ಶಾಂತಿ ಪರ್ವ: ರಾಜಧರ್ಮ ಪರ್ವ
೬೪
ಇಂದ್ರ-ಮಾಂಧಾತ ಸಂವಾದ
12064001 ಭೀಷ್ಮ ಉವಾಚ
12064001a ಚಾತುರಾಶ್ರಮ್ಯಧರ್ಮಾಶ್ಚ ಜಾತಿಧರ್ಮಾಶ್ಚ ಪಾಂಡವ|
12064001c ಲೋಕಪಾಲೋತ್ತರಾಶ್ಚೈವ ಕ್ಷಾತ್ರೇ ಧರ್ಮೇ ವ್ಯವಸ್ಥಿತಾಃ||
ಭೀಷ್ಮನು ಹೇಳಿದನು: “ಪಾಂಡವ! ನಾಲ್ಕು ಆಶ್ರಮಧರ್ಮಗಳೂ, ಜಾತಿಧರ್ಮಗಳೂ, ಲೋಕಪಾಲಧರ್ಮಗಳೂ ಕ್ಷಾತ್ರಧರ್ಮದಲ್ಲಿಯೇ ಪ್ರತಿಷ್ಠಿತಗೊಂಡಿವೆ.
12064002a ಸರ್ವಾಣ್ಯೇತಾನಿ ಧರ್ಮಾಣಿ ಕ್ಷಾತ್ರೇ ಭರತಸತ್ತಮ|
12064002c ನಿರಾಶಿಷೋ ಜೀವಲೋಕೇ ಕ್ಷಾತ್ರೇ ಧರ್ಮೇ ವ್ಯವಸ್ಥಿತಾಃ[1]||
ಭರತಸತ್ತಮ! ಈ ಎಲ್ಲ ಧರ್ಮಗಳೂ ಕ್ಷಾತ್ರಧರ್ಮವನ್ನವಲಂಬಿಸಿವೆ. ಕ್ಷಾತ್ರಧರ್ಮವು ಅವ್ಯವಸ್ಥಿತವಾದರೆ ಜೀವಲೋಕಗಳು ನಿರಾಶೆಗೊಳ್ಳುತ್ತವೆ.
12064003a ಅಪ್ರತ್ಯಕ್ಷಂ ಬಹುದ್ವಾರಂ ಧರ್ಮಮಾಶ್ರಮವಾಸಿನಾಮ್|
12064003c ಪ್ರರೂಪಯಂತಿ ತದ್ಭಾವಮಾಗಮೈರೇವ ಶಾಶ್ವತಮ್||
ಆಶ್ರಮವಾಸಿಗಳ ಧರ್ಮಗಳು ಅಪ್ರತ್ಯಕ್ಷವಾಗಿವೆ ಮತ್ತು ಅವುಗಳಿಗೆ ಬಹುದ್ವಾರಗಳಿವೆ. ಆಗಮಗಳೇ ಅವುಗಳ ಶಾಶ್ವತ ಭಾವಗಳನ್ನು ರೂಪಿಸುತ್ತವೆ.
12064004a ಅಪರೇ ವಚನೈಃ ಪುಣ್ಯೈರ್ವಾದಿನೋ ಲೋಕನಿಶ್ಚಯಮ್|
12064004c ಅನಿಶ್ಚಯಜ್ಞಾ ಧರ್ಮಾಣಾಮದೃಷ್ಟಾಂತೇ ಪರೇ ರತಾಃ||
ಕೆಲವರು ಲೋಕನಿಶ್ಚಯವನ್ನು ಪುಣ್ಯವೇದವಚನಗಳ ಮೂಲಕ ಹೇಳುತ್ತಾರ. ಇತರರು ನಿಶ್ಚಯಗಳನ್ನು ತೆಗೆದುಕೊಳ್ಳಲಾರದೇ ಧರ್ಮಗಳನ್ನು ಕಂಡುಕೊಳ್ಳುವುದಿಲ್ಲ.
12064005a ಪ್ರತ್ಯಕ್ಷಸುಖಭೂಯಿಷ್ಠಮಾತ್ಮಸಾಕ್ಷಿಕಮಚ್ಚಲಮ್|
12064005c ಸರ್ವಲೋಕಹಿತಂ ಧರ್ಮಂ ಕ್ಷತ್ರಿಯೇಷು ಪ್ರತಿಷ್ಠಿತಮ್||
ಪ್ರತ್ಯಕ್ಷವೂ, ಅಧಿಕ ಸುಖಮಯವೂ, ಆತ್ಮಸಾಕ್ಷಿಕವೂ, ಕಪಟರಹಿತವೂ ಮತ್ತು ಸರ್ವಲೋಕಹಿತವೂ ಆಗಿರುವ ಧರ್ಮವು ಕ್ಷತ್ರಿಯರಲ್ಲಿ ಪ್ರತಿಷ್ಠಿತಗೊಂಡಿದೆ.
12064006a ಧರ್ಮಾಶ್ರಮವ್ಯವಸಿನಾಂ ಬ್ರಾಹ್ಮಣಾನಾಂ ಯುಧಿಷ್ಠಿರ|
12064006c ಯಥಾ ತ್ರಯಾಣಾಂ ವರ್ಣಾನಾಂ ಸಂಖ್ಯಾತೋಪಶ್ರುತಿಃ ಪುರಾ|
12064006e ರಾಜಧರ್ಮೇಷ್ವನುಪಮಾ ಲೋಕ್ಯಾ ಸುಚರಿತೈರಿಹ||
ಯುಧಿಷ್ಠಿರ! ಆಶ್ರಮಧರ್ಮಗಳನ್ನು ಆಚರಿಸುತ್ತಿರುವ ಬ್ರಾಹ್ಮಣರ ಪ್ರಕಾರ, ಹಿಂದೆ ಹೇಳಿದಂತೆ ಮೂರು ವರ್ಣಗಳು ಹೇಗೆ ರಾಜಧರ್ಮದಲ್ಲಿ ಲೀನವಾಗುತ್ತವೆಯೋ ಹಾಗೆ ಲೋಕದಲ್ಲಿರುವ ಸುಚರಿತ್ರಗಳೆಲ್ಲವೂ ರಾಜಧರ್ಮದಲ್ಲಿಯೇ ಇರುತ್ತವೆ.
12064007a ಉದಾಹೃತಂ ತೇ ರಾಜೇಂದ್ರ ಯಥಾ ವಿಷ್ಣುಂ ಮಹೌಜಸಮ್|
12064007c ಸರ್ವಭೂತೇಶ್ವರಂ ದೇವಂ ಪ್ರಭುಂ ನಾರಾಯಣಂ ಪುರಾ|
12064007e ಜಗ್ಮುಃ ಸುಬಹವಃ ಶೂರಾ ರಾಜಾನೋ ದಂಡನೀತಯೇ||
ರಾಜೇಂದ್ರ! ಇದರ ಕುರಿತು ಒಂದು ಉದಾಹರಣೆಯಿದೆ. ಹಿಂದೆ ದಂಡನೀತಿಗಾಗಿ ಅನೇಕ ಶೂರ ರಾಜರು ಸರ್ವಭೂತೇಶ್ವರ ದೇವ ಪ್ರಭು ನಾರಾಯಣನಲ್ಲಿಗೆ ಹೋದರು.
12064008a ಏಕೈಕಮಾತ್ಮನಃ ಕರ್ಮ ತುಲಯಿತ್ವಾಶ್ರಮೇ ಪುರಾ|
12064008c ರಾಜಾನಃ ಪರ್ಯುಪಾತಿಷ್ಠನ್ದೃಷ್ಟಾಂತವಚನೇ ಸ್ಥಿತಾಃ||
ಅದಕ್ಕೆ ಮೊದಲು ರಾಜರು ವರ್ಣಾಶ್ರಮ ಧರ್ಮಕ್ಕನುಗುಣವಾಗಿ ತಾವು ಮಾಡಿದ ಒಂದೊಂದು ಕರ್ಮವನ್ನೂ ದಂಡನೀತಿಯೊಡನೆ ತುಲನೆ ಮಾಡಿದ್ದರು. ಆದರೆ ಅವರ ಸಂಶಯವು ಪರಿಹಾರವಾಗಿರಲಿಲ್ಲ.
12064009a ಸಾಧ್ಯಾ ದೇವಾ ವಸವಶ್ಚಾಶ್ವಿನೌ ಚ| ರುದ್ರಾಶ್ಚ ವಿಶ್ವೇ ಮರುತಾಂ ಗಣಾಶ್ಚ|
12064009c ಸೃಷ್ಟಾಃ ಪುರಾ ಆದಿದೇವೇನ ದೇವಾ| ಕ್ಷಾತ್ರೇ ಧರ್ಮೇ ವರ್ತಯಂತೇ ಚ ಸಿದ್ಧಾಃ||
ಹಿಂದೆ ಆದಿದೇವ ವಿಷ್ಣುವಿನಿಂದ ಸೃಷ್ಟಿಸಲ್ಪಟ್ಟ ಸಾಧ್ಯರು, ದೇವತೆಗಳು, ವಸುಗಳು, ಅಶ್ವಿನರು, ರುದ್ರರು, ವಿಶ್ವೇದೇವರು, ಸಿದ್ಧರು ಮತ್ತು ಮರುದ್ಗಣಗಳು ಕ್ಷಾತ್ರಧರ್ಮದಂತೆಯೇ ನಡೆದುಕೊಳ್ಳುತ್ತಾರೆ.
12064010a ಅತ್ರ ತೇ ವರ್ತಯಿಷ್ಯಾಮಿ ಧರ್ಮಮರ್ಥವಿನಿಶ್ಚಯಮ್|
12064010c ನಿರ್ಮರ್ಯಾದೇ ವರ್ತಮಾನೇ ದಾನವೈಕಾಯನೇ ಕೃತೇ||
12064010e ಬಭೂವ ರಾಜಾ ರಾಜೇಂದ್ರ ಮಾಂಧಾತಾ ನಾಮ ವೀರ್ಯವಾನ್||
ರಾಜೇಂದ್ರ! ಅದರ ಕುರಿತಾದ ಧರ್ಮನಿಶ್ಚಯವನ್ನು ನಿನಗೆ ಹೇಳುತ್ತೇನೆ. ಕೃತಯುಗದಲ್ಲಿ ಈ ಅಖಂಡ ವಿಶ್ವವು ದಾನವರ ವಶವಾಗಿ ಮರ್ಯಾದೆಗಳಿಲ್ಲದೇ ನಡೆಯುತ್ತಿರಲು ಮಾಂಧಾತ ಎಂಬ ವೀರ್ಯವಾನ್ ರಾಜನಾದನು.
12064011a ಪುರಾ ವಸುಮತೀಪಾಲೋ ಯಜ್ಞಂ ಚಕ್ರೇ ದಿದೃಕ್ಷಯಾ|
12064011c ಅನಾದಿಮಧ್ಯನಿಧನಂ ದೇವಂ ನಾರಾಯಣಂ ಪ್ರತಿ||
ಹಿಂದೆ ಆ ವಸುಮತೀಪಾಲಕನು ಅನಾದಿಮಧ್ಯನಿಧನ ದೇವ ನಾರಾಯಣನನ್ನು ಕಾಣಲೋಸುಗ ಒಂದು ಯಜ್ಞವನ್ನು ನಡೆಸಿದನು.
12064012a ಸ ರಾಜಾ ರಾಜಶಾರ್ದೂಲ ಮಾಂಧಾತಾ ಪರಮೇಷ್ಠಿನಃ|
12064012c ಜಗ್ರಾಹ ಶಿರಸಾ ಪಾದೌ ಯಜ್ಞೇ ವಿಷ್ಣೋರ್ಮಹಾತ್ಮನಃ||
ರಾಜಶಾರ್ದೂಲ! ಆ ಯಜ್ಞದಲ್ಲಿ ರಾಜಾ ಮಾಂಧಾತನು ಪರಮೇಷ್ಠಿ ಮಹಾತ್ಮ ವಿಷ್ಣುವಿನ ಪಾದಗಳಲ್ಲಿ ತನ್ನ ಶಿರಸ್ಸನ್ನಿಟ್ಟನು.
12064013a ದರ್ಶಯಾಮಾಸ ತಂ ವಿಷ್ಣೂ ರೂಪಮಾಸ್ಥಾಯ ವಾಸವಮ್|
12064013c ಸ ಪಾರ್ಥಿವೈರ್ವೃತಃ ಸದ್ಭಿರರ್ಚಯಾಮಾಸ ತಂ ಪ್ರಭುಮ್||
ಆಗ ವಿಷ್ಣುವು ವಾಸವ ಇಂದ್ರನ ರೂಪವನ್ನು ಧರಿಸಿ ಆ ರಾಜನಿಗೆ ಕಾಣಿಸಿಕೊಂಡನು. ರಾಜನಾದರೋ ಪ್ರಭುವನ್ನು ಉತ್ತಮವಾಗಿ ಅರ್ಚಿಸಿದನು.
12064014a ತಸ್ಯ ಪಾರ್ಥಿವಸಂಘಸ್ಯ ತಸ್ಯ ಚೈವ ಮಹಾತ್ಮನಃ|
12064014c ಸಂವಾದೋಽಯಂ ಮಹಾನಾಸೀದ್ವಿಷ್ಣುಂ ಪ್ರತಿ ಮಹಾದ್ಯುತೇ||
ಮಹಾದ್ಯುತೇ! ಆಗ ಆ ಪಾರ್ಥಿವಶ್ರೇಷ್ಠ ಮಾಂಧಾತನಿಗೂ ಮಹಾತ್ಮ ಇಂದ್ರನಿಗೂ ವಿಷ್ಣುವಿನ ಕುರಿತಾದ ಈ ಸಂವಾದವು ನಡೆಯಿತು.
12064015 ಇಂದ್ರ ಉವಾಚ
12064015a ಕಿಮಿಷ್ಯತೇ ಧರ್ಮಭೃತಾಂ ವರಿಷ್ಠ| ಯದ್ದ್ರಷ್ಟುಕಾಮೋಽಸಿ ತಮಪ್ರಮೇಯಮ್|
12064015c ಅನಂತಮಾಯಾಮಿತಸತ್ತ್ವವೀರ್ಯಂ| ನಾರಾಯಣಂ ಹ್ಯಾದಿದೇವಂ ಪುರಾಣಮ್||
ಇಂದ್ರನು ಹೇಳಿದನು: “ಧರ್ಮಭೃತರಲ್ಲಿ ವರಿಷ್ಠ! ಆದಿದೇವನೂ, ಪುರಾಣನೂ, ಅಮಿತ ಸತ್ತ್ವವೀರ್ಯನೂ, ಅನಂತಮಾಯೆಗಳುಳ್ಳವನೂ, ಅಪ್ರಮೇಯನೂ ಆದ ನಾರಾಯಣನನ್ನು ಕಾಣಲು ಏಕೆ ಬಯಸುತ್ತಿರುವೆ?
12064016a ನಾಸೌ ದೇವೋ ವಿಶ್ವರೂಪೋ ಮಯಾಪಿ| ಶಕ್ಯೋ ದ್ರಷ್ಟುಂ ಬ್ರಹ್ಮಣಾ ವಾಪಿ ಸಾಕ್ಷಾತ್|
12064016c ಯೇಽನ್ಯೇ ಕಾಮಾಸ್ತವ ರಾಜನ್ಹೃದಿಸ್ಥಾ| ದಾಸ್ಯಾಮಿ ತಾಂಸ್ತ್ವಂ ಹಿ ಮರ್ತ್ಯೇಷು ರಾಜಾ||
ಆ ದೇವ ವಿಶ್ವರೂಪನನ್ನು ನಾನಾಗಲೀ ಸಾಕ್ಷಾತ್ ಬ್ರಹ್ಮನೇ ಆಗಲಿ ನೋಡಲು ಶಕ್ಯರಿಲ್ಲ. ರಾಜನ್! ಮನುಷ್ಯರಲ್ಲಿ ರಾಜನಾಗಿರುವ ನಿನಗೆ ಅನ್ಯ ಕಾಮನೆಗಳು ಹೃದಯಸ್ಥವಾಗಿದ್ದರೆ ಅವುಗಳನ್ನು ನಾನೇ ದಯಪಾಲಿಸುತ್ತೇನೆ.
12064017a ಸತ್ಯೇ ಸ್ಥಿತೋ ಧರ್ಮಪರೋ ಜಿತೇಂದ್ರಿಯಃ| ಶೂರೋ ದೃಢಂ ಪ್ರೀತಿರತಃ ಸುರಾಣಾಮ್|
12064017c ಬುದ್ಧ್ಯಾ ಭಕ್ತ್ಯಾ ಚೋತ್ತಮಶ್ರದ್ಧಯಾ ಚ| ತತಸ್ತೇಽಹಂ ದದ್ಮಿ ವರಂ ಯಥೇಷ್ಟಮ್||
ಸತ್ಯನಿಷ್ಠನಾಗಿರುವ, ಧರ್ಮಪರನೂ ಜಿತೇಂದ್ರಿಯನೂ ಆಗಿರುವ, ಶೂರನೂ ದೃಢನೂ, ಸುರರ ಪ್ರೀತಿರತನೂ ಆಗಿರುವ, ಉತ್ತಮ ಬುದ್ಧಿ-ಭಕ್ತಿ-ಶ್ರದ್ಧೆಗಳಿರುವ ನಿನಗೆ ಇಷ್ಟವಾದ ವರವನ್ನು ನಾನೇ ನೀಡುತ್ತೇನೆ.”
12064018 ಮಾಂಧಾತೋವಾಚ
12064018a ಅಸಂಶಯಂ ಭಗವನ್ನಾದಿದೇವಂ| ದ್ರಕ್ಷ್ಯಾಮ್ಯಹಂ ಶಿರಸಾಹಂ ಪ್ರಸಾದ್ಯ|
12064018c ತ್ಯಕ್ತ್ವಾ ಭೋಗಾನ್ಧರ್ಮಕಾಮೋ ಹ್ಯರಣ್ಯಮ್| ಇಚ್ಚೇ ಗಂತುಂ ಸತ್ಪಥಂ ಲೋಕಜುಷ್ಟಮ್||
ಮಾಂಧಾತನು ಹೇಳಿದನು: “ಭಗವನ್! ನಿನ್ನ ಅಡಿದಾವರೆಗಳಲ್ಲಿಯೇ ಶಿರಸ್ಸನ್ನಿಟ್ಟು ಪ್ರಸನ್ನಗೊಳಿಸಿ ನಾನು ಆದಿದೇವನನ್ನು ಕಾಣುತ್ತೇನೆ. ಇದರಲ್ಲಿ ಸಂದೇಹವಿಲ್ಲ. ಭೋಗಗಳನ್ನು ತ್ಯಜಿಸಿ ಧರ್ಮಕಾಮನಾಗಿ ನಾನು ಲೋಕದ ಸತ್ಪುರುಷರ ಅಂತಿಮ ಮಾರ್ಗವಾದ ಅರಣ್ಯವನ್ನು ಸೇರಲು ಬಯಸುತ್ತೇನೆ.
12064019a ಕ್ಷಾತ್ರಾದ್ಧರ್ಮಾದ್ವಿಪುಲಾದಪ್ರಮೇಯಾಲ್| ಲೋಕಾಃ ಪ್ರಾಪ್ತಾಃ ಸ್ಥಾಪಿತಂ ಸ್ವಂ ಯಶಶ್ಚ|
12064019c ಧರ್ಮೋ ಯೋಽಸಾವಾದಿದೇವಾತ್ಪ್ರವೃತ್ತೋ| ಲೋಕಜ್ಯೇಷ್ಠಸ್ತಂ ನ ಜಾನಾಮಿ ಕರ್ತುಮ್||
ಕ್ಷಾತ್ರಧರ್ಮದಿಂದ ವಿಪುಲ ಅಪ್ರಮೇಯ ಲೋಕಗಳನ್ನು ಪಡೆದುಕೊಂಡಿದ್ದೇನೆ ಮತ್ತು ನನ್ನ ಯಶಸ್ಸನ್ನೂ ಲೋಕಗಳಲ್ಲಿ ಸ್ಥಾಪಿಸಿದ್ದೇನೆ. ಆದರೆ ಆ ಲೋಕಜ್ಯೇಷ್ಠ ಆದಿದೇವನಿಂದ ಪ್ರವೃತ್ತವಾದ ಮೋಕ್ಷಧರ್ಮವನ್ನು ನಡೆಸಲು ನನಗೆ ತಿಳಿದಿಲ್ಲ.”
12064020 ಇಂದ್ರ ಉವಾಚ
12064020a ಅಸೈನಿಕೋಽಧರ್ಮಪರಶ್ಚರೇಥಾಃ| ಪರಾಂ ಗತಿಂ ಲಪ್ಸ್ಯಸೇ ಚಾಪ್ರಮತ್ತಃ|[2]
12064020c ಕ್ಷಾತ್ರೋ ಧರ್ಮೋ ಹ್ಯಾದಿದೇವಾತ್ಪ್ರವೃತ್ತಃ| ಪಶ್ಚಾದನ್ಯೇ ಶೇಷಭೂತಾಶ್ಚ ಧರ್ಮಾಃ||
ಇಂದ್ರನು ಹೇಳಿದನು: “ಕ್ಷಾತ್ರಧರ್ಮವು ಆದಿದೇವನಿಂದಲೇ ಪ್ರವೃತ್ತಗೊಂಡಿತು. ಅದರ ನಂತರವೇ ಉಳಿದ ಅನ್ಯ ಧರ್ಮಗಳು ಹುಟ್ಟಿಕೊಂಡವು.
12064021a ಶೇಷಾಃ ಸೃಷ್ಟಾ ಹ್ಯಂತವಂತೋ ಹ್ಯನಂತಾಃ| ಸುಪ್ರಸ್ಥಾನಾಃ ಕ್ಷತ್ರಧರ್ಮಾವಿಶಿಷ್ಟಾಃ|
12064021c ಅಸ್ಮಿನ್ಧರ್ಮೇ ಸರ್ವಧರ್ಮಾಃ ಪ್ರವಿಷ್ಟಾಸ್| ತಸ್ಮಾದ್ಧರ್ಮಂ ಶ್ರೇಷ್ಠಮಿಮಂ ವದಂತಿ||
ಅನಂತರ ಹುಟ್ಟಿದ ಶೇಷಧರ್ಮಗಳು ಕಾಲಾನುಗುಣವಾಗಿ ಕ್ಷಯಿಸುತ್ತವೆ. ಉತ್ತಮ ಸಂಪ್ರದಾಯಗಳಿರುವ ಕ್ಷತ್ರಧರ್ಮವೇ ವಿಶಿಷ್ಠವಾದುದು. ಈ ಧರ್ಮದಲ್ಲಿ ಸರ್ವಧರ್ಮಗಳೂ ಸೇರಿಕೊಂಡಿವೆ. ಆದುದರಿಂದ ಇದನ್ನು ಶ್ರೇಷ್ಠಧರ್ಮವೆಂದು ಹೇಳುತ್ತಾರೆ.
12064022a ಕರ್ಮಣಾ ವೈ ಪುರಾ ದೇವಾ ಋಷಯಶ್ಚಾಮಿತೌಜಸಃ|
12064022c ತ್ರಾತಾಃ ಸರ್ವೇ ಪ್ರಮಥ್ಯಾರೀನ್ಕ್ಷತ್ರಧರ್ಮೇಣ ವಿಷ್ಣುನಾ||
ಹಿಂದೆ ಅಮಿತೌಜಸ ವಿಷ್ಣುವು ಕ್ಷತ್ರಧರ್ಮವನ್ನನುಸರಿಸಿಯೇ ಅರಿಗಳನ್ನು ಸದೆಬಡಿದು ಸರ್ವ ದೇವತೆಗಳನ್ನೂ ಋಷಿಗಳನ್ನೂ ಸಂರಕ್ಷಿಸುವ ಕಾರ್ಯವನ್ನೆಸಗಿದನು.
12064023a ಯದಿ ಹ್ಯಸೌ ಭಗವಾನ್ನಾಹನಿಷ್ಯದ್| ರಿಪೂನ್ಸರ್ವಾನ್ವಸುಮಾನಪ್ರಮೇಯಃ|
12064023c ನ ಬ್ರಾಹ್ಮಣಾ ನ ಚ ಲೋಕಾದಿಕರ್ತಾ| ನ ಸದ್ಧರ್ಮಾ ನಾದಿಧರ್ಮಾ ಭವೇಯುಃ||
ಒಂದುವೇಳೆ ಆ ವಸುಮಾನ ಅಪ್ರಮೇಯ ಭಗವಂತನು ರಿಪುಗಳೆಲ್ಲರನ್ನೂ ಸಂಹರಿಸದೇ ಇದ್ದಿದ್ದರೆ ಲೋಕದ ಆದಿಕರ್ತ ಬ್ರಹ್ಮನಾಗಲೀ, ಬ್ರಾಹ್ಮಣರಾಗಲೀ, ಸದ್ಧರ್ಮವಾಗಲೀ ಆದಿಧರ್ಮವಾಗಲೀ ಇರುತ್ತಿರಲಿಲ್ಲ.
12064024a ಇಮಾಮುರ್ವೀಂ ನ ಜಯೇದ್ವಿಕ್ರಮೇಣ| ದೇವಶ್ರೇಷ್ಠೋಽಸೌ ಪುರಾ ಚೇದಮೇಯಃ|
12064024c ಚಾತುರ್ವರ್ಣ್ಯಂ ಚಾತುರಾಶ್ರಮ್ಯಧರ್ಮಾಃ| ಸರ್ವೇ ನ ಸ್ಯುರ್ಬ್ರಹ್ಮಣೋ ವೈ ವಿನಾಶಾತ್||
ದೇವಶ್ರೇಷ್ಠನು ಹಿಂದೆ ತನ್ನ ವಿಕ್ರಮದಿಂದ ಈ ಉರ್ವಿಯನ್ನು ಗೆಲ್ಲದೇ ಇದ್ದಿದ್ದರೆ ಬ್ರಾಹ್ಮಣರ ವಿನಾಶದಿಂದಾಗಿ ಚಾತುರ್ವರ್ಣ ಧರ್ಮಗಳಾಗಲೀ ಚತುರಾಶ್ರಮ ಧರ್ಮಗಳಾಗಲೀ ಯಾವುದೂ ಇರುತ್ತಿರಲಿಲ್ಲ.
12064025a ದೃಷ್ಟಾ ಧರ್ಮಾಃ ಶತಧಾ ಶಾಶ್ವತೇನ| ಕ್ಷಾತ್ರೇಣ ಧರ್ಮೇಣ ಪುನಃ ಪ್ರವೃತ್ತಾಃ|[3]
12064025c ಯುಗೇ ಯುಗೇ ಹ್ಯಾದಿಧರ್ಮಾಃ ಪ್ರವೃತ್ತಾ| ಲೋಕಜ್ಯೇಷ್ಠಂ ಕ್ಷತ್ರಧರ್ಮಂ ವದಂತಿ||
ನೂರಾರು ಚೂರುಗಳಾಗಿ ಹೋಗಿದ್ದ ಧರ್ಮಗಳು ಶಾಶ್ವತ ಕ್ಷಾತ್ರಧರ್ಮದಿಂದ ಪುನಃ ಪ್ರವೃತ್ತಗೊಂಡಿರುವುದನ್ನು ನೋಡಿದ್ದೇವೆ. ಯುಗಯುಗಗಳಲ್ಲಿಯೂ ಈ ಆದಿಧರ್ಮ ಕ್ಷತ್ರಿಯಧರ್ಮವು ಹುಟ್ಟುತ್ತದೆ. ಆದುದರಿಂದ ಲೋಕದಲ್ಲಿ ಕ್ಷತ್ರಧರ್ಮವೇ ಜ್ಯೇಷ್ಠವೆಂದು ಹೇಳುತ್ತಾರೆ.
12064026a ಆತ್ಮತ್ಯಾಗಃ ಸರ್ವಭೂತಾನುಕಂಪಾ| ಲೋಕಜ್ಞಾನಂ ಮೋಕ್ಷಣಂ ಪಾಲನಂ ಚ|
12064026c ವಿಷಣ್ಣಾನಾಂ ಮೋಕ್ಷಣಂ ಪೀಡಿತಾನಾಂ| ಕ್ಷಾತ್ರೇ ಧರ್ಮೇ ವಿದ್ಯತೇ ಪಾರ್ಥಿವಾನಾಮ್||
ಆತ್ಮತ್ಯಾಗ, ಸರ್ವಭೂತಗಳ ಮೇಲಿನ ಅನುಕಂಪ, ಲೋಕಜ್ಞಾನ, ಪೀಡಿತರನ್ನು ಪೀಡೆಯಿಂದ ಬಿಡುಗಡೆಗೊಳಿಸುವುದು, ಇವು ಪಾರ್ಥಿವರ ಕ್ಷಾತ್ರಧರ್ಮವೆಂದು ತಿಳಿಯಲ್ಪಟ್ಟಿವೆ.
12064027a ನಿರ್ಮರ್ಯಾದಾಃ ಕಾಮಮನ್ಯುಪ್ರವೃತ್ತಾ| ಭೀತಾ ರಾಜ್ಞೋ ನಾಧಿಗಚ್ಚಂತಿ ಪಾಪಮ್|
12064027c ಶಿಷ್ಟಾಶ್ಚಾನ್ಯೇ ಸರ್ವಧರ್ಮೋಪಪನ್ನಾಃ| ಸಾಧ್ವಾಚಾರಾಃ ಸಾಧು ಧರ್ಮಂ ಚರಂತಿ||
ಮರ್ಯಾದೆಯಿಲ್ಲದಿರುವವರು ಮತ್ತು ಕಾಮ-ಕೋಪ ಪ್ರವೃತ್ತರಾದವರು ರಾಜನ ಭೀತಿಯಿಂದ ಪಾಪವನ್ನೆಸಗುವುದಿಲ್ಲ. ಅನ್ಯ ಶಿಷ್ಟಾಚಾರಿಗಳು ಸರ್ವಧರ್ಮ ಸಂಪನ್ನರಾಗಿ ಉತ್ತಮ ಆಚಾರ, ಸಾಧುಧರ್ಮಗಳನ್ನು ನಡೆಸುತ್ತಾರೆ.
12064028a ಪುತ್ರವತ್ಪರಿಪಾಲ್ಯಾನಿ ಲಿಂಗಧರ್ಮೇಣ[4] ಪಾರ್ಥಿವೈಃ|
12064028c ಲೋಕೇ ಭೂತಾನಿ ಸರ್ವಾಣಿ ವಿಚರಂತಿ ನ ಸಂಶಯಃ||
ಪಾರ್ಥಿವರು ಅವರ ಲಿಂಗಧರ್ಮದಿಂದ ಪ್ರಜೆಗಳನ್ನು ಪುತ್ರರಂತೆ ಪಾಲಿಸುತ್ತಾರೆ. ಆದುದರಿಂದಲೇ ಲೋಕದಲ್ಲಿ ಪ್ರಾಣಿಗಳೆಲ್ಲವೂ ನಿರ್ಭಯದಿಂದ ಸಂಚರಿಸುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
12064029a ಸರ್ವಧರ್ಮಪರಂ ಕ್ಷತ್ರಂ ಲೋಕಜ್ಯೇಷ್ಠಂ ಸನಾತನಮ್|
12064029c ಶಶ್ವದಕ್ಷರಪರ್ಯಂತಮಕ್ಷರಂ ಸರ್ವತೋಮುಖಮ್||
ಸರ್ವಧರ್ಮಗಳಿಗೂ ಶ್ರೇಷ್ಠವಾದುದು ಕ್ಷತ್ರಿಯಧರ್ಮ. ಇದು ಲೋಕದಲ್ಲಿಯೇ ಹಿರಿಯದು. ಸನಾತನವು. ಇದು ನಿತ್ಯ, ಅವಿನಾಶಿ, ಮೋಕ್ಷದಾಯಕ ಮತ್ತು ಸರ್ವತೋಮುಖ ಧರ್ಮ.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವರ್ಣಾಶ್ರಮಧರ್ಮಕಥನೇ ಚತುಃಷಷ್ಠಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವರ್ಣಾಶ್ರಮಧರ್ಮಕಥನ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.
[1] ನಿರಾಶಿಷೋ ಜೀವಲೋಕಾಃ ಕ್ಷತ್ರಧರ್ಮೇಽವ್ಯವಸ್ಥಿತೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಅಸೈನಿಕಾ ಧರ್ಮಪರಾಶ್ಚ ಧರ್ಮೇ ಪರಾಂ ಗತಿಂ ನ ನಯಂತೇ ಹ್ಯಯುಕ್ತಮ್| ಅರ್ಥಾತ್ ಸೈನ್ಯಗಳಿಲ್ಲದ ವಾನಪ್ರಸ್ಥಾಶ್ರಮ ಧರ್ಮವನ್ನು ಅನುಸರಿಸುವ ಕ್ಷತ್ರಿಯನು ಪರಮ ಗತಿಯನ್ನು ಹೊಂದುವುದಿಲ್ಲ ಎನ್ನುವುದು ಯುಕ್ತವಲ್ಲ ಎಂಬ ಪಾಠಾಂತರವಿದೆ.
[3] ನಷ್ಟಾ ಧರ್ಮಾಃ ಶತಧಾ ಶಾಶ್ವತಾಸ್ತೇ ಕ್ಷಾತ್ರೇಣ ಧರ್ಮೇಣ ಪುನಃ ಪ್ರವೃದ್ಧಾಃ| ಅರ್ಥಾತ್ ಧರ್ಮಗಳು ನೂರಾರು ಬಾರಿ ವಿನಷ್ಟವಾಗಿವೆ. ಆದರೆ ಕ್ಷಾತ್ರಧರ್ಮದಿಂದ ಅವುಗಳ ಪುನರುದ್ಧಾರವೂ ಆಗಿದೆ ಎಂಬ ಪಾಠಾಂತರವಿದೆ.
[4] ರಾಜಧರ್ಮೇಣ ಎಂಬ ಪಾಠಾಂತರವಿದೆ.