ನಾರಾಯಣ

ಕೃಷ್ಣನು ನಾರಾಯಣನ ಅವತಾರ.

ಮಹಾಭಾರತದಲ್ಲಿ ನಾರಾಯಣನ ಸ್ವರೂಪವನ್ನು ಶಾಂತಿಪರ್ವದ (ಅಧ್ಯಾಯ 321-ರ339) ಮೋಕ್ಷಧರ್ಮಪರ್ವದಲ್ಲಿ ನಾರಾಯಣೀಯಂ ಎಂಬ ಭಾಗದಲ್ಲಿ ಹೇಳಲಾಗಿದೆ.

ಅಧ್ಯಾಯ 321: ಬದರಿಕಾಶ್ರಮದಲ್ಲಿ ನಾರದ-ನಾರಾಯಣರ ಸಂವಾದ (1-43).

ಅಧ್ಯಾಯ 322: ನಾರದನು ಶ್ವೇತದ್ವೀಪವನ್ನು ನೋಡಿದುದು (1-7); ಅಲ್ಲಿಯ ನಿವಾಸಿಗಳ ಸ್ವರೂಪವರ್ಣನೆ (8-12); ಉಪರಿಚರ ವಸುವಿನ ಚರಿತ್ರೆ (13-25); ಪಾಂಚರಾತ್ರದ ಉತ್ಪತ್ತಿಯ ಪ್ರಸಂಗ (26-52).

ಅಧ್ಯಾಯ 323: ಉಪರಿಚರನ ಯಜ್ಞದಲ್ಲಿ ಭಗವಂತನ ವಿಷಯದಲ್ಲಿ ಬೃಹಸ್ಪತಿಯ ಕೋಪ (1-14); ಏಕತನೇ ಮೊದಲಾದ ಋಷಿಗಳು ಶ್ವೇತದ್ವೀಪದ ಮತ್ತು ಭಗವಂತನ ಮಹಿಮೆಯನ್ನು ಹೇಳಿ ಬೃಹಸ್ಪತಿಯನ್ನು ಸಮಾಧಾನಗೊಳಿಸಿದುದು (15-57).

ಅಧ್ಯಾಯ 324: ಯಜ್ಞದಲ್ಲಿ ಹವಿಸ್ಸಾಗಿ ಉಪಯೋಗಿಸಬೇಕಾದ ’ಅಜ”ದ ಶಬ್ಧಾರ್ಥವು “ಧಾನ್ಯಬೀಜ” ಎಂದೇ ಹೊರತು ಆಡಲ್ಲ ಎಂಬ ವಿಷಯವನ್ನು ತಿಳಿದಿದ್ದರೂ ಪಕ್ಷಪಾತವನ್ನು ತೋರಿದ ಕಾರಣ ಉಪರಿಚರವಸುವು ಸ್ವರ್ಗದಿಂದ ಭ್ರಷ್ಟನಾದುದು (1-16); ಭಗವಂತನ ಕೃಪೆಯಿಂದ ಪುನಃ ಸ್ವಸ್ಥಾನವನ್ನು ಸೇರಿದುದು (17-39).

ಅಧ್ಯಾಯ 325: ನಾರದಕೃತ ಭಗವನ್ನಾಮಸ್ತೋತ್ರ (1-4).

ಅಧ್ಯಾಯ 326: ಶ್ವೇತದ್ವೀಪದಲ್ಲಿ ನಾರದನಿಗೆ ಭಗವಂತನ ದರ್ಶನ (1-16); ಭಗವಂತನಿಂದ ವಾಸುದೇವ-ಸಂಕರ್ಷಣಾದಿ ವ್ಯೂಹರೂಪಗಳ ಪರಿಚಯ (17-27); ಭವಿಷ್ಯದಲ್ಲಿ ಆಗುವ ಅವತಾರಗಳ ಸೂಚನೆ (28-100); ಕಥಾಶ್ರವಣದ ಮಹಿಮೆ (101-124).

ಅಧ್ಯಾಯ 327: ಭಗವಂತನು ಬ್ರಹ್ಮಾದಿಗಳಿಗೆ ಉಪದೇಶಿಸಿದ ಪ್ರವೃತ್ತಿ-ನಿವೃತ್ತಿ ಧರ್ಮಗಳ ರಹಸ್ಯವನ್ನು ವ್ಯಾಸನು ತನ್ನ ಶಿಷ್ಯರಿಗೆ ಹೇಳಿದುದು (1-107).

ಅಧ್ಯಾಯ 328: ಕೃಷ್ಣನು ಅರ್ಜುನನಿಗೆ ತನ್ನ ನಾಮಗಳ ಅರ್ಥವನ್ನು ತಿಳಿಸಿದುದು (1-53).

ಅಧ್ಯಾಯ 329: ಅಗ್ನಿ ಮತ್ತು ಸೋಮರು ಹೇಗೆ ಏಕಯೋನಿಗಳಾದರು ಎನ್ನುವ ಅರ್ಜುನನ ಪ್ರಶ್ನೆಗೆ ಶ್ರೀಕೃಷ್ಣನು ಸೃಷ್ಟಿಯ ಸಮಯದಲ್ಲಿ ಸೋಮ-ಅಗ್ನಿಯರು ಬ್ರಹ್ಮನಿಂದ ಹುಟ್ಟಿದುದನ್ನು ವರ್ಣಿಸಿ, ಬ್ರಾಹ್ಮಣರ ಮಹಾತ್ಮೆಯನ್ನು ಅನೇಕ ನಿದರ್ಶನಗಳ ಮೂಲಕ ವರ್ಣಿಸಿದುದು (1-50).

ಅಧ್ಯಾಯ 330: ಶ್ರೀಕೃಷ್ಣನು ತನ್ನ ನಾಮಗಳ ಅರ್ಥಗಳನ್ನು ಅರ್ಜುನನಿಗೆ ತಿಳಿಸಿದುದು (1-79).

ಅಧ್ಯಾಯ 331: ನಾರದನು ಶ್ವೇತದ್ವೀಪಕ್ಕೆ ಹೋಗಿ ನರ-ನಾರಾಯಣರನ್ನು ಸಂಧಿಸಿದುದು (1-52).

ಅಧ್ಯಾಯ 332: ನರನಾರಾಯಣರು ನಾರದನಿಗೆ ವಾಸುದೇವನ ಮಾಹಾತ್ಮ್ಯವನ್ನು ಹೇಳಿದುದು (1-26).

ಅಧ್ಯಾಯ 333: ನರನಾರಾಯಣರು ನಾರದನಿಗೆ ವರಾಹಸ್ವಾಮಿಯು ಪಿತೃಪೂಜೆಯ ನಿಯಮವನ್ನು ಸ್ಥಾಪಿಸಿದುದರ ಕುರಿತು ಹೇಳಿದುದು (1-25).

ಅಧ್ಯಾಯ 334: ನಾರಾಯಣೀಯ ಸಮಾಪ್ತಿ (1-17).

ಅಧ್ಯಾಯ 335: ಶ್ರೀಹರಿಯ ಹಯಗ್ರೀವಾವತಾರದ ಕಥೆ (1-72); ನಾರಾಯಣನ ಮಹಿಮೆ (73-89).

ಅಧ್ಯಾಯ 336: ಸಾತ್ವತಧರ್ಮದ ಉಪದೇಶ ಪರಂಪರೆ (1-50); ಭಗವಂತನಲ್ಲಿ ಅನನ್ಯ ಭಕ್ತಿಯ ಮಹಿಮೆ (51-82).

ಅಧ್ಯಾಯ 337: ನಾರಾಯಣನಿಂದ ಹುಟ್ಟಿದ ವ್ಯಾಸನ ಪೂರ್ವಜನ್ಮ ವೃತ್ತಾಂತ.

ಅಧ್ಯಾಯ 338: ವೈಜಯಂತ ಪರ್ವತದ ಮೇಲೆ ರುದ್ರನು ಪುರುಷನ ಕುರಿತು ಬ್ರಹ್ಮನಲ್ಲಿ ಪ್ರಶ್ನಿಸುತ್ತಾನೆ.

ಅಧ್ಯಾಯ 339: ಬ್ರಹ್ಮನು ರುದ್ರನಿಗೆ ಪುರುಷನನ್ನು ವರ್ಣಿಸುತ್ತಾನೆ.

Comments are closed.