ಪರಾಶರ

ಪರಾಶರ ಋಷಿ ಪರಾಶರನು ವಸಿಷ್ಠನ ಮೊಮ್ಮಗ. ಋಷಿ ಶಕ್ತಿ ಮತ್ತು ಅದೃಶ್ಯಂತಿಯರ ಮಗನು. ಸತ್ಯವತಿಯಲ್ಲಿ ಹುಟ್ಟಿದ ಕೃಷ್ಣದ್ವೈಪಾಯನ ವ್ಯಾಸನ ತಂದೆ.  ವಿಶ್ವಾಮಿತ್ರನ ಉಪಾಯದಂತೆ ರಾಜಾ ಕಲ್ಮಾಷಪಾದನನ್ನು ಆವರಿಸಿದ್ದ ರಾಕ್ಷಸನು ತನ್ನ ನೂರು ಮಕ್ಕಳನ್ನೂ ಭಕ್ಷಿಸಿ ನಾಶಪಡಿಸಲು, ವಸಿಷ್ಠನು ಆತ್ಮಹತ್ಯೆಗೆ ಬಹಳಷ್ಟು ಪ್ರಯತ್ನಿಸಿದನು. ಅವನ ಎಲ್ಲ ಪ್ರಯತ್ನಗಳೂ ವಿಫಲವಾಗಿ  ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ, ಶಕ್ತಿಯ ಪತ್ನಿ, ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು…

Continue reading

ಪರೀಕ್ಷಿತ

ಪರೀಕ್ಷಿತ ಪರೀಕ್ಷಿತನು ಪಾಂಡವ ಅರ್ಜುನನ ಮಗ ಅಭಿಮನ್ಯುವಿಗೆ ಉತ್ತರೆಯಲ್ಲಿ ಹುಟ್ಟಿದ ಮಗನು.  ಪಾಂಡವರು ಅಶ್ವಮೇಧ ಯಜ್ಞಕ್ಕಾಗಿ ಮರುತ್ತನ ನಿಧಿಯನ್ನು ಪಡೆಯಲು ಹಿಮಾಲಯಕ್ಕೆ ಹೋಗಿದ್ದಾಗ ಮತ್ತು ಅಶ್ವಮೇಧಕ್ಕೆಂದು ಕೃಷ್ಣನು ಇತರ ವೃಷ್ಣಿವೀರರೊಂದಿಗೆ ಹಸ್ತಿನಾಪುರಕ್ಕೆ ಬಂದಿದ್ದಾಗ ಪರಿಕ್ಷಿತನ ಜನ್ಮವಾಯಿತು. ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು. ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು. ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ…

Continue reading

ಪಾಂಡು

ಪಾಂಡು ಪಾಂಡುವು ವಿಚಿತ್ರವೀರ್ಯನ ಪತ್ನಿ ಅಂಬಾಲಿಕೆಯಲ್ಲಿ ವ್ಯಾಸನಿಂದ ಜನಿಸಿದನು. ಇವನ ಪತ್ನಿಯರು ಕುಂತಿ ಮತ್ತು ಮಾದ್ರಿ. ಋಷಿಯ ಶಾಪದಿಂದ ಇವನಿಗೆ ಮಕ್ಕಳಾಗದೇ ಇರಲು ಇವನು ಕುಂತಿಯಲ್ಲಿ ಧರ್ಮ, ವಾಯು, ಮತ್ತು ಇಂದ್ರರಿಂದ ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರೆಂಬ ಮೂರು ಮಕ್ಕಳನ್ನೂ ಮಾದ್ರಿಯಲ್ಲಿ ಅಶ್ವಿನೀ ದೇವತೆಗಳಿಂದ ನಕುಲ-ಸಹದೇವರೆಂಬ ಇಬ್ಬರು ಮಕ್ಕಳನ್ನೂ ಪಡೆದನು. ಮಕ್ಕಳು ಚಿಕ್ಕವರಾಗಿರುವಾಗಲೇ ಪಾಂಡುವು ಮರಣ ಹೊಂದಿದನು.

Continue reading