ಪಾಂಡು

ಪಾಂಡುವು ವಿಚಿತ್ರವೀರ್ಯನ ಪತ್ನಿ ಅಂಬಾಲಿಕೆಯಲ್ಲಿ ವ್ಯಾಸನಿಂದ ಜನಿಸಿದನು. ಇವನ ಪತ್ನಿಯರು ಕುಂತಿ ಮತ್ತು ಮಾದ್ರಿ. ಋಷಿಯ ಶಾಪದಿಂದ ಇವನಿಗೆ ಮಕ್ಕಳಾಗದೇ ಇರಲು ಇವನು ಕುಂತಿಯಲ್ಲಿ ಧರ್ಮ, ವಾಯು, ಮತ್ತು ಇಂದ್ರರಿಂದ ಯುಧಿಷ್ಠಿರ, ಭೀಮಸೇನ ಮತ್ತು ಅರ್ಜುನರೆಂಬ ಮೂರು ಮಕ್ಕಳನ್ನೂ ಮಾದ್ರಿಯಲ್ಲಿ ಅಶ್ವಿನೀ ದೇವತೆಗಳಿಂದ ನಕುಲ-ಸಹದೇವರೆಂಬ ಇಬ್ಬರು ಮಕ್ಕಳನ್ನೂ ಪಡೆದನು. ಮಕ್ಕಳು ಚಿಕ್ಕವರಾಗಿರುವಾಗಲೇ ಪಾಂಡುವು ಮರಣ ಹೊಂದಿದನು.

Comments are closed.