ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 50ರಲ್ಲಿ ಹೇಳುತ್ತಾನೆ. ಸೋಮತೀರ್ಥದಲ್ಲಿ ಉಡುಪತೀ ಚಂದ್ರನು ರಾಜಸೂಯವನ್ನು ನಡೆಸಿದ್ದನು. ಅಲ್ಲಿ ಹಿಂದೆ ಸಾರಸ್ವತ ಮುನಿಯು ಹನ್ನೆರಡು ವರ್ಷಗಳ ಅನಾವೃಷ್ಟಿಯಿಂದ ಪೀಡಿತರಾಗಿದ್ದ ದ್ವಿಜೋತ್ತಮರಿಗೆ ವೇದಾಧ್ಯಯವನ್ನು ಮಾಡಿಸಿದ್ದನು. ಹಿಂದೆ ದಧೀಚ ಎಂದು ವಿಖ್ಯಾತನಾದ ಬ್ರಹ್ಮಚಾರೀ ಜಿತೇಂದ್ರಿಯ ಮಹಾತಪಸ್ವಿ ಧೀಮಾನ್ ಮುನಿಯಿದ್ದನು. ಅವನ ತಪಸ್ಸಿನಿಂದ ಶಕ್ರನು ಸತತವೂ ಭಯಪಡುತ್ತಿದ್ದನು. ಬಹುವಿಧದ ಫಲಗಳಿಂದಲೂ ಅವನನ್ನು ಲೋಭಗೊಳಿಸಲು ಶಕ್ಯವಾಗಲಿಲ್ಲ.…