ದ್ರೋಣ ಪರ್ವ: ಜಯದ್ರಥವಧ ಪರ್ವ
೬೬
ಅರ್ಜುನನು ದ್ರೋಣನನ್ನು ದಾಟಿ ಮುಂದುವರೆದುದು (೧-೪೩).
07066001 ಸಂಜಯ ಉವಾಚ|
07066001a ದುಃಶಾಸನಬಲಂ ಹತ್ವಾ ಸವ್ಯಸಾಚೀ ಧನಂಜಯಃ|
07066001c ಸಿಂಧುರಾಜಂ ಪರೀಪ್ಸನ್ವೈ ದ್ರೋಣಾನೀಕಮುಪಾದ್ರವತ್||
ಸಂಜಯನು ಹೇಳಿದನು: “ದುಃಶಾಸನನ ಸೇನೆಯನ್ನು ನಾಶಗೊಳಿಸಿ ಸವ್ಯಸಾಚೀ ಧನಂಜಯನು ಸಿಂಧುರಾಜನನ್ನು ತಲುಪಲು ಬಯಸಿ ದ್ರೋಣನ ಸೇನೆಯನ್ನು ಆಕ್ರಮಣಿಸಿದನು.
07066002a ಸ ತು ದ್ರೋಣಂ ಸಮಾಸಾದ್ಯ ವ್ಯೂಹಸ್ಯ ಪ್ರಮುಖೇ ಸ್ಥಿತಂ|
07066002c ಕೃತಾಂಜಲಿರಿದಂ ವಾಕ್ಯಂ ಕೃಷ್ಣಸ್ಯಾನುಮತೇಽಬ್ರವೀತ್||
ಅವನು ವ್ಯೂಹದ ಪ್ರಮುಖ ಸ್ಥಾನದಲ್ಲಿ ನಿಂತಿದ್ದ ದ್ರೋಣನನ್ನು ತಲುಪಿ, ಕೃಷ್ಣನ ಅನುಮತಿಯಂತೆ, ಕೈಮುಗಿದು ಈ ಮಾತನ್ನಾಡಿದನು:
07066003a ಶಿವೇನ ಧ್ಯಾಹಿ ಮಾಂ ಬ್ರಹ್ಮನ್ಸ್ವಸ್ತಿ ಚೈವ ವದಸ್ವ ಮೇ|
07066003c ಭವತ್ಪ್ರಸಾದಾದಿಚ್ಚಾಮಿ ಪ್ರವೇಷ್ಟುಂ ದುರ್ಭಿದಾಂ ಚಮೂಂ||
“ಬ್ರಹ್ಮನ್! ನನಗೆ ಒಳ್ಳೆಯದಾಗಲೆಂದು ಯೋಚಿಸು. ಸ್ವಸ್ತಿ ಎಂದೂ ನನಗೆ ಹೇಳು. ನಿನ್ನ ಪ್ರಸಾದದಿಂದ ಭೇದಿಸಲಸಾಧ್ಯವಾದ ಈ ಸೇನೆಯನ್ನು ಪ್ರವೇಶಿಸಲು ಬಯಸುತ್ತೇನೆ.
07066004a ಭವಾನ್ಪಿತೃಸಮೋ ಮಹ್ಯಂ ಧರ್ಮರಾಜಸಮೋಽಪಿ ಚ|
07066004c ತಥಾ ಕೃಷ್ಣಸಮಶ್ಚೈವ ಸತ್ಯಮೇತದ್ಬ್ರವೀಮಿ ತೇ||
ನಿನಗೆ ನಾನು ಸತ್ಯವನ್ನು ಹೇಳುತ್ತಿದ್ದೇನೆ. ನೀನು ನನ್ನ ತಂದೆಗೆ ಸಮ. ಧರ್ಮರಾಜನ ಸಮನೂ ಕೂಡ. ಹಾಗೆಯೇ ಕೃಷ್ಣನಂತೆಯೂ ಕೂಡ.
07066005a ಅಶ್ವತ್ಥಾಮಾ ಯಥಾ ತಾತ ರಕ್ಷಣೀಯಸ್ತವಾನಘ|
07066005c ತಥಾಹಮಪಿ ತೇ ರಕ್ಷ್ಯಃ ಸದೈವ ದ್ವಿಜಸತ್ತಮ||
ಅನಘ! ದ್ವಿಜಸತ್ತಮ! ತಂದೇ! ಅಶ್ವತ್ಥಾಮನು ಹೇಗೆ ನಿನ್ನಿಂದ ರಕ್ಷಣೀಯನೋ ಹಾಗೆ ನನ್ನನ್ನೂ ಕೂಡ ನೀನು ರಕ್ಷಿಸಬೇಕು.
07066006a ತವ ಪ್ರಸಾದಾದಿಚ್ಚಾಮಿ ಸಿಂಧುರಾಜಾನಮಾಹವೇ|
07066006c ನಿಹಂತುಂ ದ್ವಿಪದಾಂ ಶ್ರೇಷ್ಠ ಪ್ರತಿಜ್ಞಾಂ ರಕ್ಷ ಮೇ ವಿಭೋ||
ದ್ವಿಪದರಲ್ಲಿ ಶ್ರೇಷ್ಠ! ವಿಭೋ! ನಿನ್ನ ಪ್ರಸಾದದಿಂದ ಆಹವದಲ್ಲಿ ಸಿಂಧುರಾಜನನ್ನು ಸಂಹರಿಸಲು ಬಯಸುತ್ತೇನೆ. ನನ್ನ ಪ್ರತಿಜ್ಞೆಯನ್ನು ರಕ್ಷಿಸು!”
07066007a ಏವಮುಕ್ತಸ್ತದಾಚಾರ್ಯಃ ಪ್ರತ್ಯುವಾಚ ಸ್ಮಯನ್ನಿವ|
07066007c ಮಾಮಜಿತ್ವಾ ನ ಬೀಭತ್ಸೋ ಶಕ್ಯೋ ಜೇತುಂ ಜಯದ್ರಥಃ||
ಇದನ್ನು ಕೇಳಿದ ಆಚಾರ್ಯನು ನಸುನಕ್ಕು ಉತ್ತರಿಸಿದನು: “ಬೀಭತ್ಸೋ! ನನ್ನನ್ನು ಗೆಲ್ಲದೇ ಜಯದ್ರಥನನ್ನು ಗೆಲ್ಲಲು ಶಕ್ಯನಾಗುವುದಿಲ್ಲ!”
07066008a ಏತಾವದುಕ್ತ್ವಾ ತಂ ದ್ರೋಣಃ ಶರವ್ರಾತೈರವಾಕಿರತ್|
07066008c ಸರಥಾಶ್ವಧ್ವಜಂ ತೀಕ್ಷ್ಣೈಃ ಪ್ರಹಸನ್ವೈ ಸಸಾರಥಿಂ||
ಹೀಗೆ ಅವನಿಗೆ ಹೇಳಿ ದ್ರೋಣನು ಜೋರಾಗಿ ನಕ್ಕು ತೀಕ್ಷ್ಣ ಶರವ್ರಾತಗಳಿಂದ ಅವನ ರಥ-ಕುದುರೆ-ಧ್ವಜ ಮತ್ತು ಸಾರಥಿಯೊಂದಿಗೆ ಅವನನ್ನು ಮುಚ್ಚಿದನು.
07066009a ತತೋಽರ್ಜುನಃ ಶರವ್ರಾತಾನ್ದ್ರೋಣಸ್ಯಾವಾರ್ಯ ಸಾಯಕೈಃ|
07066009c ದ್ರೋಣಮಭ್ಯರ್ದಯದ್ಬಾಣೈರ್ಘೋರರೂಪೈರ್ಮಹತ್ತರೈಃ||
ಆಗ ಅರ್ಜುನನು ಸಾಯಕಗಳಿಂದ ದ್ರೋಣನ ಶರವ್ರಾತಗಳನ್ನು ತಡೆದು ಘೋರರೂಪದ ಮಹತ್ತರ ಬಾಣಗಳಿಂದ ದ್ರೋಣನನ್ನು ಆಕ್ರಮಣಿಸಿದನು.
07066010a ವಿವ್ಯಾಧ ಚ ರಣೇ ದ್ರೋಣಮನುಮಾನ್ಯ ವಿಶಾಂ ಪತೇ|
07066010c ಕ್ಷತ್ರಧರ್ಮಂ ಸಮಾಸ್ಥಾಯ ನವಭಿಃ ಸಾಯಕೈಃ ಪುನಃ||
ವಿಶಾಂಪತೇ! ಅನುಮಾನಿಸಿ ನಂತರ ರಣದಲ್ಲಿ ಕ್ಷತ್ರಧರ್ಮವನ್ನು ಪಾಲಿಸುತ್ತಾ ದ್ರೋಣನನ್ನು ಒಂಭತ್ತು ಸಾಯಕಗಳಿಂದ ಪುನಃ ಹೊಡೆದನು.
07066011a ತಸ್ಯೇಷೂನಿಷುಭಿಶ್ಚಿತ್ತ್ವಾ ದ್ರೋಣೋ ವಿವ್ಯಾಧ ತಾವುಭೌ|
07066011c ವಿಷಾಗ್ನಿಜ್ವಲನಪ್ರಖ್ಯೈರಿಷುಭಿಃ ಕೃಷ್ಣಪಾಂಡವೌ||
ಆ ಬಾಣಗಳನ್ನು ತುಂಡರಿಸಿ ದ್ರೋಣನು ವಿಷಾಗ್ನಿಜ್ವಲನದ ಪ್ರಖರತೆಯುಳ್ಳ ಬಾಣಗಳಿಂದ ಕೃಷ್ಣ-ಪಾಂಡವರಿಬ್ಬರನ್ನೂ ಹೊಡೆದನು.
07066012a ಇಯೇಷ ಪಾಂಡವಸ್ತಸ್ಯ ಬಾಣೈಶ್ಚೇತ್ತುಂ ಶರಾಸನಂ|
07066012c ತಸ್ಯ ಚಿಂತಯತಸ್ತ್ವೇವಂ ಫಲ್ಗುನಸ್ಯ ಮಹಾತ್ಮನಃ|
07066012e ದ್ರೋಣಃ ಶರೈರಸಂಭ್ರಾಂತೋ ಜ್ಯಾಂ ಚಿಚ್ಚೇದಾಶು ವೀರ್ಯವಾನ್||
ಪಾಂಡವನು ಅವನ ಬಿಲ್ಲನ್ನು ಬಾಣಗಳಿಂದ ತುಂಡರಿಸಲು ಯೋಚಿಸುತ್ತಿರಲು ಸಂಭ್ರಾಂತನಾದ ವೀರ್ಯವಾನ್ ದ್ರೋಣನು ಶರಗಳಿಂದ ಮಹಾತ್ಮ ಫಲ್ಗುನನ ಶಿಂಜನಿಯನ್ನು ಕತ್ತರಿಸಿದನು.
07066013a ವಿವ್ಯಾಧ ಚ ಹಯಾನಸ್ಯ ಧ್ವಜಂ ಸಾರಥಿಮೇವ ಚ|
07066013c ಅರ್ಜುನಂ ಚ ಶರೈರ್ವೀರಂ ಸ್ಮಯಮಾನೋಽಭ್ಯವಾಕಿರತ್||
ನಸುನಗುತ್ತಾ ಅವನ ಕುದುರೆಗಳನ್ನೂ, ಧ್ವಜವನ್ನೂ, ಸಾರಥಿಯನ್ನೂ, ವೀರ ಅರ್ಜುನನ್ನೂ ಶರಗಳಿಂದ ಹೊಡೆದು ಮುಚ್ಚಿದನು.
07066014a ಏತಸ್ಮಿನ್ನಂತರೇ ಪಾರ್ಥಃ ಸಜ್ಜಂ ಕೃತ್ವಾ ಮಹದ್ಧನುಃ|
07066014c ವಿಶೇಷಯಿಷ್ಯನ್ನಾಚಾರ್ಯಂ ಸರ್ವಾಸ್ತ್ರವಿದುಷಾಂ ವರಂ|
07066014e ಮುಮೋಚ ಷಟ್ಶತಾನ್ಬಾಣಾನ್ಗೃಹೀತ್ವೈಕಮಿವ ದ್ರುತಂ||
ಇದರ ಮಧ್ಯೆ ಪಾರ್ಥನು ಆ ಮಹಾ ಧನುಸ್ಸನ್ನು ಸಜ್ಜುಗೊಳಿಸಿ ಸರ್ವಾಸ್ತ್ರವಿದುಷರಲ್ಲಿ ಶ್ರೇಷ್ಠನಾದ ಆಚಾರ್ಯನನ್ನೂ ಮೀರಿಸಿ, ಒಂದೇ ಬಾಣವನ್ನು ತೆಗೆದುಕೊಂಡು ಬಿಟ್ಟ ಹಾಗೆ ಕಂಡರೂ, ಅವನ ಮೇಲೆ ಆರುನೂರು ಬಾಣಗಳನ್ನು ಪ್ರಯೋಗಿಸಿದನು.
07066015a ಪುನಃ ಸಪ್ತ ಶತಾನನ್ಯಾನ್ಸಹಸ್ರಂ ಚಾನಿವರ್ತಿನಾಂ|
07066015c ಚಿಕ್ಷೇಪಾಯುತಶಶ್ಚಾನ್ಯಾಂಸ್ತೇಽಘ್ನನ್ದ್ರೋಣಸ್ಯ ತಾಂ ಚಮೂಂ||
ಪುನಃ ಇತರ ಏಳು ನೂರು ಬಾಣಗಳನ್ನೂ, ನಂತರ ಸಹಸ್ರ ಬಾಣಗಳನ್ನೂ, ನಂತರ ಹತ್ತು ಸಾವಿರ ಬಾಣಗಳನ್ನೂ ಪ್ರಯೋಗಿಸಿ ದ್ರೋಣನನ್ನು ಅನುಸರಿಸಿ ಬಂದಿದ್ದ ಆ ಸೇನೆಯನ್ನು ಸಂಹರಿಸಿದನು.
07066016a ತೈಃ ಸಮ್ಯಗಸ್ತೈರ್ಬಲಿನಾ ಕೃತಿನಾ ಚಿತ್ರಯೋಧಿನಾ|
07066016c ಮನುಷ್ಯವಾಜಿಮಾತಂಗಾ ವಿದ್ಧಾಃ ಪೇತುರ್ಗತಾಸವಃ||
ಆ ಬಲಿ ಚಿತ್ರಯೋಧಿ ಯಶಸ್ವಿಯ ಬಾಣಗಳು ತಗಲಿ ಗಾಯಗೊಂಡ ಅನೇಕ ಮನುಷ್ಯ-ಕುದುರೆ-ಆನೆಗಳು ಅಸುನೀಗಿ ಬಿದ್ದರು.
07066017a ವಿದ್ರುತಾಶ್ಚ ರಣೇ ಪೇತುಃ ಸಂಚಿನ್ನಾಯುಧಜೀವಿತಾಃ|
07066017c ರಥಿನೋ ರಥಮುಖ್ಯೇಭ್ಯಃ ಸಹಯಾಃ ಶರಪೀಡಿತಾಃ||
ಅವನ ಶರಗಳಿಂದ ಪೀಡಿತರಾಗಿ ರಥಿಗಳು ಮತ್ತು ರಥಪ್ರಮುಖರು ಆಯುಧ-ಜೀವಿತಗಳನ್ನು ಕಳೆದುಕೊಂಡು ಬಿದ್ದರು.
07066018a ಚೂರ್ಣಿತಾಕ್ಷಿಪ್ತದಗ್ಧಾನಾಂ ವಜ್ರಾನಿಲಹುತಾಶನೈಃ|
07066018c ತುಲ್ಯರೂಪಾ ಗಜಾಃ ಪೇತುರ್ಗಿರ್ಯಗ್ರಾಂಬುದವೇಶ್ಮನಾಂ||
ಆನೆಗಳು ವಜ್ರ, ಭಿರುಗಾಳಿ ಅಥವಾ ಹುತಾಶನರಿಂದ ಪುಡಿಯಾದ, ಚದುರಿದ ಅಥವಾ ಭಸ್ಮವಾದ ಪರ್ವತಗಳೋ ಅಥವಾ ಮೋಡಗಳೋ ಅಥವಾ ಮನೆಗಳ ಗುಂಪೋ ಎನ್ನುವಂತೆ ಕೆಳಗೆ ಉರುಳಿದವು.
07066019a ಪೇತುರಶ್ವಸಹಸ್ರಾಣಿ ಪ್ರಹತಾನ್ಯರ್ಜುನೇಷುಭಿಃ|
07066019c ಹಂಸಾ ಹಿಮವತಃ ಪೃಷ್ಠೇ ವಾರಿವಿಪ್ರಹತಾ ಇವ||
ಅರ್ಜುನನ ಬಾಣಗಳ ಹೊಡೆತಕ್ಕೆ ಸಿಕ್ಕ ಸಹಸ್ರಾರು ಕುದುರೆಗಳು ಹಿಮವತ್ ಪರ್ವತದ ಇಳಿಜಾರುಗಳಲ್ಲಿ ನೀರಿನ ಪ್ರವಾಹಕ್ಕೆ ಸಿಕ್ಕಿ ಉರುಳಿದ ಹಂಸಗಳಂತೆ ಉರುಳಿ ಬಿದ್ದವು.
07066020a ರಥಾಶ್ವದ್ವಿಪಪತ್ತ್ಯೋಘಾಃ ಸಲಿಲೌಘಾ ಇವಾದ್ಭುತಾಃ|
07066020c ಯುಗಾಂತಾದಿತ್ಯರಶ್ಮ್ಯಾಭೈಃ ಪಾಂಡವಾಸ್ತಶರೈರ್ಹತಾಃ||
ಯುಗಾಂತದ ಅದ್ಭುತ ಪ್ರಳಯದಲ್ಲಿ ಮುಳುಗಿಹೋಗುವಂತೆ ಮತ್ತು ಸೂರ್ಯನ ರಶ್ಮಿಗಳಿಂದ ಸುಟ್ಟುಹೋಗುವಂತೆ ಪಾಂಡವನ ಶರಗಳಿಂದ ರಥ-ಕುದುರೆ-ಆನೆ-ಪದಾತಿಗಳು ಹತವಾದವು.
07066021a ತಂ ಪಾಂಡವಾದಿತ್ಯಶರಾಂಶುಜಾಲಂ
ಕುರುಪ್ರವೀರಾನ್ಯುಧಿ ನಿಷ್ಟಪಂತಂ|
07066021c ಸ ದ್ರೋಣಮೇಘಃ ಶರವರ್ಷವೇಗೈಃ
ಪ್ರಾಚ್ಚಾದಯನ್ಮೇಘ ಇವಾರ್ಕರಶ್ಮೀನ್||
ಬಾಣಗಳ ಜಾಲದಿಂದ ಯುದ್ಧದಲ್ಲಿ ಕುರುಪ್ರವೀರರನ್ನು ಸುಡುತ್ತಿದ್ದ ಪಾಂಡವನೆಂಬ ಆ ಆದಿತ್ಯನನ್ನು ದ್ರೋಣವೆಂಬ ಮೋಡವು ವೇಗವಾದ ಶರವರ್ಷಗಳಿಂದ ಮೇಘವು ಸೂರ್ಯನ ಕಿರಣಗಳನ್ನು ಹೇಗೋ ಹಾಗೆ ಮುಚ್ಚಿಬಿಟ್ಟಿತು.
07066022a ಅಥಾತ್ಯರ್ಥವಿಸೃಷ್ಟೇನ ದ್ವಿಷತಾಮಸುಭೋಜಿನಾ|
07066022c ಆಜಘ್ನೇ ವಕ್ಷಸಿ ದ್ರೋಣೋ ನಾರಾಚೇನ ಧನಂಜಯಂ||
ಆಗ ದ್ರೋಣನು ಬಲವಾಗಿ ಪ್ರಯೋಗಿಸಿದ ಶತ್ರುಗಳ ಪ್ರಾಣವನ್ನೇ ಉಣ್ಣುವ ನಾರಾಚದಿಂದ ಧನಂಜಯನ ಎದೆಗೆ ಹೊಡೆದನು.
07066023a ಸ ವಿಹ್ವಲಿತಸರ್ವಾಂಗಃ ಕ್ಷಿತಿಕಂಪೇ ಯಥಾಚಲಃ|
07066023c ಧೈರ್ಯಮಾಲಂಬ್ಯ ಬೀಭತ್ಸುರ್ದ್ರೋಣಂ ವಿವ್ಯಾಧ ಪತ್ರಿಭಿಃ||
ಬೀಭತ್ಸುವು ಸರ್ವಾಂಗಗಳಲ್ಲಿ ವಿಹ್ವಲಗೊಂಡು ಭೂಕಂಪದಲ್ಲಿ ಪರ್ವತವು ನಡುಗುವಂತೆ ನಡುಗಿದನು. ಅನಂತರ ಧೈರ್ಯವನ್ನು ಪಡೆದುಕೊಂಡು ದ್ರೋಣನನ್ನು ಪತ್ರಿಗಳಿಂದ ಹೊಡೆದನು.
07066024a ದ್ರೋಣಸ್ತು ಪಂಚಭಿರ್ಬಾಣೈರ್ವಾಸುದೇವಮತಾಡಯತ್|
07066024c ಅರ್ಜುನಂ ಚ ತ್ರಿಸಪ್ತತ್ಯಾ ಧ್ವಜಂ ಚಾಸ್ಯ ತ್ರಿಭಿಃ ಶರೈಃ||
ದ್ರೋಣನಾದರೋ ಐದು ಬಾಣಗಳಿಂದ ವಾಸುದೇವನನ್ನು ಹೊಡೆದನು ಮತ್ತು ಅರ್ಜುನನನ್ನು ಮೂರು ಮತ್ತು ಎಪ್ಪತ್ತು ಹಾಗೂ ಧ್ವಜವನ್ನು ಮೂರು ಶರಗಳಿಂದ ಹೊಡೆದನು.
07066025a ವಿಶೇಷಯಿಷ್ಯಂ ಶಿಷ್ಯಂ ಚ ದ್ರೋಣೋ ರಾಜನ್ಪರಾಕ್ರಮೀ|
07066025c ಅದೃಶ್ಯಮರ್ಜುನಂ ಚಕ್ರೇ ನಿಮೇಷಾಚ್ಚರವೃಷ್ಟಿಭಿಃ||
ರಾಜನ್! ಶಿಷ್ಯನನ್ನೂ ಮೀರಿಸಿ ಪರಾಕ್ರಮಿ ದ್ರೋಣನು ಕಣ್ಣು ಮುಚ್ಚಿ ಬಿಡುವುದರಲ್ಲಿ ಶರ ವೃಷ್ಟಿಗಳಿಂದ ಅರ್ಜುನನನ್ನು ಅದೃಶ್ಯನನ್ನಾಗಿ ಮಾಡಿಬಿಟ್ಟನು.
07066026a ಪ್ರಸಕ್ತಾನ್ಪತತೋಽದ್ರಾಕ್ಷ್ಮ ಭಾರದ್ವಾಜಸ್ಯ ಸಾಯಕಾನ್|
07066026c ಮಂಡಲೀಕೃತಮೇವಾಸ್ಯ ಧನುಶ್ಚಾದೃಶ್ಯತಾದ್ಭುತಂ||
ಭಾರದ್ವಾಜನ ಸಾಯಕಗಳು ಒಂದೇ ಸಮನೆ ಬೀಳುತ್ತಿರುವುದನ್ನೂ, ಅವನು ಧನುಸ್ಸನ್ನು ಮಂಡಲಾಕಾರವಾಗಿ ಬಗ್ಗಿಸಿ ಹಿಡಿದಿದ್ದ ಆ ಅದ್ಭುತವನ್ನೂ ನಾವು ನೋಡಿದೆವು.
07066027a ತೇಽಭ್ಯಯುಃ ಸಮರೇ ರಾಜನ್ವಾಸುದೇವಧನಂಜಯೌ|
07066027c ದ್ರೋಣಸೃಷ್ಟಾಃ ಸುಬಹವಃ ಕಂಕಪತ್ರಪರಿಚ್ಚದಾಃ||
ರಾಜನ್! ದ್ರೋಣನಿಂದ ಬಿಡಲ್ಪಟ್ಟ ಆ ಅನೇಕ ಕಂಕಪತ್ರಗಳಿಂದ ಮುಚ್ಚಲ್ಪಟ್ಟ ಬಾಣಗಳು ಸಮರದಲ್ಲಿ ಎಡೆಬಿಡದೇ ವಾಸುದೇವ-ಧನಂಜಯರ ಮೇಲೆ ಬೀಳುತ್ತಿದ್ದವು.
07066028a ತದ್ದೃಷ್ಟ್ವಾ ತಾದೃಶಂ ಯುದ್ಧಂ ದ್ರೋಣಪಾಂಡವಯೋಸ್ತದಾ|
07066028c ವಾಸುದೇವೋ ಮಹಾಬುದ್ಧಿಃ ಕಾರ್ಯವತ್ತಾಮಚಿಂತಯತ್||
ಆ ರೀತಿಯ ದ್ರೋಣ-ಪಾಂಡವರ ಯುದ್ಧವನ್ನು ನೋಡಿದ ಮಹಾಬುದ್ಧಿ ವಾಸುದೇವನು ಮಾಡಬೇಕಾದ ಕಾರ್ಯದ ಕುರಿತು ಯೋಚಿಸಿದನು.
07066029a ತತೋಽಬ್ರವೀದ್ವಾಸುದೇವೋ ಧನಂಜಯಮಿದಂ ವಚಃ|
07066029c ಪಾರ್ಥ ಪಾರ್ಥ ಮಹಾಬಾಹೋ ನ ನಃ ಕಾಲಾತ್ಯಯೋ ಭವೇತ್||
ಆಗ ವಾಸುದೇವನು ಧನಂಜಯನಿಗೆ ಈ ಮಾತನ್ನಾಡಿದನು: “ಪಾರ್ಥ! ಪಾರ್ಥ! ಮಹಾಬಾಹೋ! ನಾವು ಸಮಯವನ್ನು ಕಳೆಯಬಾರದು.
07066030a ದ್ರೋಣಮುತ್ಸೃಜ್ಯ ಗಚ್ಚಾಮಃ ಕೃತ್ಯಮೇತನ್ಮಹತ್ತರಂ|
07066030c ಪಾರ್ಥಶ್ಚಾಪ್ಯಬ್ರವೀತ್ಕೃಷ್ಣಂ ಯಥೇಷ್ಟಮಿತಿ ಕೇಶವ||
ದ್ರೋಣನನ್ನು ಬಿಟ್ಟು ಹೋಗೋಣ. ಇದೇ ಮಾಡಬೇಕಾದ ಮಹತ್ತರ ಕಾರ್ಯವಿದೆ!” ಅದಕ್ಕೆ ಪಾರ್ಥನು ಕೃಷ್ಣನಿಗೆ “ಕೇಶವ! ನಿನ್ನ ಇಚ್ಛೆಯಂತೆಯೇ ಆಗಲಿ!” ಎಂದನು.
07066031a ತತಃ ಪ್ರದಕ್ಷಿಣಂ ಕೃತ್ವಾ ದ್ರೋಣಂ ಪ್ರಾಯಾನ್ಮಹಾಭುಜಃ|
07066031c ಪರಿವೃತ್ತಶ್ಚ ಬೀಭತ್ಸುರಗಚ್ಚದ್ವಿಸೃಜಂ ಶರಾನ್||
ಆಗ ಆ ಮಹಾಭುಜ ಬೀಭತ್ಸುವು ದ್ರೋಣನಿಗೆ ಪ್ರದಕ್ಷಿಣೆಯನ್ನು ಹಾಕಿ, ಸುತ್ತಲೂ ಬಾಣಗಳ ಮಳೆಗರೆಯುತ್ತಾ ಮುಂದೆ ಹೊರಟನು.
07066032a ತತೋಽಬ್ರವೀತ್ಸ್ಮಯನ್ದ್ರೋಣಃ ಕ್ವೇದಂ ಪಾಂಡವ ಗಮ್ಯತೇ|
07066032c ನನು ನಾಮ ರಣೇ ಶತ್ರುಮಜಿತ್ವಾ ನ ನಿವರ್ತಸೇ||
ಆಗ ದ್ರೋಣನು ನಸುನಗುತ್ತಾ ಕೇಳಿದನು: “ಪಾಂಡವ! ಎಲ್ಲಿಗೆ ಹೋಗುತ್ತಿರುವೆ? ನೀನು ರಣದಲ್ಲಿ ಶತ್ರುವನ್ನು ಗೆಲ್ಲದೆಯೇ ಹಿಂದೆಸರಿಯುವವನಲ್ಲವಲ್ಲ!”
07066033 ಅರ್ಜುನ ಉವಾಚ|
07066033a ಗುರುರ್ಭವಾನ್ನ ಮೇ ಶತ್ರುಃ ಶಿಷ್ಯಃ ಪುತ್ರಸಮೋಽಸ್ಮಿ ತೇ|
07066033c ನ ಚಾಸ್ತಿ ಸ ಪುಮಾಽಲ್ಲೋಕೇ ಯಸ್ತ್ವಾಂ ಯುಧಿ ಪರಾಜಯೇತ್||
ಅರ್ಜುನನು ಹೇಳಿದನು: “ನೀನು ನನ್ನ ಗುರು! ಶತ್ರುವಲ್ಲವಲ್ಲ! ಶಿಷ್ಯನಾದ ನಾನು ನಿನಗೆ ಮಗನ ಸಮನಾಗಿದ್ದೇನೆ. ಯುದ್ಧದಲ್ಲಿ ನಿನ್ನನ್ನು ಪರಾಜಯಗೊಳಿಸುವ ಪುರುಷನು ಲೋಕಗಳಲ್ಲಿಯೇ ಇಲ್ಲ!”
07066034 ಸಂಜಯ ಉವಾಚ|
07066034a ಏವಂ ಬ್ರುವಾಣೋ ಬೀಭತ್ಸುರ್ಜಯದ್ರಥವಧೋತ್ಸುಕಃ|
07066034c ತ್ವರಾಯುಕ್ತೋ ಮಹಾಬಾಹುಸ್ತತ್ಸೈನ್ಯಂ ಸಮುಪಾದ್ರವತ್||
ಸಂಜಯನು ಹೇಳಿದನು: “ಹೀಗೆ ಹೇಳುತ್ತಾ ಜಯದ್ರಥನ ವಧೆಗೆ ಉತ್ಸುಕನಾಗಿದ್ದ ಮಹಾಬಾಹು ಬೀಭತ್ಸುವು ಅವಸರದೊಂದಿಗೆ ಆ ಸೇನೆಯನ್ನು ಆಕ್ರಮಣಿಸಿದನು.
07066035a ತಂ ಚಕ್ರರಕ್ಷೌ ಪಾಂಚಾಲ್ಯೌ ಯುಧಾಮನ್ಯೂತ್ತಮೌಜಸೌ|
07066035c ಅನ್ವಯಾತಾಂ ಮಹಾತ್ಮಾನೌ ವಿಶಂತಂ ತಾವಕಂ ಬಲಂ||
ಅವನನ್ನು ಅನುಸರಿಸಿ ಬಂದ ಚಕ್ರರಕ್ಷಕರಾದ ಪಾಂಚಾಲ್ಯ ಮಹಾತ್ಮ ಯುಧಾಮನ್ಯು-ಉತ್ತಮೌಜಸರಿಬ್ಬರೂ ನಿನ್ನ ಸೇನೆಯನ್ನು ಪ್ರವೇಶಿಸಿದರು.
07066036a ತತೋ ಜಯೋ ಮಹಾರಾಜ ಕೃತವರ್ಮಾ ಚ ಸಾತ್ತ್ವತಃ|
07066036c ಕಾಂಬೋಜಶ್ಚ ಶ್ರುತಾಯುಶ್ಚ ಧನಂಜಯಮವಾರಯನ್||
ಮಹಾರಾಜ! ಆಗ ಜಯನೂ, ಸಾತ್ವತ ಕೃತವರ್ಮನೂ, ಕಾಂಬೋಜನೂ, ಶ್ರುತಾಯುವೂ ಧನಂಜಯನನ್ನು ತಡೆದರು.
07066037a ತೇಷಾಂ ದಶಸಹಸ್ರಾಣಿ ರಥಾನಾಮನುಯಾಯಿನಾಂ|
07066037c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ||
07066038a ಮಾಚೇಲ್ಲಕಾ ಲಲಿತ್ಥಾಶ್ಚ ಕೇಕಯಾ ಮದ್ರಕಾಸ್ತಥಾ|
07066038c ನಾರಾಯಣಾಶ್ಚ ಗೋಪಾಲಾಃ ಕಾಂಬೋಜಾನಾಂ ಚ ಯೇ ಗಣಾಃ||
07066039a ಕರ್ಣೇನ ವಿಜಿತಾಃ ಪೂರ್ವಂ ಸಂಗ್ರಾಮೇ ಶೂರಸಮ್ಮತಾಃ|
07066039c ಭಾರದ್ವಾಜಂ ಪುರಸ್ಕೃತ್ಯ ತ್ಯಕ್ತಾತ್ಮಾನೋಽರ್ಜುನಂ ಪ್ರತಿ||
ಅವರನ್ನು ಅನುಸರಿಸಿ ಬಂದ ಹತ್ತು ಸಾವಿರ ರಥಿಗಳೂ, ಹಿಂದೆ ಸಂಗ್ರಾಮದಲ್ಲಿ ಕರ್ಣನಿಂದ ಗೆದ್ದಲ್ಪಟ್ಟ, ಶೂರಸಮ್ಮತರಾದ ಅಭೀಷಾಹರು, ಶೂರಸೇನರು, ಶಿಬಯರು, ವಸಾತಯರು, ಮಾಚೇಲ್ಲಕರು, ಲಲಿತ್ಥರು, ಕೇಕಯರೂ, ಮದ್ರಕರೂ, ನಾರಾಯಣರೂ, ಗೋಪಾಲರೂ, ಕಂಬೋಜರ ಗಣಗಳೂ ಭಾರದ್ವಾಜನನ್ನು ಮುಂದಿರಿಸಿಕೊಂಡು ಜೀವವನ್ನೂ ತೊರೆದು ಅರ್ಜುನನೊಡನೆ ಯುದ್ಧಮಾಡತೊಡಗಿದರು.
07066040a ಪುತ್ರಶೋಕಾಭಿಸಂತಪ್ತಂ ಕ್ರುದ್ಧಂ ಮೃತ್ಯುಮಿವಾಂತಕಂ|
07066040c ತ್ಯಜಂತಂ ತುಮುಲೇ ಪ್ರಾಣಾನ್ಸನ್ನದ್ಧಂ ಚಿತ್ರಯೋಧಿನಂ||
07066041a ಗಾಹಮಾನಮನೀಕಾನಿ ಮಾತಂಗಮಿವ ಯೂಥಪಂ|
07066041c ಮಹೇಷ್ವಾಸಂ ಪರಾಕ್ರಾಂತಂ ನರವ್ಯಾಘ್ರಮವಾರಯನ್||
ಪುತ್ರಶೋಕಾಭಿಸಂತಪ್ತನಾಗಿದ್ದ, ಕ್ರುದ್ಧನಾಗಿದ್ದ, ಅಂತಕ ಮೃತ್ಯುವಿನಂತಿದ್ದ, ಪ್ರಾಣವನ್ನೂ ತೊರೆದು ಯುದ್ಧಮಾಡುತ್ತಿದ್ದ, ಸನ್ನದ್ಧನಾಗಿದ್ದ, ಚಿತ್ರಯೋಧಿಯಾಗಿದ್ದ, ಸಲಗವು ಆನೆಗಳ ಹಿಂಡನ್ನು ಪ್ರವೇಶಿಸುವಂತೆ ನಿನ್ನ ಸೇನೆಯೊಳಗೆ ನುಗ್ಗಿ ಬರುತ್ತಿದ್ದ ಆ ಮಹೇಷ್ವಾಸ ಪರಾಕ್ರಾಂತ ನರವ್ಯಾಘ್ರನನ್ನು ಅವರು ತಡೆದರು.
07066042a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣಂ|
07066042c ಅನ್ಯೋನ್ಯಂ ವೈ ಪ್ರಾರ್ಥಯತಾಂ ಯೋಧಾನಾಮರ್ಜುನಸ್ಯ ಚ||
ಆಗ ಅನ್ಯೋನ್ಯರನ್ನು ಕರೆಯುತ್ತಿದ್ದ ಯೋಧರು ಮತ್ತು ಅರ್ಜುನನ ನಡುವೆ ಲೋಮಹರ್ಷಣ ತುಮುಲ ಯುದ್ಧವು ಪ್ರಾರಂಭವಾಯಿತು.
07066043a ಜಯದ್ರಥವಧಪ್ರೇಪ್ಸುಮಾಯಾಂತಂ ಪುರುಷರ್ಷಭಂ|
07066043c ನ್ಯವಾರಯಂತ ಸಹಿತಾಃ ಕ್ರಿಯಾ ವ್ಯಾಧಿಮಿವೋತ್ಥಿತಂ||
ಜಯದ್ರಥನ ವಧೆಯನ್ನು ಇಚ್ಛಿಸಿ ಮುಂದೆ ಬರುತ್ತಿದ್ದ ಆ ಪುರುಷರ್ಷಭನನ್ನು ಉಲ್ಬಣಗೊಳ್ಳುತ್ತಿರುವ ವ್ಯಾಧಿಯನ್ನು ಔಷಧಿಯು ಹೇಗೋ ಹಾಗೆ ಒಟ್ಟಿಗೇ ತಡೆಯತೊಡಗಿದರು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣಾತಿಕ್ರಮೇ ಷಟ್ಷಷ್ಠಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣಾತಿಕ್ರಮ ಎನ್ನುವ ಅರವತ್ತಾರನೇ ಅಧ್ಯಾಯವು.