ಹದಿನಾಲ್ಕನೇ ದಿನದ ಯುದ್ಧ – ೧
ಹದಿನಾಲ್ಕನೇ ದಿನದ ಯುದ್ಧ – ೧ ಹದಿನಾಲ್ಕನೆಯ ದಿನ ಕೌರವ ವ್ಯೂಹ ರಚನೆ ಯುದ್ಧದ ಹದಿಮೂರನೆಯ ರಾತ್ರಿಯು ಕಳೆಯಲು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ತನ್ನ ಸೇನೆಗಳೆಲ್ಲವನ್ನೂ ವ್ಯೂಹದಲ್ಲಿರಿಸಲು ಪ್ರಾರಂಭಿಸಿದನು. ಅಲ್ಲಿ ಪರಸ್ಪರರನ್ನು ವಧಿಸಲು ಬಯಸಿದ್ದ ಸಂಕ್ರುದ್ಧರಾಗಿದ್ದ ಅಸಹನಶೀರ ಶೂರರು ವಿಚಿತ್ರ ಧ್ವನಿಯಲ್ಲಿ ಗರ್ಜಿಸುತ್ತಿರುವುದು ಕೇಳಿ ಬರುತ್ತಿತ್ತು. ಕೆಲವರು ಧನುಸ್ಸನ್ನು ಟೇಂಕರಿಸುತ್ತಿದ್ದರು. ಕೆಲವರು ಶಿಂಜನಿಯನ್ನು ಕೈಗಳಿಂದ ತೀಡುತ್ತಿದ್ದರು. ಕೆಲವರು ನಿಟ್ಟುಸಿರುಬಿಡುತ್ತಾ “ಈಗ ಆ ಧನಂಜಯನೆಲ್ಲಿ?” ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಕೆಲವರು ಆಕಾಶದಂತೆ…