ವೈವಸ್ವತ ಮನು
ವೈವಸ್ವತ ಮನು ಮತ್ಯ್ಸಾವತಾರದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಮಾರ್ಕಂಡೇಯಸಮಸ್ಯಾ ಪರ್ವ (ಅಧ್ಯಾಯ ೧೮೫) ದಲ್ಲಿ ಬರುತ್ತದೆ. ಕಾಮ್ಯಕ ವನದಲ್ಲಿ ಋಷಿ ಮಾರ್ಕಂಡೇಯನು ಈ ಕಥೆಯನ್ನು ಯುಧಿಷ್ಠಿರನಿಗೆ ಹೇಳಿದನು. ವಿವಸ್ವತನಿಗೆ ಪ್ರತಾಪಿ, ಪರಮ ಋಷಿ, ನರಶಾರ್ದೂಲ, ಪ್ರಜಾಪತಿಯ ಸಮದ್ಯುತಿ ಮಗನಿದ್ದನು. ಓಜಸ್ಸಿನಲ್ಲಿ, ತೇಜಸ್ಸಿನಲಿ, ಸಂಪತ್ತಿನಲ್ಲಿ, ಮತ್ತು ವಿಶೇಷವಾಗಿ ತಪಸ್ಸಿನಲ್ಲಿ ಆ ಮನುವು ತನ್ನ…