ಎರಡನೆಯ ದಿನದ ಯುದ್ಧ
ಎರಡನೆಯ ದಿನದ ಯುದ್ಧ ಮೊದಲನೆಯ ದಿವಸ ಸೈನ್ಯವು ಹಿಂದೆಸರಿಯಲು, ಯುದ್ಧದಲ್ಲಿ ಭೀಷ್ಮನು ಉತ್ಸಾಹಿಯಾಗಿರಲು, ಹಾಗೆಯೇ ದುರ್ಯೋಧನನು ಸಂತೋಷದಿಂದಿರಲು ಧರ್ಮರಾಜನು ತಕ್ಷಣವೇ ಸಹೋದರರೊಂದಿಗೆ, ಎಲ್ಲ ಜನೇಶ್ವರರೊಡಗೂಡಿ ಒಟ್ಟಿಗೇ ಜನಾರ್ದನನ ಬಳಿಸಾರಿದನು. ಭೀಷ್ಮನ ವಿಕ್ರಮವನ್ನು ನೋಡಿ ಚಿಂತಾಕ್ರಾಂತನಾಗಿ ರಾಜನು ಪರಮ ಶುಚಿಯಿಂದ ವಾರ್ಷ್ಣೇಯನಿಗೆ ಹೇಳಿದನು. “ಕೃಷ್ಣ! ಗ್ರೀಷ್ಮದಲ್ಲಿ ಬೆಂಕಿಯು ಒಣಹುಲ್ಲನ್ನು ಸುಡುವಂತೆ ಶರಗಳಿಂದ ನನ್ನ ಸೈನ್ಯವನ್ನು ದಹಿಸುತ್ತಿರುವ ಈ ಭೀಮಪರಾಕ್ರಮಿ ಭೀಷ್ಮನನ್ನು ನೋಡು! ಅಗ್ನಿಯು ಹವಿಸ್ಸುಗಳನ್ನು ನೆಕ್ಕುವಂತೆ ನನ್ನ ಸೈನ್ಯವನ್ನು ನೆಕ್ಕುತ್ತಿರುವ ಈ…