ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು

ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು ಪಾಂಡವಶೋಕ ಕೌರವೇಂದ್ರನು ವನಕ್ಕೆ ತೆರಳಿದ ನಂತರ ಪಾಂಡವರು ಮಾತೃಶೋಕದಿಂದ ಪೀಡಿತರಾಗಿ ದುಃಖಶೋಕಗಳಿಂದ ಪರಿತಪಿಸಿದರು. ಹಾಗೆಯೇ ಪೌರಜನರೆಲ್ಲರೂ ಜನಾಧಿಪನ ಕುರಿತು ಶೋಕಿಸುತ್ತಿದ್ದರು. ರಾಜನ ಕುರಿತು ಬ್ರಾಹ್ಮಣರು ಅಲ್ಲಲ್ಲಿ ಈ ರೀತಿ ಮಾತನಾಡಿಕೊಳ್ಳುತ್ತಿದ್ದರು: “ವೃದ್ಧ ರಾಜನು ನಿರ್ಜನ ವನದಲ್ಲಿ ಹೇಗೆ ತಾನೇ ವಾಸಿಸುತ್ತಾನೆ? ಮಹಾಭಾಗೆ ಗಾಂಧಾರಿಯೂ ಪೃಥೆ ಕುಂತಿಯೂ ಹೇಗೆ ಜೀವಿಸುತ್ತಿದ್ದಾರೆ? ಸುಖಾರ್ಹನೂ ಮಕ್ಕಳನ್ನು ಕಳೆದುಕೊಂಡವನೂ ಆದ ಆ ಪ್ರಜ್ಞಾಚಕ್ಷು ರಾಜರ್ಷಿಯು ಆ…

Continue reading

ಶಕುಂತಲೋಪಾಽಖ್ಯಾನ

ಶಕುಂತಲೋಪಾಽಖ್ಯಾನ ದುಃಷಂತ-ಶಕುಂತಲೆಯರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಸಂಭವ ಪರ್ವ (ಅಧ್ಯಾಯ ೬೨-೬೯) ದಲ್ಲಿ ಬರುತ್ತದೆ. ಈ ಕಥೆಯನ್ನು ಮುನಿ ವೈಶಂಪಾಯನನು ಜನಮೇಜಯನಿಗೆ ಹಸ್ತಿನಾಪುರದಲ್ಲಿ ಸರ್ಪಸತ್ರದಲ್ಲಿ ಹೇಳಿದನು. ನಾಲ್ಕೂ ಕಡೆಗಳಲ್ಲಿ ಸಮುದ್ರವು ಆವರಿಸಿರುವ ಈ ಪೃಥ್ವಿಯನ್ನು ದುಃಷಂತ ಎಂಬ ಹೆಸರಿನ ವೀರ ಪೌರವ ವಂಶಕರನು ಆಳುತ್ತಿದ್ದನು. ಆ ಮನುಜೇಶ್ವರನು ಭೋಗಿಸಿದ ದೇಶವು ಸಮುದ್ರದಿಂದ ಆವರಿಸಲ್ಪಟ್ಟ ಭೂಮಿಯ ನಾಲ್ಕೂ ಭಾಗಗಳನ್ನು ಒಳಗೊಂಡಿದ್ದಿತು. ಆ ರಿಪುಮರ್ದನನ ರಾಜ್ಯವು ಮ್ಲೇಚ್ಛರ ರಾಜ್ಯಗಳೆಲ್ಲವನ್ನೂ ಸೇರಿ…

Continue reading

ಶಂತನು-ಗಂಗೆ-ಭೀಷ್ಮ-ಸತ್ಯವತಿ

ಶಂತನು-ಗಂಗೆ-ಭೀಷ್ಮ-ಸತ್ಯವತಿ ವಸು ಉಪರಿಚರ ಒಂದು ಕಾಲದಲ್ಲಿ ಬೇಟೆಯಾಡುವುದರಲ್ಲಿ ಆಸಕ್ತಿಯನ್ನಿಟ್ಟಿದ್ದ ಧರ್ಮನಿತ್ಯ, ಸತ್ಯವ್ರತ, ಮಹೀಪತಿ, ಉಪರಿಚರ ಎಂಬ ಹೆಸರಿನ ರಾಜನಿದ್ದನು. ಆ ಪೌರವನಂದನ ಮಹೀಪತಿಯು ಇಂದ್ರನ ಉಪದೇಶದಂತೆ ರಮ್ಯ ಸಂಪದ್ಭರಿತ ಚೇದಿರಾಜ್ಯವನ್ನು ತನ್ನದಾಗಿಸಿಕೊಂಡನು. ಶಸ್ತ್ರಗಳನ್ನು ಪರಿತ್ಯಜಿಸಿ ಆಶ್ರಮದಲ್ಲಿ ವಾಸಿಸುತ್ತಾ ತಪೋನಿರತನಾಗಿರಲು ಆ ಮಹೀಪತಿಯ ಬಳಿ ಸಾಕ್ಷಾತ್ ದೇವ ವಜ್ರಿಯೇ ಸ್ವಯಂ ಬಂದನು. ತನ್ನ ತಪಸ್ಸಿನ ಮೂಲಕ ರಾಜನು ಇಂದ್ರತ್ವಕ್ಕೆ ಅರ್ಹನಾಗಬಲ್ಲನೆಂದು ಚಿಂತಿಸಿ ಅವನು ನೃಪನಿಗೆ ತಪಸ್ಸನ್ನು ತೊರೆಯಲು ಸಲಹೆಯನ್ನಿತ್ತನು: “ಪೃಥ್ವೀಪತೇ! ಪೃಥ್ವಿಯಲ್ಲಿ…

Continue reading

ಶತರುದ್ರೀಯ

ಶತರುದ್ರೀಯ ಪಾರ್ಷತನಿಂದ ಹಾಗೆ ದ್ರೋಣನು ಹತನಾಗಲು ಮತ್ತು ಕೌರವರು ಭಗ್ನರಾಗಲು ಕುಂತೀಪುತ್ರ ಧನಂಜಯನು ಯುದ್ಧದಲ್ಲಿ ತನಗಾದ ವಿಜಯದ ಕುರಿತು ಮಹಾ ಆಶ್ಚರ್ಯಚಕಿತನಾಗಿ ಅಲ್ಲಿಗೆ ಬಂದಿದ್ದ ವ್ಯಾಸನಲ್ಲಿ ಕೇಳಿದನು:   “ಸಂಗ್ರಾಮದಲ್ಲಿ ವಿಮಲ ಶರಸಮೂಹಗಳಿಂದ ಶತ್ರುಗಳನ್ನು ಸಂಹರಿಸುತ್ತಿರುವಾಗ ಅಗ್ನಿಯ ಪ್ರಭೆಯುಳ್ಳ ಪುರುಷನೊಬ್ಬನು ಮುಂದೆ ಮುಂದೆ ಹೋಗುತ್ತಿರುವುದನ್ನು ಕಂಡೆನು. ಮಹಾಮುನೇ! ಪ್ರಜ್ವಲಿಸುವ ಶೂಲವನ್ನೆತ್ತಿಕೊಂಡು ಅವನು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದನೋ ಆ ದಿಕ್ಕಿನಲ್ಲಿ ನನ್ನ ಶತ್ರುಗಳು ವಿಧ್ವಂಸಿತರಾಗುತ್ತಿದ್ದರು. ಅವನ ಕಾಲುಗಳು ಭೂಮಿಯನ್ನು ಸ್ಪರ್ಷಿಸುತ್ತಿರಲಿಲ್ಲ. ಶೂಲವನ್ನು…

Continue reading

ಹದಿನೇಳನೇ ದಿನದ ಯುದ್ಧ – ೨: ಶಲ್ಯನು ಕರ್ಣನ ತೇಜೋವಧೆಗೈದುದು

ಹದಿನೇಳನೇ ದಿನದ ಯುದ್ಧ – ೨: ಶಲ್ಯನು ಕರ್ಣನ ತೇಜೋವಧೆಗೈದುದು ಆಗ ಗಂಧರ್ವನಗರದಂತೆ ವಿಶಾಲವಾಗಿದ್ದ ಆ ಶ್ರೇಷ್ಠ ರಥವನ್ನು ತನ್ನ ಸ್ವಾಮಿಗಾಗಿ ವಿಧಿವತ್ತಾಗಿ ಸಜ್ಜುಗೊಳಿಸಿ ಸಾರಥಿಯು “ಜಯವಾಗಲಿ!” ಎಂದು ನಿವೇದಿಸಿದನು. ಅದಕ್ಕೆ ಮೊದಲೇ ಬ್ರಹ್ಮವಿದರಿಂದ ಪರಿಶುದ್ಧಗೊಳಿಸಿ ಸಮೃದ್ಧವಾಗಿದ್ದ ಆ ರಥವನ್ನು ಕರ್ಣನು ಯಥಾವಿಧಿಯಾಗಿ ಅರ್ಚಿಸಿದನು. ಪ್ರಯತ್ನಿಸಿ ಭಾಸ್ಕರನನ್ನು ಉಪಾಸಿಸಿ ಪ್ರದಕ್ಷಿಣೆಯನ್ನು ಮಾಡಿ ಸಮೀಪದಲ್ಲಿದ್ದ ಮದ್ರರಾಜನಿಗೆ ಮೊದಲು ರಥವನ್ನೇರುವಂತೆ ಹೇಳಿದನು. ಆಗ ಮಹಾತೇಜಸ್ವಿ ಶಲ್ಯನು ಸಿಂಹವು ಪರ್ವತವನ್ನೇರುವಂತೆ ಕರ್ಣನ ಆ ಅತಿದೊಡ್ಡ…

Continue reading

ಶೋಕಾರ್ತನಾದ ಧೃತರಾಷ್ಟ್ರನನ್ನು ವಿದುರ-ವ್ಯಾಸರು ಸಂತೈಸಿದುದು

ಶೋಕಾರ್ತನಾದ ಧೃತರಾಷ್ಟ್ರನನ್ನು ವಿದುರ-ವ್ಯಾಸರು ಸಂತೈಸಿದುದು ಧೃತರಾಷ್ಟ್ರ-ಸಂಜಯರ ಸಂವಾದ ಪುತ್ರಶತರನ್ನು ಕಳೆದುಕೊಂಡು ರೆಂಬೆಗಳು ಕಡಿದ ವೃಕ್ಷದಂತೆ ದೀನನಾಗಿದ್ದ, ಪುತ್ರಶೋಕದಿಂದ ಸಂತಪ್ತನಾಗಿದ್ದ, ಧ್ಯಾನ-ಮೂಕತ್ವಗಳನ್ನು ಪಡೆದಿದ್ದ, ಚಿಂತೆಯಲ್ಲಿ ಮುಳುಗಿಹೋಗಿದ್ದ ಮಹೀಪತಿ ಧೃತರಾಷ್ಟ್ರನ ಬಳಿಹೋಗಿ ಮಹಾಪ್ರಾಜ್ಞ ಸಂಜಯನು ಇಂತೆಂದನು: “ಮಹಾರಾಜ! ಏಕೆ ಶೋಕಿಸುತ್ತಿರುವೆ? ಶೋಕದಿಂದ ಯಾವ ಸಹಾಯವೂ ದೊರಕುವುದಿಲ್ಲ! ಹದಿನೆಂಟು ಅಕ್ಷೌಹಿಣೀ ಸೇನೆಗಳು ನಾಶವಾದವು. ನಿರ್ಜನವಾಗಿರುವ ಈ ವಸುಮತಿಯು ಕೇವಲ ಶೂನ್ಯವಾಗಿ ತೋರುತ್ತಿದೆ! ನಾನಾ ದಿಕ್ಕುಗಳಿಂದ, ನಾನಾದೇಶಗಳಿಂದ ಬಂದು ಸೇರಿದ್ದ ನರಾಧಿಪರೆಲ್ಲರೂ ನಿನ್ನ ಪುತ್ರರೊಂದಿಗೆ ನಿಧನಹೊಂದಿದರು.…

Continue reading

ಶೌನಕ ಗೀತೆ

ಶೌನಕ ಗೀತೆ ನಕ್ಷತ್ರಗಳಿಂದೊಡಗೂಡಿದ ರಾತ್ರಿ ಕಳೆದು ಪ್ರಭಾತವಾಗಲು ಭಿಕ್ಷವನ್ನೇ ಉಂಡು ಜೀವಿಸುವ ವಿಪ್ರರು ವನಕ್ಕೆ ಹೊರಡಲು ಸಿದ್ಧರಾಗಿ ಪಾಂಡವರ ಎದಿರು ನಿಂತರು. ಆಗ ಕುಂತೀಪುತ್ರ ರಾಜ ಯುಧಿಷ್ಠಿರನು ಅವರನ್ನು ಉದ್ದೇಶಿಸಿ ಇಂತೆಂದನು: “ರಾಜ್ಯ, ಸಂಪತ್ತು ಮತ್ತು ಎಲ್ಲವನ್ನೂ ಕಳೆದುಕೊಂಡು ದುಃಖಿತರಾದ ನಾವು ವನಕ್ಕೆ ತೆರಳಿ ಫಲ-ಮೂಲಗಳನ್ನು ಸೇವಿಸಿ ಜೀವಿಸುತ್ತೇವೆ. ವನವು ಹಲವು ಆಪತ್ತುಗಳು, ಹಲವಾರು ಕ್ರೂರಪ್ರಾಣಿಗಳು ಮತ್ತು ಸರ್ಪಗಳಿಂದ ತುಂಬಿದೆ. ಅಲ್ಲಿ ನಿಮಗೆ ನಿಜವಾಗಿಯೂ ಅತ್ಯಂತ ಕಷ್ಟಗಳಾಗುತ್ತವೆ ಎನ್ನುವುದು ನನ್ನ…

Continue reading

ಶ್ರಾದ್ಧ ಮತ್ತು ಜಲತರ್ಪಣ

ಶ್ರಾದ್ಧ ಮತ್ತು ಜಲತರ್ಪಣ ರಾಜರ್ಷಿ ಧರ್ಮಾತ್ಮಾ ಧೃತರಾಷ್ಟ್ರನಾದರೋ ಅಜ್ಞಾನದಿಂದುಂಟಾಗಿದ್ದ ತಮವನ್ನು ತೊಲಗಿಸಿಕೊಂಡು ಧರ್ಮರಾಜ ಯುಧಿಷ್ಠಿರನಿಗೆ ಕೇಳಿದನು: “ಪಾಂಡವ! ಸೈನ್ಯಗಳಲ್ಲಿ ಜೀವಂತವಿರುವರೆಷ್ಟು ಎನ್ನುವುದನ್ನು ನೀನು ತಿಳಿದಿದ್ದೀಯೆ. ಹತರಾದವರ ಸಂಖ್ಯೆ ಎಷ್ಟೆಂದು ನಿನಗೆ ತಿಳಿದಿದ್ದರೆ ನನಗೆ ಹೇಳು!” ಯುಧಿಷ್ಠಿರನು ಹೇಳಿದನು: “ರಾಜನ್! ಒಂದುನೂರಾ ಅರವತ್ತಾರು ಕೋಟಿ ಇಪ್ಪತ್ತು ಸಾವಿರ ಯೋಧರು ಈ ಯುದ್ಧದಲ್ಲಿ ಹತರಾದರು. ಏನಾದರೆಂದು ತಿಳಿಯದೇ ಇರುವ ವೀರರ ಸಂಖ್ಯೆಯು ಇಪ್ಪತ್ನಾಲ್ಕು ಸಾವಿರದ ಒಂದು ನೂರ ಅರವತ್ತೈದು.” ಧೃತರಾಷ್ಟ್ರನು ಹೇಳಿದನು: “ಯುಧಿಷ್ಠಿರ!…

Continue reading

ಶ್ರೀಕೃಷ್ಣ ರಾಯಭಾರ – ೧

ಶ್ರೀಕೃಷ್ಣ ರಾಯಭಾರ – ೧ ಯುಧಿಷ್ಠಿರನು ರಾಯಭಾರಕ್ಕೆ ಕೃಷ್ಣನನ್ನು ಕೇಳಿದ್ದುದು ಸಂಜಯನು ಮರಳಿದ ನಂತರ ಧರ್ಮರಾಜ ಯುಧಿಷ್ಠಿರನು ಸರ್ವ ಸಾತ್ವತರ ವೃಷಭ ದಾಶಾರ್ಹನಿಗೆ ಹೇಳಿದನು: “ಜನಾರ್ದನ! ನನ್ನ ಮಿತ್ರರ ಕಾಲವು ಇಗೋ ಬಂದೊದಗಿದೆ. ಈ ಆಪತ್ತಿನಿಂದ ಉದ್ಧರಿಸುವ ಬೇರೆ ಯಾರನ್ನೂ ನಾನು ಕಾಣಲಾರೆ. ಮಾಧವ! ನಿನ್ನನ್ನೇ ಆಶ್ರಯಿಸಿ ನಾವು ಅಮಾತ್ಯರೊಂದಿಗಿರುವ ಮೋಹದರ್ಪಿತ ಧಾರ್ತರಾಷ್ಟ್ರನಿಂದ ನಮ್ಮ ಭಾಗವನ್ನು ನಿರ್ಭಯದಿಂದ ಕೇಳಬಲ್ಲೆವು. ವೃಷ್ಣಿಯರನ್ನು ಸರ್ವ ಆಪತ್ತುಗಳಿಂದ ಹೇಗೆ ರಕ್ಷಿಸುತ್ತೀಯೋ ಹಾಗೆ ನೀನು ಪಾಂಡವರಾದ…

Continue reading

ಶ್ರೀಕೃಷ್ಣ ರಾಯಭಾರ – ೨

ಶ್ರೀಕೃಷ್ಣ ರಾಯಭಾರ – ೨ ಹಸ್ತಿನಾಪುರಕ್ಕೆ ಶ್ರೀಕೃಷ್ಣನ ಪ್ರಯಾಣ ರಾತ್ರಿಯು ಕಳೆದು ವಿಮಲ ಸೂರ್ಯನು ಉದಯಿಸಲು, ದಿವಾಕರನು ಮೃದುವಾಗಿ ಬೆಳಗುತ್ತಿದ್ದ ಮೈತ್ರ ಮುಹೂರ್ತವು ಸಂಪ್ರಾಪ್ತವಾಗಲು, ಕೌಮುದ ಮಾಸದಲ್ಲಿ, ರೇವತೀ ನಕ್ಷತ್ರದಲ್ಲಿ, ಶರದೃತುವು ಮುಗಿದು ಹೇಮಂತ ಋತುವು ಪ್ರಾರಂಭವಾಗುವಾಗ, ಸಸ್ಯಗಳು ಬೆಳೆಯನ್ನು ಹೊತ್ತು ಸುಖವಾಗಿರುವ ಕಾಲದಲ್ಲಿ ಸತ್ವವತರಲ್ಲಿ ಶ್ರೇಷ್ಠನು ಸಿದ್ಧನಾದನು. ವಾಸವನು ಋಷಿಗಳಿಂದ ಕೇಳುವಂತೆ ಹೊರಡುವಾಗ ಅವನು ಬ್ರಾಹ್ಮಣರ ಮಂಗಳ ಘೋಷಗಳನ್ನೂ, ಪುಣ್ಯಾಹ-ವಾಚನಗಳನ್ನೂ, ಸತ್ಯಗಳನ್ನೂ ಕೇಳಿದನು. ಜನಾರ್ದನನು ಬೆಳಗಿನ ಆಹ್ನೀಕವನ್ನು ಪೂರೈಸಿ,…

Continue reading