ಹನ್ನೆರಡನೆಯ ವರ್ಷದ ವನವಾಸದ ಅಂತ್ಯದಲ್ಲಿ ಪಾಂಡವರು ವನವಾಸಿಗಳನ್ನು ಬೀಳ್ಕೊಂಡಿದುದು
ಹನ್ನೆರಡನೆಯ ವರ್ಷದ ವನವಾಸದ ಅಂತ್ಯದಲ್ಲಿ ಪಾಂಡವರು ವನವಾಸಿಗಳನ್ನು ಬೀಳ್ಕೊಂಡಿದುದು ಧರ್ಮದೇವನಿಂದ ಅಪ್ಪಣೆಯನ್ನು ಪಡೆದು ಹದಿಮೂರನೆಯ ವರ್ಷವನ್ನು ಅಜ್ಞಾತವಾಸದಲ್ಲಿ ಕಳೆಯಲು ಸಿದ್ಧರಾದ ಪಾಂಡವರು ವಿನೀತರಾಗಿ ಬ್ರಾಹ್ಮಣರ ಸಹಿತ ಕುಳಿತುಕೊಂಡರು. ಶಿಷ್ಯರಂತಿದ್ದ ಆ ಮಹಾತ್ಮ ಪಾಂಡವರು ಅವರೊಡನೆ ವಾಸಿಸುತ್ತಿದ್ದ ತಪಸ್ವಿಗಳನ್ನು ಆ ವನವಾಸದ ಕೊನೆಯಲ್ಲಿ ಭಕ್ತಿಯಿಂದ ಬೀಳ್ಕೊಂಡರು. “ಧಾರ್ತರಾಷ್ಟ್ರರಿಂದ ನಾವು ಹೇಗೆ ಬಹುವಿಧಗಳಲ್ಲಿ ರಾಜ್ಯ ಮತ್ತು ನಮ್ಮದೆಲ್ಲವನ್ನೂ ಕಳೆದುಕೊಂಡೆವು ಎಂದು ನಿಮಗೆ ತಿಳಿದೇ ಇದೆ. ತುಂಬಾ ಕಷ್ಟಪಟ್ಟು ನಾವು ಈ ಹನ್ನೆರಡು ವರ್ಷಗಳು…