ಪರಾಶರ

ಪರಾಶರ ಋಷಿ ಪರಾಶರನು ವಸಿಷ್ಠನ ಮೊಮ್ಮಗ. ಋಷಿ ಶಕ್ತಿ ಮತ್ತು ಅದೃಶ್ಯಂತಿಯರ ಮಗನು. ಸತ್ಯವತಿಯಲ್ಲಿ ಹುಟ್ಟಿದ ಕೃಷ್ಣದ್ವೈಪಾಯನ ವ್ಯಾಸನ ತಂದೆ.  ವಿಶ್ವಾಮಿತ್ರನ ಉಪಾಯದಂತೆ ರಾಜಾ ಕಲ್ಮಾಷಪಾದನನ್ನು ಆವರಿಸಿದ್ದ ರಾಕ್ಷಸನು ತನ್ನ ನೂರು ಮಕ್ಕಳನ್ನೂ ಭಕ್ಷಿಸಿ ನಾಶಪಡಿಸಲು, ವಸಿಷ್ಠನು ಆತ್ಮಹತ್ಯೆಗೆ ಬಹಳಷ್ಟು ಪ್ರಯತ್ನಿಸಿದನು. ಅವನ ಎಲ್ಲ ಪ್ರಯತ್ನಗಳೂ ವಿಫಲವಾಗಿ  ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ, ಶಕ್ತಿಯ ಪತ್ನಿ, ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು…

Continue reading