ಜನಮೇಜಯ
ಜನಮೇಜಯ ಪಾಂಡವ ಅರ್ಜುನನ ಮೊಮ್ಮಗ ಪರೀಕ್ಷಿತನ ಮಗ ಜನಮೇಜಯ. ರಾಜಾ ಪರೀಕ್ಷಿತನು ತಕ್ಷಕನ ತೇಜಸ್ಸಿನಿಂದ ಹತನಾದ ನಂತರ ಹಸ್ತಿನಾಪುರವಾಸೀ ಸರ್ವ ಜನರೂ ಸೇರಿ ನೃಪನ ಬಾಲಕ ಮಗ ಜನಮೇಜಯನನ್ನು ರಾಜನನ್ನಾಗಿ ಅಭಿಷೇಕಿಸಿದರು. ಬಾಲಕನಾಗಿದ್ದರೂ ಜನಮೇಜಯನು ವಿವೇಕಿಯೂ ಬುದ್ಧಿವಂತನೂ ಆಗಿದ್ದನು. ಅವನ ಮಂತ್ರಿ ಮತ್ತು ಪುರೋಹಿತರೊಡನೆ ಆ ಕುರುಪುಂಗವಾಗ್ರಜನು ತನ್ನ ವೀರ ಪ್ರಪಿತಾಮಹನಂತೆ ರಾಜ್ಯವನ್ನು ಆಳಿದನು. ರಾಜನು ತನ್ನ ಶತ್ರುಗಳನ್ನು ತಡೆಗಟ್ಟಬಲ್ಲ ಎನ್ನುವುದನ್ನು ನೋಡಿದ ನೃಪನ ಮಂತ್ರಿಗಳು ಕಾಶೀರಾಜ ಸುವರ್ಣವರ್ಮನಲ್ಲಿ ಅವನ ಮಗಳು…