ಶ್ರೀಕೃಷ್ಣ ರಾಯಭಾರ – ೩
ಶ್ರೀಕೃಷ್ಣ ರಾಯಭಾರ – ೩ ಕುರುಸಭೆಗೆ ಶ್ರೀಕೃಷ್ಣನ ಆಗಮನ ಹೀಗೆ ಆ ಬುದ್ಧಿಮತರಿಬ್ಬರ ನಡುವೆ ಮಾತುಕಥೆಯು ನಡೆಯಲು ಮಂಗಳ ನಕ್ಷತ್ರಸಂಪನ್ನ ರಾತ್ರಿಯು ಕಳೆಯಿತು. ಧರ್ಮಾರ್ಥಕಾಮಯುಕ್ತವಾದ, ವಿಚಿತ್ರಾರ್ಥಪದಾಕ್ಷರಗಳಿಂದ ಕೂಡಿದ ವಿವಿಧ ಮಾತುಗಳನ್ನು ಕೇಳುತ್ತಿದ್ದ ಮಹಾತ್ಮ ವಿದುರನಿಗೆ ಮತ್ತು ಅದಕ್ಕೆ ಸಮನಾದ ಮಾತುಗಳನ್ನು ಕೇಳುತ್ತಿದ್ದ ಅಮಿತ ತೇಜಸ್ವಿ ಕೃಷ್ಣನಿಗೆ ಇಷ್ಟವಾಗದೇ ಇದ್ದರೂ ಆ ರಾತ್ರಿಯು ಕಳೆದು ಹೋಯಿತು. ಆಗ ಸ್ವರಸಂಪನ್ನರಾದ ಬಹುಮಂದಿ ಸೂತಮಾಗಧರು ಶಂಖದುಂದುಭಿಗಳ ನಿರ್ಘೋಷಗಳಿಂದ ಕೇಶವನನ್ನು ಎಚ್ಚರಿಸಿದರು. ದಾಶಾರ್ಹ, ಸರ್ವಸಾತ್ವತರ ಋಷಭ,…