ಅಸಿತದೇವಲ-ಜೈಗೀಷವ್ಯರ ಕಥೆ
ಅಸಿತದೇವಲ-ಜೈಗೀಷವ್ಯರ ಕಥೆ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 49ರಲ್ಲಿ ಹೇಳುತ್ತಾನೆ. ಆದಿತ್ಯತೀರ್ಥದಲ್ಲಿ ಹಿಂದೆ ಧರ್ಮಾತ್ಮ ತಪೋಧನ ಅಸಿತದೇವಲನು ಗೃಹಸ್ಥಾಶ್ರಮ ಧರ್ಮವನ್ನು ಆಶ್ರಯಿಸಿ ವಾಸಿಸುತ್ತಿದ್ದನು. ಆ ಧರ್ಮನಿತ್ಯ-ಶುಚಿ-ದಾಂತ-ಮಹಾತಪಸ್ವಿಯು ಯಾರನ್ನೂ ಹಿಂಸಿಸದೇ ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವ ಜೀವಿಗಳೊಂದಿಗೆ ಸಮನಾಗಿ ನಡೆದುಕೊಂಡಿದ್ದನು. ಅಕ್ರೋಧನನಾದ ಆ ಮಹಾತಪಸ್ವಿಯು ಪ್ರಿಯ-ಅಪ್ರಿಯ ನಿಂದನೆಗಳನ್ನು ಮತ್ತು ಕಾಂಚನ-ಕಲ್ಲುಗಳನ್ನು ಒಂದೇ ಸಮನಾಗಿ ಕಾಣುತ್ತಿದ್ದನು. ದ್ವಿಜರೊಂದಿಗೆ ನಿತ್ಯವೂ ದೇವತೆ-ಅತಿಥಿಗಳನ್ನು ಪೂಜಿಸುತ್ತಿದ್ದನು ಮತ್ತು ಆ ಧರ್ಮಪರಾಯಣನು ನಿತ್ಯವೂ ಬ್ರಹ್ಮಚರ್ಯದಲ್ಲಿ ನಿರತನಾಗಿದ್ದನು.…