ಸಂವರಣ-ತಪತಿ
ಸಂವರಣ-ತಪತಿ ಸಂವರಣ-ತಪತಿಯರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಚೈತ್ರರಥ ಪರ್ವ (ಅಧ್ಯಾಯ ೧೬೦-೧೬೩) ದಲ್ಲಿ ಬರುತ್ತದೆ. ಈ ಕಥೆಯನ್ನು ಗಂಧರ್ವ ಅಂಗಾರಪರ್ಣನು ಅರ್ಜುನನಿಗೆ ಪಾಂಡವರು ದ್ರೌಪದಿಯ ಸ್ವಯಂವರಕ್ಕೆ ಪ್ರಯಾಣಿಸುತ್ತಿರುವಾಗ ಮಾರ್ಗದಲ್ಲಿ ಹೇಳಿದನು. ದಿವಿಯಲ್ಲಿದ್ದುಕೊಂಡು ನಾಕದವರೆಗೂ ತನ್ನ ತೇಜಸ್ಸಿನಿಂದ ಬೆಳಗಿಸುವ ಸೂರ್ಯನಿಗೆ ತಪತೀ ಎಂಬ ಹೆಸರಿನ ಅಸದೃಶಿ ಮಗಳಿದ್ದಳು. ಸಾವಿತ್ರಿಯಿಂದ ವಿವಸ್ವತನಲ್ಲಿ ಹುಟ್ಟಿದ ಈ ತಪತಿಯು ಮೂರೂ ಲೋಕಗಳಲ್ಲಿ ತಪಸ್ಸಿನಿಂದ ಯುಕ್ತಳಾಗಿ ವಿಶ್ರುತಳಾಗಿದ್ದಳು. ಯಾರೇ ದೇವಿಯಾಗಲೀ, ಅಸುರಿಯಾಗಲೀ, ಯಕ್ಷಿಯಾಗಲೀ, ರಾಕ್ಷಸಿಯಾಗಲೀ,…