ಕರ್ಣನ ಕುರಿತು ಯುಧಿಷ್ಠಿರನ ಶೋಕ; ನಾರದನಿಂದ ಸಮಾಧಾನ

ಕರ್ಣನ ಕುರಿತು ಯುಧಿಷ್ಠಿರನ ಶೋಕ; ನಾರದನಿಂದ ಸಮಾಧಾನ ಪಾಂಡುನಂದನರು, ವಿದುರ, ಧೃತರಾಷ್ಟ್ರ ಮತ್ತು ಸರ್ವ ಭರತಸ್ತ್ರೀಯರು ಎಲ್ಲ ಸುಹೃದಯರಿಗೂ ಉದಕ ಕ್ರಿಯೆಗಳನ್ನು ಪೂರೈಸಿದರು. ಬಳಿಕ ಮಹಾತ್ಮ ಕುರುನಂದನರು ಶುದ್ಧಿಕಾರ್ಯಗಳನ್ನಾಚರಿಸುತ್ತಾ ಒಂದು ತಿಂಗಳ ಕಾಲ ಪುರದಿಂದ ಹೊರಗೆ ಗಂಗಾತೀರದಲ್ಲಿಯೇ ಉಳಿದುಕೊಂಡರು. ಉದಕ ಕ್ರಿಯೆಗಳನ್ನು ಪೂರೈಸಿದ ರಾಜಾ ಧರ್ಮಾತ್ಮ ಯುಧಿಷ್ಠಿರನಲ್ಲಿಗೆ ಮಹಾತ್ಮ ಸಿದ್ಧ ಬ್ರಹ್ಮರ್ಷಿಸತ್ತಮರು ಆಗಮಿಸಿದರು. ದ್ವೈಪಾಯನ, ನಾರದ, ಮಹಾನ್ ಋಷಿ ದೇವಲ, ದೇವಸ್ಥಾನ, ಕಣ್ವ ಮತ್ತು ಅವನ ಸತ್ತಮ ಶಿಷ್ಯರು, ಅನ್ಯ…

Continue reading

ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು

ಯುಧಿಷ್ಠಿರನ ವೈರಾಗ್ಯ; ತಮ್ಮಂದಿರು, ದ್ರೌಪದಿ, ಋಷಿ ದೇವಸ್ಥಾನ, ವ್ಯಾಸ ಮತ್ತು ಕೃಷ್ಣರು ರಾಜನಾಗಲು ಅವನನ್ನು ಉತ್ತೇಜಿಸಿದುದು ಯುಧಿಷ್ಠಿರ ವಾಕ್ಯ ತನ್ನ ಪುತ್ರ-ಪೌತ್ರರನ್ನೂ ಸಂಬಂಧಿ-ಸ್ನೇಹಿತರನ್ನೂ ನೆನಪಿಸಿಕೊಂಡು ರಾಜನು ಉದ್ವಿಗ್ನ ಹೃದಯಿಯಾಗಿ ಅಸ್ವಸ್ಥಚೇತನನಾದನು. ಆಗ ಹೊಗೆಯಿಂದ ತುಂಬಿದ ಅಗ್ನಿಯಂತೆ ಶೋಕಪರೀತಾತ್ಮನಾದ ಆ ಧೀಮಾನ್ ರಾಜನು ಸಂತಾಪಪೀಡಿತನಾಗಿ ವೈರಾಗ್ಯವನ್ನು ತಾಳಿದನು. ಧರ್ಮಾತ್ಮ ಯುಧಿಷ್ಠಿರನಾದರೋ ಶೋಕವ್ಯಾಕುಲ ಚೇತನನಾಗಿ ಮಹಾರಥ ಕರ್ಣನನ್ನು ಸ್ಮರಿಸಿಕೊಂಡು ದುಃಖಸಂತಪ್ತನಾಗಿ ಶೋಕಿಸಿದನು. ದುಃಖ-ಶೋಕಗಳಿಂದ ಆವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಶೋಕಕರ್ಶಿತನಾಗಿ ಅರ್ಜುನನನ್ನು…

Continue reading

ಯುಧಿಷ್ಠಿರನ ಪಟ್ಟಾಭಿಷೇಕ

ಯುಧಿಷ್ಠಿರನ ಪಟ್ಟಾಭಿಷೇಕ ಅನಂತರ ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟ ಚಂದ್ರಮನಂತೆ ರಾಜ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ತನ್ನ ಪುರವನ್ನು ಪ್ರವೇಶಿಸಿದನು. ಪುರ ಪ್ರವೇಶಮಾಡುವಾಗ ಧರ್ಮಜ್ಞ ಕುಂತೀಪುತ್ರ ಯುಧಿಷ್ಠಿರನು ದೇವತೆಗಳನ್ನೂ, ಸಹಸ್ರಾರು ಬ್ರಾಹ್ಮಣರನ್ನೂ ಅರ್ಚಿಸಿದನು. ಅನಂತರ ದೇವ ಸೋಮನು ಅಮೃತಮಯ ರಥವನ್ನು ಏರುವಂತೆ ಅವನು ಹೊಸತಾದ, ಶುಭ್ರವಾದ, ಕಂಬಳಿ-ಜಿನಗಳನ್ನು ಹೊದೆಸಿದ್ದ, ಶುಭಲಕ್ಷಣಗಳುಳ್ಳ ಬಿಳಿಯಾದ ಹದಿನಾರು ಎತ್ತುಗಳನ್ನು ಕಟ್ಟಿದ್ದ, ಮಂತ್ರಗಳಿಂದ ಅರ್ಚಿತಗೊಂಡಿದ್ದ, ಪುಣ್ಯ ಮಹರ್ಷಿಗಳಿಂದ ಸ್ತುತಿಸಲ್ಪಡುತ್ತಿದ್ದ ರಥವನ್ನು ಏರಿದನು. ಕೌಂತೇಯ ಭೀಮಪರಾಕ್ರಮಿ ಭೀಮನು ಕಡಿವಾಣಗಳನ್ನು ಹಿಡಿದನು.…

Continue reading

ಕೃಷ್ಣನು ಯುಧಿಷ್ಠಿರನನ್ನು ಭೀಷ್ಮನ ಬಳಿ ಕರೆದುಕೊಂಡು ಹೋದುದು

ಕೃಷ್ಣನು ಯುಧಿಷ್ಠಿರನನ್ನು ಭೀಷ್ಮನ ಬಳಿ ಕರೆದುಕೊಂಡು ಹೋದುದು ಹಾಗೆ ನಗರದಲ್ಲಿ ಸರ್ವರನ್ನೂ ಪ್ರಸನ್ನಗೊಳಿಸಿ ಮಹಾತ್ಮ ಯುಧಿಷ್ಠಿರನು ವಾಸುದೇವನ ಬಳಿಸಾರಿ, ಕೈಮುಗಿದು ನಮಸ್ಕರಿಸಿದನು. ಆಗ ಮಣಿಕಾಂಚನಭೂಷಿತ ಮಹಾ ಪರ್ಯಂಕದ ಮೇಲೆ ಮೋಡಗಳಿಂದ ಕೂಡಿದ ಮೇರು ಪರ್ವತದಂತೆ ನೀಲವರ್ಣದ ಕೃಷ್ಣನು ಕುಳಿತಿರುವುದನ್ನು ಅವನು ನೋಡಿದನು. ದಿವ್ಯಾಭರಣಗಳನ್ನು ಧರಿಸಿದ್ದ, ಹೊಂಬಣ್ಣದ ರೇಷ್ಮೆಯ ವಸ್ತ್ರವನ್ನುಟ್ಟಿದ್ದ, ಸುವರ್ಣದಿಂದ ಸಮಲಂಕೃತವಾದ ನೀಲಮಣಿಯಂತಿದ್ದ ಅವನ ದೇಹವು ಜಾಜ್ವಲ್ಯಮಾನವಾಗಿತ್ತು. ಉದಯಿಸುತ್ತಿರುವ ಸೂರ್ಯನು ಉದಯಾಚಲವನ್ನು ಪ್ರಕಾಶಗೊಳಿಸುವಂತೆ ಅವನ ವಕ್ಷಸ್ಥಳದಲ್ಲಿದ್ದ ಕೌಸ್ತುಭಮಣಿಯು ಕೃಷ್ಣನನ್ನು ಪ್ರಕಾಶಗೊಳಿಸುತ್ತಿತ್ತು.…

Continue reading

ಸಾರಂಗಗಳು

ಸಾರಂಗಗಳು ಸಾರಂಗಗಳ ಈ ಕಥೆಯು ವ್ಯಾಸ ಮಹಾಭಾರತದ ಆದಿ ಪರ್ವದ ಖಾಂಡವದಾಹ ಪರ್ವ (ಅಧ್ಯಾಯ ೨೨೦-೨೨೫) ದಲ್ಲಿ ಬರುತ್ತದೆ. ಖಾಂಡವ ದಹನದಲ್ಲಿ ಸುಟ್ಟುಹೋಗದೇ ಉಳಿದ ನಾಲ್ಕು ಸಾರಂಗಗಳ ಕುರಿತು ಜನಮೇಜಯನು ಕೇಳಿದಾಗ ಈ ಕಥೆಯನ್ನು ಮುನಿ ವೈಶಂಪಾಯನನು ಹೇಳಿದನು. ಮಂದಪಾಲನೆಂದು ಪ್ರಸಿದ್ಧ ಧರ್ಮಜ್ಞರಲ್ಲಿ ಮುಖ್ಯತಮ ಸಂಶಿತವ್ರತ ತಪಸ್ವಿ ಮಹರ್ಷಿಯಿದ್ದನು. ಊರ್ಧ್ವರೇತಸ ಋಷಿಗಳ ಮಾರ್ಗವನ್ನು ಹಿಡಿದಿದ್ದ ಆ ವಿಜಿತೇಂದ್ರಿಯ ತಪಸ್ವಿಯು ಧರ್ಮರತನಾಗಿ ಸ್ವಾಧ್ಯಾಯದಲ್ಲಿ ನಿರತನಾಗಿದ್ದನು. ತಪಸ್ಸಿನ ಪರಾಕಾಷ್ಟೆಯನ್ನು ತಲುಪಿದ ಅವನು ದೇಹವನ್ನು…

Continue reading

ಪರಶುರಾಮನು ಅಸ್ತ್ರಗಳನ್ನು ಪಡೆದುದು

ಪರಶುರಾಮನು ಅಸ್ತ್ರಗಳನ್ನು ಪಡೆದುದು ಪರಶುರಾಮನು ಅಸ್ತ್ರಗಳನ್ನು ಪಡೆದ ಈ ಕಥೆಯು ವ್ಯಾಸ ಮಹಾಭಾರತದ ಕರ್ಣಪರ್ವ (ಅಧ್ಯಾಯ ೨೪) ದಲ್ಲಿ ಬರುತ್ತದೆ. ಪರಶುರಾಮನ ಶಿಷ್ಯನಾದ ಕರ್ಣನ ಮಹತ್ತನ್ನು ಹೇಳುತ್ತಾ ಈ ಕಥೆಯನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು. ಭಾರ್ಗವರ ಕುಲದಲ್ಲಿ ಮಹಾತಪಸ್ವಿ ಜಮದಗ್ನಿಯು ಜನಿಸಿದನು. ಅವನ ತೇಜೋಗುಣಾನ್ವಿತ ಮಗನು ರಾಮನೆಂದು ವಿಖ್ಯಾತನಾದನು. ಅಸ್ತ್ರಗಳಿಗೋಸ್ಕರವಾಗಿ ಅವನು ಪ್ರಸನ್ನಾತ್ಮನಾಗಿ, ನಿಯತಾತ್ಮನಾಗಿ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು ತೀವ್ರ ತಪಸ್ಸನ್ನಾಚರಿಸಿ ಅವನು ಭವನನ್ನು ತೃಪ್ತಿಗೊಳಿಸಿದನು. ಅವನ ಭಕ್ತಿ ಮತ್ತು…

Continue reading

ವಿದುಲೋಪಾಽಖ್ಯಾನ

ವಿದುಲೋಪಾಽಖ್ಯಾನ ವಿದುಲೆ ಮತ್ತು ಅವಳ ಮಗನ ನಡುವೆ ನಡೆದ ಸಂವಾದದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೧೩೧-೧೩೪) ದಲ್ಲಿ ಬರುತ್ತದೆ. ಸಂಧಿ ಮುರಿದು ಯುದ್ಧವೇ ನಿಶ್ಚಯವಾದಾಗ ಕುಂತಿಯು ಈ ಕಥೆಯನ್ನು ತನ್ನ ಮಕ್ಕಳಿಗೆ ಶ್ರೀಕೃಷ್ಣನ ಮೂಲಕ ಹೇಳಿ ಕಳುಹಿಸಿದಳು. ಯಶಸ್ವಿನೀ, ಕೋಪಿಷ್ಟ, ಸತ್ಕುಲದಲ್ಲಿ ಜನಿಸಿದ್ದ, ಮಾನಿಷ್ಠೆ, ಕ್ಷತ್ರಧರ್ಮನಿರತೆ, ಧನ್ಯೆ, ದೀರ್ಘದರ್ಶಿನಿ, ರಾಜಸಂಸದಿಗಳಲ್ಲಿ ವಿಶ್ರುತಳಾದ, ಉಪದೇಶಿತಳಾಗಿದ್ದ, ವಿಖ್ಯಾತಳಾಗಿದ್ದ ವಿದುರಾ ಎಂಬ ಹೆಸರಿನ ಸತಿಯು ಸಿಂಧುರಾಜನಿಂದ ಸೋತು…

Continue reading

ಸೌಭವಧೋಽಪಾಖ್ಯಾನ

ಸೌಭವಧೋಽಪಾಖ್ಯಾನ ಸೌಭವಧೆಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಕೈರಾತ ಪರ್ವ (ಅಧ್ಯಾಯ ೧೫-೨೩) ದಲ್ಲಿ ಬರುತ್ತದೆ. ದ್ಯೂತದ ಸಮಯದಲ್ಲಿ ಕೃಷ್ಣನು ದ್ವಾರಕೆಯಲ್ಲಿ ಏಕೆ ಇರಲಿಲ್ಲ ಎಂದು ಯುಧಿಷ್ಠಿರನು ಕಾಮ್ಯಕ ವನದಲ್ಲಿ ಕೇಳಿದಾಗ ಕೃಷ್ಣನು ಈ ಕಥೆಯನ್ನು ಹೇಳಿದನು. ಮಹಾಬಾಹು ನೃಪ ಶ್ರೌತಶ್ರವ ಶಿಶುಪಾಲನು ಕೃಷ್ಣನಿಂದ ಹತನಾದನು ಎಂದು ಕೇಳಿ ಶಾಲ್ವನು ಉಪಾಯದಿಂದ ದ್ವಾರವತೀ ಪುರಕ್ಕೆ ಧಾಳಿಯಿಟ್ಟನು. ಆ ಸುದುಷ್ಟಾತ್ಮ ಶಾಲ್ವನು ಎಲ್ಲ ಕಡೆಯಿಂದಲೂ ಮತ್ತು ಆಕಾಶದಿಂದಲೂ ತನ್ನ…

Continue reading

ಮುದ್ಗಲ

ಮುದ್ಗಲ ಕುರುಕ್ಷೇತ್ರದಲ್ಲಿ ಅಕ್ಕಿಕುಟ್ಟುವ ವೃತ್ತಿಯಲ್ಲಿ ನಿರತನಾದ ಮುದ್ಗಲನೆನ್ನುವ ಧರ್ಮಾತ್ಮ, ಸಂಶಿತವ್ರತನಿದ್ದನು. ಪಾರಿವಾಳದಂತೆ ಜೀವಿಸುತ್ತಿದ್ದ ಅವನು ಅತಿಥಿಗಳನ್ನು ಸತ್ಕರಿಸುತ್ತಿದ್ದನು. ಆ ಮಹಾತಪಸ್ವಿಯು ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು ಕೈಗೊಂಡನು. ಅವನು ಪತ್ನಿ ಪುತ್ರರೊಂದಿಗೆ ಒಂದು ಪಕ್ಷ ತಿನ್ನುತ್ತಿದ್ದನು. ಮತ್ತು ಇನ್ನೊಂದು ಪಕ್ಷದಲ್ಲಿ ಪಾರಿವಾಳದಂತೆ ಒಂದು ಅಳತೆ ಭತ್ತವನ್ನು ಸುಲಿದು ತಿನ್ನುತ್ತಿದ್ದನು. ದರ್ಶ ಮತ್ತು ಪೌರ್ಣಮಾಸಗಳನ್ನು ಆಚರಿಸುವ ಆ ವಿಗತಮತ್ಸರನು ದೇವತೆಗಳು ಮತ್ತು ಅತಿಥಿಗಳು ತಿಂದು ಉಳಿದುದರಿಂದ ದೇಹಧರ್ಮವನ್ನು ಪಾಲಿಸುತ್ತಿದ್ದನು. ಸಾಕ್ಷಾತ್ ತ್ರಿಭುವನೇಶ್ವರ…

Continue reading

Anukramanika Parva: Kannada Translation with Shlokas

010010000 ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಂ | 010010000 ದೇವೀಂ ಸರಸ್ವತೀಂ ಚೈವ ತತೋ ಜಯಮುದೀರಯೇತ್|| ನರೋತ್ತಮರಾದ ನಾರಾಯಣ ಮತ್ತು ನರ ಹಾಗೂ ದೇವಿ ಸರಸ್ವತಿಗೆ ನಮಸ್ಕರಿಸಿ, ಜಯವನ್ನು ಪಠಿಸಬೇಕು. 01001001A ಲೋಮಹರ್ಷಣಪುತ್ರ ಉಗ್ರಶ್ರವಾಃ ಸೂತಃ ಪೌರಾಣಿಕೋ ನೈಮಿಷಾರಣ್ಯೇ ಶೌನಕಸ್ಯ ಕುಲಪತೇರ್ದ್ವಾದಶವಾರ್ಷಿಕೇ ಸತ್ರೇ|| 01001002a ಸಮಾಸೀನಾನಭ್ಯಗಚ್ಛದ್ ಬ್ರಹ್ಮರ್ಷೀನ್ ಸಂಶಿತವ್ರತಾನ್ | 01001002c ವಿನಯಾವನತೋ ಭೂತ್ವಾ ಕದಾಚಿತ್ ಸೂತನಂದನಃ || ಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ…

Continue reading