ಶಮ್ಯಾಕ ಗೀತೆ
ಶಮ್ಯಾಕ ಗೀತೆ ತ್ಯಾಗದ ಮಹತ್ವವನ್ನು ತಿಳಿಸುವ ಈ ಶಮ್ಯಾಕಗೀತೆಯು ಶಾಂತಿ ಪರ್ವದ ಮೋಕ್ಷಧರ್ಮ ಪರ್ವದಲ್ಲಿ ಅಧ್ಯಾಯ 170ರಲ್ಲಿ ಬರುತ್ತದೆ. ಇದನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದನು. *** ಯುಧಿಷ್ಠಿರನು ಹೇಳಿದನು: “ಪಿತಾಮಹ! ಧನಿಕ ಮತ್ತು ನಿರ್ಧನಿಕ ಇಬ್ಬರೂ ಸ್ವತಂತ್ರತಾಪೂರ್ವಕ ವ್ಯವಹರಿಸಿದರೆ ಅವರಿಗೆ ಯಾವ ರೂಪದಲ್ಲಿ ಮತ್ತು ಹೇಗೆ ಸುಖದುಃಖಗಳುಂಟಾಗುತ್ತವೆ?” ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶಾಂತಿಯನ್ನು ಪಡೆದುಕೊಂಡು ವಿಮುಕ್ತನಾದ ಶಮ್ಯಾಕನ ಗೀತೆಯನ್ನು ಉದಾಹರಿಸುತ್ತಾರೆ. *** ಹಿಂದೊಮ್ಮೆ ಕುಪತ್ನಿ ಮತ್ತು…