ಯುಧಿಷ್ಠಿರನ ಸ್ವರ್ಗಾರೋಹಣ
ಯುಧಿಷ್ಠಿರನ ಸ್ವರ್ಗಾರೋಹಣ ಸ್ವರ್ಗದಲ್ಲಿ ನಾರದವಾಕ್ಯ ಧರ್ಮರಾಜ ಯುಧಿಷ್ಠಿರನು ತ್ರಿವಿಷ್ಟಪ ಸ್ವರ್ಗವನ್ನು ತಲುಪಿ ಅಲ್ಲಿ ದುರ್ಯೋಧನನು ರಾಜಕಳೆಯಿಂದ, ಆದಿತ್ಯನಂತೆ ಪ್ರಕಾಶಿಸುತ್ತಾ ವೀರನ ವಿಜೃಂಭಣೆಯಿಂದ, ಪುಣ್ಯಕರ್ಮಿ ಸಾಧ್ಯರು ಮತ್ತು ದೇವತೆಗಳೊಂದಿಗೆ ಆಸನದಲ್ಲಿ ಕುಳಿತಿರುವುದನ್ನು ನೋಡಿದನು. ಅಲ್ಲಿ ದುರ್ಯೋಧನನನ್ನು ನೋಡಿ ಸಹಿಸಿಕೊಳ್ಳಲಾರದೇ ಯುಧಿಷ್ಠಿರನು ಸುಯೋಧನನು ಕಂಡೊಡನೆಯೇ ತಿರುಗಿ ಜೋರಾದ ಧ್ವನಿಯಲ್ಲಿ ಕೂಗಿ ಹೇಳಿದನು: “ನಾನು ದುರ್ಯೋಧನನೊಂದಿಗೆ ಈ ಲೋಕಗಳನ್ನು ಅನುಭವಿಸಲು ಬಯಸುವುದಿಲ್ಲ. ಮುಂದಾಲೋಚನೆಯಿಲ್ಲದ ಈ ಲುಬ್ಧನು ಮಾಡಿದ ಕರ್ಮಗಳಿಂದಾಗಿ ಭೂಮಿಯ ಸರ್ವ ಸುಹೃದಯರೂ ಬಾಂಧವರೂ…