ವಿಜಿಗೀಷಮಾಣವೃತ್ತಃ
ವಿಜಗೀಷಮಾಣವೃತ್ತಃ ಯುಧಿಷ್ಠಿರ-ಭೀಷ್ಮರ ಸಂವಾದ ವಿಜಯಾಭಿಲಾಷೀ ರಾಜನ ಧಾರ್ಮಿಕ ವ್ಯವಹಾರಗಳು ಮತ್ತು ಯುದ್ಧನೀತಿ ರಾಜನ ಕಪಟರಹಿತ ಧರ್ಮಯುಕ್ತ ವ್ಯವಹಾರದ ಪ್ರಶಂಸೆ ಮಹಾಜನರನ್ನೂ ಸಂಹರಿಸಿದರೂ ರಾಜನು ಪುಣ್ಯಲೋಕಗಳನ್ನು ಪಡೆಯುವುದು ಹೇಗೆ?
ವಿಜಗೀಷಮಾಣವೃತ್ತಃ ಯುಧಿಷ್ಠಿರ-ಭೀಷ್ಮರ ಸಂವಾದ ವಿಜಯಾಭಿಲಾಷೀ ರಾಜನ ಧಾರ್ಮಿಕ ವ್ಯವಹಾರಗಳು ಮತ್ತು ಯುದ್ಧನೀತಿ ರಾಜನ ಕಪಟರಹಿತ ಧರ್ಮಯುಕ್ತ ವ್ಯವಹಾರದ ಪ್ರಶಂಸೆ ಮಹಾಜನರನ್ನೂ ಸಂಹರಿಸಿದರೂ ರಾಜನು ಪುಣ್ಯಲೋಕಗಳನ್ನು ಪಡೆಯುವುದು ಹೇಗೆ?
ವ್ಯಾಸ ವ್ಯಾಸನು ಮಹಾಭಾರತ ಕಥೆಯ ರಚಕ ಮತ್ತು ಆ ಕಥೆಯ ಮುಖ್ಯ ಪಾತ್ರನೂ ಹೌದು. ಅವನು ವಸಿಷ್ಠನ ಮೊಮ್ಮಗ ಪರಾಶರನಿಗೆ ಸತ್ಯವತಿಯಲ್ಲಿ ಹುಟ್ಟಿದ ಮಗ. ದಾಶರಾಜನ ಸಾಕುಮಗಳು ಸತ್ಯವತಿಯು ಬೆಸ್ತರೊಂದಿಗೆ ವಾಸಿಸುತ್ತಿದ್ದುದರಿಂದ ಕೆಲವು ಕಾಲದವರೆಗೆ ಮೀನಿನ ವಾಸನೆಯನ್ನು ಹೊಂದಿದ್ದಳು. ತಂದೆಯ ಶುಶ್ರೂಷೆ ಮಾಡಲೋಸುಗ ನದಿಯಲ್ಲಿ ದೋಣಿಯನ್ನು ನಡೆಸುತ್ತಿದ್ದ ಅವಳನ್ನು ಒಮ್ಮೆ ತೀರ್ಥಯಾತ್ರೆ ಮಾಡುತ್ತಾ ತಿರುಗುತ್ತಿದ್ದ ಪರಾಶರನು ನೋಡಿದನು. ಸಿದ್ಧರ ಮನವನ್ನೂ ಸೆಳೆಯುವ ಆ ಅತೀವ ರೂಪಸಂಪನ್ನೆಯನ್ನು ನೋಡಿದ ಆ ಧೀಮಂತ…
ಶಕ್ರದೇವ ಕಲಿಂಗ ದೇಶದ ರಾಜಕುಮಾರ. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫). ಆ ಯುದ್ಧದ ವರ್ಣನೆಯು ಈ ರೀತಿಯಿದೆ: ಕಲಿಂಗಸ್ತು ಮಹೇಷ್ವಾಸಃ ಪುತ್ರಶ್ಚಾಸ್ಯ ಮಹಾರಥಃ| ಶಕ್ರದೇವ ಇತಿ ಖ್ಯಾತೋ ಜಘ್ನತುಃ ಪಾಂಡವಂ ಶರೈಃ|| ತತೋ ಭೀಮೋ ಮಹಾಬಾಹುರ್ವಿಧುನ್ವನ್ರುಚಿರಂ ಧನುಃ| ಯೋಧಯಾಮಾಸ ಕಾಲಿಂಗಾನ್ಸ್ವಬಾಹುಬಲಮಾಶ್ರಿತಃ|| ಶಕ್ರದೇವಸ್ತು ಸಮರೇ ವಿಸೃಜನ್ಸಾಯಕಾನ್ಬಹೂನ್| ಅಶ್ವಾಂ ಜಘಾನ ಸಮರೇ ಭೀಮಸೇನಸ್ಯ ಸಾಯಕೈಃ| ವವರ್ಷ ಶರವರ್ಷಾಣಿ ತಪಾಂತೇ ಜಲದೋ ಯಥಾ|| ಹತಾಶ್ವೇ ತು…
ಶುಕ ಶುಕನು ವ್ಯಾಸನ ಮಗ. ಮಹಾಭಾರತದ ರಚನೆಯಾದ ನಂತರ ಮೊಟ್ಟಮೊದಲನೆಯದಾಗಿ ವ್ಯಾಸನು ಅದನ್ನು ತನ್ನ ಮಗ ಶುಕನಿಗೆ ಉಪದೇಶಿಸಿದನು. ಶುಕನು ಮಹಾಭಾರತ ಕಥೆಯನ್ನು ಯಕ್ಷ-ಗಂಧರ್ವ-ರಾಕ್ಷಸರಿಗೆ ಹೇಳಿದನು.
ಶೌನಕ ಶೌನಕನು ಭಾರ್ಗವ ವಂಶದ ಓರ್ವ ಋಷಿಯು. ಮಹರ್ಷಿ ಭೃಗುವು ಪುಲೋಮೆಯಲ್ಲಿ ಚ್ಯವನನನ್ನು ಪಡೆದನು. ಭಾರ್ಗವ ಚ್ಯವನನು ಸುಕನ್ಯೆಯಿಂದ ಪ್ರಮತಿ ಎನ್ನುವ ಸುತನನ್ನು ಪಡೆದನು. ಪ್ರಮತಿಯು ಘೃತಾಚಿಯಲ್ಲಿ ರುರು ಎಂಬ ಹೆಸರಿನ ಮಗನನ್ನು ಪಡೆದನು. ರುರುವು ಪ್ರಮದ್ವರೆಯಲ್ಲಿ ಶುನಕನನ್ನು ಪಡೆದನು. ಶುನಕನ ಮಗನೇ ಶೌನಕ. ಶೌನಕನು ನೈಮಿಷಾರಣ್ಯದಲ್ಲಿ ಒಂದು ದೀರ್ಘ ಸತ್ರದಲ್ಲಿ ತೊಡಗಿದ್ದಾಗ ಸೂತ ಪೌರಾಣಿಕ ಉಗ್ರಶ್ರವನು ವ್ಯಾಸನ ಮಹಾಭಾರತವನ್ನು ಹೇಳಿದನು.
ಸಂಜಯ ಧೃತರಾಷ್ಟ್ರನ ಸೂತ ಮತ್ತು ಸ್ನೇಹಿತ; ಆಗಾಗ ಧೃತರಾಷ್ಟ್ರನಿಗೆ ಸಲಹೆಯನ್ನು ನೀಡಿದವ; ಧೃತರಾಷ್ಟ್ರನ ಅಪ್ಪಣೆಯಂತೆ ಕೌರವರ ರಾಯಭಾರಿಯಾಗಿ ಪಾಂಡವರಲ್ಲಿಗೆ ಹೋದವನು; ವ್ಯಾಸನಿಂದ ದಿವ್ಯ ದೃಷ್ಟಿಯನ್ನು ಪಡೆದು, ಮಹಾಭಾರತ ಯುದ್ಧದಲ್ಲಿ ಭಾಗವಹಿಸಿ, ಧೃತರಾಷ್ಟ್ರನಿಗೆ ಹತ್ತನೇ ದಿನದ ರಾತ್ರಿ, ಹದಿನೈದನೇ ದಿನದ ರಾತ್ರಿ, ಹದಿನೇಳನೇ ದಿನದ ರಾತ್ರಿ ಮತ್ತು ಹತ್ತೊಂಭತ್ತನೇ ದಿನದ ಬೆಳಿಗ್ಗೆ ಆ ಹದಿನೆಂಟು ದಿನಗಳ ಮಹಾಭಾರತ ಯುದ್ಧವನ್ನು ನಾಲ್ಕು ಭಾಗಗಳಲ್ಲಿ ವರ್ಣಿಸಿದವನು; ಧೃತರಾಷ್ಟ್ರನನ್ನು ಅನುಸರಿಸಿ ವನಕ್ಕೆ ಹೋಗಿ, ಧೃತರಾಷ್ಟ್ರ-ಗಾಂಧಾರಿ-ಕುಂತಿಯರು ಕಾಡ್ಗಿಚ್ಚಿನಲ್ಲಿ…