ಆರುಣಿ ಉದ್ಧಾಲಕ
ಆರುಣಿ ಉದ್ಧಾಲಕ ಆರುಣಿ ಉದ್ಧಾಲಕನ ಈ ಕಥೆಯು ವ್ಯಾಸಮಹಾಭಾರತದ ಆದಿಪರ್ವದ ಪೌಷ್ಯ ಪರ್ವದಲ್ಲಿ (ಅಧ್ಯಾಯ ೩) ಬರುತ್ತದೆ. ಈ ಕಥೆಯನ್ನು ನೈಮಿಷಾರಣ್ಯದಲ್ಲಿ ಸೂತ ಪೌರಾಣಿಕ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಹೇಳಿದನು. ಧೌಮ್ಯ ಎನ್ನುವ ಹೆಸರಿನ ಋಷಿಗೆ ಆರುಣಿ ಎಂಬ ಹೆಸರಿನ ಶಿಷ್ಯನಿದ್ದನು. ಒಂದು ದಿನ ಅವನು ಶಿಷ್ಯ ಆರುಣಿ ಪಾಂಚಾಲನನ್ನು “ಹೋಗು. ಭತ್ತದ ಗದ್ದೆಗೆ ಒಡ್ಡನ್ನು ಕಟ್ಟು!” ಎಂದು ಕಳುಹಿಸಿದನು. ಉಪಾಧ್ಯಾಯನಿಂದ ಈ ರೀತಿ ಆದೇಶಪಡೆದ ಪಾಂಚಾಲ ಆರುಣಿಯು ಅಲ್ಲಿಗೆ…