ಭೀಷ್ಮ

ಭೀಷ್ಮ ಕುರುರಾಜ ಶಂತನುವಿಗೆ ಗಂಗೆಯಲ್ಲಿ ಹುಟ್ಟಿದ ಭೀಷ್ಮನು ಮಹಾಭಾರತ ಕಥೆಯ ಮುಖ್ಯ ಪಾತ್ರಗಳಲ್ಲಿ ಓರ್ವನು. ಇವನ ಹೆಸರು ಮೊದಲು ದೇವವ್ರತನಂದಾಗಿತ್ತು. ನಂತರ ಸತ್ಯವತಿಯನ್ನು ತನ್ನ ತಂದೆಗಾಗಿ ತರಲು ತಾನು ಮಾಡಿದ ಘೋರ ಶಪಥದಿಂದಾಗಿ ಅವನು ಭೀಷ್ಮನೆಂದಾದನು.

Continue reading

ಗಂಗೆ

ಗಂಗೆ ಗಂಗೆಯು ಮಹಾಭಾರತದ ಮುಖ್ಯ ಪಾತ್ರಗಳಲ್ಲೊಂದಾದ ಭೀಷ್ಮನ ತಾಯಿ. ಕುರು ಚಕ್ರವರ್ತಿ ಶಂತನುವಿನ ಮಡದಿ. {} ಸೂರ್ಯವಂಶದ ಅರಸ ಭಗೀರಥನು ಗಂಗೆಯನ್ನು ಸ್ವರ್ಗಲೋಕದಿಂದ ಭೂಲೋಕಕ್ಕೆ ತಂದನು. {}

Continue reading

ಪರಾಶರ

ಪರಾಶರ ಋಷಿ ಪರಾಶರನು ವಸಿಷ್ಠನ ಮೊಮ್ಮಗ. ಋಷಿ ಶಕ್ತಿ ಮತ್ತು ಅದೃಶ್ಯಂತಿಯರ ಮಗನು. ಸತ್ಯವತಿಯಲ್ಲಿ ಹುಟ್ಟಿದ ಕೃಷ್ಣದ್ವೈಪಾಯನ ವ್ಯಾಸನ ತಂದೆ.  ವಿಶ್ವಾಮಿತ್ರನ ಉಪಾಯದಂತೆ ರಾಜಾ ಕಲ್ಮಾಷಪಾದನನ್ನು ಆವರಿಸಿದ್ದ ರಾಕ್ಷಸನು ತನ್ನ ನೂರು ಮಕ್ಕಳನ್ನೂ ಭಕ್ಷಿಸಿ ನಾಶಪಡಿಸಲು, ವಸಿಷ್ಠನು ಆತ್ಮಹತ್ಯೆಗೆ ಬಹಳಷ್ಟು ಪ್ರಯತ್ನಿಸಿದನು. ಅವನ ಎಲ್ಲ ಪ್ರಯತ್ನಗಳೂ ವಿಫಲವಾಗಿ  ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ, ಶಕ್ತಿಯ ಪತ್ನಿ, ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು…

Continue reading

ಉಗ್ರಶ್ರವ

ಉಗ್ರಶ್ರವ ಮಹಾಭಾರತ ಕಥೆಯನ್ನು ಲೋಮಹರ್ಷಣನ ಮಗ ಸೂತಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಒಂದು ದೀರ್ಘ ಸತ್ರದಲ್ಲಿ ತೊಡಗಿದ್ದ ಶೌನಕನೇ ಮೊದಲಾದ ಋಷಿ-ಮುನಿಗಳಿಗೆ ಹೇಳಿದನು.

Continue reading

ವೈಶಂಪಾಯನ

ವೈಶಂಪಾಯನ ವೈಶಂಪಾಯನನು ವ್ಯಾಸನ ಶಿಷ್ಯರಲ್ಲಿ ಓರ್ವನು. ಜನಮೇಜಯನ ಸರ್ಪಸತ್ರದಲ್ಲಿ ವ್ಯಾಸನ ಅನುಗ್ರಹದಿಂದ ಇವನು ಮಹಾಭಾರತ ಕಥೆಯನ್ನು ಮೊಟ್ಟಮೊದಲನೆಯ ಬಾರಿ ಮನುಷ್ಯಲೋಕದಲ್ಲಿ ಹೇಳಿದನು. ವೈಶಂಪಾಯನನು ಹೇಳಿದ ಮಹಾಭಾರತ ಕಥೆಯನ್ನೇ ಸೂತ ಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳಿಗೆ ಹೇಳಿದನು. 

Continue reading

ವ್ಯಾಸ

ವ್ಯಾಸ ವ್ಯಾಸನು ಮಹಾಭಾರತ ಕಥೆಯ ರಚಕ ಮತ್ತು ಆ ಕಥೆಯ ಮುಖ್ಯ ಪಾತ್ರನೂ ಹೌದು. ಅವನು ವಸಿಷ್ಠನ ಮೊಮ್ಮಗ ಪರಾಶರನಿಗೆ ಸತ್ಯವತಿಯಲ್ಲಿ ಹುಟ್ಟಿದ ಮಗ. ದಾಶರಾಜನ ಸಾಕುಮಗಳು ಸತ್ಯವತಿಯು ಬೆಸ್ತರೊಂದಿಗೆ ವಾಸಿಸುತ್ತಿದ್ದುದರಿಂದ ಕೆಲವು ಕಾಲದವರೆಗೆ ಮೀನಿನ ವಾಸನೆಯನ್ನು ಹೊಂದಿದ್ದಳು. ತಂದೆಯ ಶುಶ್ರೂಷೆ ಮಾಡಲೋಸುಗ ನದಿಯಲ್ಲಿ ದೋಣಿಯನ್ನು ನಡೆಸುತ್ತಿದ್ದ ಅವಳನ್ನು ಒಮ್ಮೆ ತೀರ್ಥಯಾತ್ರೆ ಮಾಡುತ್ತಾ ತಿರುಗುತ್ತಿದ್ದ ಪರಾಶರನು ನೋಡಿದನು. ಸಿದ್ಧರ ಮನವನ್ನೂ ಸೆಳೆಯುವ ಆ ಅತೀವ ರೂಪಸಂಪನ್ನೆಯನ್ನು ನೋಡಿದ ಆ ಧೀಮಂತ…

Continue reading

ಜನಮೇಜಯ

ಜನಮೇಜಯ ಪಾಂಡವ ಅರ್ಜುನನ ಮೊಮ್ಮಗ ಪರೀಕ್ಷಿತನ ಮಗ ಜನಮೇಜಯ. ರಾಜಾ ಪರೀಕ್ಷಿತನು ತಕ್ಷಕನ ತೇಜಸ್ಸಿನಿಂದ ಹತನಾದ ನಂತರ ಹಸ್ತಿನಾಪುರವಾಸೀ ಸರ್ವ ಜನರೂ ಸೇರಿ ನೃಪನ ಬಾಲಕ ಮಗ ಜನಮೇಜಯನನ್ನು ರಾಜನನ್ನಾಗಿ ಅಭಿಷೇಕಿಸಿದರು. ಬಾಲಕನಾಗಿದ್ದರೂ ಜನಮೇಜಯನು ವಿವೇಕಿಯೂ ಬುದ್ಧಿವಂತನೂ ಆಗಿದ್ದನು. ಅವನ ಮಂತ್ರಿ ಮತ್ತು ಪುರೋಹಿತರೊಡನೆ ಆ ಕುರುಪುಂಗವಾಗ್ರಜನು ತನ್ನ ವೀರ ಪ್ರಪಿತಾಮಹನಂತೆ ರಾಜ್ಯವನ್ನು ಆಳಿದನು. ರಾಜನು ತನ್ನ ಶತ್ರುಗಳನ್ನು ತಡೆಗಟ್ಟಬಲ್ಲ ಎನ್ನುವುದನ್ನು ನೋಡಿದ ನೃಪನ ಮಂತ್ರಿಗಳು ಕಾಶೀರಾಜ ಸುವರ್ಣವರ್ಮನಲ್ಲಿ ಅವನ ಮಗಳು…

Continue reading

ಪರೀಕ್ಷಿತ

ಪರೀಕ್ಷಿತ ಪರೀಕ್ಷಿತನು ಪಾಂಡವ ಅರ್ಜುನನ ಮಗ ಅಭಿಮನ್ಯುವಿಗೆ ಉತ್ತರೆಯಲ್ಲಿ ಹುಟ್ಟಿದ ಮಗನು.  ಪಾಂಡವರು ಅಶ್ವಮೇಧ ಯಜ್ಞಕ್ಕಾಗಿ ಮರುತ್ತನ ನಿಧಿಯನ್ನು ಪಡೆಯಲು ಹಿಮಾಲಯಕ್ಕೆ ಹೋಗಿದ್ದಾಗ ಮತ್ತು ಅಶ್ವಮೇಧಕ್ಕೆಂದು ಕೃಷ್ಣನು ಇತರ ವೃಷ್ಣಿವೀರರೊಂದಿಗೆ ಹಸ್ತಿನಾಪುರಕ್ಕೆ ಬಂದಿದ್ದಾಗ ಪರಿಕ್ಷಿತನ ಜನ್ಮವಾಯಿತು. ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು. ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು. ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ…

Continue reading