ಮೌಸಲ ಪರ್ವ
೨
ಮುನಿಶಾಪದಿಂದ ಮುಸಲ ಪ್ರಸವ
ಮುನಿಗಳಿಂದ ಯಾದವರಿಗೆ ಶಾಪ (೧-೧೧). ಸಾಂಬನಿಂದ ಮುಸಲದ ಜನನ; ಮುಸಲವನ್ನು ಚೂರ್ಣವನ್ನಾಗಿಸಿ ಸಮುದ್ರದಲ್ಲಿ ಎಸೆದುದು; ದ್ವಾರಕೆಯಲ್ಲಿ ಸುರಾಪಾನದ ನಿಷೇದ (೧೨-೨೦).
16002001 ಜನಮೇಜಯ ಉವಾಚ|
16002001a ಕಥಂ ವಿನಷ್ಟಾ ಭಗವನ್ನಂಧಕಾ ವೃಷ್ಣಿಭಿಃ ಸಹ|
16002001c ಪಶ್ಯತೋ ವಾಸುದೇವಸ್ಯ ಭೋಜಾಶ್ಚೈವ ಮಹಾರಥಾಃ||
ಜನಮೇಜಯನು ಹೇಳಿದನು: “ಭಗವನ್! ವಾಸುದೇವನ ಕಣ್ಣೆದುರಿಗೇ ಹೇಗೆ ವೃಷ್ಣಿಗಳೊಂದಿಗೆ ಅಂಧಕರು ಮತ್ತು ಮಹಾರಥ ಭೋಜರು ವಿನಾಶರಾದರು?”
16002002 ವೈಶಂಪಾಯನ ಉವಾಚ|
16002002a ಷಟ್ತ್ರಿಂಶೇಽಥ ತತೋ ವರ್ಷೇ ವೃಷ್ಣೀನಾಮನಯೋ ಮಹಾನ್|
16002002c ಅನ್ಯೋನ್ಯಂ ಮುಸಲೈಸ್ತೇ ತು ನಿಜಘ್ನುಃ ಕಾಲಚೋದಿತಾಃ||
ವೈಶಂಪಾಯನನು ಹೇಳಿದನು: “ಯುದ್ಧವು ಕಳೆದ ಮೂವತ್ತಾರನೆಯ ವರ್ಷದಲ್ಲಿ ವೃಷ್ಣಿಗಳಿಗೆ ಮಹಾ ಕಂಟಕವುಂಟಾಯಿತು. ಕಾಲ ಪ್ರಚೋದಿತರಾದ ಅವರು ಮುಸಲಗಳಿಂದ ಅನ್ಯೋನ್ಯರನ್ನು ಸಂಹರಿಸಿದರು.”
16002003 ಜನಮೇಜಯ ಉವಾಚ|
16002003a ಕೇನಾನುಶಪ್ತಾಸ್ತೇ ವೀರಾಃ ಕ್ಷಯಂ ವೃಷ್ಣ್ಯಂಧಕಾ ಯಯುಃ|
16002003c ಭೋಜಾಶ್ಚ ದ್ವಿಜವರ್ಯ ತ್ವಂ ವಿಸ್ತರೇಣ ವದಸ್ವ ಮೇ||
ಜನಮೇಜಯನು ಹೇಳಿದನು: “ದ್ವಿಜವರ್ಯ! ಯಾರ ಶಾಪದಿಂದಾಗಿ ವೃಷ್ಣಿ-ಅಂಧಕ-ಭೋಜ ವೀರರು ನಾಶಹೊಂದಿದರು? ವಿಸ್ತಾರವಾಗಿ ನೀನು ನನಗೆ ಹೇಳಬೇಕು!”
16002004 ವೈಶಂಪಾಯನ ಉವಾಚ|
16002004a ವಿಶ್ವಾಮಿತ್ರಂ ಚ ಕಣ್ವಂ ಚ ನಾರದಂ ಚ ತಪೋಧನಮ್|
16002004c ಸಾರಣಪ್ರಮುಖಾ ವೀರಾ ದದೃಶುರ್ದ್ವಾರಕಾಗತಾನ್||
ವೈಶಂಪಾಯನನು ಹೇಳಿದನು: “ದ್ವಾರಕೆಗೆ ಬಂದಿದ್ದ ವಿಶ್ವಾಮಿತ್ರ, ಕಣ್ವ, ಮತ್ತು ತಪೋಧನ ನಾರದರನ್ನು ಸಾರಣ ಪ್ರಮುಖ ವೀರರು ಕಂಡರು.
16002005a ತೇ ವೈ ಸಾಂಬಂ ಪುರಸ್ಕೃತ್ಯ ಭೂಷಯಿತ್ವಾ ಸ್ತ್ರಿಯಂ ಯಥಾ|
16002005c ಅಬ್ರುವನ್ನುಪಸಂಗಮ್ಯ ದೈವದಂಡನಿಪೀಡಿತಾಃ||
ದೈವದಂಡದಿಂದ ಪೀಡಿತರಾದ ಅವರು ಸಾಂಬನಿಗೆ ಸ್ತ್ರೀಯ ವೇಷಧರಿಸಿ ಆಗಮಿಸಿರುವವರ ಎದಿರು ಕರೆದುಕೊಂಡು ಹೋಗಿ ಹೇಳಿದರು:
16002006a ಇಯಂ ಸ್ತ್ರೀ ಪುತ್ರಕಾಮಸ್ಯ ಬಭ್ರೋರಮಿತತೇಜಸಃ|
16002006c ಋಷಯಃ ಸಾಧು ಜಾನೀತ ಕಿಮಿಯಂ ಜನಯಿಷ್ಯತಿ||
“ಇವಳು ಪುತ್ರನನ್ನು ಬಯಸುವ ಅಮಿತತೇಜಸ್ವಿ ಬಭ್ರುವಿನ ಪತ್ನಿ. ಋಷಿಗಳೇ! ಇವಳು ಏನನ್ನು ಹುಟ್ಟಿಸುತ್ತಾಳೆ ಎನ್ನುವುದು ನಿಮಗೆ ತಿಳಿದಿದ್ದರೆ ಸತ್ಯವನ್ನು ಹೇಳಿ!”
16002007a ಇತ್ಯುಕ್ತಾಸ್ತೇ ತದಾ ರಾಜನ್ವಿಪ್ರಲಂಭಪ್ರಧರ್ಷಿತಾಃ|
16002007c ಪ್ರತ್ಯಬ್ರುವಂಸ್ತಾನ್ಮುನಯೋ ಯತ್ತಚ್ಛೃಣು ನರಾಧಿಪ||
ರಾಜನ್! ನರಾಧಿಪ! ಅವರು ಹೀಗೆ ಹೇಳಲು ಆ ವಂಚನೆಯಿಂದ ಋಷಿಗಳು ಕುಪಿತರಾದರು. ಅವರು ಏನು ಉತ್ತರವಿತ್ತರೆನ್ನುವುದನ್ನು ಕೇಳು.
16002008a ವೃಷ್ಣ್ಯಂಧಕವಿನಾಶಾಯ ಮುಸಲಂ ಘೋರಮಾಯಸಮ್|
16002008c ವಾಸುದೇವಸ್ಯ ದಾಯಾದಃ ಸಾಂಬೋಽಯಂ ಜನಯಿಷ್ಯತಿ||
“ವೃಷ್ಣಿ-ಅಂಧಕರ ವಿನಾಶಕ್ಕಾಗಿ ವಾಸುದೇವನ ಮಗ ಈ ಸಾಂಬನು ಲೋಹದ ಘೋರ ಮುಸಲಕ್ಕೆ ಜನ್ಮನೀಡುತ್ತಾನೆ!
16002009a ಯೇನ ಯೂಯಂ ಸುದುರ್ವೃತ್ತಾ ನೃಶಂಸಾ ಜಾತಮನ್ಯವಃ|
16002009c ಉಚ್ಚೇತ್ತಾರಃ ಕುಲಂ ಕೃತ್ಸ್ನಮೃತೇ ರಾಮಜನಾರ್ದನೌ||
ಬಲರಾಮ-ಕೃಷ್ಣರನ್ನು ಬಿಟ್ಟು ನೀವು ಇದನ್ನೇ ಬಳಸಿ ಕೆಟ್ಟ ನಡತೆಯ, ದುಷ್ಟ, ಕೋಪಿಷ್ಟ ವೃಷ್ಣಿಕುಲವೆಲ್ಲವನ್ನೂ ಸಂಪೂರ್ಣವಾಗಿ ನಾಶಗೊಳಿಸುತ್ತೀರಿ!
16002010a ಸಮುದ್ರಂ ಯಾಸ್ಯತಿ ಶ್ರೀಮಾಂಸ್ತ್ಯಕ್ತ್ವಾ ದೇಹಂ ಹಲಾಯುಧಃ|
16002010c ಜರಾ ಕೃಷ್ಣಂ ಮಹಾತ್ಮಾನಂ ಶಯಾನಂ ಭುವಿ ಭೇತ್ಸ್ಯತಿ||
ಶ್ರೀಮಾನ್ ಹಲಾಯುಧನು ದೇಹವನ್ನು ತ್ಯಜಿಸಿ ಸಮುದ್ರವನ್ನು ಸೇರುವನು. ಜರಾ ಎನ್ನುವವನು ನೆಲದ ಮೇಲೆ ಮಲಗಿದ್ದ ಮಹಾತ್ಮ ಕೃಷ್ಣನನ್ನು ಹೊಡೆದುರುಳಿಸುತ್ತಾನೆ!”
16002011a ಇತ್ಯಬ್ರುವಂತ ತೇ ರಾಜನ್ಪ್ರಲಬ್ಧಾಸ್ತೈರ್ದುರಾತ್ಮಭಿಃ|
16002011c ಮುನಯಃ ಕ್ರೋಧರಕ್ತಾಕ್ಷಾಃ ಸಮೀಕ್ಷ್ಯಾಥ ಪರಸ್ಪರಮ್||
ರಾಜನ್! ಆ ದುರಾತ್ಮರಿಂದ ವಂಚಿತರಾದ ಆ ಮುನಿಗಳು ಹೀಗೆ ಹೇಳಿ ಕ್ರೋಧದಿಂದ ಕೆಂಪಾಗಿದ್ದ ಕಣ್ಣುಗಳಿಂದ ಪರಸ್ಪರರನ್ನು ನೋಡಿದರು.
16002012a ತಥೋಕ್ತ್ವಾ ಮುನಯಸ್ತೇ ತು ತತಃ ಕೇಶವಮಭ್ಯಯುಃ||
16002013a ಅಥಾಬ್ರವೀತ್ತದಾ ವೃಷ್ಣೀನ್ಶ್ರುತ್ವೈವಂ ಮಧುಸೂದನಃ|
16002013c ಅಂತಜ್ಞೋ ಮತಿಮಾಂಸ್ತಸ್ಯ ಭವಿತವ್ಯಂ ತಥೇತಿ ತಾನ್||
ಹಾಗೆ ಹೇಳಿ ಮುನಿಗಳು ಕೇಶವನಿದ್ದಲ್ಲಿಗೆ ಹೋದರು. ಅವರಿಂದ ಕೇಳಿದುದನ್ನು ಮಧುಸೂದನನು ವೃಷ್ಣಿಗಳಿಗೆ ಹೇಳಿದನು. ಅಂತ್ಯವು ಬಂದಿದೆಯೆಂದು ತಿಳಿದಿದ್ದ ಆ ಮತಿವಂತನು “ಇದು ಹಾಗೆಯೇ ಆಗುತ್ತದೆ!” ಎಂದನು.
16002014a ಏವಮುಕ್ತ್ವಾ ಹೃಷೀಕೇಶಃ ಪ್ರವಿವೇಶ ಪುನರ್ಗೃಹಾನ್|
16002014c ಕೃತಾಂತಮನ್ಯಥಾ ನೈಚ್ಚತ್ಕರ್ತುಂ ಸ ಜಗತಃ ಪ್ರಭುಃ||
ಹೀಗೆ ಹೇಳಿ ಜಗತ್ಪ್ರಭು ಹೃಷೀಕೇಶನು ನಡೆಯುವಂಥಹುದನ್ನು ಬದಲಾಯಿಸಲು ಬಯಸದೇ ಪುನಃ ತನ್ನ ಸದನವನ್ನು ಪ್ರವೇಶಿಸಿದನು.
16002015a ಶ್ವೋಭೂತೇಽಥ ತತಃ ಸಾಂಬೋ ಮುಸಲಂ ತದಸೂತ ವೈ|
16002015c ವೃಷ್ಣ್ಯಂಧಕವಿನಾಶಾಯ ಕಿಂಕರಪ್ರತಿಮಂ ಮಹತ್||
ಮಾರನೆಯ ದಿನ ಸಾಂಬನು ವೃಷ್ಣಿ-ಅಂಧಕರ ವಿನಾಶಕ್ಕೆ ಕಾರಣವಾಗುವ ರಾಕ್ಷಸ ಕಿಂಕರನಂತೆ ದೊಡ್ಡದಾಗಿದ್ದ ಮುಸಲವನ್ನು ಹೆತ್ತನು.
16002016a ಪ್ರಸೂತಂ ಶಾಪಜಂ ಘೋರಂ ತಚ್ಚ ರಾಜ್ಞೇ ನ್ಯವೇದಯನ್|
16002016c ವಿಷಣ್ಣರೂಪಸ್ತದ್ರಾಜಾ ಸೂಕ್ಷ್ಮಂ ಚೂರ್ಣಮಕಾರಯತ್||
16002017a ಪ್ರಾಕ್ಷಿಪನ್ಸಾಗರೇ ತಚ್ಚ ಪುರುಷಾ ರಾಜಶಾಸನಾತ್|
16002017c ಅಘೋಷಯಂಶ್ಚ ನಗರೇ ವಚನಾದಾಹುಕಸ್ಯ ಚ||
ಶಾಪದಿಂದಾಗಿ ಆ ಘೋರ ಮುಸಲವು ಹುಟ್ಟಿದುದನ್ನು ತಿಳಿದ ರಾಜ ಆಹುಕನು ದುಃಖಿತನಾದನು. ಅದನ್ನು ಸೂಕ್ಷ್ಮ ಚೂರ್ಣವನ್ನಾಗಿ ತಳೆಯಿಸಿ ಸಮುದ್ರದಲ್ಲಿ ಹಾಕಿಸಿದನು. ಅನಂತರ ಆಹುಕನ ವಚನದಂತೆ ಈ ಕಠೋರ ರಾಜಶಾಸನವನ್ನು ನಗರದಲ್ಲೆಲ್ಲಾ ಘೋಷಿಸಲಾಯಿತು:
16002018a ಅದ್ಯ ಪ್ರಭೃತಿ ಸರ್ವೇಷು ವೃಷ್ಣ್ಯಂಧಕಗೃಹೇಷ್ವಿಹ|
16002018c ಸುರಾಸವೋ ನ ಕರ್ತವ್ಯಃ ಸರ್ವೈರ್ನಗರವಾಸಿಭಿಃ||
“ಇಂದಿನಿಂದ ಸರ್ವ ನಗರವಾಸಿಗಳಿಗೂ ವೃಷ್ಣಿ-ಅಂಧಕರ ಎಲ್ಲ ಮನೆಗಳಲ್ಲಿಯೂ ಸುರಾಪಾನವನ್ನು ನಿಷೇಧಿಸಲಾಗಿದೆ!
16002019a ಯಶ್ಚ ನೋಽವಿದಿತಂ ಕುರ್ಯಾತ್ಪೇಯಂ ಕಶ್ಚಿನ್ನರಃ ಕ್ವ ಚಿತ್|
16002019c ಜೀವನ್ಸ ಶೂಲಮಾರೋಹೇತ್ಸ್ವಯಂ ಕೃತ್ವಾ ಸಬಾಂಧವಃ||
ಯಾರಾದರೂ ಇಂತಹ ಮಾದಕ ಪಾನೀಯವನ್ನು ತಯಾರಿಸಿದ್ದುದು ತಿಳಿದುಬಂದರೆ ಅವನನ್ನು ಅವನ ಬಾಂಧವರೊಂದಿಗೆ ಶೂಲಕ್ಕೇರಿಸಲಾಗುವುದು!”
16002020a ತತೋ ರಾಜಭಯಾತ್ಸರ್ವೇ ನಿಯಮಂ ಚಕ್ರಿರೇ ತದಾ|
16002020c ನರಾಃ ಶಾಸನಮಾಜ್ಞಾಯ ತಸ್ಯ ರಾಜ್ಞೋ ಮಹಾತ್ಮನಃ||
ಅನಂತರ ಆ ಮಹಾತ್ಮ ರಾಜನ ಶಾಸನವನ್ನು ತಿಳಿದ ನರರೆಲ್ಲರೂ ರಾಜನ ಭಯದಿಂದ ಅದೇ ನಿಯಮದಂತೆ ನಡೆದುಕೊಂಡರು.”
ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಮುಸಲೋತ್ಪತ್ತೌ ದ್ವಿತೀಯೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಮುಸಲೋತ್ಪತ್ತಿ ಎನ್ನುವ ಎರಡನೇ ಅಧ್ಯಾಯವು.