ಸರಸ್ವತೀ ಗೀತೆ
ಸರಸ್ವತೀ ಗೀತೆ ಧೀಮಂತ ತಾರ್ಕ್ಷ್ಯ ಮುನಿಯು ಸರಸ್ವತಿಯಲ್ಲಿ ಕೇಳಿದನು: “ಭದ್ರೇ! ಇಲ್ಲಿ ಪುರುಷರಿಗೆ ಯಾವುದು ಶ್ರೇಯಸ್ಸು? ಸ್ವಧರ್ಮದಿಂದ ಚ್ಯುತಿಹೊಂದದಿರಲು ಏನನ್ನು ಮಾಡಬೇಕು? ನನಗೆ ಎಲ್ಲವನ್ನೂ ಹೇಳು. ನಿನ್ನಿಂದ ಉಪದೇಶಿಸಲ್ಪಟ್ಟ ನಾನು ಸ್ವಧರ್ಮದಿಂದ ಚ್ಯುತನಾಗುವುದಿಲ್ಲ. ಧರ್ಮವು ನಷ್ಟವಾಗದ ರೀತಿಯಲ್ಲಿ ಹೇಗೆ ಮತ್ತು ಯಾವಾಗ ಅಗ್ನಿಯನ್ನು ಪೂಜಿಸಬೇಕು ಮತ್ತು ಅವನಲ್ಲಿ ಆಹುತಿಯನ್ನು ನೀಡಬೇಕು? ಇವೆಲ್ಲವನ್ನೂ ಹೇಳು. ಇದರಿಂದ ನಾನು ಲೋಕಗಳಲ್ಲಿ ವಿರಜನಾಗಿ ಸಂಚರಿಸಬಲ್ಲೆ.” ಪ್ರೀತಿಯುಕ್ತನಾದ ಅವನು ಹೀಗೆ ಕೇಳಲು ಅವನ ಉತ್ತಮ ಬುದ್ಧಿಯನ್ನು…