ಭೃಗು-ಭರದ್ವಾಜ ಸಂವಾದ
ಭೃಗು-ಭರದ್ವಾಜ ಸಂವಾದ ಭೃಗು ಮತ್ತು ಭರದ್ವಾಜರ ಸಂವಾದದಲ್ಲಿ ಜಗತ್ತಿನ ಉತ್ಪತ್ತಿ ಮತ್ತು ವಿಭಿನ್ನ ತತ್ತ್ವಗಳ ವರ್ಣನೆಯಿರುವ ಈ ಭೃಗು ಮತ್ತು ಭರದ್ವಾಜರ ಸಂವಾದವು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 175-186ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಸಂಪೂರ್ಣ ಸ್ಥಾವರ-ಜಂಗಮ ಜಗತ್ತಿನ ಉತ್ಪತ್ತಿ ಯಾವುದರಿಂದ ಆಯಿತು? ಪ್ರಲಯಕಾಲದಲ್ಲಿ ಇದು ಯಾವುದರಲ್ಲಿ ಲೀನವಾಗುತ್ತದೆ? ಇದನ್ನು ನನಗೆ ಹೇಳು. ಸಮುದ್ರ, ಗಗನ, ಪರ್ವತ, ಮೇಘ,…