ಪರೀಕ್ಷಿತ

ಪರೀಕ್ಷಿತ ಪರೀಕ್ಷಿತನು ಪಾಂಡವ ಅರ್ಜುನನ ಮಗ ಅಭಿಮನ್ಯುವಿಗೆ ಉತ್ತರೆಯಲ್ಲಿ ಹುಟ್ಟಿದ ಮಗನು.  ಪಾಂಡವರು ಅಶ್ವಮೇಧ ಯಜ್ಞಕ್ಕಾಗಿ ಮರುತ್ತನ ನಿಧಿಯನ್ನು ಪಡೆಯಲು ಹಿಮಾಲಯಕ್ಕೆ ಹೋಗಿದ್ದಾಗ ಮತ್ತು ಅಶ್ವಮೇಧಕ್ಕೆಂದು ಕೃಷ್ಣನು ಇತರ ವೃಷ್ಣಿವೀರರೊಂದಿಗೆ ಹಸ್ತಿನಾಪುರಕ್ಕೆ ಬಂದಿದ್ದಾಗ ಪರಿಕ್ಷಿತನ ಜನ್ಮವಾಯಿತು. ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು. ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು. ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ…

Continue reading