ಶೌನಕ

ಶೌನಕನು ಭಾರ್ಗವ ವಂಶದ ಓರ್ವ ಋಷಿಯು.  ಮಹರ್ಷಿ ಭೃಗುವು ಪುಲೋಮೆಯಲ್ಲಿ ಚ್ಯವನನನ್ನು ಪಡೆದನು. ಭಾರ್ಗವ ಚ್ಯವನನು ಸುಕನ್ಯೆಯಿಂದ ಪ್ರಮತಿ ಎನ್ನುವ ಸುತನನ್ನು ಪಡೆದನು. ಪ್ರಮತಿಯು ಘೃತಾಚಿಯಲ್ಲಿ ರುರು ಎಂಬ ಹೆಸರಿನ ಮಗನನ್ನು ಪಡೆದನು. ರುರುವು ಪ್ರಮದ್ವರೆಯಲ್ಲಿ ಶುನಕನನ್ನು ಪಡೆದನು. ಶುನಕನ ಮಗನೇ ಶೌನಕ.

ಶೌನಕನು ನೈಮಿಷಾರಣ್ಯದಲ್ಲಿ ಒಂದು ದೀರ್ಘ ಸತ್ರದಲ್ಲಿ ತೊಡಗಿದ್ದಾಗ ಸೂತ ಪೌರಾಣಿಕ ಉಗ್ರಶ್ರವನು ವ್ಯಾಸನ ಮಹಾಭಾರತವನ್ನು ಹೇಳಿದನು.

 

Comments are closed.