ಹದಿನೇಳನೇ ದಿನದ ಯುದ್ಧ-೧: ಶಲ್ಯನು ಕರ್ಣನ ಸಾರಥಿಯಾದುದು
ಹದಿನೇಳನೇ ದಿನದ ಯುದ್ಧ – ೧: ಶಲ್ಯನು ಕರ್ಣನ ಸಾರಥಿಯಾದುದು ಪ್ರಹಾರಗಳಿಂದ ಹತರಾಗಿ, ವಿಧ್ವಸ್ಥರಾಗಿದ್ದ, ಕವಚ-ಆಯುಧ-ವಾಹನಗಳಿಂದ ವಿಹೀನರಾಗಿದ್ದ, ಶತ್ರುಗಳಿಂದ ಸೋತಿದ್ದ ಮಾನಿನಿಗಳಾದ ಕೌರವರು, ಹಲ್ಲುಗಳು ಕಿತ್ತು ವಿಷವನ್ನು ಕಳೆದುಕೊಂಡ ಮತ್ತು ಕಾಲಿನಿಂದ ಮೆಟ್ಟಲ್ಪಟ್ಟ ಸರ್ಪಗಳಂತೆ, ಶಿಬಿರದಲ್ಲಿ ಕುಳಿತು ದೀನಸ್ವರದಲ್ಲಿ ಮಾತನಾಡಿಕೊಳ್ಳುತ್ತಾ ಮಂತ್ರಾಲೋಚನೆ ಮಾಡಿದರು. ಆಗ ಕ್ರುದ್ಧ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಕರ್ಣನು ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ದುರ್ಯೋಧನನನ್ನು ನೋಡಿ ಹೇಳಿದನು: “ಅರ್ಜುನನು ಸದಾ ಪ್ರಯತ್ನಶೀಲನು, ದೃಢನು, ದಕ್ಷನು ಮತ್ತು ಧೃತಿಮಾನನು.…