ಕಾಮ್ಯಕ ವನಕ್ಕೆ ಶ್ರೀಕೃಷ್ಣನ ಆಗಮನ

ಕಾಮ್ಯಕ ವನಕ್ಕೆ ಶ್ರೀಕೃಷ್ಣನ ಆಗಮನ ಪಾಂಡವರು ಸೋತು ದುಃಖಸಂತಪ್ತರಾಗಿದ್ದಾರೆ ಎಂದು ಕೇಳಿ ಭೋಜರು ವೃಷ್ಣಿ ಮತ್ತು ಅಂಧಕರೊಡಗೂಡಿ ಆ ಮಹಾವನಕ್ಕೆ ಬಂದರು. ಪಾಂಚಾಲನ ದಾಯಾದಿಗಳೂ, ಚೇದಿರಾಜ ಧೃಷ್ಟಕೇತು, ಮತ್ತು ಲೋಕವಿಶೃತ ಮಹಾವೀರ ಕೇಕಯ ಸಹೋದರರು ಕ್ರೋಧ ಮತ್ತು ಸಂತಾಪಗೊಂಡವರಾಗಿ ವನದಲ್ಲಿ ಪಾರ್ಥರಲ್ಲಿಗೆ ಬಂದರು. ಧಾರ್ತರಾಷ್ಟ್ರರನ್ನು ಝರಿದು “ಈಗ ಏನು ಮಾಡೋಣ?” ಎಂದು ಆ ಎಲ್ಲ ಕ್ಷತ್ರಿಯರ್ಷಭರೂ ವಾಸುದೇವನ ನಾಯಕತ್ವದಲ್ಲಿ ಧರ್ಮರಾಜ ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು. ವಾಸುದೇವನು ಹೇಳಿದನು: “ಈ ಭೂಮಿಯು…

Continue reading

ಇಂದ್ರಲೋಕದಲ್ಲಿ ಅರ್ಜುನ

ಇಂದ್ರಲೋಕದಲ್ಲಿ ಅರ್ಜುನ ಅಮರಾವತಿಗೆ ಪ್ರಯಾಣ ಲೋಕಪಾಲಕರು ಹೊರಟುಹೋದ ನಂತರ ಶತ್ರುನಿಬರ್ಹಣ ಪಾರ್ಥನು ದೇವರಾಜನ ರಥವು ಬರುವುದರ ಕುರಿತು ಚಿಂತಿಸಿದನು. ಹೀಗೆ ಧೀಮತ ಗುಡಾಕೇಶನು ಯೋಚಿಸುತ್ತಿರುವಾಗಲೇ ಮಾತಲಿಯೊಂದಿಗೆ ಮಹಾಪ್ರಭೆಯುಳ್ಳ ರಥವು ಆಗಮಿಸಿತು. ಆಕಾಶದಲ್ಲಿ ಕತ್ತಲೆಯನ್ನು ದೂರಮಾಡಿ, ಮೋಡಗಳನ್ನು ಕತ್ತರಿಸಿಬರುತ್ತಿದೆಯೋ ಎನ್ನುವಂತೆ ಅದು ಮಳೆಗಾಲದ ಮೋಡಗಳ ಗುಡುಗಿನಂತೆ ಘರ್ಜಿಸುತ್ತಾ ದಿಶವನ್ನೆಲ್ಲಾ ಆವರಿಸಿ ಬಂದಿತು. ಅದರಲ್ಲಿ ಖಡ್ಗಗಳು, ಭಯಂಕರ ಈಟಿಗಳು, ಉಗ್ರರೂಪಿ ಗದೆಗಳು, ದಿವ್ಯಪ್ರಭಾವದ ಪ್ರಾಸಗಳು, ಮಹಾಪ್ರಭೆಯುಳ್ಳ ಮಿಂಚುಗಳು ಮತ್ತು ಸಿಡಿಲುಗಳೂ, ವಾಯುವಿನಲ್ಲಿ ಸ್ಪೋಟವಾಗುವ…

Continue reading

ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದ ಧೃತರಾಷ್ಟ್ರನ ಶೋಕ

ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದನೆಂದು ಕೇಳಿದ ಧೃತರಾಷ್ಟ್ರನ ಶೋಕ ಪಾರ್ಥನು ಶಕ್ರಲೋಕಕ್ಕೆ ಹೋದುದನ್ನು ಋಷಿಶ್ರೇಷ್ಠ ದ್ವೈಪಾಯನನಿಂದ ಕೇಳಿದ ಅಂಬಿಕಾಸುತನು ಸಂಜಯನಿಗೆ ಹೇಳಿದನು: “ಸೂತ! ಧೀಮಂತ ಪಾರ್ಥನ ಸಾಧನೆಗಳ ಕುರಿತು ಸಂಪೂರ್ಣವಾಗಿ ಕೇಳಿದ್ದೇನೆ. ನೀನೂ ಕೂಡ ಇದರ ಕುರಿತು ಹೇಗಾಯಿತೋ ಹಾಗೆ ತಿಳಿದುಕೊಂಡಿದ್ದೀಯಾ? ಗ್ರಾಮ್ಯಧರ್ಮದಲ್ಲಿ ಪ್ರಮತ್ತನಾದ ನನ್ನ ಮಗ ದುರ್ಬುದ್ಧಿ ಮಂದಾತ್ಮ ಪಾಪನಿಶ್ಚಯನು ಭೂಮಿಯಲ್ಲಿರುವವರೆಲ್ಲರನ್ನೂ ಸಾಯಿಸುತ್ತಾನೆ. ಧನಂಜಯನನ್ನು ಯೋದ್ಧನಾಗಿ ಪಡೆದ, ನಿತ್ಯವೂ, ಹಾಸ್ಯದಲ್ಲಿಯೂ, ಸತ್ಯವನ್ನೇ ಮಾತನಾಡುವ, ಮಹಾತ್ಮನು ತ್ರೈಲೋಕ್ಯವನ್ನೂ ತನ್ನದಾಗಿಸಿಕೊಳ್ಳಬಲ್ಲ!  ಮೃತ್ಯು ಮತ್ತು…

Continue reading

ಅಗಸ್ತ್ಯೋಪಾಽಖ್ಯಾನ

ಅಗಸ್ತ್ಯೋಪಾಽಖ್ಯಾನ ಅಗಸ್ತ್ಯನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೯೪-೧೦೩) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಅಗಸ್ತ್ಯನಿಂದ ಇಲ್ವಲನ ಸಂಹಾರ ಹಿಂದೆ ಮಣಿಮತಿ ಪುರದಲ್ಲಿ ಇಲ್ವಲ ಎಂಬ ಹೆಸರಿನ ದೈತ್ಯನಿದ್ದನು. ವಾತಾಪಿಯು ಅವನ ಅನುಜ. ಆ ದಿತಿನಂದನನು ಒಮ್ಮೆ ತಪೋಯುಕ್ತನಾದ ಓರ್ವ ಬ್ರಾಹ್ಮಣನಲ್ಲಿ ಕೇಳಿಕೊಂಡನು: “ಭಗವನ್! ನನಗೆ ಇಂದ್ರನಿಗೆ ಸಮಾನ ಪುತ್ರನೋರ್ವನನ್ನು ಪರಿಪಾಲಿಸು.” ವಾಸವನ…

Continue reading

ಋಷ್ಯಶೃಂಗ

ಋಷ್ಯಶೃಂಗ ಋಷ್ಯಶೃಂಗನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೧೦-೧೧೩) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಬ್ರಹ್ಮರ್ಷಿ, ತಪಸ್ಸಿನಿಂದ ಆತ್ಮವನ್ನು ಅನುಭವಿಸಿದ ಅಮೋಘವೀರ್ಯ, ಸತ್ಯವಂತ, ಪ್ರಜಾಪತಿಯಂತೆ  ಬೆಳಗುವ ವಿಭಾಂಡಕನಲ್ಲಿ ಪ್ರತಾಪಿ, ಮಹಾಹೃದ, ಮಹಾತೇಜಸ್ವಿ, ಸ್ಥವಿರಸಂಹಿತ ಬಾಲಕ ಋಷ್ಯಶೃಂಗನು ಮಗನಾಗಿ ಜನಿಸಿದನು. ಕಾಶ್ಯಪ ವಿಭಾಂಡಕನು ಕೌಶಿಕೀ ನದಿಯನ್ನು ಸೇರಿ ಅಲ್ಲಿ ದೀರ್ಘಕಾಲ ಪರಿಶ್ರಮಿಸಿ ಋಷಿ-ದೇವತೆಗಳಿಂದ ಗೌರವಿಸಲ್ಪಟ್ಟು…

Continue reading

ಅಷ್ಟಾವಕ್ರ

ಅಷ್ಟಾವಕ್ರ ಅಷ್ಟಾವಕ್ರನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೩೨-೧೩೪) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಉದ್ದಾಲಕನಿಗೆ ಕಹೋಡ ಎನ್ನುವ ಓರ್ವ ನಿಯತನಾದ ಶಿಷ್ಯನಿದ್ದನು. ವಶಾನುವರ್ತಿಯಾದ ಅವನು ದೀರ್ಘಕಾಲದವರೆಗೆ ಆಚಾರ್ಯನ ಶುಶ್ರೂಷೆಯನ್ನು ಮಾಡಿ ಅಧ್ಯಯನ ನಿರತನಾಗಿದ್ದನು. ಅವನ ಸುತ್ತಲೂ ಇನ್ನೂ ಅನೇಕ ವಿಪ್ರರಿದ್ದರೂ ಗುರುವು ಇವನಲ್ಲಿ ವಿಪ್ರನ ಚಿಹ್ನೆಯನ್ನು ಗುರುತಿಸಿ, ಅವನಿಗೆ ಆಗಲೇ ತಾನು…

Continue reading

ಇಂದ್ರಲೋಕದಿಂದ ಅರ್ಜುನನ ಪುನರಾಗಮನ

ಇಂದ್ರಲೋಕದಿಂದ ಅರ್ಜುನನ ಪುನರಾಗಮನ ಅರ್ಜುನನನ್ನು ನೋಡುವ ಆಕಾಂಕ್ಷೆಯಿಂದ ಪಾಂಡವರೆಲ್ಲರೂ ಸುಖ-ಸಂತೋಷದಿಂದ ಕುಬೇರನ ಆ ಪರ್ವತದ ಮೇಲೆ ವಾಸಿಸಿದರು. ಅವರನ್ನು ಕಾಣಲು ಅನೇಕ ಗಂಧರ್ವ-ಮಹರ್ಷಿಗಣಗಳು ಅಲ್ಲಿಗೆ ಬಂದವು. ಸ್ವರ್ಗವನ್ನು ಸೇರಿದ ಮರುತ್ಗಣಗಳಂತೆ ಆ ಮಹಾರಥಿ ಪಾಂಡವರು ಹೂಬಿಡುವ ಮರಗಳಿಂದ ಶೋಭಿತವಾದ ಆ ಉತ್ತಮ ಪರ್ವತವನ್ನು ಸೇರಿ ಪರಮ ಪ್ರಶಾಂತ ಮನಸ್ಸನ್ನು ಹೊಂದಿದರು. ನವಿಲು-ಹಂಸಗಳ ಧ್ವನಿಗಳಿಂದ ಕೂಡಿದ್ದ, ಕುಸುಮಗಳು ಹಾಸಿಗೆಯಂತೆ ಹರಡಿದ್ದ ಆ ಮಹಾಗಿರಿಯ ಶಿಖರಗಳನ್ನೂ ಕಣಿವೆಗಳನ್ನೂ ನೋಡಿ ಅವರು ಪರಮ ಹರ್ಷಿತರಾದರು.…

Continue reading

ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪಮುಕ್ತನನ್ನಾಗಿಸಿದುದು

ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪಮುಕ್ತನನ್ನಾಗಿಸಿದುದು ಕುಬೇರನ ಪರ್ವತದಿಂದ ಪಾಂಡವರು ನೀಲಾದ್ರಿಗೆ ಬಂದುದು ಇಂದ್ರಸಮಾನ ಅರ್ಜುನನೊಂದಿಗೆ ಪಾಂಡವರು ಧನೇಶ್ವರ ಕುಬೇರನ ಸುರಮ್ಯ ಶೈಲಪ್ರವರದ ಮೇಲೆ ಕ್ರೀಡಾನುಗತರಾಗಿದ್ದರು. ಅಪ್ರತಿಮ ಕಟ್ಟಡಗಳು ಮತ್ತು ನಾನಾ ವೃಕ್ಷಗಳಿಂದ ಕೂಡಿದ್ದ ಆ ಕ್ರೀಡಾಪ್ರದೇಶವನ್ನು ನೋಡಿ ಸತತವೂ ತನ್ನ ಅಸ್ತ್ರಗಳಲ್ಲಿಯೇ ಮಗ್ನನಾಗಿದ್ದ ಕಿರೀಟಿ ಅರ್ಜುನನು ಅಲಲ್ಲಿ ಬಹಳವಾಗಿ ತಿರುಗಾಡಿದನು. ವೈಶ್ರವಣನ ಕೃಪೆಯಿಂದ ಆ ವಾಸಸ್ಥಳವನ್ನು ಪಡೆದಿದ್ದ ಆ ನರದೇವಪುತ್ರರು ಅಲ್ಲಿ ಪ್ರಾಣಿಗಳು ಬಯಸುವ ಸುಖವನ್ನು ಬಯಸದೇ ಶುಭ…

Continue reading

ಇಂದ್ರವಿಜಯೋಽಪಖ್ಯಾನ

ಇಂದ್ರವಿಜಯೋಽಪಖ್ಯಾನ ಇಂದ್ರವಿಜಯದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಸೇನೋಽದ್ಯೋಗಪರ್ವ (ಅಧ್ಯಾಯ ೯-೧೮) ದಲ್ಲಿ ಬರುತ್ತದೆ. ಈ ಕಥೆಯನ್ನು ಮೋಸಗೊಂಡು ದುರ್ಯೋಧನನ ಪಕ್ಷವನ್ನು ಸೇರಿದ ಶಲ್ಯನು ಯುಧಿಷ್ಠಿರನಿಗೆ ಹೇಳಿದನು. ದೇವಶ್ರೇಷ್ಠ ಮಹಾತಪಸ್ವಿ ತ್ವಷ್ಟನು ಪ್ರಜಾಪತಿಯಾಗಿದ್ದಾಗ ಅವನು ಇಂದ್ರದ್ರೋಹದಿಂದ ತ್ರಿಶಿರನೆನ್ನುವ ಪುತ್ರನನ್ನು ಸೃಷ್ಟಿಸಿದನು. ಆ ವಿಶ್ವರೂಪೀ ಮಹಾದ್ಯುತಿಯು ಇಂದ್ರನ ಸ್ಥಾನವನ್ನು ಬಯಸಿದನು. ಸೂರ್ಯ, ಚಂದ್ರ ಮತ್ತು ಅಗ್ನಿಗಳಂತಿದ್ದ ಆ ಮೂರು ಘೋರ ಮುಖಗಳವನು ಒಂದರಿಂದ ವೇದಗಳನ್ನು ಪಠಿಸುತ್ತಿದ್ದನು, ಒಂದರಿಂದ ಸುರೆಯನ್ನು ಕುಡಿಯುತ್ತಿದ್ದನು…

Continue reading

ಎರಡನೆಯ ರಾಯಭಾರ: ಸಂಜಯನು ಪಾಂಡವರಲ್ಲಿಗೆ ಬಂದುದು

ಎರಡನೆಯ ರಾಯಭಾರ: ಸಂಜಯನು ಪಾಂಡವರಲ್ಲಿಗೆ ಬಂದುದು ಸಂಜಯನನ್ನು ಪಾಂಡವರಲ್ಲಿಗೆ ಕಳುಹಿಸಿದುದು ಕೌರವ್ಯನು ದ್ರುಪದನ ಪುರೋಹಿತನನ್ನು ಸತ್ಕರಿಸಿ ಪಾಂಡವರಲ್ಲಿಗೆ ಕಳುಹಿಸಿದನು. ಸಭಾಮಧ್ಯದಲ್ಲಿ ಸಂಜಯನನ್ನು ಕರೆಯಿಸಿ ಈ ಮಾತುಗಳನ್ನಾಡಿದನು: “ಸಂಜಯ! ಪಾಂಡುಪುತ್ರರು ಉಪಪ್ಲವ್ಯಕ್ಕೆ ಬಂದಿದ್ದಾರೆಂದು ಹೇಳುತ್ತಾರೆ. ಹೋಗಿ ತಿಳಿದುಕೊಂಡು ಬಾ. ಅಜಾತಶತ್ರುವನ್ನು ಈ ರೀತಿ ಸಂಭೋಧಿಸು: “ಅನಘ! ನೀನು ಗ್ರಾಮಕ್ಕೆ ಬಂದಿರುವುದು ಒಳ್ಳೆಯದೇ ಆಯಿತು.” ಎಲ್ಲರಿಗೂ ಹೇಳಬೇಕು: “ಅನರ್ಹರಾಗಿದ್ದರೂ ವನವಾಸದ ಕಷ್ಟಗಳನ್ನು ಮುಗಿಸಿದ ನೀವು ಚೆನ್ನಾಗಿದ್ದೀರಾ?” ಮೋಸಗೊಂಡಿದ್ದರೂ ಶೀಘ್ರದಲ್ಲಿಯೇ ಅವರು ನಮ್ಮ ಮೇಲೆ…

Continue reading