ವಿಚಿತ್ರವೀರ್ಯ

ವಿಚಿತ್ರವೀರ್ಯ ವಿಚಿತ್ರವೀರ್ಯನು ಕುರು ರಾಜ ಶಂತನುವಿಗೆ ಸತ್ಯವತಿಯಲ್ಲಿ ಹುಟ್ಟಿದ ಮಗನು. ಇವನ ಅಣ್ಣ ಚಿತ್ರಾಂಗದ. ಕಾಶೀರಾಜನ ಪುತ್ರಿಯರಾದ ಅಂಬಿಕಾ ಮತ್ತು ಅಂಬಾಲಿಕೆಯರನ್ನು ಮದುವೆಯಾದನು. ಸಣ್ಣ ವಯಸ್ಸಿನಲ್ಲಿಯೇ ಮಕ್ಕಳನ್ನು ಪಡೆಯದೆಯೇ ಯಕ್ಷ್ಮ ರೋಗದಿಂದ ಮೃತನಾದನು. ಧೃತರಾಷ್ಟ್ರ ಮತ್ತು ಪಾಂಡು ಇವರು ವಿಚಿತ್ರವೀರ್ಯನ ವಿಧವೆ ಪತ್ನಿಯರಲ್ಲಿ ವ್ಯಾಸನು ಹುಟ್ಟಿಸಿದ ಮಕ್ಕಳು.

Continue reading

ವೈಶಂಪಾಯನ

ವೈಶಂಪಾಯನ ವೈಶಂಪಾಯನನು ವ್ಯಾಸನ ಶಿಷ್ಯರಲ್ಲಿ ಓರ್ವನು. ಜನಮೇಜಯನ ಸರ್ಪಸತ್ರದಲ್ಲಿ ವ್ಯಾಸನ ಅನುಗ್ರಹದಿಂದ ಇವನು ಮಹಾಭಾರತ ಕಥೆಯನ್ನು ಮೊಟ್ಟಮೊದಲನೆಯ ಬಾರಿ ಮನುಷ್ಯಲೋಕದಲ್ಲಿ ಹೇಳಿದನು. ವೈಶಂಪಾಯನನು ಹೇಳಿದ ಮಹಾಭಾರತ ಕಥೆಯನ್ನೇ ಸೂತ ಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳಿಗೆ ಹೇಳಿದನು. 

Continue reading

ವ್ಯಾಸ

ವ್ಯಾಸ ವ್ಯಾಸನು ಮಹಾಭಾರತ ಕಥೆಯ ರಚಕ ಮತ್ತು ಆ ಕಥೆಯ ಮುಖ್ಯ ಪಾತ್ರನೂ ಹೌದು. ಅವನು ವಸಿಷ್ಠನ ಮೊಮ್ಮಗ ಪರಾಶರನಿಗೆ ಸತ್ಯವತಿಯಲ್ಲಿ ಹುಟ್ಟಿದ ಮಗ. ದಾಶರಾಜನ ಸಾಕುಮಗಳು ಸತ್ಯವತಿಯು ಬೆಸ್ತರೊಂದಿಗೆ ವಾಸಿಸುತ್ತಿದ್ದುದರಿಂದ ಕೆಲವು ಕಾಲದವರೆಗೆ ಮೀನಿನ ವಾಸನೆಯನ್ನು ಹೊಂದಿದ್ದಳು. ತಂದೆಯ ಶುಶ್ರೂಷೆ ಮಾಡಲೋಸುಗ ನದಿಯಲ್ಲಿ ದೋಣಿಯನ್ನು ನಡೆಸುತ್ತಿದ್ದ ಅವಳನ್ನು ಒಮ್ಮೆ ತೀರ್ಥಯಾತ್ರೆ ಮಾಡುತ್ತಾ ತಿರುಗುತ್ತಿದ್ದ ಪರಾಶರನು ನೋಡಿದನು. ಸಿದ್ಧರ ಮನವನ್ನೂ ಸೆಳೆಯುವ ಆ ಅತೀವ ರೂಪಸಂಪನ್ನೆಯನ್ನು ನೋಡಿದ ಆ ಧೀಮಂತ…

Continue reading