ಬೃಹಸ್ಪತಿ-ಕೌಸಲ್ಯ ಸಂವಾದ
ಬೃಹಸ್ಪತಿ-ಕೌಸಲ್ಯ ಸಂವಾದ ವಸುಮನ ಮತ್ತು ಬೃಹಸ್ಪತಿಯರ ಸಂವಾದದಲ್ಲಿ ರಾಜನಿಲ್ಲದಿದ್ದರೆ ಪ್ರಜೆಗಳಿಗಾಗುವ ಹಾನಿ ಮತ್ತು ರಾಜನಿದ್ದರೆ ಆಗುವ ಲಾಭಗಳನ್ನು ವರ್ಣಿಸುವ ವಸುಮನ ಮತ್ತು ಬೃಹಸ್ಪತಿಯರ ಸಂವಾದವನ್ನೊಳಗೊಂಡ ಭೀಷ್ಮ-ಯುಧಿಷ್ಠಿರರ ಈ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 68ರಲ್ಲಿ ಬರುತ್ತದೆ. *** ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ಮನುಷ್ಯರಿಗೆ ಅಧಿಪತಿಯಾದ ರಾಜನನ್ನು ವಿಪ್ರರು ದೇವನೆಂದು ಏಕೆ ಹೇಳುತ್ತಾರೆ? ಅದನ್ನು ನನಗೆ ಹೇಳು.” ಭೀಷ್ಮನು ಹೇಳಿದನು: “ಭಾರತ! ನೀನು ಕೇಳಿದುದಕ್ಕೆ ಸಂಬಂಧಿಸಿದಂತೆ ಬೃಹಸ್ಪತಿ-ವಸುಮನರ ಈ ಪುರಾತನ…