ಅಭಿಮನ್ಯು ವಿವಾಹ
ಅಭಿಮನ್ಯು ವಿವಾಹ ವಿಜಯಶಾಲೀ ಉತ್ತರ ಬೃಹನ್ನಡೆಯರ ಪುರಪ್ರವೇಶ ಸೈನ್ಯಾಧಿಪತಿ ವಿರಾಟನು ಗೋಧನವನ್ನು ಗೆದ್ದು ಹರ್ಷಿತನಾಗಿ ನಾಲ್ವರು ಪಾಂಡವರೊಡನೆ ನಗರವನ್ನು ಪ್ರವೇಶಿಸಿದನು. ಆ ಮಹಾರಾಜನು ಯುದ್ಧದಲ್ಲಿ ತ್ರಿಗರ್ತರನ್ನು ಗೆದ್ದು ಗೋವುಗಳನ್ನೆಲ್ಲ ಮರಳಿಸಿ ತಂದು ಕಾಂತಿಯುತನಾಗಿ ಪಾಂಡವರೊಡನೆ ಶೋಭಿಸಿದನು. ಆಸನದಲ್ಲಿ ಕುಳಿತ, ಸ್ನೇಹಿತರ ಸಂತೋಷವನ್ನು ಹೆಚ್ಚಿಸುವ ಆ ವೀರನ ಬಳಿ ಎಲ್ಲ ಪ್ರಜೆಗಳೂ ಬ್ರಾಹ್ಮಣರೊಡಗೂಡಿ ನಿಂತರು. ಆಗ ಅವರಿಂದ ಸನ್ಮಾನಗೊಂಡ ಸೈನ್ಯಸಹಿತ ಮತ್ಸ್ಯರಾಜನು ಬ್ರಾಹ್ಮಣರನ್ನೂ ಅಂತೆಯೇ ಪ್ರಜೆಗಳನ್ನೂ ಪ್ರತಿಯಾಗಿ ಅಭಿನಂದಿಸಿ ಕಳುಹಿಸಿಕೊಟ್ಟನು. ಬಳಿಕ…