ತೀರ್ಥಯಾತ್ರಾ ಮಹಾತ್ಮೆ: ಪುಲಸ್ತ್ಯ-ಭೀಷ್ಮರ ಸಂವಾದ
ತೀರ್ಥಯಾತ್ರಾ ಮಹಾತ್ಮೆ: ಪುಲಸ್ತ್ಯ-ಭೀಷ್ಮರ ಸಂವಾದ ಹಿಂದೆ ಧಾರ್ಮಿಕರಲ್ಲಿ ಶ್ರೇಷ್ಠ, ಮಹಾತೇಜಸ್ವಿ ಭೀಷ್ಮನು ಪಿತೃ ವ್ರತವನ್ನು ಪಾಲಿಸುತ್ತಾ ದೇವಗಂಧರ್ವರಿಂದ, ದೇವರ್ಷಿಗಳಿಂದ ಸೇವಿಸಲ್ಪಟ್ಟ ಸುಂದರ ಪ್ರದೇಶ, ಪುಣ್ಯಪ್ರದೇಶ ಗಂಗಾತಟದಲ್ಲಿ ಮುನಿಯಂತೆ ವಾಸಿಸುತ್ತಿದ್ದನು. ಆ ಪರಮದ್ಯುತಿಯು ಪಿತೃ ದೇವ ಮತ್ತು ಋಷಿ ತರ್ಪಣಗಳನ್ನಿತ್ತು ಅವರನ್ನು ವಿಧಿವತ್ತಾದ ಕರ್ಮಗಳಿಂದ ತೃಪ್ತಿಗೊಳಿಸುತ್ತಿದ್ದನು. ಕೆಲವು ಸಮಯದ ನಂತರ ಜಪದಲ್ಲಿ ನಿರತನಾಗಿದ್ದ ಆ ಮಹಾತಪಸ್ವಿಯು ಅದ್ಭುತಸಂಕಾಶ ಋಷಿಸತ್ತಮ ಪುಲಸ್ತ್ಯನನ್ನು ಕಂಡನು. ತೇಜಸ್ಸಿನಿಂದ ಬೆಳಗುತ್ತಿರುವ ಆ ಉಗ್ರತಪಸ್ವಿಯನ್ನು ನೋಡಿ ಅವನು ಅತುಲ…