ಜನಕೋಽಪಖ್ಯಾನ
ಜನಕೋಽಪಖ್ಯಾನ ಅರ್ಜುನನು ರಾಜಾ ಜನಕ ಮತ್ತು ಅವನ ರಾಣಿಯ ದೃಷ್ಟಾಂತವನ್ನಿತ್ತು ಯುಧಿಷ್ಠಿರನು ಸಂನ್ಯಾಸಗ್ರಹಣ ಮಾಡುವುದನ್ನು ತಡೆಯುವ ಈ ಜನಕೋಪಖ್ಯಾನವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 18ರಲ್ಲಿ ಬರುತ್ತದೆ. *** ಹಿಂದೆ ವಿದೇಹರಾಜನು ಐಶ್ವರ್ಯ, ಮಕ್ಕಳು, ಮಿತ್ರರು, ವಿವಿಧ ರತ್ನಗಳು, ಮತ್ತು ಪಾವನ ಗೃಹಸ್ಥಾಶ್ರಮವನ್ನು ತ್ಯಜಿಸಿ ಜನಕನು ತಲೆಬೋಳಿಸಿಕೊಂಡು ಭಿಕ್ಷುವಾಗಲು ನಿಶ್ಚಯಿಸಿದನು. ಭಿಕ್ಷಾವೃತ್ತಿಯನ್ನು ಅವಲಂಬಿಸಿ ಒಂದು ಮುಷ್ಟಿ ಧಾನ್ಯದ ಹಿಟ್ಟನ್ನೇ ತಿನ್ನುತ್ತಿದ್ದ, ನಿರೀಹನಾಗಿದ್ದ, ಮತ್ಸರವನ್ನು ತೊರೆದಿದ್ದ ಅವನನ್ನು ಅವನ ಪ್ರಿಯ ಭಾರ್ಯೆಯು ನೋಡಿದಳು.…