.

12065029a ಮಾನುಷಾಣಾಮಧಿಪತಿಂ ದೇವಭೂತಂ ಸನಾತನಮ್|

12065029c ದೇವಾಶ್ಚ ಬಹು ಮನ್ಯಂತೇ ಧರ್ಮಕಾಮಂ ನರೇಶ್ವರಮ್[5]||

ಮನುಷ್ಯರ ಅಧಿಪತಿ ಸನಾತನ ದೇವಸಂಭೂತ ಧರ್ಮಕಾಮ ನರೇಶ್ವರನನ್ನು ದೇವತೆಗಳೂ ಕೂಡ ಬಹಳವಾಗಿ ಮನ್ನಿಸುತ್ತಾರೆ.

12065030a ಪ್ರಜಾಪತಿರ್ಹಿ ಭಗವಾನ್ಯಃ ಸರ್ವಮಸೃಜಜ್ಜಗತ್|

12065030c ಸ ಪ್ರವೃತ್ತಿನಿವೃತ್ತ್ಯರ್ಥಂ ಧರ್ಮಾಣಾಂ ಕ್ಷತ್ರಮಿಚ್ಚತಿ||

ಭಗವಾನ್ ಪ್ರಜಾಪತಿಯು ಈ ಸರ್ವ ಜಗತ್ತನ್ನೂ ಸೃಷ್ಟಿಸಿದನು. ಅವನು ಧರ್ಮಗಳ ಪ್ರವೃತ್ತಿ-ನಿವೃತ್ತಿಗಳ ಸಲುವಾಗಿ ಕ್ಷತ್ರಧರ್ಮವನ್ನು ಇಚ್ಛಿಸಿದನು.

12065031a ಪ್ರವೃತ್ತಸ್ಯ ಹಿ ಧರ್ಮಸ್ಯ ಬುದ್ಧ್ಯಾ ಯಃ ಸ್ಮರತೇ ಗತಿಮ್|

12065031c ಸ ಮೇ ಮಾನ್ಯಶ್ಚ ಪೂಜ್ಯಶ್ಚ ತತ್ರ ಕ್ಷತ್ರಂ ಪ್ರತಿಷ್ಠಿತಮ್||

ಬುದ್ಧಿಪೂರ್ವಕವಾಗಿ ಧರ್ಮದ ಪ್ರವೃತ್ತಿಯನ್ನೇ ಸ್ಮರಿಸಿವವನು ನನಗೆ ಮಾನ್ಯನೂ ಪೂಜ್ಯನೂ ಆಗುತ್ತಾನೆ. ಅದರಲ್ಲಿಯೇ ಕ್ಷತ್ರಧರ್ಮವು ಪ್ರತಿಷ್ಠಿತಗೊಂಡಿದೆ.””

12065032 ಭೀಷ್ಮ ಉವಾಚ

12065032a ಏವಮುಕ್ತ್ವಾ ಸ ಭಗವಾನ್ಮರುದ್ಗಣವೃತಃ ಪ್ರಭುಃ|

12065032c ಜಗಾಮ ಭವನಂ ವಿಷ್ಣುರಕ್ಷರಂ ಪರಮಂ ಪದಮ್||

ಭೀಷ್ಮನು ಹೇಳಿದನು: “ಹೀಗೆ ಹೇಳಿ ಆ ಭಗವಾನ್ ಪ್ರಭುವು ಮರುದ್ಗಣಗಳಿಂದ ಸುತ್ತುವರೆಯಲ್ಪಟ್ಟು ಪರಮ ಪದ ಅಕ್ಷರ ವಿಷ್ಣುವಿನ ಭವನಕ್ಕೆ ತೆರಳಿದನು.

12065033a ಏವಂ ಪ್ರವರ್ತಿತೇ ಧರ್ಮೇ ಪುರಾ ಸುಚರಿತೇಽನಘ|

12065033c ಕಃ ಕ್ಷತ್ರಮವಮನ್ಯೇತ ಚೇತನಾವಾನ್ಬಹುಶ್ರುತಃ||

ಅನಘ! ಹಿಂದೆ ಹೀಗೆ ಸುಚರಿತ ಧರ್ಮವು ನಡೆಯುತ್ತಿರಲು ಬಹುಶ್ರುತ ಚೇತನಾವಂತನಾದ ಯಾರುತಾನೇ ಕ್ಷತ್ರಧರ್ಮವನ್ನು ಅಪಮಾನಿಸುತ್ತಾರೆ?

12065034a ಅನ್ಯಾಯೇನ ಪ್ರವೃತ್ತಾನಿ ನಿವೃತ್ತಾನಿ ತಥೈವ ಚ|

12065034c ಅಂತರಾ ವಿಲಯಂ ಯಾಂತಿ ಯಥಾ ಪಥಿ ವಿಚಕ್ಷುಷಃ||

ಧರ್ಮಗಳ ಪ್ರವೃತ್ತಿ-ನಿವೃತ್ತಿಗಳ ಈ ಕ್ಷತ್ರಧರ್ಮವನ್ನು ಅನ್ಯಾಯವಾಗಿ ತೊರೆದವನು ಕುರುಡನಂತೆ ಮಧ್ಯದಲ್ಲಿಯೇ ವಿನಾಶವನ್ನು ಹೊಂದುತ್ತಾನೆ.

12065035a ಆದೌ ಪ್ರವರ್ತಿತೇ ಚಕ್ರೇ ತಥೈವಾದಿಪರಾಯಣೇ|

12065035c ವರ್ತಸ್ವ ಪುರುಷವ್ಯಾಘ್ರ ಸಂವಿಜಾನಾಮಿ ತೇಽನಘ||

ಪುರುಷವ್ಯಾಘ್ರ! ಅನಘ! ಹಿಂದೆಯೇ ಪ್ರಾರಂಭಿಸಲ್ಪಟ್ಟ ಮತ್ತು ಮೊದಲಿನಿಂದಲೂ ಆಶ್ರಯಭೂತವಾದ ರಾಜಧರ್ಮದ ಚಕ್ರದಂತೆ ನಡೆದುಕೋ! ನಿನ್ನನ್ನು ನಾನು ಅರಿತುಕೊಂಡಿದ್ದೇನೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಇಂದ್ರಮಾಂಧಾತೃಸಂವಾದೇ ಪಂಚಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಇಂದ್ರಮಾಂಧಾತೃಸಂವಾದ ಎನ್ನುವ ಅರವತ್ತೈದನೇ ಅಧ್ಯಾಯವು.

[1] ಭೂಸಂಸ್ಕಾರಂ ಎಂಬ ಪಾಠಾಂತರವಿದೆ.

[2] ನಿತ್ಯಂ ಯುಕ್ತಾ ರಾಜಧರ್ಮೇಷು ಸರ್ವೇ ಪ್ರಯಕ್ಷಂ ತೇ ಭೂಮಿಪಾಲಾ ಯಥೈವ| ಎಂಬ ಪಾಠಾಂತರವಿದೆ.

[3] ಬಹುಶ್ರುತ್ಯಾ ಗುರುಶುಶ್ರೂಷಯಾ ಚ ಪರಸ್ಪರಂ ಸಂಹನನಾದ್ವದಂತಿ| ಎಂಬ ಪಾಠಾಂತರವಿದೆ.

[4] ಕರ್ಮಣಾ ವರ್ಧತೇ ಧರ್ಮೋ ಯಥಾಧರ್ಮಸ್ತಥೈವ ಸಃ| ಎಂಬ ಪಾಠಾಂತರವಿದೆ.

[5] ದೇವಾಪಿ ನಾವಮನ್ಯಂತೇ ಧರ್ಮಕಾಮಂ ನರೇಶ್ವರಮ್| ಎಂಬ ಪಾಠಾಂತರವಿದೆ.

Comments are closed.