ಸುದರ್ಶನೋಪಾಖ್ಯಾನ
ಸುದರ್ಶನೋಪಾಖ್ಯಾನ “ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರ್ಯಾರು?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಉತ್ತರವಾಗಿ ಭೀಷ್ಮನು ಉದಾಹರಿಸಿದ ಅಗ್ನಿಪುತ್ರ ಸುದರ್ಶನನ ಈ ಉಪಾಖ್ಯಾನವು ಅನುಶಾಸನಪರ್ವದ ದಾನಧರ್ಮಪರ್ವದ ಅಧ್ಯಾಯ 2ರಲ್ಲಿ ಬರುತ್ತದೆ. ಪ್ರಜಾಪತಿ ಮನುವಿಗೆ ಇಕ್ಷ್ವಾಕುವು ಸುತನಾದನು. ಆ ನೃಪತಿಗೆ ಸೂರ್ಯವರ್ಚಸ ನೂರು ಪುತ್ರರು ಜನಿಸಿದರು. ಭಾರತ! ಅವರಲ್ಲಿ ಹತ್ತನೆಯ ಪುತ್ರನು ದಶಾಶ್ವ ಎಂಬ ಹೆಸರಿನವನು. ಆ ಧರ್ಮಾತ್ಮಾ ಸತ್ಯವಿಕ್ರಮನು ಮಾಹಿಷ್ಮತಿಗೆ ರಾಜನಾದನು. ದಶಾಶ್ವನ ಮಗನು ಪರಮಧಾರ್ಮಿಕ ರಾಜನಾಗಿದ್ದನು. ನಿತ್ಯವೂ ಅವನ ಮನಸ್ಸು ಸತ್ಯ,…