ಯಕ್ಷ ಪ್ರಶ್ನೆ: ಧರ್ಮದೇವನು ಯುಧಿಷ್ಠಿರನನ್ನು ಪರೀಕ್ಷಿಸಿದುದು

ಕೀರ್ತಿವರ್ಧಕ ತಂದೆ ಮತ್ತು ಮಗನ ಈ ಸಮುತ್ಥಾನ ಸಮಾಗಮವನ್ನು ಯಾವ ಪುರುಷನು ಜಿತೇಂದ್ರಿಯನಾಗಿದ್ದುಕೊಂಡು, ತನ್ನನ್ನು ತನ್ನ ವಶದಲ್ಲಿಟ್ಟುಕೊಂಡು ಓದುತ್ತಾನೋ ಅವನು ಪುತ್ರ-ಪೌತ್ರರೊಂದಿಗೆ ನೂರು ವರ್ಷಗಳು ಜೀವಿಸುತ್ತಾನೆ. ಈ ಸದಾಖ್ಯಾನವನ್ನು ಕೇಳಿದ ನರರು ಅಧರ್ಮದಲ್ಲಿ ರುಚಿಯನ್ನಿಡುವುದಿಲ್ಲ. ಸುಹೃದಯರಿಂದ ಅಗಲುವುದಿಲ್ಲ. ಪರರದ್ದನ್ನು ಕದಿಯುವುದರಲ್ಲಿ ಮತ್ತು ಪರರ ಸ್ತ್ರೀಯರಲ್ಲಿ ಆಸೆಯನ್ನಿಡುವುದಿಲ್ಲ. ಯಕ್ಷ ಪ್ರಶ್ನೆ: ಧರ್ಮದೇವನು ಯುಧಿಷ್ಠಿರನನ್ನು ಪರೀಕ್ಷಿಸಿದುದು ದ್ರೌಪದಿ ಕೃಷ್ಣೆಯನ್ನು ಕಳೆದುಕೊಂಡು ಅನುತ್ತಮ ಕ್ಲೇಶವನ್ನು ಹೊಂದಿದ ರಾಜಾ ಯುಧಿಷ್ಠಿರನು ತಮ್ಮಂದಿರೊಂದಿಗೆ ಕಾಮ್ಯಕದಲ್ಲಿ ಕಾಲಕಳೆಯುತ್ತಿದ್ದನು. ಅಲ್ಲಿಂದ…

Continue reading

ಯಕ್ಷಯುದ್ಧ

ಯಕ್ಷಯುದ್ಧ ರಾಕ್ಷಸ ಜಟಾಸುರನನ್ನು ಕೊಂದನಂತರ ಪ್ರಭು ರಾಜ ಕೌಂತೇಯನು ಪುನಃ ನಾರಾಯಣಾಶ್ರಮಕ್ಕೆ ಹೋಗಿ ಅಲ್ಲಿ ವಾಸಿಸತೊಡಗಿದನು. ಒಂದು ದಿನ ಅವನು ದ್ರೌಪದಿಯ ಸಹಿತ ಎಲ್ಲ ತಮ್ಮಂದಿರನ್ನೂ ಸೇರಿಸಿ, ತಮ್ಮ ಜಯನನ್ನು ನೆನಪಿಸಿಕೊಳ್ಳುತ್ತಾ ಹೇಳಿದನು: “ನಾವು ವನದಲ್ಲಿ ಸಂತೋಷದಿಂದ ತಿರುಗಾಡುತ್ತಾ ನಾಲ್ಕು ವರ್ಷಗಳು ಕಳೆದು ಹೋದವು. ಐದನೆಯ ವರ್ಷದಲ್ಲಿ ತನ್ನ ಉದ್ದೇಶಗಳನ್ನು ಪೂರೈಸಿದ ನಂತರ ಪರ್ವತರಾಜ, ಶ್ರೇಷ್ಠ ಶ್ವೇತಶಿಖರಕ್ಕೆ ಬೀಭತ್ಸುವು ಬರುವವನಿದ್ದಾನೆ. ನಾವೂ ಕೂಡ ಅವನನ್ನು ಭೇಟಿಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿರಬೇಕು.…

Continue reading

ಯಯಾತಿ

ಯಯಾತಿ ರಾಜಾ ಯಯಾತಿಯ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಸಂಭವ ಪರ್ವ (ಅಧ್ಯಾಯ ೭೧-೮೦) ದಲ್ಲಿ ಬರುತ್ತದೆ. ಈ ಕಥೆಯನ್ನು ಮುನಿ ವೈಶಂಪಾಯನನು ಜನಮೇಜಯನಿಗೆ ಹಸ್ತಿನಾಪುರದಲ್ಲಿ ಸರ್ಪಸತ್ರದಲ್ಲಿ ಹೇಳಿದನು. ಸಚರಾಚರ ತ್ರೈಲೋಕ್ಯದ ಐಶ್ವರ್ಯಕ್ಕಾಗಿ ಸುರಾಸುರರ ನಡುವೆ ಅತೀ ದೊಡ್ಡ ಹೋರಾಟ ನಡೆಯಿತು. ವಿಜಯಪ್ರಾಪ್ತಿಗಾಗಿ ದೇವತೆಗಳು ಮುನಿ ಅಂಗಿರಸ ಪುತ್ರನನ್ನು ಮತ್ತು ಪರಪಕ್ಷದವರು ಉಶಾನಸ ಕಾವ್ಯನನ್ನು ಯಜ್ಞಾದಿಗಳ ಪುರೋಹಿತರನ್ನಾಗಿ ನಿಯೋಜಿಸಿದನು. ಆ ಈರ್ವರು ಬ್ರಾಹ್ಮಣರೂ ಸದಾ ಪರಸ್ಪರರ ಕಡು ಸ್ಪರ್ಧಿಗಳಾಗಿದ್ದರು.…

Continue reading

ಯಾದವರ ವಿನಾಶ; ಕೃಷ್ಣಾವತಾರ ಸಮಾಪ್ತಿ

ಯಾದವರ ವಿನಾಶ; ಕೃಷ್ಣಾವತಾರ ಸಮಾಪ್ತಿ ಯುಧಿಷ್ಠಿರನಿಗೆ ಉತ್ಪಾತದರ್ಶನ ಮಹಾಭಾರತ ಯುದ್ಧವು ಮುಗಿದು ಮೂವತ್ತಾರನೆಯ ವರ್ಷವು ಬರಲು ಕೌರವನಂದನ ಯುಧಿಷ್ಠಿರನು ವಿಪರೀತ ನಿಮಿತ್ತಗಳನ್ನು ಕಂಡನು. ಕಲ್ಲು ಮರಳುಗಳೊಂದಿಗೆ ಭಿರುಸಾದ ಒಣ ಗಾಳಿಯು ಎಲ್ಲ ಕಡೆಗಳಿಂದ ಬೀಸತೊಡಗಿತು. ಪಕ್ಷಿಗಳು ಅಪ್ರದಕ್ಷಿಣೆಯಾಗಿ ಸುತ್ತತೊಡಗಿದವು. ಮಹಾನದಿಗಳು ವಿರುದ್ಧ ದಿಕ್ಕಿನಲ್ಲಿ ಹರಿಯತೊಡಗಿದವು. ದಿಕ್ಕುಗಳಲ್ಲಿ ಸದಾ ಮುಸುಕು ಕವಿದಿತ್ತು. ಬೆಂಕಿಯ ಉಂಡೆಗಳನ್ನು ಸುರಿಸುತ್ತಾ ಉಲ್ಕೆಗಳು ಗಗನದಿಂದ ಭೂಮಿಯ ಮೇಲೆ ಬಿದ್ದವು. ಸೂರ್ಯಮಂಡಲವು ಯಾವಾಗಲೂ ಧೂಳಿನಿಂದ ಮುಸುಕಿದಂತೆ ತೋರುತ್ತಿತ್ತು. ನಿತ್ಯವೂ…

Continue reading

ಯುದ್ಧದ ಹತ್ತೊಂಭತ್ತನೆಯ ದಿನದ ಬೆಳಿಗ್ಗೆ ಸಂಜಯನು ಹಸ್ತಿನಾಪುರಕ್ಕೆ ಬಂದು ದುರ್ಯೋಧನನು ಹತನಾದುದನ್ನು ತಿಳಿಸಲು ಧೃತರಾಷ್ಟ್ರನ ಶೋಕ

ಯುದ್ಧದ ಹತ್ತೊಂಭತ್ತನೆಯ ದಿನದ ಬೆಳಿಗ್ಗೆ ಸಂಜಯನು ಹಸ್ತಿನಾಪುರಕ್ಕೆ ಬಂದು ದುರ್ಯೋಧನನು ಹತನಾದುದನ್ನು ತಿಳಿಸಲು ಧೃತರಾಷ್ಟ್ರನ ಶೋಕ ಕರ್ಣನು ಹತನಾಗಲು ಧಾರ್ತರಾಷ್ಟ್ರ ಸುಯೋಧನನು ಅತ್ಯಂತ ಶೋಕಸಾಗರದಲ್ಲಿ ಮುಳುಗಿಹೋದನು. ಎಲ್ಲೆಡೆಯೂ ನಿರಾಶೆಯೇ ಕಂಡುಬಂದಿತು. “ಹಾ ಕರ್ಣ! ಹಾ ಕರ್ಣ!” ಎಂದು ಪುನಃ ಪುನಃ ಶೋಕಿಸುತ್ತಾ ಬಹಳ ಕಷ್ಟದಿಂದ ಅವನು ಅಳಿದುಳಿದ ನೃಪರೊಂದಿಗೆ ಸ್ವಶಿಬಿರಕ್ಕೆ ತೆರಳಿದನು. ಶಾಸ್ತ್ರನಿಶ್ಚಿತ ಕಾರಣಗಳಿಂದ ರಾಜರು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಸೂತಪುತ್ರನ ವಧೆಯನ್ನು ಸ್ಮರಿಸಿಕೊಳ್ಳುತ್ತಾ ರಾಜನಿಗೆ ಶಾಂತಿಯೆನ್ನುವುದೇ ಇಲ್ಲವಾಯಿತು. ಆಗಬೇಕಾದುದನ್ನು ಆಗಿಸಿಕೊಳ್ಳುವುದರಲ್ಲಿ…

Continue reading

ಯುದ್ಧದ ಹದಿನೆಂಟನೇ ದಿನದ ರಾತ್ರಿ ಅಶ್ವತ್ಥಾಮನು ಪಾಂಡವ ಶಿಬಿರದಲ್ಲಿದ್ದವರೆಲ್ಲರನ್ನೂ ಸಂಹರಿಸಿದುದು

  ಯುದ್ಧದ ಹದಿನೆಂಟನೇ ದಿನದ ರಾತ್ರಿ ಅಶ್ವತ್ಥಾಮನು ಪಾಂಡವ ಶಿಬಿರದಲ್ಲಿದ್ದವರೆಲ್ಲರನ್ನೂ ಸಂಹರಿಸಿದುದು ಅಶ್ವತ್ಥಾಮನ ಶಿವಾರ್ಚನೆ ಕೃತವರ್ಮನನ್ನೂ ಮತ್ತು ಮಹಾರಥ ಕೃಪನನ್ನೂ ಬರಹೇಳಿ ಕೋಪದಿಂದ ಪರೀತಾತ್ಮ ದ್ರೌಣಿಯು ಶಿಬಿರದ ದ್ವಾರವನ್ನು ತಲುಪಿದನು. ಅಲ್ಲಿ ಅವನು ದ್ವಾರವನ್ನು ಆವರಿಸಿ ನಿಂತಿರುವ ಚಂದ್ರ-ಸೂರ್ಯರ ಸಮಾನ ಬೆಳಗುತ್ತಿರುವ ಮೈನವಿರೇಳಿಸುವ ಮಹಾಕಾಯದ ಭೂತವೊಂದನ್ನು ನೋಡಿದನು. ಅವನು ಮಹಾರಕ್ತವನ್ನು ಸುರಿಸುತ್ತಿರುವ ವ್ಯಾಘ್ರಚರ್ಮವನ್ನು ಉಟ್ಟಿದ್ದನು. ಕೃಷ್ಣಾಜಿನವನ್ನೇ ಉತ್ತರೀಯವನ್ನಾಗಿ ಹೊದ್ದಿದ್ದನು. ಸರ್ಪವೇ ಅವನ ಯಜ್ಞೋಪವೀತವಾಗಿತ್ತು. ಅವನ ನೀಳ ದಪ್ಪ ಬಾಹುಗಳು ನಾನಾಪ್ರಕಾರದ…

Continue reading

ಹದಿನೇಳನೇ ದಿನದ ಯುದ್ಧ – ೯: ಸಂಜಯನು ಧೃತರಾಷ್ಟ್ರನಿಗೆ ಕರ್ಣವಧೆಯನ್ನು ತಿಳಿಸಿದುದು

ಹದಿನೇಳನೇ ದಿನದ ಯುದ್ಧ – ೯: ಸಂಜಯನು ಧೃತರಾಷ್ಟ್ರನಿಗೆ  ಕರ್ಣವಧೆಯನ್ನು ತಿಳಿಸಿದುದು ಕರ್ಣನು ಹತನಾಗಲು ಆ ರಾತ್ರಿಯೇ ದೀನ ಗಾವಲ್ಗಣಿಯು ವಾಯುವೇಗ ಸಮಾನ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ನಾಗಪುರಕ್ಕೆ ಹೊರಟನು. ಹಸ್ತಿನಾಪುರಕ್ಕೆ ಹೋಗಿ ತುಂಬಾ ಉದ್ವಿಗ್ನಮಾನಸನಾದ ಅವನು ಬಾಂಧವಶೂನ್ಯ ಧೃತರಾಷ್ಟ್ರನ ಬಳಿ ಹೋದನು. ಅತ್ಯಂತ ದುಃಖದಿಂದ ಕಳೆಗುಂದಿದ್ದ ರಾಜನನ್ನು ಸ್ವಲ್ಪಹೊತ್ತು ನೋಡಿ ಅವನು ರಾಜನ ಪಾದಗಳಲ್ಲಿ ತಲೆಯನ್ನಿಟ್ಟು ಕೈಮುಗಿದು ವಂದಿಸಿದನು. ಯಥಾನ್ಯಾಯವಾಗಿ ಮಹೀಪತಿ ಧೃತರಾಷ್ಟ್ರನನ್ನು ಗೌರವಿಸಿ “ಅಯ್ಯೋ ಕಷ್ಟವೇ!”…

Continue reading

ಹದಿಮೂರನೇ ದಿನದ ಯುದ್ಧ – ೨: ಅರ್ಜುನನ ಪ್ರತಿಜ್ಞೆ, ಪಾಶುಪತ ಪುನಃ ಪ್ರಾಪ್ತಿ

ಹದಿಮೂರನೇ ದಿನದ ಯುದ್ಧ – ೨: ಅರ್ಜುನನ ಪ್ರತಿಜ್ಞೆ, ಪಾಶುಪತ ಪುನಃ ಪ್ರಾಪ್ತಿ ಯುಧಿಷ್ಠಿರ ವಿಲಾಪ ಆ ರಥಯೂಥಪ ವೀರ ಸೌಭದ್ರನು ಹತನಾಗಲು ಎಲ್ಲರೂ ರಥದಿಂದ ಕೆಳಗಿಳಿದು, ಧನುಸ್ಸುಗಳನ್ನು ಕೆಳಗಿಟ್ಟು, ರಾಜಾ ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು. ಸೌಭದ್ರನ ಕುರಿತೇ ಚಿಂತಿಸುತ್ತಾ ಅವರು ಮನಸ್ಸುಗಳನ್ನು ಕಳೆದುಕೊಂಡಿದ್ದರು. ಆಗ ಯುಧಿಷ್ಠಿರನು ತಮ್ಮನ ಮಗ ಮಹಾರಥ ವೀರ ಅಭಿಮನ್ಯುವು ಹತನಾದುದಕ್ಕೆ ತುಂಬಾ ದುಃಖಿತನಾಗಿ ವಿಲಪಿಸಿದನು: “ನನಗೆ ಪ್ರಿಯವಾದುದನ್ನು ಮಾಡಲು ಬಯಸಿ ಒಡೆಯಲು ಅಸಾಧ್ಯವಾದ ದ್ರೋಣನ…

Continue reading

ಯುಧಿಷ್ಠಿರನ ತೀರ್ಥಯಾತ್ರೆ

ಯುಧಿಷ್ಠಿರನ ತೀರ್ಥಯಾತ್ರೆ ತೀರ್ಥಯಾತ್ರೆಯ ಕುರಿತು ಯುಧಿಷ್ಠಿರ-ನಾರದರ ಸಂವಾದ ಧನಂಜಯನನ್ನು ಅಗಲಿದ ಆ ಮಹಾರಥಿ ಪಾಂಡವರು ಮಹಾಭಾಗೆ ದ್ರೌಪದಿಯೊಂದಿಗೆ ಆ ವನದಲ್ಲಿ ವಾಸಿಸುತ್ತಿದ್ದರು. ಅನಂತರ ಅವರು ಉರಿಯುತ್ತಿರುವ ಅಗ್ನಿಯ ತೇಜಸ್ಸಿಗೆ ಸಮಾನ, ಬ್ರಹ್ಮಜ್ಞಾನದ ಶೋಭೆಯಿಂದ ಬೆಳಗುತ್ತಿರುವ ಮಹಾತ್ಮ ದೇವರ್ಷಿ ನಾರದನನ್ನು ಕಂಡರು. ಭ್ರಾತೃಗಳಿಂದ ಪರಿವೃತನಾದ ಶ್ರೀಮಾನ್ ಕುರುಸತ್ತಮನು ದೇವತೆಗಳಿಂದ ಆವೃತನಾದ ಶತಕ್ರತುವಿನಂತೆ ವಿಶೇಷ ಕಾಂತಿಯಿಂದ ಬೆಳಗುತ್ತಿದ್ದನು. ಸಾವಿತ್ರಿಯು ವೇದಗಳನ್ನು ಮತ್ತು ಅರ್ಕ ಪ್ರಭೆಯು ಮೇರು ಪರ್ವತದ ಶಿಖರವನ್ನು ಹೇಗೆ ತೊರೆಯುವುದಿಲ್ಲವೋ ಹಾಗೆ…

Continue reading

ಯುಧಿಷ್ಠಿರನ ವೈಭವವನ್ನು ಕಂಡ ದುರ್ಯೋಧನನ ಅಸೂಯೆ-ಸಂತಾಪ; ದ್ಯೂತದ ಸಂಚು

ಯುಧಿಷ್ಠಿರನ ವೈಭವವನ್ನು ಕಂಡ ದುರ್ಯೋಧನನ ಅಸೂಯೆ-ಸಂತಾಪ; ದ್ಯೂತದ ಸಂಚು ದುರ್ಯೋಧನನ ಸಂತಾಪ ಇಂದ್ರಪ್ರಸ್ಥದಲ್ಲಿ ಪಾಂಡವರ ಮಯ ಸಭೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ದುರ್ಯೋಧನನು ಶಕುನಿಯೊಡನೆ ನಿಧಾನವಾಗಿ ಸಭೆಯ ಸರ್ವಸ್ವವನ್ನೂ ನೋಡಿದನು. ಕುರುನಂದನನು ಇದಕ್ಕೂ ಮೊದಲು ತನ್ನ ನಾಗಸಾಹ್ವಯದಲ್ಲಿ ನೋಡಿಯೇ ಇರದ ದಿವ್ಯ ಅಭಿಪ್ರಾಯಗಳನ್ನು ಅಲ್ಲಿ ನೋಡಿದನು. ಒಮ್ಮೆ ಮಹೀಪತಿ ರಾಜ ಧಾರ್ತರಾಷ್ಟ್ರನು ಸ್ಪಟಿಕದಿಂದ ನಿರ್ಮಿಸಿದ್ದ ಸಭಾಮಧ್ಯದ ಒಂದು ನೆಲದ ಬಳಿ ಬಂದು ನೀರಿದೆಯೆಂದು ಶಂಕಿಸಿ ಬುದ್ಧಿಮೋಹಿತನಾಗಿ ತನ್ನ ವಸ್ತ್ರಗಳನ್ನು ಎತ್ತಿಹಿಡಿದನು. ನಂತರ…

Continue reading